ಶೋಭಾಯಮಾನ ಶೋಭಾಯಾತ್ರೆಯ ಶ್ರೀ ಗಣೇಶನ ಉತ್ಸವಕ್ಕೆ ಚಾಲನೆ

ಪುತ್ತೂರು: ಪುತ್ತೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಶ್ರೀ ಗಣೇಶೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ ತೆರೆದ ವಾಹನದಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಬೊಳುವಾರಿನಿಂದ ಮೆರವಣಿಗೆಯಲ್ಲಿ ತರಲಾಗಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಿರ್ಮಿಸಿದ ಬೃಹತ್ ಪೆಂಡಾಲ್‍ ನಲ್ಲಿ ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಗೌರವಾಧ್ಯಕ್ಷ ಎಂ.ಕೆ. ಪ್ರಸಾದ್, ಕಾರ್ಯಾಧ್ಯಕ್ಷ ರಾಧಾಕೃಷ್ಣ […]

ಶೋಭಾಯಮಾನ ಶೋಭಾಯಾತ್ರೆಯ ಶ್ರೀ ಗಣೇಶನ ಉತ್ಸವಕ್ಕೆ ಚಾಲನೆ Read More »

ಪ್ಲಾಸ್ಟಿಕ್ ಬಾಟಲ್, ಲೋಟ ನಿಷೇಧಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರದ ಮಹತ್ವದ ಆದೇಶ!

ಬೆಂಗಳೂರು: ಸರ್ಕಾರದ ಅಧಿಕೃತ ಸಭೆ, ಸಮಾರಂಭ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಮತ್ತು ಲೋಟಗಳನ್ನು ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.  2018ರಲ್ಲಿ ಮಾಡಿದ್ದ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಂದ ಈ ಆದೇಶ ಹೊರಬಿದ್ದಿದೆ. ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ-ಸಮಾರಂಭಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಾಟಲ್‌ನ ನೀರಿನ ಬಳಕೆ

ಪ್ಲಾಸ್ಟಿಕ್ ಬಾಟಲ್, ಲೋಟ ನಿಷೇಧಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರಕಾರದ ಮಹತ್ವದ ಆದೇಶ! Read More »

7 ದಿನಗಳ ಕೋಕರ್ನಾಗ್ ಎನ್‌ಕೌಂಟರ್ ಅಂತ್ಯ | ಎನ್’ಕೌಂಟರ್ ನಡೆದ ದಟ್ಟಾರಣ್ಯದಲ್ಲಿ ನಿರ್ಬಂಧ ಮುಂದುವರಿಸಿದ್ದೇಕೆ??

ಶ್ರೀನಗರ: ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್ ಕಮಾಂಡರ್ ಉಜೈರ್ ಖಾನ್ ಹತ್ಯೆಯಾಗಿದ್ದಾನೆ. ಮತ್ತೊಬ್ಬ ಉಗ್ರನ ಶವವನ್ನು ಸೇನೆ ಪತ್ತೆ ಮಾಡಿದೆ ಎಂದು ಕಾಶ್ಮೀರ ಎಡಿಜಿಪಿ ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ. ಭಯೋತ್ಪಾದಕ ಉಜೈರ್ ಖಾನ್‌ ತಲೆಗೆ 10 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಉಜೈರ್ ಹತ್ಯೆಯೊಂದಿಗೆ ಒಂದು ವಾರದ ಅನಂತನಾಗ್ ಎನ್‌ಕೌಂಟರ್ ಅಂತ್ಯಗೊಂಡಿದೆ. ಅನಂತ್‌ನಾಗ್ ಜಿಲ್ಲೆಯ ಗರೋಲ್ ಅರಣ್ಯದಲ್ಲಿ ಒಂದು ವಾರದ ಜಂಟಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ಕೊನೆಗೊಂಡಿದೆ ಆದರೆ ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಕಾಶ್ಮೀರ

7 ದಿನಗಳ ಕೋಕರ್ನಾಗ್ ಎನ್‌ಕೌಂಟರ್ ಅಂತ್ಯ | ಎನ್’ಕೌಂಟರ್ ನಡೆದ ದಟ್ಟಾರಣ್ಯದಲ್ಲಿ ನಿರ್ಬಂಧ ಮುಂದುವರಿಸಿದ್ದೇಕೆ?? Read More »

ಹಳೆ ಸಂಸತ್ ಭವನಕ್ಕೆ ‘ಸಂವಿಧಾನ ಸದನ’ ಎಂದು ಕರೆಯಲು ಮೋದಿ ಸೂಚಿಸಿದ್ದೇಕೆ!!??

ದೆಹಲಿ: ಇಂದು ಸಂಸತ್ತಿನ ಐದು ದಿನಗಳ ವಿಶೇಷ ಅಧಿವೇಶನದ ಎರಡನೇ ದಿನವಾಗಿದೆ. ಇಂದಿನಿಂದ ಹಳೆ ಸಂಸತ್‌ ಭವನದಲ್ಲಿ ಕಲಾಪಕ್ಕೆ ವಿದಾಯ ಹೇಳುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಈ ವೇಳೆ ಹಳೆಯ ಸಂಸತ್ ಭವನದ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡರು. ಹಳೆ ಸಂಸತ್ ಭವನದ ತಮ್ಮ ಕೊನೆ ಭಾಷಣದಲ್ಲಿ ಮಾತನಾಡಿದ ಅವರು, ‘ನಾವು ಹೊಸ ಭವಿಷ್ಯವನ್ನು ಆರಂಭಿಸಲಿದ್ದೇವೆ. ಹೊಸ ಸಂಸತ್ ಭವನದತ್ತ ಹೆಜ್ಜೆ ಇಡುತ್ತಿದ್ದೇವೆ. ಸೆಂಟ್ರಲ್‌ಹಾಲ್ ನಮ್ಮ ಭಾವನೆಗಳಿಂದ ತುಂಬಿದೆ. ಹಳೆ ಸಂಸತ್ ಭವನದಲ್ಲಿ 4000ಕ್ಕೂ

ಹಳೆ ಸಂಸತ್ ಭವನಕ್ಕೆ ‘ಸಂವಿಧಾನ ಸದನ’ ಎಂದು ಕರೆಯಲು ಮೋದಿ ಸೂಚಿಸಿದ್ದೇಕೆ!!?? Read More »

ಕೆದಿಲ ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ಗಣೇಶೋತ್ಸವ | ಶೋಭಾಯಾತ್ರೆಗೆ ಅಡ್ಡಿಯಾಗದಂತೆ ರಸ್ತೆ ಶ್ರಮದಾನ

ಕೆದಿಲ: ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ನಡೆಯುವ ಶ್ರೀ ಗಣೇಶೋತ್ಸವದ ಅಂಗವಾಗಿ ಶ್ರೀ ಗಣೇಶ ವಿಗ್ರಹ ಶೋಭಾಯಾತ್ರೆ ಮಂಗಳವಾರ ರಾತ್ರಿ ನಡೆಯಲಿರುವುದರಿಂದ ಶೋಭಾಯಾತ್ರೆ ಸಾಗುವ ಬೀಟಿಗೆ – ಕ್ಷೇತ್ರಪಳಿಕೆ – ಕಾಂತುಕೋಡಿ ರಸ್ತೆಯನ್ನು ಶ್ರಮದಾನದ ಮೂಲಕ ಸರಿಪಡಿಸಲಾಯಿತು. ಈ ರಸ್ತೆ ಗುಂಡಿಗಳಿಂದ ಕೂಡಿದ್ದು, ಶೋಭಾಯಾತ್ರೆಗೆ ಸಮಸ್ಯೆ ಉಂಟಾಗಲಿದೆ ಎಂಬ ಹಿನ್ನೆಲೆಯಲ್ಲಿ ಈ ವಾರ್ಡಿನ ಸದಸ್ಯ ಶ್ಯಾಮ ಪ್ರಸಾದ್ ತಾವೇ ಸ್ವತಃ ತಮ್ಮ ಪಿಕಪ್ ವಾಹನದಲ್ಲಿ ಜಲ್ಲಿಕಲ್ಲು ಹಾಗೂ ಕ್ರಶರ್ ಹುಡಿ ಹಾಕಿ ಸರಿಪಡಿಸಿದರು. ಈ ಸಂದರ್ಭದಲ್ಲಿ

ಕೆದಿಲ ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ಗಣೇಶೋತ್ಸವ | ಶೋಭಾಯಾತ್ರೆಗೆ ಅಡ್ಡಿಯಾಗದಂತೆ ರಸ್ತೆ ಶ್ರಮದಾನ Read More »

ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಕೇಸ್ ದಾಖಲು.!

ಉಡುಪಿ: ಎಂ.ಎಲ್.ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣದಲ್ಲಿ ಸಿಸಿಬಿಯಿಂದ ಬಂಧಿಸಲ್ಪಟ್ಟಿರುವ ಚೈತ್ರಾ ಕುಂದಾಪುರಳ ಹೊಸ ಹೊಸ ಪ್ರಕರಣಗಳು ದಿನವೂ ಹೊರಬರುತ್ತಿದೆ. 5 ಕೋಟಿ ವಂಚನೆ ಪ್ರಕರಣದ ಬೆನ್ನಲ್ಲೇ ಇದೀಗ ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ನಂಬಿಸಿ 5 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಆರೋಪಿಸಿ, ಚೈತ್ರಾ ಕುಂದಾಪುರ ವಿರುದ್ಧ ಕೋಟ ಪೊಲೀಸ್ ಠಾಣೆಯಲ್ಲಿ ಸುದಿನ ಎಂಬುವವರು ದೂರು ದಾಖಲಿಸಿದ್ದಾರೆ. 2015ರಲ್ಲಿ ಚೈತ್ರಾ ಕುಂದಾಪುರ ಪರಿಚಯವಾಗಿದ್ದು, ತಾನು

ಚೈತ್ರಾ ಕುಂದಾಪುರ ವಿರುದ್ಧ ಮತ್ತೊಂದು ಕೇಸ್ ದಾಖಲು.! Read More »

ಕುದ್ಮಾರಿನಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

ಸವಣೂರು: ಕುದ್ಮಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ. 19ರಂದು ಕುದ್ಮಾರು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವಠಾರದಲ್ಲಿ ಜರಗಿತು. ಪುರೋಹಿತ್ ನರಸಿಂಹ ಪ್ರಸಾದ್ ಪಾಂಗಣ್ಣಾಯ ಕುವೆತ್ತೋಡಿ ಅವರು ವೈದಿಕ ಕಾರ್ಯಕ್ರಮ ನೆರವೇರಿಸಿದರು. ಬೆಳಿಗ್ಗೆ ಪಂಚಗವ್ಯ ಪುಣ್ಯಾಹ ನಡೆದು, ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ಜರಗಿತು. ಬಳಿಕ ಗಣಹೋಮ, ಮಂಗಳಾರತಿ ನಡೆಯಿತು. ನಂತರ ಹೂಕಟ್ಟುವ ಸ್ಪರ್ಧೆ ಜರಗಿತು. ಭಜನಾ ಕಾರ್ಯಕ್ರಮದಲ್ಲಿ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ, ಕೆಳಗಿನಕೇರಿ

ಕುದ್ಮಾರಿನಲ್ಲಿ 21ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ Read More »

ಅಭಿನವ ಹಾಲಶ್ರೀ ಬಂಧನ! | ಮತ್ತಷ್ಟು ಹೊಸ ಸಾಧ್ಯತೆಗಳಿಗೆ ತೆರೆದುಕೊಂಡ ಚೈತ್ರಾ ವಂಚನೆ ಪ್ರಕರಣ!!

ಬೆಂಗಳೂರು: ಚುನಾವಣೆ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಮೂರನೇ ಆರೋಪಿ ಅಭಿನವ ಹಾಲಶ್ರೀಯನ್ನು ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಒಡಿಶಾದ ಕಟಕ್ ಬಳಿ ರೈಲಿನಲ್ಲಿ ಭುವನೇಶ್ವರದಿಂದ ಬೋಧಯಾಗೆ ತೆರಳುತ್ತಿದ್ದ ವೇಳೆ ಹಾಲಶ್ರೀಯನ್ನು ಇಂದು ಮುಂಜಾನೆ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ಈಗಾಗಲೇ ಪ್ರಕರಣ ಮುಖ್ಯ ಆರೋಪಿಗಳಾದ ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮೂರನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀ ಬಂಧನಕ್ಕೆ ಸಿಸಿಬಿ ಬಲೆ ಬೀಸಿತ್ತು.

ಅಭಿನವ ಹಾಲಶ್ರೀ ಬಂಧನ! | ಮತ್ತಷ್ಟು ಹೊಸ ಸಾಧ್ಯತೆಗಳಿಗೆ ತೆರೆದುಕೊಂಡ ಚೈತ್ರಾ ವಂಚನೆ ಪ್ರಕರಣ!! Read More »

ಸ್ವಾತಂತ್ರ್ಯ ಹೋರಾಟದಲ್ಲೂ ಕಂಡಿದ್ದ ಗಣಪ – ಗಣೇಶೋತ್ಸವ ಆಚರಣೆಯ ಹಿನ್ನೆಲೆ ಇಲ್ಲಿದೆ…

ದೇಶದ ಪ್ರತಿಯೊಂದು ಧರ್ಮದ ಜನರು ಅವರವರ ಧರ್ಮಕ್ಕೆ ಸಂಬಂಧಪಟ್ಟಂತೆ ಹಬ್ಬವನ್ನು ಆಚರಿಸುತ್ತಾರೆ. ಯಾವುದೇ ಹಬ್ಬ ಬಂತೆಂದರೆ ಸಾಕು, ಪ್ರತಿಯೊಬ್ಬರ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ದೇವಸ್ಥಾನಕ್ಕೆ ಹೋಗಿ ಪೂಜೆ ಪುರಸ್ಕಾರಗಳನ್ನು ಪೂರೈಸಿಕೊಂಡು ಬರುತ್ತಾರೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಜನರಿಗೆ ಹಬ್ಬಗಳ ಹಿನ್ನಲೆ, ಇತಿಹಾಸದ ಜ್ಞಾನ ಬಹಳ ಕಡಿಮೆ. ಒಂದು ಹಬ್ಬವನ್ನು ಆಚರಿಸುತ್ತಾರೆ ಎಂದಾಗ ಈ ಹಬ್ಬವನ್ನು ಯಾಕೆ ಆಚರಿಸುತ್ತಾರೆ? ಇದರ ಮಹತ್ವವೇನು? ಎಂಬುದನ್ನು ನಾವು ತಿಳಿದುಕೊಳ್ಳುವುದು ತುಂಬಾ ಅಗತ್ಯವಿದೆ. ಪ್ರತಿವರ್ಷವೂ ಗಣೇಶ ಚತುರ್ಥಿ ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ.

ಸ್ವಾತಂತ್ರ್ಯ ಹೋರಾಟದಲ್ಲೂ ಕಂಡಿದ್ದ ಗಣಪ – ಗಣೇಶೋತ್ಸವ ಆಚರಣೆಯ ಹಿನ್ನೆಲೆ ಇಲ್ಲಿದೆ… Read More »

ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಶ್ರೀ ಗಣೇಶೋತ್ಸವ | ಮೆರವಣಿಗೆಯಲ್ಲಿ ಕರೆತಂದ ಮೂರ್ತಿ | ಪ್ರತಿಷ್ಠಾಪನೆ

ಮಾಣಿ: ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದ ವತಿಯಿಂದ ಪೆರ್ನೆ ಯುವಸ್ಪಂದನದ ಸಹಕಾರದೊಂದಿಗೆ ನಡೆಯುವ 28ನೇ ವರ್ಷದ ಗಣೇಶೋತ್ಸವದ ಶ್ರೀ ಗಣೇಶನ ಮೂರ್ತಿಯನ್ನು ಮೆರವಣಿಗೆ ಮೂಲಕ ತರಲಾಯಿತು. ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಪ್ರತಿಷ್ಠಾಪಿಸಲಾಯಿತು. ಬೆಳಿಗ್ಗೆ 9 ಗಂಟೆಗೆ ಪೆರ್ನೆ ಕೃಷಿಕರಾದ ರಾಮಣ್ಣ ಗೌಡ ಪಡ್ಡಾಯಿ ಗಣೇಶೋತ್ಸವದ ವಿವಿಧ ಕಾರ್ಯಕ್ರಮಗಳನ್ನು ಧ್ವಜಾರೋಹಣ ಮಾಡಿ, ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದ ಸ್ಥಾಪಕ

ಪೆರ್ನೆ ಕಾರ್ಲ ಶ್ರೀ ರಾಮಾಂಜನೇಯ ಭಜನಾ ಮಂದಿರದಲ್ಲಿ ಶ್ರೀ ಗಣೇಶೋತ್ಸವ | ಮೆರವಣಿಗೆಯಲ್ಲಿ ಕರೆತಂದ ಮೂರ್ತಿ | ಪ್ರತಿಷ್ಠಾಪನೆ Read More »

error: Content is protected !!
Scroll to Top