ಮೆರವಣಿಗೆಯಲ್ಲಿ ಕರೆತಂದ ಕಲ್ಲಾರೆ ಗಣೇಶನ ವಿಗ್ರಹ | ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಸಭಾಮಂಟಪದಲ್ಲಿ ಪ್ರತಿಷ್ಠಾಪನೆ

ಪುತ್ತೂರು: ಇಲ್ಲಿಯ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಪುತ್ತೂರು ಕಲ್ಲಾರೆ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಲ್ಪಡುವ ಶ್ರೀ ಗಣೇಶನ ವಿಗ್ರಹವನ್ನು ಮೆರವಣಿಗೆ ಮೂಲಕ ಕರೆತಂದು ಶ್ರೀ ರಾಘವೇಂದ್ರ ಮಠದ ಸಭಾ ಮಂಟಪದಲ್ಲಿ  ಪ್ರತಿಷ್ಠಾಪಿಸಲಾಯಿತು. ಶ್ರೀ ರಾಘವೇಂದ್ರ ಮಠದ ಪ್ರಧಾನ ಅರ್ಚಕ ರಾಘವೇಂದ್ರ ಉಡುಪರು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠಾಪನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ಯು.ಪೂವಪ್ಪ, ಪ್ರಧಾನ ಕಾರ್ಯದರ್ಶಿ ಯು.ಲೋಕೇಶ್ ಹೆಗ್ಡೆ, ಕೋಶಾಧಿಕಾರಿ ಬೆಟ್ಟ ಈಶ್ವರ ಭಟ್ಟ, ಸಮಿತಿ ಸದಸ್ಯರು, […]

ಮೆರವಣಿಗೆಯಲ್ಲಿ ಕರೆತಂದ ಕಲ್ಲಾರೆ ಗಣೇಶನ ವಿಗ್ರಹ | ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಸಭಾಮಂಟಪದಲ್ಲಿ ಪ್ರತಿಷ್ಠಾಪನೆ Read More »

ನಟ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ

ಚೆನ್ನೈ: ನಟ, ನಿರ್ಮಾಪಕ, ಸಂಗೀತ ನಿರ್ದೇಶಕ ವಿಯಜ್ ಆಂಟೋನಿ ಪುತ್ರಿ ಮೀರಾ (16) ಇಂದು ಮುಂಜಾನೆ ತಮ್ಮ ಮನೆಯ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಆಟ, ಓದುಗಳಲ್ಲಿ ಚುರುಕಾಗಿದ್ದ ಅವರ ಖಿನ್ನತೆಗೆ ಕಾರಣಗಳು ತಿಳಿದು ಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ನಟ ವಿಜಯ್ ಆಂಟೋನಿ ಪುತ್ರಿ ಮೀರಾ ಆತ್ಮಹತ್ಯೆ Read More »

ಪ್ರಾಣಾಯಾಮ, ಧ್ಯಾನಗಳ ಪರಿಣಾಮಕಾರಿ ಅಭ್ಯಾಸದಿಂದ ದೇಹ, ಮನಸ್ಸು ಸ್ವಸ್ಥ | ಯೋಗ, ಪ್ರಕೃತಿ ಚಿಕಿತ್ಸಾ ಮಾಹಿತಿ ಕಾರ್ಯಕ್ರಮದಲ್ಲಿ ಪ್ರತೀಕ್ಷಾ ಹೆಚ್.

ಪುತ್ತೂರು: ಯೋಗ ವಿಶ್ವವ್ಯಾಪಿಯಾಗಿರುವುದು ನಮ್ಮ ಹೆಮ್ಮೆ ಮತ್ತು ಸುಯೋಗ ಎಂದು ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ವೈದ್ಯಕೀಯ ಪದವಿ ವಿದ್ಯಾರ್ಥಿನಿ ಪ್ರತೀಕ್ಷಾ ಹೆಚ್. ಹೇಳಿದರು. ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಆಯುಷ್ ಶಾಖೆಯಾದ ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ವಿಧಾನದ ಮೂಲಕ ವಿವಿಧ ರೋಗಗಳಿಗೆ ಔಷಧ ಹಾಗೂ ಶಸ್ತ್ರಚಿಕಿತ್ಸೆ ರಹಿತ ಪರಿಹಾರವನ್ನು ಕಂಡುಕೊಳ್ಳಬಹುದಾದ ಅನೇಕ ವೈಶಿಷ್ಟ್ಯಗಳ ಬಗ್ಗೆ ಅವರು ಬೆಳಕು

ಪ್ರಾಣಾಯಾಮ, ಧ್ಯಾನಗಳ ಪರಿಣಾಮಕಾರಿ ಅಭ್ಯಾಸದಿಂದ ದೇಹ, ಮನಸ್ಸು ಸ್ವಸ್ಥ | ಯೋಗ, ಪ್ರಕೃತಿ ಚಿಕಿತ್ಸಾ ಮಾಹಿತಿ ಕಾರ್ಯಕ್ರಮದಲ್ಲಿ ಪ್ರತೀಕ್ಷಾ ಹೆಚ್. Read More »

2023-24ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ | ಪುತ್ತೂರು, ಉಪ್ಪಿನಂಗಡಿ ಕಂಬಳದ ದಿನಾಂಕ ಹೀಗಿದೆ…

ಪುತ್ತೂರು : 2023-24ನೇ ಸಾಲಿನ ಕಂಬಳ ವೇಳಾಪಟ್ಟಿಯಂತೆ ಇದೇ ನ.11ರಂದು ಗುರುಪುರ ಕಂಬಳದೊಂದಿಗೆ ಜೋಡುಕರೆ ಕಂಬಳ ಋತು ಆರಂಭಗೊಳ್ಳಲಿದೆ. 22 ಕಂಬಳಗಳು ವೇಳಾಪಟ್ಟಿಯಂತೆ ನಡೆಯಲಿದೆ. ಕೋಟಿ ಚೆನ್ನಯ ಜೋಡುಕರೆ ಕಂಬಳ 2024ರ ಜ .27ರಂದು ನಡೆಯಲಿದೆ. ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಮಾ.23ರಂದು ನಡೆಯಲಿದೆ.

2023-24ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ | ಪುತ್ತೂರು, ಉಪ್ಪಿನಂಗಡಿ ಕಂಬಳದ ದಿನಾಂಕ ಹೀಗಿದೆ… Read More »

ಉರ್ಲಾಂಡಿ ನಿವಾಸಿ ಮಹೇಶ್ ಅನಾರೋಗ್ಯದಿಂದ ನಿಧನ!

ಪುತ್ತೂರು : ಅನಾರೋಗ್ಯದಿಂದ ಉರ್ಲಾಂಡಿ ನಿವಾಸಿ ಮಹೇಶ್ (37) ಪುತ್ತೂರು ಆಸ್ಪತ್ರೆಯಲ್ಲಿ ನಿಧನರಾದರು.ಈ ಮೊದಲು ಪುತ್ತೂರಿನ ಪ್ರತಿಷ್ಠಿತ ಬಟ್ಟೆ ಮಳಿಗೆಯಲ್ಲಿ ಕೆಲಸಕ್ಕಿದ್ದ ಮಹೇಶ್, ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು.ಅವಿವಾಹಿತರಾಗಿರುವ ಮಹೇಶ್ ತಾಯಿ ಜೊತೆ ಉರ್ಲಾಂಡಿ ಮನೆಯಲ್ಲಿ ವಾಸವಾಗಿದ್ದರು.ಇಂದು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು ಎಂದು ವರದಿಯಾಗಿದೆ.

ಉರ್ಲಾಂಡಿ ನಿವಾಸಿ ಮಹೇಶ್ ಅನಾರೋಗ್ಯದಿಂದ ನಿಧನ! Read More »

ಜೀಪಿನಲ್ಲಿ ಪತ್ತೆಯಾಯ್ತು ಗಂಡು ಕರು | ತೋಮಸ್ ಸಹಿತ ಇಬ್ಬರು ಪೊಲೀಸ್ ವಶ

ವೇಣೂರು : ಜೀಪೊಂದರಲ್ಲಿ ವಾಹನದಲ್ಲಿ ಅಕ್ರಮವಾಗಿ ಜಾನುವಾರನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕುತ್ಲೂರು ಎಂಬಲ್ಲಿ ನಡೆದಿದೆ. ಕೇರಳ ತೋಡಪುಡ ತಾಲೂಕು, ಇಡ್ಕಿ ನಿವಾಸಿ ತೋಮಸ್ (34), ಬೆಳ್ತಂಗಡಿ ಕುತ್ಲೂರು ನಿವಾಸಿ ರಂಜಿತ್ (31) ಬಂಧಿತ ಆರೋಪಿಗಳು. ಸೋಮವಾರ ಬೆಳಿಗ್ಗೆ ಬೆಳ್ತಂಗಡಿ ತಾಲೂಕಿನ ಕುತ್ಲೂರು ಎಂಬಲ್ಲಿ ಜೀಪಿನಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ವೇಣೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿ, ಒಂದು ಗಂಡು ಕರು ಹಾಗೂ

ಜೀಪಿನಲ್ಲಿ ಪತ್ತೆಯಾಯ್ತು ಗಂಡು ಕರು | ತೋಮಸ್ ಸಹಿತ ಇಬ್ಬರು ಪೊಲೀಸ್ ವಶ Read More »

ಮಹಾಲಿಂಗೇಶ್ವರ ದೇವರ ಉತ್ಸವ ಬಲಿಯೊಂದಿಗೆ ಕದಿರು ವಿನಿಯೋಗ – ವಿತರಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕದಿರು ವಿನಿಯೋಗ-ವಿತರಣೆ ಕಾರ್ಯಕ್ರಮ ಸೋಮವಾರವೂ ಮುಂದುವರಿಯಿತು. ದೇವಸ್ಥಾನದ ಪುಷ್ಕರಣಿ ಬಳಿ ಇರುವ ಅಶ್ವತ್ಥ ಕಟ್ಟೆಯಲ್ಲಿ ಕದಿರಿಗೆ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ದೇವರ ಉತ್ಸವ ಬಲಿಯೊಂದಿಗೆ ಕದಿರನ್ನು ದೇವಸ್ಥಾನದ ಒಳಾಂಗಣಕ್ಕೆ ತಂದು ಪೂಜೆ ಸಲ್ಲಿಸಲಾಯಿತು. ಬಳಿಕ ಕದಿರನ್ನು ಹೊರಾಂಗಣದಲ್ಲಿ ಸರತಿ ಸಾಲಿನಲ್ಲಿ ನಿಂತ ಭಕ್ತರಿಗೆ ವಿತರಿಸಲಾಯಿತು. ದೇವಸ್ಥಾನದ ಗರ್ಭಗುಡಿ, ಗೋಪುರ, ರಥ, ಕಟ್ಟೆಗಳಿಗೆ ಕದಿರು ಕಟ್ಟುವ ಸಂಪ್ರದಾಯ ನಡೆದ ಬಳಿಕ ಮಧ್ಯಾಹ್ನ ಶ್ರೀ ದೇವರಿಗೆ ಹೊಸ ಅಕ್ಕಿ

ಮಹಾಲಿಂಗೇಶ್ವರ ದೇವರ ಉತ್ಸವ ಬಲಿಯೊಂದಿಗೆ ಕದಿರು ವಿನಿಯೋಗ – ವಿತರಣೆ Read More »

ನ್ಯೂಸ್ ಪುತ್ತೂರು ಸ್ಟುಡಿಯೋದಲ್ಲಿ ವಿಠಲ್ ನಾಯಕ್ | ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ ಕೆಲವೇ ಕ್ಷಣದಲ್ಲಿ ಪ್ರಸಾರ…

ಪುತ್ತೂರು: ಗೌರಿ ಗಣೇಶ (ಚೌತಿ) ಹಬ್ಬದ ಹಿನ್ನೆಲೆಯಲ್ಲಿ ನ್ಯೂಸ್ ಪುತ್ತೂರು ಸ್ಟುಡಿಯೋದಿಂದ ವಿಠಲ್ ನಾಯಕ್ ಅವರ ಗೀತಾ ಸಾಹಿತ್ಯ ಸಂಭ್ರಮ ವಿಶೇಷ ಕಾರ್ಯಕ್ರಮ ಇಂದು (ಸೆ. 18) ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಗೀತಾ ಸಾಹಿತ್ಯ ಸಂಭ್ರಮದ ಮೂಲಕ ಮನೆಮಾತಾಗಿರುವ ವಿಠಲ್ ನಾಯಕ್ ಅವರು ನ್ಯೂಸ್ ಪುತ್ತೂರು ಸ್ಟುಡಿಯೋಗೆ ಭೇಟಿ ನೀಡಿ, ವಿಶೇಷ ಕಾರ್ಯಕ್ರಮವನ್ನು ನೀಡಿದ್ದಾರೆ. ಹಾಸ್ಯ ಮಿಶ್ರಿತ, ಸಂದೇಶ ನೀಡಿರುವ ವಿಠಲ್ ನಾಯಕ್ ಅವರು ಭಜನೆಯನ್ನು ಹಾಡಿ, ಗಣಪತಿಯ ವಿಶೇಷತೆಯನ್ನು ಕೊಂಡಾಡಿದ್ದಾರೆ.

ನ್ಯೂಸ್ ಪುತ್ತೂರು ಸ್ಟುಡಿಯೋದಲ್ಲಿ ವಿಠಲ್ ನಾಯಕ್ | ಗೌರಿ ಗಣೇಶ ಹಬ್ಬದ ಪ್ರಯುಕ್ತ ವಿಶೇಷ ಕಾರ್ಯಕ್ರಮ ಗೀತಾ ಸಾಹಿತ್ಯ ಸಂಭ್ರಮ ಕೆಲವೇ ಕ್ಷಣದಲ್ಲಿ ಪ್ರಸಾರ… Read More »

“ಯಾನ್ ಸೂಪರ್ ಸ್ಟಾರ್” ತುಳು ಸಿನಿಮಾ ಸೆ. 22ರಂದು ತೆರೆಗೆ | ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ರು ನಿರ್ದೇಶಕ ಸಂತೋಷ್ ಶೆಟ್ಟಿ

ಪುತ್ತೂರು: ಆನಂದ ಫಿಲಂಸ್ ಮತ್ತು ದ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣದ “ಯಾನ್ ಸೂಪರ್ ಸ್ಟಾರ್” ತುಳು ಚಲನಚಿತ್ರ ಸೆ. 22ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಸಂತೋಷ್ ಶೆಟ್ಟಿ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾನ್ ಸೂಪರ್ ಸ್ಟಾರ್ ಸಿನಿಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಸಿನಿಮಾಸ್, ಪಿವಿಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐನಾಕ್ಸ್, ಭಾರತ್ ಸಿನಿಮಾಸ್, ಪಡುಬಿದ್ರೆಯಲ್ಲಿ ಭಾರತ್ ಸಿನಿಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್,

“ಯಾನ್ ಸೂಪರ್ ಸ್ಟಾರ್” ತುಳು ಸಿನಿಮಾ ಸೆ. 22ರಂದು ತೆರೆಗೆ | ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ್ರು ನಿರ್ದೇಶಕ ಸಂತೋಷ್ ಶೆಟ್ಟಿ Read More »

ಮಾಲೀಕರ – ಪ್ರಾಯೋಜಕರ ವಿವಾದಕ್ಕೆ ಭಾರತದ 30 ನರ್ಸ್’ಗಳು ಜೈಲು ಪಾಲಾದರೇ?

ಕುವೈತ್: ಮಲಿಯಾದಲ್ಲಿರುವ ಖಾಸಗಿ ಕ್ಲಿನಿಕ್ ಮೇಲೆ ಕುವೈತ್ ಮಾನವ ಸಂಪನ್ಮೂಲ ಸಮಿತಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ 19 ಮಂದಿ ಕೇರಳದ ನರ್ಸ್‌ಗಳು ಸೇರಿದಂತೆ 30 ಭಾರತೀಯರು ಕಳೆದ ವಾರ ಜೈಲು ಸೇರಿದ್ದಾರೆ. ಮಲಯಾಳಿ ನರ್ಸ್‌ಗಳ ಸಂಬಂಧಿಕರ ಪ್ರಕಾರ, ಕುವೈತ್‌ನಲ್ಲಿ ವಿದೇಶಿ ರೆಸಿಡೆನ್ಸಿ ಕಾನೂನುಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಭಾರತೀಯರು ಸೇರಿದಂತೆ 60 ಜನರು ದಾಳಿಯ ಸಮಯದಲ್ಲಿ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಕುವೈತ್ ಗೃಹ ಸಚಿವಾಲಯದ ಪ್ರಕಾರ, ದಾದಿಯರು ಕುವೈತ್‌ನಲ್ಲಿ ಕೆಲಸ ಮಾಡಲು ಸೂಕ್ತವಾದ ಪರವಾನಿಗೆಗಳನ್ನು ಹೊಂದಿಲ್ಲ ಅಥವಾ ಅಗತ್ಯ

ಮಾಲೀಕರ – ಪ್ರಾಯೋಜಕರ ವಿವಾದಕ್ಕೆ ಭಾರತದ 30 ನರ್ಸ್’ಗಳು ಜೈಲು ಪಾಲಾದರೇ? Read More »

error: Content is protected !!
Scroll to Top