10 ದಿನಗಳ ಬಾಣಂತಿಯ ಮೃತದೇಹ ಬಾವಿಯಲ್ಲಿ ಪತ್ತೆ!: ಅನಾಥವಾಯ್ತು ಮಗು!!

ಕಾಸರಗೋಡು: ಹತ್ತು ದಿನಗಳ ಬಾಣಂತಿಯೋರ್ವರ ಮೃತದೇಹ ಮನೆ ಪರಿಸರದ ಬಾವಿಯಲ್ಲಿ ಪತ್ತೆಯಾದ ಘಟನೆ ಕೂಡ್ಲು ಪಾರೆಕಟ್ಟೆ ಬಳಿ ಸೆ. 16ರಂದು ತಡರಾತ್ರಿ ನಡೆದಿದೆ‌. ಸೋಮನಾಥ ಆಚಾರ್ಯರ ಪುತ್ರಿ, ಕಂಬಾರು ಬೆದ್ರಡ್ಕದ ಪೋಸ್ಟು ಮಾಸ್ಟರ್ ವೃತ್ತಿಯಲ್ಲಿದ್ದ ಸುರೇಖ (29) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಜೋಡುಕಲ್ಲು ಸಮೀಪದ ಅರಿಯಾಳ ನಿವಾಸಿ ಜಯ ಕುಮಾರ್ ಆಚಾರ್ಯ ಎಂಬವರ ಪತ್ನಿ ಸುರೇಖ ಕಳೆದ ಹತ್ತು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿ ಬಾಣಂತಿಯಾಗಿ ತವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಶನಿವಾರ ರಾತ್ರಿ […]

10 ದಿನಗಳ ಬಾಣಂತಿಯ ಮೃತದೇಹ ಬಾವಿಯಲ್ಲಿ ಪತ್ತೆ!: ಅನಾಥವಾಯ್ತು ಮಗು!! Read More »

ಅಬುಧಾಬಿಗೆ ತೆರಳುತ್ತಿದ್ದ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ!

ಹೊಸದಿಲ್ಲಿ: ಲಕ್ನೋದಿಂದ ಅಬುಧಾಬಿಗೆ ಹೊರಟಿದ್ದ ಇಂಡಿಗೋ ವಿಮಾನವು ಹೈಡ್ರಾಲಿಕ್ ಸಿಸ್ಟಮ್ ಸಮಸ್ಯೆಯ ಕಾರಣದಿಂದ ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಮೂಲಗಳು ತಿಳಿಸಿವೆ. 6E 093 ಫ್ಲೈಟ್‌ ನಲ್ಲಿ 150ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ವಿಮಾನವು ಹೈಡ್ರಾಲಿಕ್ ಸಿಸ್ಟಮ್ ಸಮಸ್ಯೆಯನ್ನು ಹೊಂದಿತ್ತು ಮತ್ತು ನಂತರ ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಮೂಲಗಳು ತಿಳಿಸಿವೆ. ಘಟನೆಯ ಕುರಿತು ಇಂಡಿಗೋದಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಇದಕ್ಕೂ ಮೊದಲು,

ಅಬುಧಾಬಿಗೆ ತೆರಳುತ್ತಿದ್ದ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ! Read More »

ವಿಶ್ವಕರ್ಮ ಮಹೋತ್ಸವ, ವೈಭವದ ವಿಶ್ವಕರ್ಮ ವಾಹನ ಮೆರವಣಿಗೆ

ಪುತ್ತೂರು: ವಿಶ್ವಕರ್ಮ ಜಯಂತಿ ಅಂಗವಾಗಿ ವಿಶ್ವಕರ್ಮ ದೇವರ ಅಲಂಕೃತ ವಾಹನ ಮೆರವಣಿಗೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಚಾಲನೆ ನೀಡಿದರು. ಬಳಿಕ ಪುತ್ತೂರು ಪೇಟೆಯ ಮುಖ್ಯರಸ್ತೆಯಿಂದಾಗಿ ಸಾಗಿದ ವಿಶ್ವಕರ್ಮ ದೇವರ ಅಲಂಕೃತ ವಾಹನ ಮೆರವಣಿಗೆ ಬೊಳುವಾರು ವಿಶ್ವಕರ್ಮ ಸಭಾಭವನದವರೆಗೆ ಸಾಗಿತು. ಮೆರವಣಿಗೆಯಲ್ಲಿ ಚೆಂಡೆ, ಕುಣಿತ ಭಜನೆ, ವಿಶ್ವಕರ್ಮ ದೇವರ ಸ್ತಬ್ದಚಿತ್ರ ಗಮನ ಸೆಳೆಯಿತು. ಇದನ್ನನುಸರಿಸಿ ವಿಶ್ವಕರ್ಮ ಸಮುದಾಯದವರು ಮೆರವಣಿಗೆಯಲ್ಲಿ

ವಿಶ್ವಕರ್ಮ ಮಹೋತ್ಸವ, ವೈಭವದ ವಿಶ್ವಕರ್ಮ ವಾಹನ ಮೆರವಣಿಗೆ Read More »

ಮುಂದಿನ ಬಾರಿಯೂ ಮೋದಿಯೇ ಪ್ರಧಾನಿಯಾಗಲಿ | ಹುಟ್ಟುಹಬ್ಬ ಪ್ರಯುಕ್ತ ಮೋದಿ ಹೆಸರಲ್ಲಿ ವಿಶೇಷ ಪ್ರಾರ್ಥನೆ, ಕುಂಕುಮಾರ್ಚನೆ

ಪುತ್ತೂರು: ಪ್ರಧಾನ ಮಂತ್ರಿ ನರೇಂದ್ರ ದಾಮೋದರದಾಸ್ ಮೋದಿ ಅವರ 73ನೇ ಜನ್ಮದಿನದ ಪ್ರಯುಕ್ತ ಹಿನ್ನೆಲೆಯಲ್ಲಿ ಅವರ ಆಯುಷ್ಯ,ಆರೋಗ್ಯ ವೃದ್ಧಿಗಾಗಿ ಮತ್ತು ಮುಂದಿನ ಚುನಾವಣೆಯಲ್ಲೂ ದೇಶದ ಚುಕ್ಕಾಣಿ ಹಿಡಿಯುವ ಶಕ್ತಿ ಅವರಿಗೆ ಮಹಾದೇವಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಿ, ಕಬಕ ಮಹಾದೇವಿ ದೇವಸ್ಥಾನದಲ್ಲಿ ಕುಂಕುಮಾರ್ಚನೆ ಸೇವೆ ಸಲ್ಲಿಸಲಾಯಿತು. ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಕೃಷ್ಣ ಆಳ್ವ, ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಎಸ್.ಟಿ ಮೋರ್ಚಾ ಪ್ರ.ಕಾರ್ಯದರ್ಶಿ ಹರೀಶ್ ಬಿಜತ್ರೆ, ಪುಣಚ

ಮುಂದಿನ ಬಾರಿಯೂ ಮೋದಿಯೇ ಪ್ರಧಾನಿಯಾಗಲಿ | ಹುಟ್ಟುಹಬ್ಬ ಪ್ರಯುಕ್ತ ಮೋದಿ ಹೆಸರಲ್ಲಿ ವಿಶೇಷ ಪ್ರಾರ್ಥನೆ, ಕುಂಕುಮಾರ್ಚನೆ Read More »

ಹೆಲ್ತ್‌ ಎಟಿಎಂ ಲೋಕಾರ್ಪಣೆ ಮಾಡಿದ ಸಿಎಂ | ಆರೋಗ್ಯ ಸೇವೆ ಹೇಗೆ, ಪ್ರಯೋಜನ ಏನು?

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಹೆಲ್ತ್ ಕಿಯೋಸ್ಕ್” (ಹೆಲ್ತ್‌ ಎಟಿಎಂ) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದಾರೆ. ಕಾರ್ಪೋರೇಟ್‌ ಕಂಪನಿಗಳ (ಸಿಎಸ್‌ಆರ್‌ ನಿಧಿಯಡಿ 5 ಕೋಟಿ ರೂಪಾಯಿ ವೆಚ್ಚದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಹೆಲ್ತ್‌ ಎಟಿಎಮ್ ಯೋಜನೆ ಜಾರಿಗೊಂಡಿದೆ. ಆರೋಗ್ಯ ಕೇಂದ್ರಗಳಲ್ಲಿ, ವೆಲ್‌ನೆಸ್ ಸೆಂಟರ್ ಸೇರಿದಂತೆ 25 ಆಯ್ದ ಸ್ಥಳಗಳಲ್ಲಿ ಹೆಲ್ತ್ ಎಟಿಎಮ್ ಅನ್ನು ಆರಂಭ ಮಾಡಲಾಗಿದೆ. ಇದರಿಂದ ಅನೇಕ ಪ್ರಯೋಜನಗಳಿವೆ. ಅಲ್ಲದೆ, ಹೆಲ್ತ್ ಎಟಿಎಂ ಹೇಗೆ ಕಾರ್ಯನಿರ್ವಹಣೆ ಮಾಡಲಿದೆ ಎಂಬುದನ್ನು ನೋಡೋಣ.

ಹೆಲ್ತ್‌ ಎಟಿಎಂ ಲೋಕಾರ್ಪಣೆ ಮಾಡಿದ ಸಿಎಂ | ಆರೋಗ್ಯ ಸೇವೆ ಹೇಗೆ, ಪ್ರಯೋಜನ ಏನು? Read More »

ಒಂದೇ ಕಾರ್ಯಕ್ರಮದಲ್ಲಿ 7000ಕ್ಕೂ ಅಧಿಕ ಮಂದಿಯಿಂದ ಅಂಗಾಂಗ ದಾನದ ಪ್ರತಿಜ್ಞೆ

ಲಕ್ನೋ: ಒಂದೇ ಕಾರ್ಯಕ್ರಮದಲ್ಲಿ ಸುಮಾರು 7 ಸಾವಿರಕ್ಕೂ ಅಧಿಕ ಮಂದಿ ಅಂಗಾಂಗ ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.ಶನಿವಾರ(ಸೆ.16 ರಂದು)ಉತ್ತರ ಪ್ರದೇಶದ ಆಗ್ರಾದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಆರೋಗ್ಯ ಖಾತೆ ರಾಜ್ಯ ಸಚಿವ ಎಸ್ಪಿ ಸಿಂಗ್ ಬಘೇಲ್ ನೇತೃತ್ವದಲ್ಲಿ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮದಲ್ಲಿ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ 7,000 ಕ್ಕೂ ಹೆಚ್ಚು ಜನರು ಶನಿವಾರ ತಮ್ಮ ಅಂಗಾಂಗಗಳನ್ನು ದಾನ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.2024 ರ ವೇಳೆಗೆ ಉತ್ತರ ಪ್ರದೇಶದ ಪ್ರತಿ ವೈದ್ಯಕೀಯ

ಒಂದೇ ಕಾರ್ಯಕ್ರಮದಲ್ಲಿ 7000ಕ್ಕೂ ಅಧಿಕ ಮಂದಿಯಿಂದ ಅಂಗಾಂಗ ದಾನದ ಪ್ರತಿಜ್ಞೆ Read More »

ಪ್ರಧಾನಿ ಮೋದಿಗೆ 73ನೇ ಜನ್ಮದಿನದ ಸಂಭ್ರಮ: ಶುಭಾಶಯಗಳ ಮಹಾಪೂರ | ಹುಟ್ಟುಹಬ್ಬಕ್ಕೆಂದೇ ಕಾಳಜಿ ವಹಿಸಿ ನಿರ್ಮಿಸಿದ ಯೋಜನೆಗಳ ವಿವರ ಇಲ್ಲಿದೆ…

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು 73ನೇ ಜನ್ಮದಿನದ ಸಂಭ್ರಮದಲ್ಲಿದ್ದು, ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ಗಣ್ಯಾತಿಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ ಶುಭಾಶಯ ಕೋರಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನ ಹಿನ್ನೆಲೆಯಲ್ಲಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ನಿಮ್ಮ ದೂರದೃಷ್ಟಿ ಮತ್ತು ದೃಢವಾದ ನಾಯಕತ್ವದಿಂದ ‘ಅಮೃತ ಕಾಲ‘ದಲ್ಲಿ ಭಾರತದ ಸರ್ವಾಂಗೀಣ ಅಭಿವೃದ್ಧಿಗೆ ದಾರಿ ಮಾಡಿಕೊಡಬೇಕೆಂದು ಬಯಸುತ್ತೇನೆ.

ಪ್ರಧಾನಿ ಮೋದಿಗೆ 73ನೇ ಜನ್ಮದಿನದ ಸಂಭ್ರಮ: ಶುಭಾಶಯಗಳ ಮಹಾಪೂರ | ಹುಟ್ಟುಹಬ್ಬಕ್ಕೆಂದೇ ಕಾಳಜಿ ವಹಿಸಿ ನಿರ್ಮಿಸಿದ ಯೋಜನೆಗಳ ವಿವರ ಇಲ್ಲಿದೆ… Read More »

ಬೈಕ್ ಕಳ್ಳನ ಬಂಧನದಿಂದ ಬಯಲಾಯ್ತು ಮತ್ತೊಂದು ಕೃತ್ಯ!

ಸುಳ್ಯ: ಬೈಕ್ ಕಳ್ಳತನ ಪ್ರಕರಣಕ್ಜೆ ಸಂಬಂಧಪಟ್ಟು ಆರೋಪಿ ಕೊಡಗು ಸೋಮವಾರಪೇಟೆಯ ಬಸವನಹಳ್ಳಿಯ ಸುಬ್ರಮಣಿ (26) ಎಂಬಾತನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಸೆ 16ರಂದು ದಾಖಲಾಗಿದ್ದ ಮೋಟರ್ ಸೈಕಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸುಳ್ಯ ಠಾಣಾ ಪೊಲೀಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ವರದಿಯಾದ ಕೆಲವೇ ಗಂಟೆಗಳಲ್ಲಿ ಸುಳ್ಯ ತಾಲೂಕು ಆಲಟ್ಟಿ ಗ್ರಾಮದ ಸರಳಿಕುಂಜ ಎಂಬಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆಇದಲ್ಲದೆ ಆರೋಪಿ

ಬೈಕ್ ಕಳ್ಳನ ಬಂಧನದಿಂದ ಬಯಲಾಯ್ತು ಮತ್ತೊಂದು ಕೃತ್ಯ! Read More »

ಸಾಲು ಮರದ ತಿಮ್ಮಕ್ಕ ಅವರ ಸರ್ಕಾರಿ ಸೌಲಭ್ಯವನ್ನು ಬಳಸಿಕೊಂಡಳಾ ಚೈತ್ರಾ?

ಬೆಂಗಳೂರು: ಸಿಸಿಬಿ ಬಂಧನದ ಬಳಿಕ ಚೈತ್ರಾ ಮತ್ತು ತಂಡದ ಹೊಸ ಹೊಸ ವಂಚನೆಗಳು ಇದೀಗ ಬೆಳಕಿಗೆ ಬರತೊಡಗಿದೆ. ಸಾಲು ಮರದ ತಿಮ್ಮಕ್ಕ ಅವರಿಗೆ ನೀಡಿರುವ ಸರ್ಕಾರಿ ಸೌಲಭ್ಯಗಳನ್ನು ಚೈತ್ರಾ ಮತ್ತವರ ತಂಡ ಅಕ್ರಮವಾಗಿ ಬಳಸಿಕೊಂಡಿದೆ ಎಂಬ ಹೊಸ ಆರೋಪ ಕೇಳಿಬಂದಿದೆ. ಚೈತ್ರಾ ಗ್ಯಾಂಗಿನ ಗಗನ್ ಎಂಬಾತ ಸಾಲು ಮರದ ತಿಮ್ಮಕ್ಕ ಅವರ ಪುತ್ರನ ಜೊತೆ ಸ್ನೇಹದಿಂದಿದ್ದ. ಇದನ್ನೇ ತಮ್ಮ ವಂಚನೆಗೆ ಬಳಸಿಕೊಂಡಿದ್ದ ಗಗನ್, ಸಾಲು ಮರದ ತಿಮ್ಮಕ್ಕ ಅವರಿಗೆ ನೀಡಿದ್ದ ಸರ್ಕಾರಿ ಕಾರನ್ನು ಬಳಸಿಕೊಂಡಿದ್ದ ಎನ್ನಲಾಗಿದೆ. ಈ

ಸಾಲು ಮರದ ತಿಮ್ಮಕ್ಕ ಅವರ ಸರ್ಕಾರಿ ಸೌಲಭ್ಯವನ್ನು ಬಳಸಿಕೊಂಡಳಾ ಚೈತ್ರಾ? Read More »

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ತೆಂಕಿಲ ವಿವೇಕಾನಂದದ ವಿಶಾಲ್ ಪಿ. ಆಯ್ಕೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ವತಿಯಿಂದ ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ದಕ್ಷಿಣ ವಲಯದ ಕರಾಟೆ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 4 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಾಲಕರ ವಿಭಾಗದಲ್ಲಿ (17ರ ವಯೋಮಾನದ) ವಿಶಾಲ್ ಪಿ. 10ನೇ ತರಗತಿ [ವಿಠಲ.ಪಿ ಮತ್ತು ರೇಷ್ಮ ದಂಪತಿ ಪುತ್ರ] ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಪ್ರಮಥ ಎಮ್ ಭಟ್ 10ನೇ ತರಗತಿ [ರವಿನಾರಾಯಣ.ಎಮ್ ಮತ್ತು ಶರಾವತಿ ದಂಪತಿ ಪುತ್ರ] ದ್ವಿತೀಯ

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಗೆ ತೆಂಕಿಲ ವಿವೇಕಾನಂದದ ವಿಶಾಲ್ ಪಿ. ಆಯ್ಕೆ Read More »

error: Content is protected !!
Scroll to Top