ತಪ್ತ ಮುದ್ರಧಾರಣೆ ಕಾರ್ಯಕ್ರಮ

ಪುತ್ತೂರು : ಪುತ್ತೂರು ತಾಲೂಕಿನ ಮಜಲುಮಾರು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಸುಬ್ರಹ್ಮಣ್ಯ ಮಠಾಧೀಶರಾದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ತಪ್ತ ಮುದ್ರಾಧಾರಣೆ ಕಾರ್ಯಕ್ರಮ ನೆರವೇರಿಸಸಿದರು ಈ ಸಂದರ್ಭದಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಪಾಲ್ಗೊಂಡು ಮುದ್ರಾ ಧಾರಣೆ ಮಾಡಿಸಿಕೊಂಡು ಶ್ರೀ ದೇವರ ಹಾಗೂ ಸ್ವಾಮೀಜಿಗಳ ಆಶೀರ್ವಾದ ಪಡೆದರು.

ತಪ್ತ ಮುದ್ರಧಾರಣೆ ಕಾರ್ಯಕ್ರಮ Read More »

ಸಂಭ್ರಮದ ಬಕ್ರೀದ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು

ಪುತ್ತೂರು : ಸಂಭ್ರಮದ ಬಕ್ರೀದ್ ಹಬ್ಬವನ್ನು ಗುರುವಾರ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಶ್ರದ್ಧಾ ಭಕ್ತಿಯಿಂದ ಮುಸ್ಲಿಂ ಬಾಂಧವರು ಆಚರಿಸಿದರು. ಬ್ರಕ್ರೀದ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಹೊಸ ಬಟ್ಟೆ ಧರಿಸಿ ಆಯಾ ತಾಲೂಕು, ವಲಯ ಪ್ರಾರ್ಥನಾ ಮಂದಿರಗಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಸೀದಿಗಳಲ್ಲಿ ಧರ್ಮಗುರುಗಳು ಸಂದೇಶ ನೀಡಿದರು. ಮುಸ್ಲಿಂ ಬಾಂಧವರು ಪರಸ್ಪರ ಶುಭಾಶಯ ಕೋರಿದರು. ಪುತ್ತೂರು ನಗರದಲ್ಲಿ ಹಬ್ಬದ ಹಿನ್ನಲೆಯಲ್ಲಿ ಜನಸಂಖ್ಯೆ ಭಾರೀ ವಿರಳ ಇದ್ದುದು ಕಂಡು ಬಂದಿದ್ದು, ಬಹುತೇಕ ಮುಸ್ಲಿಂ ಬಾಂಧವರು ತಮ್ಮ ಅಂಗಡಿ

ಸಂಭ್ರಮದ ಬಕ್ರೀದ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು Read More »

ದೊಲ್ಲ ಯಾನೆ ಕೊರಗಪ್ಪ ಗೌಡ ನಿಧನ

ಕಡಬ: ತಾಲೂಕಿನ ಕೊಯಿಲ ಗ್ರಾಮದ ಕಾಯರಟ್ಟ ನಿವಾಸಿ ದೊಲ್ಲ ಯಾನೆ ಕೊರಗಪ್ಪ ಗೌಡ(96) ಅಲ್ಪ ಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿಯರನ್ನು ಅಗಲಿದ್ದಾರೆ.

ದೊಲ್ಲ ಯಾನೆ ಕೊರಗಪ್ಪ ಗೌಡ ನಿಧನ Read More »

ಉಜಿರೆ ಲಾಡ್ಜ್ ನಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಬೆಳ್ತಂಗಡಿ: ಅವಿವಾಹಿತ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಜಿರೆಯ ಖಾಸಗಿ ಲಾಡ್ಜ್‍ ಒಂದರಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಅವಿವಾಹಿತ ಕಾರ್ತಿಕ್ (29) ಆತ್ಮಹತ್ಯೆ ಮಾಡಿಕೊಂಡವ. ಈತ ಉಜಿರೆಯ ಖಾಸಗಿ ಲಾಡ್ಜ್‍ ಒಂದರಲ್ಲಿ ರೂಂ ಪಡೆದುಕೊಂಡು ತಂಗಿದ್ದ. ಜೂ.28 ರಂದು ಫ್ಯಾನ್‍ಗೆ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾನೆ ಎನ್ನಲಾಗಿದೆ. ರೂಂನಿಂದ ಕಾರ್ತಿಕ್ ಹೊರಬಾರದೇ ಇದ್ದಾಗ ಅನುಮಾನಗೊಂಡು ಬೆಳ್ತಂಗಡಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸಬ್ ಇನ್ ಸ್ಪೆಕ್ಟರ್ ಆನಂದ ಹಾಗೂ ತಂಡ ಲಾಡ್ಜ್‍ ಗೆ ತೆರಳಿ ಬಾಗಿಲು ಒಡೆದು

ಉಜಿರೆ ಲಾಡ್ಜ್ ನಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ Read More »

ಜು.6 : ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ 9 ನೇ ಶಾಖೆ ಉದ್ಘಾಟನೆ : ಪೂರ್ವಬಾವಿ ಸಭೆ.

ಬೆಳ್ಳಾರೆ : ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ 9 ನೇ ಶಾಖೆ ಜು.6 ರಂದು ಉದ್ಘಾಟನೆಗೊಳ್ಳಲಿದ್ದು, ಪೂರ್ವ ಬಾವಿ ಸಭೆ ಗುರುವಾರ ಬೆಳ್ಳಾರೆ ಕೆಳಗಿನಪೇಟೆಯಲ್ಲಿರುವ ಕಾತ್ಯಾಯಿನಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಉದ್ಘಾಟನಾ ಸಮಾರಂಭದ ಮಾಹಿತಿ ನೀಡಿದರು. ಸಭೆಯಲ್ಲಿ ಸಮಿತಿ ಉಪಾಧ್ಯಕ್ಷ ಯು ಪಿ ರಾಮಕೃಷ್ಣ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ ಕೆ.ಬೆಳ್ಳಾರೆ ಶಾಖೆಯ  ಉಸ್ತುವಾರಿ ನಿರ್ದೇಶಕರಾದ ಸತೀಶ್ ಪಂಬಾರು. ಲೋಕೇಶ್ ಚಾಕೋಟೆ, ಪ್ರವೀಣ್ ಕುಂಟ್ಯಾನ,

ಜು.6 : ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ 9 ನೇ ಶಾಖೆ ಉದ್ಘಾಟನೆ : ಪೂರ್ವಬಾವಿ ಸಭೆ. Read More »

ಹಿರಿಯ ನ್ಯಾಯವಾದಿ ಚಂದ್ರಶೇಖರ ಮುಂಗ್ಲಿಮನೆ ನಿಧನ

ಪುತ್ತೂರು: ಹಿರಿಯ ನ್ಯಾಯವಾದಿ, ಪುತ್ತೂರು ಒಕ್ಕಲಿಗ ಗೌಡ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಮುಂಗ್ಲಿಮನೆ (81) ಹೃದಯಾಘಾತದಿಂದ ಗುರುವಾರ ನಿಧನರಾದರು. ಕೊಂಬೆಟ್ಟು ಶ್ರಿ ಮಹಾಲಿಂಗೇಶ್ವರ ಐಟಿಐ ನಿರ್ದೇಶಕರಾಗಿದ್ದ ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನಿಂದ ಬಂದಿರುವ ಪುತ್ರಿಯನ್ನು ಬಸ್ ನಿಲ್ದಾಣದಿಂದ ದರ್ಬೆಯಲ್ಲಿರುವ ಮನೆಗೆ ಕಾರಿನಲ್ಲಿ ಕರೆದುಕೊಂಡು ಬಂದ ಬಳಿಕ ಮನೆಯಲ್ಲಿ  ವಿಶ್ವಾಂತ್ರಿ ಪಡೆಯುತ್ತಿದ್ದ ಸಂದರ್ಭ ಹೃದಯಾಘಾತವಾಗಿ ನಿಧನರಾದರು.. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಮನೆಗೆ ಮಾಜಿ ಶಾಸಕ ಸಂಜೀವ ಮಠಂದೂರು, ಒಕ್ಕಲಿಗ ಗೌಡ ಸೇವಾ ಸಂಘದ

ಹಿರಿಯ ನ್ಯಾಯವಾದಿ ಚಂದ್ರಶೇಖರ ಮುಂಗ್ಲಿಮನೆ ನಿಧನ Read More »

ಪೆರುವಾಯಿ, ಅಳಿಕೆಯಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ | ಬಡವರಿಗೆ ಅಕ್ಕಿ ಕೊಡದಂತೆ ಕೇಂದ್ರ ಸರಕಾರ ತಡೆಒಡ್ಡಿದೆ: ಅಶೋಕ್ ರೈ

ಪುತ್ತೂರು: ಕಾಂಗ್ರೆಸ್ ಸರಕರದ ಐದು ಗ್ಯಾರಂಟಿಗಳಲ್ಲಿ 10 ಕೇಜಿ ಉಚಿತ ಅಕ್ಕಿಯೂ ಸೇರಿಕೊಂಡಿದೆ, ಆದರೆ 10 ಕೆ ಜಿ ಅಕ್ಕಿ ಬಡವರಿಗೆ ನೀಡದಂತೆ ಕೇಂದ್ರದ ನರೇಂದ್ರ ಮೋದಿ ಸರಕಾರ ಅದಕ್ಕೆ ತಡೆ ಒಡ್ಡಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು. ಅವರು ಅಳಿಕೆಯಲ್ಲಿ ನಡೆದ ಅಳಿಕೆ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಬಡವರು ಮೂರು ಹೊತ್ತು ಚೆನ್ನಾಗಿ ಊಟ ಮಾಡಬೇಕು, ರಾಜ್ಯದಲ್ಲಿ ಯಾರೂ ಹಸಿವನಿಂದ ಇರಬಾರದು ಎಂದು ಸಿದ್ದರಾಮಯ್ಯ ನೇತೃತ್ವದ ಸರಕಾರ ಅನ್ನದಾಸೋಹ ಯೋಜನೆಯನ್ನು

ಪೆರುವಾಯಿ, ಅಳಿಕೆಯಲ್ಲಿ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ | ಬಡವರಿಗೆ ಅಕ್ಕಿ ಕೊಡದಂತೆ ಕೇಂದ್ರ ಸರಕಾರ ತಡೆಒಡ್ಡಿದೆ: ಅಶೋಕ್ ರೈ Read More »

ತಾಪಂ ಸದಸ್ಯೆ ಉಷಾ ಅಂಚನ್ ಉಚ್ಛಾಟಿತ ಆದೇಶ ರದ್ದುಗೊಳಿಸುವಂತೆ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮನವಿ

ಪುತ್ತೂರು: ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಪಕ್ಷ ವಿರೋಧ ಚಟುವಟಿಕೆ ನಡೆಸಿದ ಆರೋಪದ ಮೇಲೆ ತಾಪಂ ಮಾಜಿ ಸದಸ್ಯೆ ಉಷಾ ಅಂಚನ್ ಅವರ ಉಚ್ಛಾಟಿತ ಮಾಡಿರುವ ಆದೇಶವನ್ನು ರದ್ದುಗೊಳಿಸುವಂತೆ ನೆಲ್ಯಾಡಿ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ಕಳೆದ 15 ವರ್ಷಗಳಿಂದ ಉಷಾ ಅಂಚನ್ ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯ ಕಾರ್ಯಕರ್ತೆಯಾಗಿದ್ದು, ಮೂರು ಬಾರಿ ತಾಪಂ ಸ್ಪರ್ಧೆ ಮಾಡಿದ್ದರು. ಸದಸ್ಯೆಯಾಗಿ 10 ವರ್ಷ ಸೇವೆ ಸಲ್ಲಿಸಿದ್ದರು. ಗ್ರಾಪಂ, ಜಿಪಂನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವಲ್ಲಿ

ತಾಪಂ ಸದಸ್ಯೆ ಉಷಾ ಅಂಚನ್ ಉಚ್ಛಾಟಿತ ಆದೇಶ ರದ್ದುಗೊಳಿಸುವಂತೆ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಮನವಿ Read More »

ಕೊಂಬೆಟ್ಟು ಪ ಪೂ ಕಾಲೇಜು ಅಭಿವೃದ್ದಿ ಸಮಿತಿ ಸಭೆ | ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್: ಶಾಸಕ ರೈ

ಪುತ್ತೂರು: ಕೊಂಬೆಟ್ಟು ಸರಕಾರಿ ಪ ಪೂ ಕಾಲೇಜಿನಲ್ಲಿ ಶಾಸಕರಾದ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಅಭಿವೃದ್ದಿ ಸಮಿತಿ ಸಭೆಯು ಜೂ. 28 ರಂದು ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಅಭಿವೃದ್ದಿ ಮತ್ತು ಪಲಿತಾಂಶದ ಬಗ್ಗೆ ಶಾಸಕರು ಪ್ರಾಂಶುಪಾಲಲರಿಂದ ಮಾಹಿತಿ ಪಡೆದುಕೊಂಡರು. ಇದೇ ಕಾಲೇಜಿನ ಹೇಳ ವಿದ್ಯಾರ್ಥಿಯಾಗಿರುವ ಶಾಸಕರು ಕಾಲೇಜಿನ ಅಭಿವೃದ್ದಿಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ನಾನು ಇಲ್ಲಿ ಕಲಿಯುವಾಗ ಹೇಗಿತ್ತೋ ಅದೇ ಮಾದರಿಯಲ್ಲಿ ಈಗಲೂ ಇದೆ. ಇಲ್ಲಿ ವಿಶೇಷ ಅಭಿವೃದ್ದಿ ಕೆಲಸಗಳೇನು ನಡೆದಿಲ್ಲ. ಇಲಾಖೆಯಿಂದ ಬರುವ ಅನುದಾನದವನ್ನು ಬಳಸಿ ಅಲ್ಪಸ್ವಲ್ಪ

ಕೊಂಬೆಟ್ಟು ಪ ಪೂ ಕಾಲೇಜು ಅಭಿವೃದ್ದಿ ಸಮಿತಿ ಸಭೆ | ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವಿಶೇಷ ಕೋಚಿಂಗ್: ಶಾಸಕ ರೈ Read More »

ಜು.1 : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ “ನೃತ್ಯಾಂತರಂಗ-101”

ಪುತ್ತೂರು: ಪುತ್ತೂರು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ ನೃತ್ಯಾಂತರಂಗ-101 ಜು.1 ಶನಿವಾರ ದರ್ಬೆ ಶಶಿಶಂಕರ ಸಭಾಂಗಣದಲ್ಲಿ ನಡೆಯಲಿದೆ. ಸಂಜೆ 5.45 ರಿಂದ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ವಿದುಷಿ ಮಾನಸ ಪುನೀತ್ ರೈ ಕಡಬ ಅವರ ಶಿಷ್ಯೆಯರಾದ ಪ್ರಣಮ್ಯ ಪಿ.ರಾವ್ ಮತ್ತು ಸ್ನೇಹ ಪಿ.ರಾವ್ ಅವರಿಂದ ನೃತ್ಯಾಂತರಂಗ ಪ್ರಸ್ತುತಿಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜು.1 : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಅರ್ಪಿಸುವ “ನೃತ್ಯಾಂತರಂಗ-101” Read More »

error: Content is protected !!
Scroll to Top