ನಾಣಿಲ ಶಾಲೆಯಲ್ಲಿ ಪ್ರಾರಂಬೊತ್ಸವ- ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ

ಕಾಣಿಯೂರು: ನಾಣಿಲ ಸ. ಹಿ. ಪ್ರಾ. ಶಾಲೆಯಲ್ಲಿ ಶಾಲಾರಂಬೋತ್ಸದ ಅಂಗವಾಗಿ ಶಾಲಾ ಮಕ್ಕಳನ್ನು ಮೆರವಣಿಗೆಯೊಂದಿಗೆ ಕರೆ ತಂದು ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರತಿ ಬೆಳಗಿ ಪುಷ್ಪಗುಚ್ಚ ನೀಡಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ವಸಂತ ದಲಾರಿ, ಉಪಾಧ್ಯಕ್ಷೆ ಕುಸುಮಾವತಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು. ಮುಖ್ಯ ಗುರುಗಳಾದ ಪದ್ಮಯ್ಯ […]

ನಾಣಿಲ ಶಾಲೆಯಲ್ಲಿ ಪ್ರಾರಂಬೊತ್ಸವ- ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ Read More »

ಕ್ಯಾಂಪ್ಕೋ ಜ್ಯೂನಿಯರ್ ಅಸಿಸ್ಟೆಂಟ್ ಕೃಷ್ಣಪ್ಪ ಅವರಿಗೆ ಬೀಳ್ಕೊಡುಗೆ

ಪುತ್ತೂರು: ಇಲ್ಲಿನ ಕ್ಯಾಂಪ್ಕೋ ಸಂಸ್ಥೆಯ ಜ್ಯೂನಿಯರ್ ಅಸಿಸ್ಟೆಂಟ್ ಕೃಷ್ಣಪ್ಪ ಕೆ. ಅವರಿಗೆ ಬೀಳ್ಕೊಡುಗೆ ಸಮಾರಂಭ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು. 36 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೃಷ್ಣಪ್ಪ ಕೆ. ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ರೀಜನಲ್ ಮ್ಯಾನೇಜರ್ ರಮೇಶ್ ಶೆಟ್ಟಿ, ಎ.ಆರ್.ಡಿ.ಎಫ್. ಸಂಯೋಜಕ ಕೇಶವ ಭಟ್, ವ್ಯವಸ್ಥಾಪಕ ಅಮರೇಶ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕ್ಯಾಂಪ್ಕೋ ಜ್ಯೂನಿಯರ್ ಅಸಿಸ್ಟೆಂಟ್ ಕೃಷ್ಣಪ್ಪ ಅವರಿಗೆ ಬೀಳ್ಕೊಡುಗೆ Read More »

ದಿನೇಶ್ ಬೇಕರಿ ಮಾಲಕರಾಗಿದ್ದ ದಿನೇಶ್ ನಿಧನ

ಪುತ್ತೂರು: ಪುತ್ತೂರಿನ ದಿನೇಶ್ ಬೇಕರಿ ಮಾಲಕರಾಗಿದ್ದ ದಿನೇಶ್ (43 ವ.) ಅವರು ಮೂಡಬಿದ್ರೆಯ ಮನೆಯಲ್ಲಿ ಮೇ 31ರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು. ಬೇಕರಿ ಉದ್ಯಮದಲ್ಲಿ ಹೆಸರು ಪಡೆದ ದಿ.ಐತ್ತಪ್ಪ ಭಂಡಾರಿ ಅವರು ಪುತ್ತೂರು ಬಸ್ ನಿಲ್ದಾಣದ ಬಳಿ, ಬೊಳುವಾರು ಸಮೀಪ ಸಹಿತ ಒಟ್ಟು ಮೂರು ದಿನೇಶ್ ಬೇಕರಿ ಸಂಸ್ಥೆಯನ್ನು ಹೊಂದಿದ್ದರು. ಅವರ ಅನಾರೋಗ್ಯದ ಸಂದರ್ಭದಲ್ಲಿ ಪತ್ನಿ ಭಾರತಿ ಮತ್ತು ಪುತ್ರ ದಿನೇಶ್ ಅವರು ಬೇಕರಿ ಉದ್ಯಮ ನಡೆಸುತ್ತಿದ್ದರು. ಮೃತರು ಪತ್ನಿ, ಪುತ್ರ ಮತ್ತು ವಿದೇಶದಲ್ಲಿ ಉದ್ಯಮದಲ್ಲಿರುವ ಸಹೋದರರಾದ

ದಿನೇಶ್ ಬೇಕರಿ ಮಾಲಕರಾಗಿದ್ದ ದಿನೇಶ್ ನಿಧನ Read More »

ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣ ಗೋಡೆ ಕುಸಿತ

ಸವಣೂರು: ಬುಧವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆವರಣ ಗೋಡೆ ಕುಸಿದು ಬಿದ್ದಿದೆ. ಕಳೆದ  ಜಾತ್ರೋತ್ಸವ ಸಮಯದಲ್ಲಿ ದೇವಸ್ಥಾನಕ್ಕೆ ಆವರಣಗೋಡೆ ನಿರ್ಮಿಸಲಾಗಿತ್ತು. ಇದೀಗ ಮಳೆಯಿಂದಾಗಿ ಆವರಣ ಗೋಡೆ ಕುಸಿದು ಬಿದ್ದಿದೆ. ಆವರಣ ಗೋಡೆ ಕುಸಿತದಿಂದ ಹಾನಿ ಸಂಭವಿಸಿದೆ.

ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣ ಗೋಡೆ ಕುಸಿತ Read More »

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗದ ಪ್ರಾರಂಭೋತ್ಸವ

ಪುತ್ತೂರು: ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಥಮಿಕ ವಿಭಾಗದಲ್ಲಿ 2023 24ನೇ ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ ಮೇ 31ರಂದು ನಡೆಯಿತು. ಹೊಸದಾಗಿ ದಾಖಲಾದ ವಿದ್ಯಾರ್ಥಿಗಳನ್ನು ಬ್ಯಾಂಡ್ ವಾಲಗದೊಂದಿಗೆ ಶಾಲೆಯೊಳಗೆ ಬರಮಾಡಿಕೊಳ್ಳಲಾಯಿತು. ಶಿಕ್ಷಕಿಯರು ಮಕ್ಕಳಿಗೆ ಆರತಿ ಬೆಳಗಿ ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ್ ಪನ್ನೆ, ಕೆಪಿಎಸ್  ನ ಅಧ್ಯಕ್ಷರಾದ ಶ್ರೀನಾಥ್ ಬಾಳಿಲ ಮತ್ತು ಎಸ್ ಡಿ ಎಂ ಸಿ ಸದಸ್ಯರು  ಮಕ್ಕಳಿಗೆ ಹೂ ನೀಡುವುದರ ಮೂಲಕ ಶಾಲೆಗೆ ಸ್ವಾಗತಿಸಿದರು. 

ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಪ್ರಾಥಮಿಕ ವಿಭಾಗದ ಪ್ರಾರಂಭೋತ್ಸವ Read More »

ಕಡಬ ತಾಲೂಕಿನ 3 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬೀಳ್ಕೊಡುಗೆ | ಸೇವಾಧಿಯಲ್ಲಿ ಮಾಡುವ ಸೇವೆ ಜನಪರವಾಗಿರಬೇಕು  : ನವೀನ್ ಭಂಡಾರಿ

ಕಡಬ: ಸರಕಾರದ ಸೇವಾ ಅವಧಿಯಲ್ಲಿ ನಾವು ಮಾಡುವ ಪ್ರಾಮಾಣಿಕ ಸೇವಾ  ಕಾರ್ಯತತ್ಪರತೆ ಮುಂದಿನ ಪೀಳಿಗೆ ಗೆ ಮಾದರಿಯಾಗಬೇಕು ಎಂದು ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು. ಅವರು ಬುಧವಾರ ಕಡಬ ತಾಲೂಕು ಪಂಚಾಯಿತಿಯ ನೂತನ ಕಟ್ಟಡದ ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 25 ವರ್ಷಗಳಿಗೂ ಹೆಚ್ಚಿನ ಕಾಲ  ಸೇವೆ ಸಲ್ಲಿಸಿ ನಿವೃತ್ತರಾದ   ಮರ್ಧಾಳ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶೇಖರ್, ಆಲಂಕಾರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಜಗನ್ನಾಥ ಶೆಟ್ಟಿ ಹಾಗೂ

ಕಡಬ ತಾಲೂಕಿನ 3 ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಬೀಳ್ಕೊಡುಗೆ | ಸೇವಾಧಿಯಲ್ಲಿ ಮಾಡುವ ಸೇವೆ ಜನಪರವಾಗಿರಬೇಕು  : ನವೀನ್ ಭಂಡಾರಿ Read More »

ಕುಂಬ್ರ: ಭಾರೀ ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬ

ಪುತ್ತೂರು: ಮಾಣಿ – ಮೈಸೂರು ಹೆದ್ದಾರಿಯ ಕುಂಬ್ರ ಶೇಖಮಲೆಯಲ್ಲಿ ಬುಧವಾರ ಸಂಜೆ ಭಾರೀ ಗಾಳಿ ಮಳೆಯಾಗಿದ್ದು, ಬೃಹತ್ ಮರ ರಸ್ತೆಗಡ್ಡವಾಗಿ ಬಿದ್ದಿದೆ. ಮರಗಳು ಧರೆಗುರುಳುತ್ತಿದ್ದಂತೆ ಕೆಲ ವಿದ್ಯುತ್ ಕಂಬಗಳು ಮುರಿದು ಧರಾಶಾಹಿಯಾಗಿದೆ. ಪರಿಣಾಮ ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಯಿತು. ತಕ್ಷಣ ಸ್ಥಳಕ್ಕಾಗಮಿಸಿದ ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ತಂತಿ, ಕಂಬಗಳನ್ನು ತೆರವು ಮಾಡಿದರು. ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಮರಗಳನ್ನು ತೆರವು ಮಾಡಿದರು. ಇದರಿಂದಾಗಿ ತಕ್ಷಣದಲ್ಲೇ ಸುಗಮ ಸಂಚಾರಕ್ಕೆ ರಸ್ತೆ

ಕುಂಬ್ರ: ಭಾರೀ ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬ Read More »

ಎನ್.ಐ.ಎ. ತಂಡ ಚಿಕ್ಕಮುಡ್ನೂರಿಗೆ ದಾಳಿ? | ಪುತ್ತೂರಿನ ನಾಲ್ವರನ್ನು ವಶಕ್ಕೆ ಪಡೆದುಕೊಂಡ ತಂಡ!

ಪುತ್ತೂರು: ಬುಧವಾರ ಬೆಳ್ಳಂಬೆಳಗ್ಗೆ ಮಿಂಚಿನ ಕಾರ್ಯಾಚರಣೆ ನಡೆಸಿದ ಎನ್.ಐ.ಎ. ತಂಡ ಪುತ್ತೂರು ನಗರಸಭೆ ಸಮೀಪದಲ್ಲೇ ಇರುವ ಚಿಕ್ಕಮುಡ್ನೂರು ಗ್ರಾಮಕ್ಕೂ ದಾಳಿ ನಡೆಸಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಬುಧವಾರ ನಡೆದ ದಾಳಿಯಲ್ಲಿ ಪುತ್ತೂರು ತಾಲೂಕಿನ 4 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಮಹಮ್ಮದ್ ಹ್ಯಾರೀಸ್ ಕುಂಬ್ರ (32), ಸಜ್ಜದ್ ಹುಸೈನ್ ಕೋಡಿಂಬಾಡಿ (37), ಫೈಜಲ್ ಅಹಮ್ಮದ್ ತಾರಿಗುಡ್ಡೆ, ಸಂಶುದ್ದೀನ್ ಕೂರ್ನಡ್ಕ ಎಂಬವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

ಎನ್.ಐ.ಎ. ತಂಡ ಚಿಕ್ಕಮುಡ್ನೂರಿಗೆ ದಾಳಿ? | ಪುತ್ತೂರಿನ ನಾಲ್ವರನ್ನು ವಶಕ್ಕೆ ಪಡೆದುಕೊಂಡ ತಂಡ! Read More »

ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ.

ಪುತ್ತೂರು: ಶಾಂತಿಗೋಡು ಗ್ರಾಮದ ಆನಡ್ಕ ಶಾಲಾ ಪ್ರಾರಂಭೋತ್ಸವ ಬುಧವಾರ ನಡೆಯಿತು. ನರಿಮೊಗರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧಾಕರ ಕುಲಾಲ್, ಎಸ್ ಡಿ ಎಂ ಸಿ ಅಧ್ಯಕ್ಷ ನಾರಾಯಣ ಸುವರ್ಣ, ಗ್ರಾಮ ಪಂಚಾಯಿತಿ ಸದಸ್ಯ ಎಂ. ದಿನೇಶ್ ಎಸ್ ಡಿ ಎಂ ಸಿ ಸದಸ್ಯರು ಮತ್ತು ಪೋಷಕರ ಉಪಸ್ಥಿತಿಯಲ್ಲಿ ಶಾಲಾರಂಭದ ಸಂಭ್ರಮ ನಡೆಯಿತು. ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಆರತಿ ಬೆಳಗಿ , ಗುಲಾಬಿ ಹೂವು ಕೊಟ್ಟು ವಾದ್ಯ ಘೋಷದೊಂದಿಗೆ ಸ್ವಾಗತಿಸಲಾಯಿತು. ಮಕ್ಕಳಿಗೆ  ಫೈಲ್ , ಬರವಣಿಗೆ  ಪುಸ್ತಕ ,

ಆನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ. Read More »

ಮಾಣಿಲ ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

ಪುತ್ತೂರು : ಮಾಣಿಲ ಸರಕಾರಿ ಪ್ರೌಢ ಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವವನ್ನು ಬುಧವಾರ ಆಚರಿಸಲಾಯಿತು. ಮೊದಲಿಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಸೊರಂಪಳ್ಳ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಭಟ್ ಕೆ.ಜಿ, ಮಾಣಿಲ ಗ್ರಾ.ಪಂ ಸದಸ್ಯ ಶ್ರೀಧರ ಬಾಳೆಕಲ್ಲು, ಎಸ್ ಡಿ ಎಂಸಿ ಸದಸ್ಯ ವಿಷ್ಣು ಕನ್ನಡಗುಳಿ ಮಕ್ಕಳಿಗೆ ಶುಭ ಹಾರೈಸಿದರು. ಮುಖ್ಯಶಿಕ್ಷಕ ಭುವನೇಶ್ವರ್ ಸಿ ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಸಮಗ್ರ

ಮಾಣಿಲ ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ Read More »

error: Content is protected !!
Scroll to Top