ಮಾಡತ್ತಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ಮೊಸರು ಕುಡಿಕೆ, ಸನ್ಮಾನ,

ಕಲ್ಲೇಗ: ಮಾಡತ್ತಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ 11ನೇ ವರ್ಷದ ಮೊಸರು ಕುಡಿಕೆ ಉತ್ಸವ ಮಾಡತ್ತಾರು ಶ್ರೀ ಪುಣ್ಯಕುಮಾರ ದೈವಸ್ಥಾನದ ವಠಾರದಲ್ಲಿ ನಡೆಯಿತು. ತಿಮ್ಮಪ್ಪ ಗೌಡ ಪೋಳ್ಯ ಉದ್ಘಾಟಿಸಿದರು. ನಂತರ ಪುಟಾಣಿಗಳಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿವಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜೀವಂಧರ್ ಜೈನ್ ಕಲ್ಲೇಗ, ರಘುರಾಜ ಉಬರಡ್ಕ, ಹೇಮಚಂದ್ರ ಮುರ, ಉಮೇಶ್ ಆಚಾರ್ಯ ಕಲ್ಲೇಗ, ಎಲ್. ಅನಂತ ಪ್ರಸಾದ್ ಮಾಡತ್ತಾರು, ಅಣ್ಣು […]

ಮಾಡತ್ತಾರು ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ಮೊಸರು ಕುಡಿಕೆ, ಸನ್ಮಾನ, Read More »

ಗಾಂಧಿ ಕಟ್ಟೆ ಬಳಿಯ ಹೊಂಡ – ಗುಂಡಿ ರಸ್ತೆಯ ದುಸ್ಥಿತಿ | ತೇಪೆ ಹಾಕಿದ ಎರಡೇ ದಿನದಲ್ಲಿ ಮತ್ತೆ ಹೊಂಡ – ಗುಂಡಿ ಪ್ರತ್ಯಕ್ಷ | ರಸ್ತೆ ದುಸ್ಥಿತಿಗೆ ಯಾರನ್ನು ಹಳಿಯಲಿ ಎನ್ನುವಂತಿದೆ ಗಾಂಧಿ ತಾತನ ಮೌನ!!

ಪುತ್ತೂರು: ಅದೇಗೊ ಬಹಳ ಪ್ರಯಾಸಪಟ್ಟು ಐತಿಹಾಸಿಕ ಪ್ರಾಧಾನ್ಯತೆಯ ಗಾಂಧಿ ಕಟ್ಟೆ ಉತ್ತಮವಾಗಿ ಮೂಡಿಬಂತು. ಆದರೆ ಗಾಂಧಿಕಟ್ಟೆಯ ಬಳಿಯಲ್ಲೇ ಇರುವ ರಸ್ತೆ ಜಪ್ಪಯ್ಯ ಅಂದರೂ ಸರಿಯಾಗಲು ಕೇಳುತ್ತಿಲ್ಲ. ಇದು ಒಂದೆರಡು ದಿನದ ಕಥೆಯಲ್ಲ. ಕಳೆದ ಹಲವು ದಿನಗಳಿಂದ ವಾಹನ ಸವಾರರು, ಇದೇ ಹೊಂಡ – ಗುಂಡಿಯ ರಸ್ತೆಯಲ್ಲಿ ಸರ್ಕಸ್ ಮಾಡುತ್ತಾ ಸಾಗುತ್ತಿದ್ದಾರೆ. ಆದರೂ ಯಾರೊಬ್ಬರೂ ಈ ರಸ್ತೆ ದುಸ್ಥಿತಿಯ ಬಗ್ಗೆ ಚಕಾರ ಎತ್ತುವಂತೆ ಕಾಣಿಸುತ್ತಿಲ್ಲ. ಪುತ್ತೂರು ಪೇಟೆಯ ಸಂಚಾರ ದಟ್ಟಣೆಗೆ ಇದು ಒಂದು ಕಾರಣ. ವಾಹನಗಳು ಹೊಂಡ ಗುಂಡಿಯನ್ನು

ಗಾಂಧಿ ಕಟ್ಟೆ ಬಳಿಯ ಹೊಂಡ – ಗುಂಡಿ ರಸ್ತೆಯ ದುಸ್ಥಿತಿ | ತೇಪೆ ಹಾಕಿದ ಎರಡೇ ದಿನದಲ್ಲಿ ಮತ್ತೆ ಹೊಂಡ – ಗುಂಡಿ ಪ್ರತ್ಯಕ್ಷ | ರಸ್ತೆ ದುಸ್ಥಿತಿಗೆ ಯಾರನ್ನು ಹಳಿಯಲಿ ಎನ್ನುವಂತಿದೆ ಗಾಂಧಿ ತಾತನ ಮೌನ!! Read More »

ಪೊಲೀಸ್ ನಾಯಿಗೆ ಅದೆಂಥಾ ಗೌರವ! ಶೂ ಕಳಚಿಟ್ಟು ಸನ್ಮಾನಿಸಿದ ಎಸ್.ಪಿ.!!

ಕೋಲಾರ: ಯಾರೋ ಒಬ್ಬ ದೊಡ್ಡ ಸಾಧಕರಿಗೆ ಸನ್ಮಾನ ಮಾಡುವಾಗಲೂ ನಾವು ಚಪ್ಪಲಿ ಕಳಚಿಟ್ಟು ನಿಲ್ಲುವುದಿಲ್ಲ. ಆದರೆ, ಕೋಲಾರದ ಎಸ್‌ಪಿ ನಾರಾಯಣ ಅವರು 11 ವರ್ಷಗಳಿಂದ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಶ್ವಾನ ಲೈಕಾ ಬೀಳ್ಕೊಡುಗೆ ಸಂದರ್ಭದಲ್ಲಿ ಶೂ ಕಳಚಿಟ್ಟು ಆ ನಾಯಿಗೆ ಹೂವಿನ ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸುವ ಮೂಲಕ ಗೌರವ ಸಲ್ಲಿಸಿದರು. ನಾಯಿಯ ಬಗೆಗಿನ ಪೊಲೀಸರ ಪ್ರೀತಿ ಜಗತ್ತಿಗೆ ಅರ್ಥವಾಯಿತು. ಹೀಗೆ ಸನ್ಮಾನ ಮಾಡಿಸಿಕೊಂಡ ಶ್ವಾನದಳದ ನಾಯಿ ಏನು ಸಾಮಾನ್ಯದ್ದಲ್ಲ. ಕಳೆದ 11 ವರ್ಷಗಳಿಂದ

ಪೊಲೀಸ್ ನಾಯಿಗೆ ಅದೆಂಥಾ ಗೌರವ! ಶೂ ಕಳಚಿಟ್ಟು ಸನ್ಮಾನಿಸಿದ ಎಸ್.ಪಿ.!! Read More »

ರಿಕ್ಷಾದಲ್ಲಿ ಗಾಂಜಾ ಸಾಗಾಟ: ಕಲಂದರ್ ಶಾ ಬಂಧನ

ಪುತ್ತೂರು: ವಿಟ್ಲ – ಕರ್ನಾಟಕ ಕೇರಳ ಗಡಿಭಾಗದಲ್ಲಿ ರಿಕ್ಷಾವೊಂದರಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದನ್ನು ವಿಟ್ಲ ಪೊಲೀಸರು ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸುಳ್ಯ ನಿವಾಸಿಯಾದ ಎನ್ ಎಂ ಮಹಮ್ಮದ್ ಕಲಂದರ್ ಶಾ (36) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಕಲ್ಲಡ್ಕ ಸಾರಡ್ಕ ರಸ್ತೆಯ ಕೇಪು ಗ್ರಾಮದ ಮರಕ್ಕಿಣಿ ಎಂಬಲ್ಲಿ ಅಟೋರಿಕ್ಷಾದಲ್ಲಿ ನಿಷೇಧಿತ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿಯ ಆಧಾರದಲ್ಲಿ ಪತ್ತೆ ಹಚ್ಚಿದ್ದಾರೆ.ರಿಕ್ಷಾದಲ್ಲಿ 6.110 ಕೆ ಜಿ ತೂಕದ ಗಾಂಜಾ ಪತ್ತೆಯಾಗಿದ್ದು, ಆರೋಪಿಯಲ್ಲಿದ್ದ ಎರಡು ಮೊಬೈಲ್ ಫೊನ್, 900 ರೂ. ನಗದು,

ರಿಕ್ಷಾದಲ್ಲಿ ಗಾಂಜಾ ಸಾಗಾಟ: ಕಲಂದರ್ ಶಾ ಬಂಧನ Read More »

ಪೆರ್ನೆಯ ಕಾರ್ಲದಲ್ಲಿ 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಮಾಣಿ: ಪೆರ್ನೆಯ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದ ವತಿಯಿಂದ ಪೆರ್ನೆ ಯುವಸ್ಪಂದನದ ಸಹಕಾರದೊಂದಿಗೆ 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ಸುಡುಮದ್ದು ಪ್ರದರ್ಶನ, ಹುಲಿವೇಷ ಕುಣಿತ ಸೆ. 19ರಂದು ನಡೆಯಲಿದೆ. ಬೆಳಿಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೊಂಡ ಬಳಿಕ ವಿವಿಧ ಸ್ಪರ್ಧೆಗಳು ನಡೆಯಲಿವೆ. ಸಂಜೆ ಆಕರ್ಷಕ ಸುಡುಮದ್ದು ಪ್ರದರ್ಶನ, ನಾಸಿಕ್ ಬ್ಯಾಂಕ್, ಕುಣಿತ ಭಜನೆ, ಹುಲಿವೇಷ ಕುಣಿತ, ಗೊಂಬೆ, ಟ್ಯಾಬ್ಲೋಗಳೊಂದಿಗೆ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪೆರ್ನೆಯ ಕಾರ್ಲದಲ್ಲಿ 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ Read More »

ಶತಾಯುಷಿ ಗಂಗಮ್ಮ ನಿಧನ

ಪುತ್ತೂರು: ಸಂಪ್ಯ ಕೊಲ್ಯ ನಿವಾಸಿ ದಿ. ರಾಮಣ್ಣ ಆಚಾರ್ಯ ಅವರ ಪತ್ನಿ ಗಂಗಮ್ಮ (104 ವರ್ಷ) ವಯೋಸಹಜ ಅಸೌಖ್ಯದಿಂದ ಸೆ. 15ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು, ಸೊಸೆಯಂದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

ಶತಾಯುಷಿ ಗಂಗಮ್ಮ ನಿಧನ Read More »

ಪುತ್ತಿಗೆ ಪರ್ಯಾಯ: ಸ್ವಾಗತ ಕಾರ್ಯಾಲಯ ಕಚೇರಿ ಉದ್ಘಾಟಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ

ಉಡುಪಿ: ಪುತ್ತಿಗೆ ಪರ್ಯಾಯದ ಪೂರ್ವಭಾವಿಯಾಗಿ ಶನಿವಾರ ಪರ್ಯಾಯ ಕಾರ್ಯಾಲಯ ಕಚೇರಿ ಮತ್ತು ಸ್ವಾಗತ ಕಾರ್ಯಾಲಯವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ  ಹೆಗ್ಗಡೆ ಉದ್ಘಾಟಿಸಿದರು. ಇದೇ ಸಂದರ್ಭ ಪರ್ಯಾಯ ಲಾಂಛನವನ್ನೂ ಬಿಡುಗಡೆಗೊಳಿಸಲಾಯಿತು. ಉಡುಪಿ ಶಾಸಕ ರಘುಪತಿ ಭಟ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.

ಪುತ್ತಿಗೆ ಪರ್ಯಾಯ: ಸ್ವಾಗತ ಕಾರ್ಯಾಲಯ ಕಚೇರಿ ಉದ್ಘಾಟಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ Read More »

ಚೈತ್ರಾ ಕುಂದಾಪುರ ಅವರ ಕೋಟ್ಯಂತರ ಮೌಲ್ಯದ ಸೊತ್ತು ವಶಕ್ಕೆ! | ಎಲ್ಲೆಲ್ಲಿ, ಎಷ್ಟೆಷ್ಟು ಮೌಲ್ಯದ ಸೊತ್ತುಗಳು ವಶಕ್ಕೆ? ಇಲ್ಲಿದೆ ಡೀಟೈಲ್ಸ್… |

ಮಂಗಳೂರು (ಬೆಂಗಳೂರು): ವಂಚನೆ ಪ್ರಕರಣದ ಆರೋಪದಲ್ಲಿ ಸಿಸಿಬಿ ವಿಚಾರಣೆ ಎದುರಿಸುತ್ತಿರುವ ಚೈತ್ರಾ ಕುಂದಾಪುರ ಅವರ ಕೋಟ್ಯಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸರ್ಚ್ ವಾರೆಂಟ್ ಪಡೆದು ಶೋಧ ಕಾರ್ಯ ನಡೆಸಿದ ಸಿಸಿಬಿ ಪೊಲೀಸ್ ಪಡೆ ಉಡುಪಿಯ ಉಳ್ಳೂರು ಶ್ರೀರಾಮ ಸೊಸೈಟಿ ಆಸ್ತಿ, ಬಂಗಾರ ಪತ್ತೆ ಮಾಡಿದೆ. 1 ಕೋಟಿ 08 ಲಕ್ಷ ರೂಪಾಯಿ ಖಾಯಂ ಠೇವಣಿ, ಸೊಸೈಟಿ ಖಾತೆಯಲ್ಲಿ 40 ಲಕ್ಷ ರೂ. ನಗದು ಮತ್ತು 400 ಗ್ರಾಂ ಚಿನ್ನ ಕೂಡ ಪತ್ತೆ ಮಾಡಿದೆ. ಅಲ್ಲದೇ ತನ್ನ ಸ್ನೇಹಿತೆಯ

ಚೈತ್ರಾ ಕುಂದಾಪುರ ಅವರ ಕೋಟ್ಯಂತರ ಮೌಲ್ಯದ ಸೊತ್ತು ವಶಕ್ಕೆ! | ಎಲ್ಲೆಲ್ಲಿ, ಎಷ್ಟೆಷ್ಟು ಮೌಲ್ಯದ ಸೊತ್ತುಗಳು ವಶಕ್ಕೆ? ಇಲ್ಲಿದೆ ಡೀಟೈಲ್ಸ್… | Read More »

ವಾಲಿಬಾಲ್ ಪಂದ್ಯ: ಸವಣೂರು ವಿದ್ಯಾರಶ್ಮಿ ಪ.ಪೂ. ಕಾಲೇಜು ಪ್ರಥಮ

ಪುತ್ತೂರು: ಸುಬ್ರಹ್ಮಣ್ಯದಲ್ಲಿ ನಡೆದ ಕಡಬ ತಾಲೂಕು ಮಟ್ಟದ ಪದವಿ ಪೂರ್ವ ವಿಭಾಗದ ಹುಡುಗರ ವಾಲಿಬಾಲ್ ಪಂದ್ಯಾಟದಲ್ಲಿ ವಿದ್ಯಾರಶ್ಮಿ ಪ.ಪೂ. ಕಾಲೇಜಿನ ತಂಡವು ಪ್ರಥಮ ಸ್ಥಾನ ಗಳಿಸಿಕೊಂಡಿದೆ. ತಂಡವನ್ನು ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ಆಳ್ವ ಅವರನ್ನು ಸಂಚಾಲಕ ಸವಣೂರು ಸೀತಾರಾಮ ರೈ, ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಸೀತಾರಾಮ ಕೇವಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಲಿಬಾಲ್ ಪಂದ್ಯ: ಸವಣೂರು ವಿದ್ಯಾರಶ್ಮಿ ಪ.ಪೂ. ಕಾಲೇಜು ಪ್ರಥಮ Read More »

ಗಣೇಶ ಚತುರ್ಥಿಗೆ ಸೆ. 19ರಂದೇ ರಜೆ ಫಿಕ್ಸ್: ಸರ್ಕಾರದಿಂದ ಹೊರಬಿತ್ತು ಆದೇಶ

ಬೆಂಗಳೂರು: ಗಣೇಶ ಚತುರ್ಥಿಯ ಪ್ರಯುಕ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರದ ಬದಲಾಗಿ ಮಂಗಳವಾರ ರಜೆ ನೀಡಲು ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಗಣೇಶ ಹಬ್ಬದ ಆಚರಣೆಯ ದಿನದ ಬಗ್ಗೆ ಗೊಂದಲಗಳಿವೆ. ಹಲವೆಡೆ ಸೋಮವಾರ (ಸೆ.18) ದಂದು ಹಬ್ಬ ಆಚರಿಸುತ್ತಿದ್ದರೆ, ಮತ್ತೆ ಕೆಲವೆಡೆ ಮಂಗಳವಾರ (ಸೆ.19) ದಂದು ಆಚರಿಸಲಾಗುತ್ತಿದೆ. ಸರ್ಕಾರ ನಿಗದಿ ಪಡಿಸಿದ ರಜೆಯು ಸೋಮವಾರ ಎಂದಿದೆ. ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಎಂದು ಕೂಗು

ಗಣೇಶ ಚತುರ್ಥಿಗೆ ಸೆ. 19ರಂದೇ ರಜೆ ಫಿಕ್ಸ್: ಸರ್ಕಾರದಿಂದ ಹೊರಬಿತ್ತು ಆದೇಶ Read More »

error: Content is protected !!
Scroll to Top