ಯಶಸ್ವಿ 2ನೇ ವರ್ಷಕ್ಕೆ ಪಾದಾರ್ಪಣೆಗೈದ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಲಕ್ಷ್ಮೀಪೂಜೆ

ಪುತ್ತೂರು: ಇಲ್ಲಿನ ಮುಖ್ಯರಸ್ತೆಯಲ್ಲಿರುವ ಪ್ರಭು ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ “ಪ್ರೇರಣಾ” ಸಂಸ್ಥೆ ಸೆ. 18ರಂದು ಎರಡನೇ ವರ್ಷಕ್ಕೆ ಕಾಲಿಟ್ಟಿದೆ. 2ನೇ ವರ್ಷದ ಪಾದಾರ್ಪಣೆ ಅಂಗವಾಗಿ ಸಂಸ್ಥೆಯಲ್ಲಿ ಲಕ್ಷ್ಮೀಪೂಜೆ ನಡೆಯಿತು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ್ ಕುಂಟ್ಯಾನ, ನಿರ್ದೇಶಕರಾದ ಮುರಳೀಧರ ಕೆ.ಎಲ್., ನಾಗೇಶ್ ಕೆಡೆಂಜಿ, ವಸಂತ ವೀರಮಂಗಲ, ಸಮರ್ಪಣಾ ಚಾರಿಟೇಬಲ್ ಟ್ರಸ್ಟ್’ನ ನಿರ್ದೇಶಕರಾದ ಕೇಶವ ಅಮೈ ಕಲಾಯಿಗುತ್ತು, ಸತೀಶ್ ಪಾಂಬಾರು, ಪ್ರೇರಣಾ ಸಂಸ್ಥೆಯ ಪ್ರಬಂಧಕರಾದ ದಯಾಮಣಿ ನಾಗೇಶ್, ಪಿ.ಆರ್‍.ಒ. ಮೋಕ್ಷಿತ ಕೂಟೇಲು, ಆಶಾಲತಾ ಸತೀಶ್ ಪಾಂಬಾರು, ಮಮತಾ […]

ಯಶಸ್ವಿ 2ನೇ ವರ್ಷಕ್ಕೆ ಪಾದಾರ್ಪಣೆಗೈದ ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಲ್ಲಿ ಲಕ್ಷ್ಮೀಪೂಜೆ Read More »

ವಿದ್ಯಾರಶ್ಮಿಯ ಶಿಕ್ಷಕಿ ಪರಿಮಳ ಎನ್.ಎಂ. ಅವರು ‘ಸಾವಿತ್ರಿಬಾಯಿ ಪುಲೆ’ ಪ್ರಶಸ್ತಿಗೆ ಆಯ್ಕೆ

ಸವಣೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದ ಕನ್ನಡ ಭಾಷಾ ಶಿಕ್ಷಕಿ ಪರಿಮಳ ಎನ್.ಎಂ. ಅವರು ‘ಸಾವಿತ್ರಿಬಾಯಿ ಫುಲೆ ‘ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶಿಕ್ಷಕರ ದಿನಾಚರಣೆ ಪ್ರಯುಕ್ತ ಸೆ. 24ರಂದು ಭಾನುವಾರ ಬೆಳಗಾವಿಯ ಗೋಕಾಕ ನಾಡಿನ ಸಮಾಚಾರ ಕನ್ನಡ ದೈನಿಕ ನೀಡಲಿರುವ ಈ ಪ್ರಶಸ್ತಿಗೆ, ಪರಿಮಳ ಎನ್.ಎಂ. ಅವರ ‘ಸಾಹಿತ್ಯ ಮತ್ತು ಶಿಕ್ಷಣ’ ವಿಭಾಗದ ಸಾಧನೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿದ್ಯಾರಶ್ಮಿಯ ಶಿಕ್ಷಕಿ ಪರಿಮಳ ಎನ್.ಎಂ. ಅವರು ‘ಸಾವಿತ್ರಿಬಾಯಿ ಪುಲೆ’ ಪ್ರಶಸ್ತಿಗೆ ಆಯ್ಕೆ Read More »

ಹ್ಯಾಮರ್, ಶಾಟ್‍ಪುಟ್ : ಸಿಂಚನಾ ಬಿ. ದಕ್ಷಿಣ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ

ಪುತ್ತೂರು: ಮಂಡ್ಯದ ಕೆರೆಗೋಡುನಲ್ಲಿ ನಡೆದ ವಿದ್ಯಾಭಾರತಿ ರಾಜ್ಯಮಟ್ಟದ ಹ್ಯಾಮರ್ ತ್ರೋ ಮತ್ತು ಶಾಟ್‌ಪುಟ್ ಪಂದ್ಯಾಟದಲ್ಲಿ ನರೇಂದ್ರ ಪ.ಪೂ.ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಿಂಚನಾ ಬಿ. ಪ್ರಥಮ ಸ್ಥಾನ ಪಡೆದು ಅಕ್ಟೋಬರ್‌ನಲ್ಲಿ ಹೈದರಾಬಾದ್ ನಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅವರು ಬೆಟ್ಟಂಪಾಡಿ ಬೈಲಾಡಿ ನಿವಾಸಿ ನಿತ್ಯಾನಂದ ಮತ್ತು ನಮಿತಾ ಕೆ.ಕೆ. ದಂಪತಿ ಪುತ್ರಿ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವೃಂದ ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

ಹ್ಯಾಮರ್, ಶಾಟ್‍ಪುಟ್ : ಸಿಂಚನಾ ಬಿ. ದಕ್ಷಿಣ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆ Read More »

ನಾಳೆ (ಸೆ.19): ಕುದ್ಮಾರು ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ

ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸೆ.19 ಮಂಗಳವಾರ ಕುದ್ಮಾರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಆಶೀರ್ವಾದದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಪುರೋಹಿತ ನರಸಿಂಹ ಪ್ರಸಾದ್ ಪಾಂಗಣ್ಣಾಯ ಕೂವೆತ್ತೋಡಿ ವೈದಿಕ ಕಾರ್ಯಕ್ರಮ ನೆರವೇರಿಸುವರು ಎಂದು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಜ್‍ ದೀಪಕ್ ಜೈನ್‍ ಕುದ್ಮಾರುಗುತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಾಳೆ (ಸೆ.19): ಕುದ್ಮಾರು ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ Read More »

ಸೇವೆಯೇ ಎನ್‍.ಎಸ್‍.ಎಸ್‍ ಘಟಕದ ಧ್ಯೇಯ | ಮಾಹಿತಿ ಕಾರ್ಯಕ್ರಮದಲ್ಲಿ ವಂ.ಡಾ.ಆಂಟನಿ ಪ್ರಕಾಶ್ ಮೊಂತೆರೋ

ಪುತ್ತೂರು : ಸಂತ ಫಿಲೋಮಿನಾ ಕಾಲೇಜಿನಲ್ಲಿ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ 2023-24 ರ  ಶೈಕ್ಷಣಿಕ ವರ್ಷದ ಮಾಹಿತಿ ಕಾರ್ಯಕ್ರಮ ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ವಂ|ಡಾ| ಅಂಟನಿ ಪ್ರಕಾಶ್ ಮೊಂತೇರೊ ಅಧ್ಯಕ್ಷತೆ ವಹಿಸಿ ಮಾತನಾಡಿ, ಎನ್.ಎಸ್.ಎಸ್. ಘಟಕ ಬಹಳ ಪ್ರಮುಖ ಘಟಕವಾಗಿದ್ದು, ಸೇವೆ ನೀಡುವ ಘಟಕವಾಗಿದೆ. ಸೇವೆಯೇ ಅದರ ಧ್ಯೇಯವಾಗಿರುತ್ತದೆ.  “ನನಗಾಗಿ ಅಲ್ಲ ನಿನಗಾಗಿ” ಎಂಬ ಧ್ಯೇಯ ವಾಕ್ಯದಡಿ ಕಾರ್ಯನಿರ್ವಹಿಸುವ ಎನ್.ಎಸ್.ಎಸ್.ನಂತಹ ಘಟಕಗಳಲ್ಲಿ ಸ್ವಯಂಸೇವಕರಾಗಿರುವ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದರು. ಕಾಲೇಜಿನ ಎನ್.ಎಸ್.ಎಸ್. ಘಟಕದ ಕಾರ್ಯಕ್ರಮಾಧಿಕಾರಿ ವಾಸುದೇವ

ಸೇವೆಯೇ ಎನ್‍.ಎಸ್‍.ಎಸ್‍ ಘಟಕದ ಧ್ಯೇಯ | ಮಾಹಿತಿ ಕಾರ್ಯಕ್ರಮದಲ್ಲಿ ವಂ.ಡಾ.ಆಂಟನಿ ಪ್ರಕಾಶ್ ಮೊಂತೆರೋ Read More »

ಉಪ್ಪಿನಂಗಡಿ: ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ಉಪ್ಪಿನಂಗಡಿ: ಸಂಪಾದನೆಯ ನಿರ್ದಿಷ್ಟ ಭಾಗವನ್ನು ಸಮಾಜ ಸೇವಾ ಕಾರ್ಯಗಳಿಗೆ ವಿನಿಯೋಗಿಸಿ ಸಮಸ್ಯೆಗಳಿಗೆ ಸ್ಪಂದಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ನಿವೃತ್ತ ಬಿಎಸ್ಎಫ್ ಕಮಾಂಡೆಂಟ್ ಡಿ.ಚಂದಪ್ಪ ಮೂಲ್ಯ ಹೇಳಿದರು. ಉಪ್ಪಿನಂಗಡಿ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ಜರಗಿದ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸೇನಾ ಪಡೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕೆಲವು ರೋಚಕ ಘಟನೆಗಳ ಬಗ್ಗೆ ಮಾತನಾಡುತ್ತಾ, ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ

ಉಪ್ಪಿನಂಗಡಿ: ಹಿರಿಯರ ಸೇವಾ ಪ್ರತಿಷ್ಠಾನದ ಸಭೆ Read More »

ನರೇಂದ್ರ ಮೋದಿ ಆಯುಷ್ಯ, ಅರೋಗ್ಯ ವೃದ್ಧಿಗಾಗಿ ಪ್ರಾರ್ಥನೆ | ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮಾಡ್ನೂರು ಶಕ್ತಿಕೇಂದ್ರದ ಬಿಜೆಪಿ ಪ್ರಮುಖರು

ಕಾವು: ಬಿಜೆಪಿ ಮಾಡ್ನೂರು ಶಕ್ತಿ ಕೇಂದ್ರದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ 73 ನೇ ಜನ್ಮ ದಿನದ ಪ್ರಯುಕ್ತ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಅವರ ಆರೋಗ್ಯ , ಆಯುಷ್ಯ ಹಾಗೂ ಮುಂದಿನ ಚುನಾವಣೆಯಲ್ಲೂ ದೇಶದ ಚುಕ್ಕಾಣಿ ಹಿಡಿಯುವ ಶಕ್ತಿ ಅವರಿಗೆ ಪಂಚಲಿಂಗೇಶ್ವರ ದೇವರು ಅನುಗ್ರಹಿಸಲಿ ಎಂದು ಪ್ರಾರ್ಥನೆ ಮಾಡಲಾಯಿತು. ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ರಾವ್ ನಿಧಿಮುಂಡ ಪ್ರಾರ್ಥನೆ ಸಲ್ಲಿಸಿದರು. ಅರ್ಚಕ ಪ್ರಕಾಶ್ ಬಳ್ಳಕ್ಕುರಾಯ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ

ನರೇಂದ್ರ ಮೋದಿ ಆಯುಷ್ಯ, ಅರೋಗ್ಯ ವೃದ್ಧಿಗಾಗಿ ಪ್ರಾರ್ಥನೆ | ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಮಾಡ್ನೂರು ಶಕ್ತಿಕೇಂದ್ರದ ಬಿಜೆಪಿ ಪ್ರಮುಖರು Read More »

ದೇವಸ್ಥಾನದೊಳಗೆ ನಮಾಜು ಮಾಡಿದ ಮಹಿಳೆಯರು!! | ಪೊಲೀಸರ ಬಳಿ ಕಾರಣ ತಿಳಿಸಿದ ತಾಯಿ – ಮಗಳು!!

ಲಖನೌ: ಉತ್ತರ ಪ್ರದೇಶದ ಬರೇಲಿಯ ಶಿವ ದೇವಸ್ಥಾನವೊಂದರಲ್ಲಿ ನಮಾಜು ಮಾಡಿದ ಆರೋಪದ ಮೇಲೆ 38 ವರ್ಷದ ಮಹಿಳೆ ಮತ್ತು ಆಕೆಯ ಮಗಳನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಧರ್ಮಗುರುವನ್ನು ಕೂಡ ಬಂಧಿಸಲಾಗಿದೆ. ಶುಕ್ರವಾರ ಈ ಘಟನೆ ನಡೆದಿದೆ ಎಂದು ಆರೋಪಿಸಿ ಕೇಸರಪುರ ಗ್ರಾಮದ ಪ್ರೇಮ್ ಸಿಂಗ್ ಎಂಬವರು ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಧರ್ಮಗುರುವೊಬ್ಬರ ಸಲಹೆಯ ಮೇರೆಗೆ ಮಹಿಳೆ ಮತ್ತು ಅವರ ಮಗಳು ದೇವಸ್ಥಾನದ ಆವರಣದಲ್ಲಿ

ದೇವಸ್ಥಾನದೊಳಗೆ ನಮಾಜು ಮಾಡಿದ ಮಹಿಳೆಯರು!! | ಪೊಲೀಸರ ಬಳಿ ಕಾರಣ ತಿಳಿಸಿದ ತಾಯಿ – ಮಗಳು!! Read More »

ಚೌತಿಯಂದು ಪ್ರವೇಶಿಸುವ ಹೊಸ, ಅತ್ಯಾಧುನಿಕ ಸಂಸತ್ ಕಟ್ಟಡ ಭಾರತದ ಕನಸನ್ನು ನನಸಾಗಿಸಲಿದೆ ಎಂದ ಪ್ರಧಾನಿ | ಮಾಧ್ಯಮ ಪ್ರತಿನಿಧಿಗಳೊಂದಿಗಿನ ಮೋದಿ ಮಾತು ಇಲ್ಲಿದೆ…

ನವ ದೆಹಲಿ: ಸಂಸತ್ತಿನ ಈ ವಿಶೇಷ ಅಧಿವೇಶನದ ಅವಧಿ ಚಿಕ್ಕದಾಗಿದ್ದರೂ ಕೂಡ ಸಮಯ ಬಹಳ ಮಹತ್ವದ್ದಾಗಿದ್ದು, ದೊಡ್ಡದಾಗಿದೆ. ಇದೊಂದು ಐತಿಹಾಸಿಕ ನಿರ್ಧಾರಗಳ ಅಧಿವೇಶನ. ಈ ಅಧಿವೇಶನದ ವಿಶೇಷತೆ ಏನೆಂದರೆ ಸ್ವಾತಂತ್ರ್ಯ ನಂತರ ಭಾರತದ 75 ವರ್ಷಗಳ ಪಯಣ ಹೊಸ ಗಮ್ಯದಿಂದ ಆರಂಭವಾಗುತ್ತಿದೆ. ಈಗ ಹೊಸ ಜಾಗದಿಂದ ಪಯಣವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವಾಗಲೇ 2047ರ ವೇಳೆಗೆ ದೇಶವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಬೇಕಿದೆ. ಮುಂಬರುವ ಎಲ್ಲಾ ನಿರ್ಧಾರಗಳನ್ನು ಹೊಸ ಸಂಸತ್ತಿನ ಕಟ್ಟಡದಲ್ಲಿ ತೆಗೆದುಕೊಳ್ಳಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಇಂದು

ಚೌತಿಯಂದು ಪ್ರವೇಶಿಸುವ ಹೊಸ, ಅತ್ಯಾಧುನಿಕ ಸಂಸತ್ ಕಟ್ಟಡ ಭಾರತದ ಕನಸನ್ನು ನನಸಾಗಿಸಲಿದೆ ಎಂದ ಪ್ರಧಾನಿ | ಮಾಧ್ಯಮ ಪ್ರತಿನಿಧಿಗಳೊಂದಿಗಿನ ಮೋದಿ ಮಾತು ಇಲ್ಲಿದೆ… Read More »

ಅಪಘಾತಕ್ಕೀಡಾದ ರಿಕ್ಷಾ: ಯುವತಿ ಸ್ಥಳದಲ್ಲೇ ಮೃತ್ಯು!

ಮಂಗಳೂರು: ಆಟೋರಿಕ್ಷಾವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಮದುವೆ ನಿಶ್ಚಿತಾರ್ಥವಾಗಿದ್ದ ಯುವತಿಯೋರ್ವಳು ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುಪುರದ ಬಂಗ್ಲೆಗುಡ್ಡೆ ಸಮೀಪ ನಡೆದಿದೆ. ಯುವತಿ ಅರ್ಕುಳ ತುಪ್ಪೆಕಲ್ಲು ನಿವಾಸಿ ಪ್ರೀತಿ ಸಪಲಿಗ (25) ಮೃತಪಟ್ಟವರು. ಪ್ರೀತಿ ಅವರ ತಾಯಿ ಮೀನಾಕ್ಷಿ (55), ತಂಗಿ ಸ್ವಾತಿ (23), ಅತ್ತಿಗೆ ಶೋಭಾ (37), ಶೋಭಾ ಅವರ ಪುತ್ರ ಭವಿಷ್‌ (9), ಆಟೋ ಚಾಲಕ ಪದ್ಮನಾಭ ಗಾಯಗೊಂಡಿದ್ದಾರೆ. ಮೃತ ಯುವತಿಗೆ ವಿವಾಹ ನಿಶ್ಚಿತಾರ್ಥವಾಗಿದ್ದು, ಮುಂದಿನ ವರ್ಷ ಜ. 4ರಂದು ಮದುವೆಗೆ ದಿನ

ಅಪಘಾತಕ್ಕೀಡಾದ ರಿಕ್ಷಾ: ಯುವತಿ ಸ್ಥಳದಲ್ಲೇ ಮೃತ್ಯು! Read More »

error: Content is protected !!
Scroll to Top