ಮತಾಂತರ ನಿಷೇಧ ಕಾಯ್ದೆ ವಾಪಾಸು ವಿರುದ್ಧ ಸಾಧು ಸಂತರು ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ : ಮಾಣಿಲ ಶ್ರೀ ಮೋಹನದಾಸ್ ಸ್ವಾಮೀಜಿ

ಪುತ್ತೂರು: ಇಂದಿನ ರಾಜ್ಯ ಸರಕಾರ ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಪಡಿಸಲು ಚಿಂತನೆ ನಡೆಸುತ್ತಿದ್ದು, ಸರಕಾರ ಹಿಂದೂ ವಿರೋಧಿ ನೀತಿಯನ್ನು ಕೈಬಿಟ್ಟು, ಮತೀಯವಾದಿಗಳನ್ನು ಬೆಂಬಲಿಸಲು ಮುಂದಾದರೆ ಸಾಧು ಸಂತರು ಒಗ್ಗಟ್ಟಾಗಿ ಹೋರಾಟ ನಡೆಸಬೇಕಾದೀತು. ಈ ಕುರಿತು ಹಿಂದೂ ಧರ್ಮ ಬಾಂಧವರು ಒಗ್ಗಟ್ಟಾಗಿ ಸರಕಾರದ ನಿರ್ಧಾರದ ವಿರುದ್ಧ ಹೋರಾಟ ನಡೆಸಲು ಅಣಿಯಾಗಬೇಕಾಗಿದೆ ಎಂದು ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ್ ಪರಮಹಂಸ ಸ್ವಾಮೀಜಿ ಹೇಳಿದ್ದಾರೆ. ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಗೋಹತ್ಯೆ ನಿಷೇಧ ಮತ್ತು […]

ಮತಾಂತರ ನಿಷೇಧ ಕಾಯ್ದೆ ವಾಪಾಸು ವಿರುದ್ಧ ಸಾಧು ಸಂತರು ಒಗ್ಗಟ್ಟಾಗಿ ಹೋರಾಡಬೇಕಾದ ಅನಿವಾರ್ಯತೆ : ಮಾಣಿಲ ಶ್ರೀ ಮೋಹನದಾಸ್ ಸ್ವಾಮೀಜಿ Read More »

ವಿದ್ಯಾರ್ಥಿಗಳಿಗೆ  ವ್ಯಕ್ತಿತ್ವ ವಿಕಸನ ಕಾರ್ಯಕ್ರಮ

ಪುತ್ತೂರು :  ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ಸಂಘದ ವತಿಯಿಂದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಆಯೋಜಿಸಿಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕ  ಹಾಗೂ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್‌ನ ನಿರ್ದೇಶಕ ಡಾ. ಶ್ರೀಶ ಭಟ್ ಮತ್ತು ತಂಡದ ಸದಸ್ಯರಾದ ಜೀವಿತ, ರಾಕೇಶ್, ಶ್ರೇಯಾಭಟ್, ಅನುಷಾ, ಸರ್ವೇಶ್, ನವ್ಯಶ್ರೀ, ಬಾಲಕೃಷ್ಣ ಅವರಿಂದ ಸ್ವೋಟ್ ವಿಶ್ಲೇಷಣೆ, ಹ್ಯಾಕಥಾನ್ ಎಂಬ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ತಮ್ಮಲ್ಲಿ ಅಡಕವಾಗಿರುವ ಸಾಮರ್ಥ್ಯ, ದೌರ್ಬಲ್ಯಗಳನ್ನು ಗುರುತಿಸಲು ಸಹಾಯ

ವಿದ್ಯಾರ್ಥಿಗಳಿಗೆ  ವ್ಯಕ್ತಿತ್ವ ವಿಕಸನ ಕಾರ್ಯಕ್ರಮ Read More »

ಗೃಹಲಕ್ಷ್ಮೀ ಯೋಜನೆ ಜ್ಯಾರಿಗೆ ತರಲು ಮುಹೂರ್ತ ಫಿಕ್ಸ್ | ಸೈಬರ್ ವಂಚಕರಿಂದ ನಕಲಿ ಆ್ಯಪ್​ಗಳ ಸೃಷ್ಟಿ | ಎಚ್ಚೆತ್ತುಕೊಳ್ಳಬೇಕಾಗಿದೆ ಜನತೆ

ಬೆಂಗಳೂರು : ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯನ್ನು ಆಗಸ್ಟ್ 16 ರಿಂದ ಅನುಷ್ಠಾನಗೊಳಿಸುವ ಸಿದ್ಧತೆಯಲ್ಲಿದ್ದು, ಇದಕ್ಕಾಗಿ ಪ್ರತ್ಯೇಕ ಆ್ಯಪ್​ ಕೂಡ ಸಿದ್ಧಪಡಿಸಲಾಗಿದೆ. ಈ ನಡುವೆ ಗೂಗಲ್​ ಪ್ಲೇಸ್ಟೋರ್​ನಲ್ಲಿ ಗೃಹಲಕ್ಷ್ಮೀ ಯೋಜನೆಯ ಹೆಸರಿಯಲ್ಲಿ ಮೂರು ನಕಲಿ ಆ್ಯಪ್​ಗಳ ಸೃಷ್ಟಿಯಾಗಿದ್ದು ಸೈಬರ್​ ಕ್ರೈಂ ಅಪಾಯ ಹೆಚ್ಚಾಗಿದೆ. ಥೇಟ್​ ಸರ್ಕಾರಿ ಆ್ಯಪ್​ನಂತೆಯೇ ಕಾಣುವಂತಹ ಮೂರು ನಕಲಿ ಗೃಹಲಕ್ಷ್ಮೀ ಅಪ್ಲಿಕೇಶನ್​ ಗೂಗಲ್​ ಪ್ಲೇಸ್ಟೋರ್​ನಲ್ಲಿ ಡೌನ್​ಲೋಡ್​ ಆಗ್ತಿದೆ. ಇದೊಂದು ನಕಲಿ ಆ್ಯಪ್​ ಎಂಬ ಅರಿವಿರದ ಅನೇಕರು ಈ ಆ್ಯಪ್‍

ಗೃಹಲಕ್ಷ್ಮೀ ಯೋಜನೆ ಜ್ಯಾರಿಗೆ ತರಲು ಮುಹೂರ್ತ ಫಿಕ್ಸ್ | ಸೈಬರ್ ವಂಚಕರಿಂದ ನಕಲಿ ಆ್ಯಪ್​ಗಳ ಸೃಷ್ಟಿ | ಎಚ್ಚೆತ್ತುಕೊಳ್ಳಬೇಕಾಗಿದೆ ಜನತೆ Read More »

ಮಾಣಿಲ ಸರಕಾರಿ ಪ್ರೌಢಶಾಲೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ

ಪುತ್ತೂರು: ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತ ಧ್ಯೇಯವನ್ನಿಟ್ಟುಕೊಂಡು,ಸತತ ಪರಿಶ್ರಮ, ಪ್ರಯತ್ನದ ಮೂಲಕ ಕಂಡ ಕನಸುಗಳನ್ನ ನನಸಾಗಿಸಿಕೊಳ್ಳಬೇಕು ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಮಾಣಿಲ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಬೇಡಿಕೆಗಳುಳ್ಳ ಮನವಿಯನ್ನು ಶಾಸಕರಿಗೆ ನೀಡಲಾಯ್ತು. ಹಂತ ಹಂತವಾಗಿ ಶಾಲಾ ಅಗತ್ಯತೆಗಳನ್ನು ಪೂರೈಸುವುದಾಗಿ ಶಾಸಕರು ಭರವಸೆ ನೀಡಿದರು. ಶಾಸಕರಿಗೆ ಶಾಲೆಯ ಪರವಾಗಿ ಶಾಲು ಹೊದಿಸಿ, ಪುಸ್ತಕ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯ್ತು. ಮಾಜಿ

ಮಾಣಿಲ ಸರಕಾರಿ ಪ್ರೌಢಶಾಲೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ Read More »

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕ ಕಶೆಕೋಡಿ ಸೀತಾರಾಮ ನೂರಿತ್ತಾಯ ನಿಧನ

ಮಾಣಿ: ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕ ಕಶೆಕೋಡಿ ನಿವಾಸಿ ಸೀತಾರಾಮ ನೂರಿತ್ತಾಯ (86) ಬುಧವಾರ ನಿಧನರಾದರು. ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ 55 ವರ್ಷಗಳ ಕಾಲ ಪ್ರಧಾನ ಅರ್ಚಕರಾಗಿ ಪೌರೋಹಿತ್ಯ ಪೂರೈಸಿರುವ ಅವರು ಕೃಷಿಕರಾಗಿದ್ದರು. ಪೌರೋಹಿತ್ಯ ಸೇವೆಯಲ್ಲಿ ಸತ್ಯ, ನಿಷ್ಠೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ್ದರು. ಮಾಣಿ ಗ್ರಾಮದಲ್ಲಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ, ದೈವಗಳ ನೇಮೋತ್ಸವಗಳಲ್ಲಿ ಸಕ್ರಿಯರಾಗಿ ಪೂಜಾ ಕೈಂಕರ್ಯಗಳೊಂದಿಗೆ ಕ್ಷೇತ್ರದ ಅಭಿವೃದ್ಧಿ ಬಗ್ಗೆಯೂ ಚಿಂತನೆ ಮಾಡಿಕೊಂಡು

ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಅರ್ಚಕ ಕಶೆಕೋಡಿ ಸೀತಾರಾಮ ನೂರಿತ್ತಾಯ ನಿಧನ Read More »

ತಾನು ಕುಳಿತ ತರಗತಿ ನೋಡಿ ಬಾವುಕರಾದ ಶಾಸಕ ಅಶೋಕ್ ರೈ

ಪುತ್ತೂರು: ಹಳೆಯ ನೆನಪುಗಳೆಂದರೆ ಹಾಗೆ ನಮ್ಮನ್ನು ಒಮ್ಮೆಲೆ ಯಾವುದೋ ಲೋಕಕ್ಕೆ ಕೊಂಡೊಯ್ಯುತ್ತದೆ. ನಾವು ಕಲಿತ ಶಾಲೆ,ನಾವು ಕುಳಿತ ತರಗತಿ ಇವುಗಳನ್ನು ಕಂಡಾಗ ನಮ್ಮ ಕಣ್ಣುಗಳು ಒದ್ದೆಯಾಗುವುದು ಸಹಜ ಇದಕ್ಕೆ ಕಾರಣ ನಮ್ಮ ಮಕ್ಕಳಾಟ ಮತ್ತೆ ನೆನಪಾಗುತ್ತದೆ. ಪುತ್ತೂರಿನ ಕೊಂಬೆಟ್ಟು ಬೋರ್ಡು ಹೈಸ್ಕೂಲ್ ಗೆ ಜೂ.28 ರಂದು ಭೇಟಿ ನೀಡಿದ ಶಾಸಕ ಅಶೋಕ್ ರೈ ಗೆ ಆಗಿದ್ದು ಇದೇ ಸ್ಥಿತಿ. ಇಂದು ಕಾರ್ಯಕ್ರಮದ ನಿಮಿತ್ತ ಶಾಲೆಗೆ ಭೇಟಿ ನೀಡಿದ ಅವರು ಕಾರ್ಯಕ್ರಮ ಕ್ಕೆ ಮೊದಲು ತಾನು ಕುಳಿತ ಎರಡು

ತಾನು ಕುಳಿತ ತರಗತಿ ನೋಡಿ ಬಾವುಕರಾದ ಶಾಸಕ ಅಶೋಕ್ ರೈ Read More »

ವಿಟ್ಲ ಜೋಗಿಮಠದಲ್ಲಿ ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ

ವಿಟ್ಲ: ವಿವಾಹಿತ ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜೋಗಿಮಠದಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಕೈರಂಗಳ ಗ್ರಾಮದ ಮೋಟುಗೋಳಿ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರಿ ಅನಿಶಾ (34) ಆತ್ಮಹತ್ಯೆ ಮಾಡಿಕೊಂಡವರು. ಈ ಕುರಿತು ಮೃತರ ಸಹೋದರ ಮುನೀರ್ ಅಹಮ್ಮದ್, ತನ್ನ ಅಕ್ಕನ ಸಾವಿನಲ್ಲಿ ಯಾವುದೇ ಸಂಶಯವಿಲ್ಲ. ನಾಲ್ಕನೇ ಹೆರಿಗೆಯಾದ ಬಳಿಕ ಮಾನಸಿಕವಾಗಿ ನೊಂದಿದ್ದಳು ಎಂದು ತಿಳಿಸಿದ್ದಾರೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಟ್ಲ ಜೋಗಿಮಠದಲ್ಲಿ ವಿವಾಹಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ Read More »

ಬೈಕ್-ಪಿಕಪ್ ಡಿಕ್ಕಿ | ಬೈಕ್ ಸವಾರ ಮೃತ್ಯು

ಪುತ್ತೂರು: ಬೈಕ್ ಹಾಗೂ ಪಿಕಅಪ್ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಲ್ಲರ್ಪೆಯಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಜಟ್ಟಿಪಳ್ಳ ನಿವಾಸಿ  ನಾಗರಾಜ (53) ಮೃತಪಟ್ಟವರು. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದ್ದು, ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಬೈಕ್-ಪಿಕಪ್ ಡಿಕ್ಕಿ | ಬೈಕ್ ಸವಾರ ಮೃತ್ಯು Read More »

ಜೂ.30 : ಇರ್ದೆ-ಉಪ್ಪಳಿಗೆ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಕೆ. ಅವರಿಗೆ ಅಭಿನಂದನೆ, ನೂತನ ಕೊಠಡಿ ಲೋಕಾರ್ಪಣೆ, ಸನ್ಮಾನ

ಪುತ್ತೂರು: ಇರ್ದೆ-ಉಪ್ಪಳಿಗೆ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ನಾರಾಯಣ ಕೆ. ಅವರಿಗೆ ಅಭಿನಂದನೆ, ನೂತನ ಕೊಠಡಿ ಲೋಕಾರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜೂ.30 ರಂದು ಶಾಲಾ ಉತ್ತುಂಗ ಸಭಾಭವನದಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಸಂಚಾಲಕ, ನ್ಯಾಯವಾದಿ ಚಿದಾನಂದ ಬೈಲಾಡಿ ತಿಳಿಸಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾರಾಯಣ ಅವರು 2014 ರಲ್ಲಿ ಮುಖ್ಯ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದು, ನಂತರದ ದಿನಗಳಲ್ಲಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ತನ್ನನ್ನು ತೊಡಗಿಸಿಕೊಂಡು ಶಾಲಾ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಜೂ.30 : ಇರ್ದೆ-ಉಪ್ಪಳಿಗೆ ಶಾಲಾ ಮುಖ್ಯ ಶಿಕ್ಷಕ ನಾರಾಯಣ ಕೆ. ಅವರಿಗೆ ಅಭಿನಂದನೆ, ನೂತನ ಕೊಠಡಿ ಲೋಕಾರ್ಪಣೆ, ಸನ್ಮಾನ Read More »

ಅನ್ನಭಾಗ್ಯ ಯೋಜನೆ ಉಚಿತ 5 ಕೆ ಜಿ ಅಕ್ಕಿ ಬದಲಿಗೆ ಹಣ – ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಪ್ರತಿಯೊಬ್ಬರಿಗೆ ನೀಡಬೇಕಿರುವ ಅಕ್ಕಿಯ ಬದಲಿಗೆ ಹಣವನ್ನು ನೀಡಲು ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಜೂನ್ 28ರಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಜುಲೈ 1 ರಿಂದಲೇ ಫಲಾನುಭವಿಗಳ (ಬಿಪಿಎಲ್ ಕಾರ್ಡ್ ದಾರರಿಗೆ )ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆ ಮಾಡಲು ನಿರ್ಧರಿಸಲಾಗಿದೆ.

ಅನ್ನಭಾಗ್ಯ ಯೋಜನೆ ಉಚಿತ 5 ಕೆ ಜಿ ಅಕ್ಕಿ ಬದಲಿಗೆ ಹಣ – ಸಂಪುಟ ಸಭೆಯಲ್ಲಿ ತೀರ್ಮಾನ Read More »

error: Content is protected !!
Scroll to Top