ಆರ್‌ಬಿಐ ವಿತ್ತೀಯ ನೀತಿ ಪ್ರಕಟದಲ್ಲಿ ರೆಪೊ ದರವನ್ನು ಶೇ. 6.5 ರಷ್ಟು ಯಥಾಸ್ಥಿತಿ ಮುಂದುವರಿಸಲು ನಿರ್ಧಾರ

ಮುಂಬೈ : ಹಣದುಬ್ಬರ ಮುಂದುವರಿದಿದ್ದರೂ ರಿಸರ್ವ್ ಬ್ಯಾಂಕ್ ತನ್ನ ನೀತಿಗಳ ದರದಲ್ಲಿ ಬದಲಾವಣೆಯನ್ನು ಮಾಡದೆ ಪ್ರಸಕ್ತ ಆರ್ಥಿಕ ವರ್ಷದ ತ್ರೈಮಾಸಿಕದಲ್ಲಿ ಯಥಾಸ್ಥಿತಿ ಮುಂದುವರಿಯಲು ನಿರ್ಧರಿಸಿದೆ.ಆರ್ ಬಿಐ ಇಂದು ಪ್ರಕಟಿಸಿರುವ ಪ್ರಸಕ್ತ ಆರ್ಥಿಕ ಸಾಲಿನ ವಿತ್ತೀಯ ತ್ರೈಮಾಸಿಕದಲ್ಲಿ ರೆಪೊ ದರವನ್ನು ಶೇಕಡಾ 6.5 ರಷ್ಟು ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಿದೆ. ಕಳೆದ ಮೇ 2022 ರಿಂದ 250 ಬೇಸಿಸ್ ಪಾಯಿಂಟ್‌ಗಳಿಗೆ ಒಟ್ಟು ಆರು ಅನುಕ್ರಮ ದರ ಹೆಚ್ಚಳವಾಗಿತ್ತು, ಆ ಬಳಿಕ ದರ ಹೆಚ್ಚಳವನ್ನು ನಿಲ್ಲಿಸಲಾಗಿತ್ತು. ಇಂದು ಆರ್ ಬಿಐ ಗವರ್ನರ್ […]

ಆರ್‌ಬಿಐ ವಿತ್ತೀಯ ನೀತಿ ಪ್ರಕಟದಲ್ಲಿ ರೆಪೊ ದರವನ್ನು ಶೇ. 6.5 ರಷ್ಟು ಯಥಾಸ್ಥಿತಿ ಮುಂದುವರಿಸಲು ನಿರ್ಧಾರ Read More »

ಕಾಂಗ್ರೆಸ್‌ 2ನೇ ಪಟ್ಟಿ ಪ್ರಕಟ

ಬೆಂಗಳೂರು : ಕಾಂಗ್ರೆಸ್ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ 42 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಇದ್ದು, ಬಾಕಿ 58 ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಗೊಂದಲದ ಹಿನ್ನೆಲೆಯಲ್ಲಿ ಬಿಜೆಪಿ ಪಟ್ಟಿ ಪಗ್ರಕಟವಾದ ನಂತರವೇ ಬಿಡುಗಡೆ ಮಾಡಲು ಹೈಕಮಾಂಡ್‌ ತೀರ್ಮಾನಿಸಿದೆ.ಇಂದು ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯದ ಮುಖಂಡರಾದ ಸಿದ್ದರಾಮಯ್ಯ, ಜಿ. ಪರಮೇಶ್ವರ, ಹರಿಪ್ರಸಾದ್‌ ಹಾಗೂ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ

ಕಾಂಗ್ರೆಸ್‌ 2ನೇ ಪಟ್ಟಿ ಪ್ರಕಟ Read More »

ಏ.10 ರಿಂಧ 17 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ | ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಈ ಬಾರಿಯ ಜಾತ್ರೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವಿವಿಧ ಇಲಾಖೆಗಳು ಪೂರ್ಣ ಸಹಕಾರ ನೀಡುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ವಿನಂತಿಸಿದ್ದಾರೆ. ಜಾತ್ರೋತ್ಸವದ ಅಂಗವಾಗಿ ವಿವಿಧ ಜವಾಬ್ದಾರಿಗೆ ಸಂಬಂಧಿಸಿ ಬುಧವಾರ ದೇವಸ್ಥಾನದ ಸಭಾಭವನದಲ್ಲಿ ನಡೆದ ವಿವಿಧ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಜಾತ್ರೆಗೆ ಬರುವ ಜನಸಂಖ್ಯೆ, ವಾಹನಗಳ ಲೆಕ್ಕಾಚಾರ ಹಾಗೂ ಪೇಟೆ ಸವಾರಿ

ಏ.10 ರಿಂಧ 17 : ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ | ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ Read More »

ಕಾರು ಮತ್ತು ಬಸ್‌ ಡಿಕ್ಕಿ : ಓರ್ವ ಸಾವು

ಮುಂಬಯಿಯಿಂದ ಮಂಗಳೂರಿಗೆ ಬರುತ್ತಿದ್ದ ಬಸ್‌ ತಡರಾತ್ರಿ ಧಾರವಾಡದಲ್ಲಿ ಅಪಘಾತ ಮಂಗಳೂರು : ಧಾರವಾಡ ಸಮೀಪ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರು ಮತ್ತು ಬಸ್‌ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಐದು ಮಂದಿ ಕಾರಿನಲ್ಲಿದ್ದರು ಎನ್ನಲಾಗಿದೆ. ತಡರಾತ್ರಿ ಮುಂಬಯಿಯಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಇದೇ ವೇಳೆ ಅನಧಿಕೃತ ಮೂಲಗಳು ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದಾರೆ ಎಂದಿದೆ. ಡಿಕ್ಕಿಯ ಬಿರುಸಿಗೆ

ಕಾರು ಮತ್ತು ಬಸ್‌ ಡಿಕ್ಕಿ : ಓರ್ವ ಸಾವು Read More »

ಐವರು ಅರ್ಚಕರು ಪುಷ್ಕರಣಿಯಲ್ಲಿ ಮುಳುಗಿ ಸಾವು

ಪೂಜಾ ವಿಧಿ ನೆರವೇರಿಸುವಾಗ ದುರಂತ- ಮಡಿದವರೆಲ್ಲ ಯುವ ಅರ್ಚಕರು ಚೆನ್ನೈ : ಧಾರ್ಮಿಕ ವಿಧಾನಗಳಲ್ಲಿ ತೊಡಗಿದ್ದ 5 ಅರ್ಚಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಮೂವರಸನ್ ಪೇಟೆಯಲ್ಲಿ ನಡೆದಿದೆ.25 ಮಂದಿ ಅರ್ಚಕರ ಪೈಕಿ 5 ಮಂದಿ ಸಾವನ್ನಪ್ಪಿದ್ದಾರೆ. ಅವರನ್ನು ಸೂರ್ಯ (24) ರಾಘವನ್ (22) ಯೋಗೇಶ್ವರನ್ (23) ವನೀಶ್ (20) ರಾಘವನ್ (18) ಎಂದು ಗುರುತಿಸಲಾಗಿದೆ. ಈ ಅರ್ಚಕರ ತಂಡ ಮೂವರಸನ್ ಪೇಟೆಯ ಧರ್ಮಲಿಂಗೇಶ್ವರ ದೇವಾಲಯದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಈ 25

ಐವರು ಅರ್ಚಕರು ಪುಷ್ಕರಣಿಯಲ್ಲಿ ಮುಳುಗಿ ಸಾವು Read More »

ಏ.6 : ಬಿಜೆಪಿಯ 43ನೇ ಸಂಸ್ಥಾಪನಾ ದಿನ

10 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಮೋದಿ ಭಾಷಣ ನೇರ ಪ್ರಸಾರ ದೆಹಲಿ : ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷ ಎಂಬ ಹೆಗ್ಗಳಿಕೆ ಹೊಂದಿರುವ ಬಿಜೆಪಿ ಇಂದು ಸಂಸ್ಥಾಪನಾ ದಿನ ಆಚರಿಸಿಕೊಳ್ಳುತ್ತಿದ್ದು, ಬೆಳಗ್ಗೆ 10ಕ್ಕೆ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಲಿದ್ದಾರೆ. ಪ್ರಧಾನಿಯವರ ಭಾಷಣವನ್ನು ದೇಶಾದ್ಯಂತ 10 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಮೋದಿ ಭಾಷಣದ ವೇಳೆ ಪಕ್ಷದ ಎಲ್ಲಾ ಸಂಸದರು ಸಂಸತ್ತಿನಲ್ಲಿ ಹಾಜರಿರಲು ಸೂಚಿಸಲಾಗಿದೆ. ಮುಂದಿನ

ಏ.6 : ಬಿಜೆಪಿಯ 43ನೇ ಸಂಸ್ಥಾಪನಾ ದಿನ Read More »

40 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿಗೆ ಕಗ್ಗಂಟು

ವಾರಾಂತ್ಯಕ್ಕೆ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ ಬೆಂಗಳೂರು : ಮೂಲ ಬಿಜೆಪಿಗರು ಹಾಗೂ ವಲಸೆ ಬಿಜೆಪಿಗರ ನಡುವೆ ಟಿಕೆಟ್ ಹಂಚಿಕೆ ವಿಚಾರವಾಗಿ ಭಾರಿ ಪೈಪೋಟಿ ನಡೆಯುತ್ತಿರುವುದರಿಂದ ಬಿಜೆಪಿ ಪಾಲಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕಗ್ಗಂಟಾಗಿ ಪರಿಣಮಿಸಿದೆ. ಕನಿಷ್ಠ 40 ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಸವಾಲಾಗಿ ಪರಿಣಮಿಸಿರುವುದರಿಂದ ಬಿಜೆಪಿಗೆ ಸಮಸ್ಯೆ ಎದುರಾಗಿದೆ. ಈ 40 ಸ್ಥಾನಗಳಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ನಾಮಪತ್ರ ಸಲ್ಲಿಸುವ ಕೊನೇ ದಿನಾಂಕ ಏ.20ರ ವರೆಗೆ ಎಳೆಯುವ ಸಾಧ್ಯತೆಯಿದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೊಳಗೊಂಡ

40 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಯಲ್ಲಿ ಬಿಜೆಪಿಗೆ ಕಗ್ಗಂಟು Read More »

ಕ್ರಿಕೆಟಿಗ ಪ್ರಥ್ವಿ ಶಾ ಮತ್ತು ಆಶೀಶ್​ ಯಾದವ್ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿದ ಯೂ ಟ್ಯೂಬರ್‌ ಸಪ್ನಾ ಗಿಲ್‌

ಮುಂಬಯಿಯ ಹೋಟೆಲಲ್ಲಿ ಕಿತ್ತಾಡಿಕೊಂಡ ಘಟನೆ ಮುಂಬಯಿ : ಯೂ ಟ್ಯೂಬರ್‌ ಸಪ್ನಾ ಗಿಲ್ ಎಂಬಾಕೆ ಕ್ರಿಕೆಟಿಗ ಪೃಥ್ವಿ ಶಾ ಮತ್ತು ಅವರ ಸ್ನೇಹಿತ ಆಶಿಶ್ ಸುರೇಂದ್ರ ಯಾದವ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದಾರೆ. ಐಪಿಸಿಯ ಸೆಕ್ಷನ್ 354, 509, 324ರ ಅಡಿಯಲ್ಲಿ ಕ್ರಿಕೆಟಿಗನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಪ್ನಾ ಗಿಲ್ ಪೃಥ್ವಿ ಶಾ ಮತ್ತು ಆಶೀಶ್​ ಯಾದವ್ ವಿರುದ್ಧ ಅಂಧೇರಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಲೈಂಗಿಕ ದೌರ್ಜನ್ಯದ ಕೇಸು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೋರ್ಟ್ ವಿಚಾರಣೆ ನಡೆಸುವುದಾಗಿ ತಿಳಿಸಿದೆ.ಕಿರುಕುಳ

ಕ್ರಿಕೆಟಿಗ ಪ್ರಥ್ವಿ ಶಾ ಮತ್ತು ಆಶೀಶ್​ ಯಾದವ್ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಿದ ಯೂ ಟ್ಯೂಬರ್‌ ಸಪ್ನಾ ಗಿಲ್‌ Read More »

ತಾನು ಪಕ್ಷದಿಂದ ಹೊರಹೋಗಲು ರಾಹುಲ್‌ ಗಾಂಧಿಯೇ ಕಾರಣ ಎಂದು ಆಜಾದ್‌ ಆರೋಪ

ಕಾಂಗ್ರೆಸ್‌ನಲ್ಲಿ ಉಳಿಯಬೇಕೆಂದರೆ ಬೆನ್ನುಮೂಳೆ ಇರಬಾರದು ದೆಹಲಿ : ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ಮಾಡಿರುವ ಪಕ್ಷದ ಮಾಜಿ ನಾಯಕ ಗುಲಾಂ ನಬಿ ಆಜಾದ್‌ ತಾನು ಪಕ್ಷದಿಂದ ಹೊರಹೋಗಲು ರಾಹುಲ್‌ ಗಾಂಧೀಯೇ ಕಾರಣ ಎಂದಿದ್ದಾರೆ. ಇಂದು ನಾನು ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲದಿರುವುದಕ್ಕೆ ರಾಹುಲ್ ಗಾಂಧಿಯೇ ಮುಖ್ಯ ಕಾರಣ. ಕಾಂಗ್ರೆಸ್‌ನಲ್ಲಿ ಉಳಿಯಬೇಕೆಂದರೆ ಬೆನ್ನುಮೂಳೆ ಇರಬಾರದು ಎಂದು ಹಿರಿಯ ರಾಜಕಾರಣಿ ಗುಲಾಂ ನಬಿ ಆಜಾದ್ ಹೇಳಿದ್ದಾರೆ.ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಥವಾ ಕಾಂಗ್ರೆಸ್ ಅಧ್ಯಕ್ಷ

ತಾನು ಪಕ್ಷದಿಂದ ಹೊರಹೋಗಲು ರಾಹುಲ್‌ ಗಾಂಧಿಯೇ ಕಾರಣ ಎಂದು ಆಜಾದ್‌ ಆರೋಪ Read More »

ಏ. 6 : ಕಾಂಗ್ರೆಸ್‌ ನ ಎರಡನೇ ಪಟ್ಟಿ ಬಿಡುಗಡೆ

ಭಿನ್ನಮತ ಶಮನಕ್ಕೆ ವರಿಷ್ಠರ ತಿಣುಕಾಟ ಬೆಂಗಳೂರು : ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿರಾಯಾಸವಾಗಿ ಬಿಡುಗಡೆ ಮಾಡಿ ಗೆದ್ದಿದ್ದ ಕಾಂಗ್ರೆಸ್‌ಗೆ ಉಳಿದಿರುವ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿತ್ತು. ಕೈ ನಾಯಕರು ಕಳೆದ ಎರಡು ದಿನಗಳಲ್ಲಿ ದಿಲ್ಲಿಯಲ್ಲೇ ಬೀಡುಬಿಟ್ಟು ನಿರಂತರ ಸಭೆ ನಡೆಸಿದ್ದಾರೆ. ಅಂತಿಮವಾಗಿ 100ರ ಪೈಕಿ 45ರಿಂದ 50 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದ್ದು, ಏಪ್ರಿಲ್ 6ರಂದು ಬೆಳಗ್ಗೆ 11 ಗಂಟೆಯೊಳಗೆ ಕೈ ಅಭ್ಯರ್ಥಿಗಳ 2 ನೇ ಪಟ್ಟಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಬಾಕಿ ಉಳಿದಿರುವ

ಏ. 6 : ಕಾಂಗ್ರೆಸ್‌ ನ ಎರಡನೇ ಪಟ್ಟಿ ಬಿಡುಗಡೆ Read More »

error: Content is protected !!
Scroll to Top