ಸೆ. 25: ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ವೇದಿಕೆ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 25ರಂದು ಜನತಾ ದರ್ಶನ ಹಮ್ಮಿಕೊಳ್ಳಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜನತಾ ದರ್ಶನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆ. 25: ಸಾರ್ವಜನಿಕ ಅಹವಾಲು ಸ್ವೀಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ವೇದಿಕೆ Read More »

ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸುರತ್ಕಲ್ ಕಾಟಿಪಳ್ಳ ಇನ್‌ಪೆಂಟ್ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ. ಬಾಲಕರ ತಂಡವನ್ನು ವನೀಶ್, ಚಿಂತನ್, ಭವಿಷ್, ಸೃಜನ್, ಕೌಶಿಕ್, ಲಿಖಿತ್, ತೇಜಸ್, ತರುಣ್, ಭಾಸ್ವತ್, ಭವಿತ್, ಕೀರ್ತನ್, ದೇಶ್ಚಿತ್, ಅಭಿಷೇಕ್, ಮನ್ವಿತ್ ಪ್ರತಿನಿಧಿಸಿದ್ದರು. ಶಾಲಾ ಎಂಟನೇ ತರಗತಿ ವಿದ್ಯಾರ್ಥಿನಿ ಯೋಗ್ಯ ಪ್ರಾಥಮಿಕ ಶಾಲಾ ಬಾಲಕಿಯರ

ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟ : ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ Read More »

ಸಾರ್ವಜನಿಕ ಬಳಕೆಗೆ ತೆರೆದುಕೊಂಡ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಇದರ ಮಹತ್ವಾಕಾಂಕ್ಷಿ ಯೋಜನೆಯಾದ ಕಣ್ಣಿನ ಆಸ್ಪತ್ರೆ ಸೆ. 21ರಂದು ಸೇವೆಗೆ ತೆರೆದುಕೊಂಡಿತು. ರೋಟರಿ ಜಿ.ಎಲ್. ಸಭಾಭವನ ಆವರಣದ ರಾಧಾಕೃಷ್ಣ ಬಿಲ್ಡಿಂಗಿನಲ್ಲಿ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ ನಿರ್ಮಿಸಲಾಗಿದೆ. ಪ್ರಸಾದ್ ನೇತ್ರಾಲಯದ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಬಳಿಕ ಆಸ್ಪತ್ರೆಗೆ ಆಗಮಿಸಿ ಪಿಡಿಜಿ ಡಾ. ಭಾಸ್ಕರ್ ಎಸ್. ಅವರು ನೇತ್ರಾಲಯವನ್ನು ಉದ್ಘಾಟಿಸಿದರು. ಪ್ರಸಾದ್ ನೇತ್ರಾಲಯದ ವೈದ್ಯ ಡಾ. ಕೃಷ್ಣಪ್ರಸಾದ್ ಕೂಡ್ಲು, ಬಲರಾಮ ಆಚಾರ್ಯ, ಡಾ. ಶ್ಯಾಮ್, ಪಿ.ಡಿ. ಕೃಷ್ಣ ಕುಮಾರ್ ರೈ, ವಾಮನ್

ಸಾರ್ವಜನಿಕ ಬಳಕೆಗೆ ತೆರೆದುಕೊಂಡ ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ Read More »

ನಾಣಿಲ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಗಣೇಶೋತ್ಸವ, ದೈಪಿಲದಲ್ಲಿ ಜಲಸ್ತಂಭನ

ಚಾರ್ವಾಕ : ನಾಣಿಲ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 27ನೇ ವರ್ಷದ ಶ್ರೀ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ವೈದಿಕ ವಿಧಿವಿಧಾನಗಳೊಂದಿಗೆ ಶ್ರೀ ಗಣೇಶ ವಿಗ್ರಹದ ಪ್ರತಿಷ್ಠಾಪನೆ ನಡೆದು, ಸಂಜೆ ಶ್ರೀ ಗಣೇಶನ ಶೋಭಾಯಾತ್ರೆ ನಡೆದು, ಶ್ರೀ ಕ್ಷೇತ್ರ ದೈಪಿಲದಲ್ಲಿ ಜಲಸ್ತಂಭನ ಮಾಡಲಾಯಿತು. ಕುಮಾರಧಾರ ಫಾರ್ಮ್ಸ್ ನ ವಿಜಯ ಕುಮಾರ್ ಸೊರಕೆ ಅವರು ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಆರ್. ಗೌಡ, ಗಂಗಾಧರ, ಅಂಬುಲ ಶ್ರೀ ಬಾಲಸುಬ್ರಹ್ಮಣ್ಯ

ನಾಣಿಲ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ ಗಣೇಶೋತ್ಸವ, ದೈಪಿಲದಲ್ಲಿ ಜಲಸ್ತಂಭನ Read More »

ತ್ಯಾಜ್ಯ ಎಸೆಯುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮ ಪಂಚಾಯತ್! | ದಂಡ ಮಾತ್ರವಲ್ಲ, ತಕ್ಕ ಶಾಸ್ತಿಯೂ ಆಯಿತು

ಮಾಣಿ: ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ತ್ಯಾಜ್ಯ ಎಸೆಯುತ್ತಿದ್ದ ವಾಹನವನ್ನು ತಡೆದು, ದಂಡ ವಿಧಿಸಿದ ಘಟನೆ ಮಾಣಿಯಲ್ಲಿ ನಡೆದಿದೆ. ಸ್ವಚ್ಛತೆ ಬಗ್ಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮ ಮಾಡಿದರೂ, ಸಂದೇಶ ನೀಡಿದರೂ ತಲೆಕೆಡಿಸಿಕೊಳ್ಳದ ನಾಗರಿಕರಿಗೆ ಇದೀಗ ದಂಡ ವಿಧಿಸಲು ಗ್ರಾಮ ಪಂಚಾಯತ್ ಮುಂದಾಗಿದೆ. ಲಾರಿವೊಂದರಲ್ಲಿ ತ್ಯಾಜ್ಯ ತಂದು ಸುರಿಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮ ಪಂಚಾಯತ್, ದಂಡ ವಿಧಿಸಿದೆ. ಮಾತ್ರವಲ್ಲ, ಎಸೆದ ತ್ಯಾಜ್ಯವನ್ನು ಅದೇ ಲಾರಿಯಲ್ಲಿ ತುಂಬಿಸಿ ವಾಪಾಸ್ ಕಳಿಸಲಾಗಿದೆ.

ತ್ಯಾಜ್ಯ ಎಸೆಯುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಗ್ರಾಮ ಪಂಚಾಯತ್! | ದಂಡ ಮಾತ್ರವಲ್ಲ, ತಕ್ಕ ಶಾಸ್ತಿಯೂ ಆಯಿತು Read More »

ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ್‌ ನಿಧನ

ಉಡುಪಿ: ಯಕ್ಷಗಾನ ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ್‌ (57) ಸೆ. 21ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇವರು ಯಕ್ಷಗಾನ ಭಾಗವತರಾಗಿ ಮಾತ್ರವಲ್ಲದೆ ಕೃತಿ ರಚನಾಕಾರರೂ ಆಗಿದ್ದರು. ಹಲವು ಮೇಳಗಳಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿ ಅಭಿಮಾನಿಗಳನ್ನು ಸಂಪಾದಿಸಿದ್ದರು. ಮೃತರು ಪತ್ನಿ, ಪುತ್ರ, ಪುತ್ರಿ, ಬಂಧುಗಳನ್ನು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಕಲಾವಿದರು ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಭಾಗವತ ರಾಮಚಂದ್ರ ನಾಯ್ಕ ಹೆಮ್ಮನಬೈಲ್‌ ನಿಧನ Read More »

ಸೆ. 23 : ಪುತ್ತೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ | ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ್ದು, ಮಹಿಳೆ – ಪುರುಷ ವಿಭಾಗದ ಸ್ಪರ್ಧೆಗಳು ಹೀಗಿರಲಿದೆ..

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತಾಲೂಕು ಪಂಚಾಯಿತಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ನಗರ ಸಭೆ, ತಾಲೂಕು ಯುವಜನ ಒಕ್ಕೂಟ, ಪಟ್ಟೆ ಶ್ರೀ ಕೃಷ್ಣ ಯುವಕ ಮಂಡಲ, ಪಟ್ಟೆ ವಾಲಿ ಫ್ರೆಂಡ್ಸ್ ಸಹಯೋಗದಲ್ಲಿ ಪುತ್ತೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಸೆ. 23ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ.ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿದ್ದು, ರಕ್ಷಣಾ ಪಡೆ, ಅರೆ ರಕ್ಷಣಾ ಪಡೆಗೆ ಸೇರಿದ ಕ್ರೀಡಾಪಟುಗಳಿಗೆ

ಸೆ. 23 : ಪುತ್ತೂರು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ | ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಿದ್ದು, ಮಹಿಳೆ – ಪುರುಷ ವಿಭಾಗದ ಸ್ಪರ್ಧೆಗಳು ಹೀಗಿರಲಿದೆ.. Read More »

ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ! | ಸಿರಿಲ್ ಮಿನೇಜಸ್ ಸಹಿತ ನಾಲ್ವರು ವಶ

ಬೆಳ್ತಂಗಡಿ; ಜುಗಾರಿ ಆಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದ ಘಟನೆ ಬೆಳ್ತಂಗಡಿ ತಾಲೂಕು ಅಂಡಿಂಜೆ ಗ್ರಾಮದ ಕಿಲಾರ ಮಾರಿಕಾಂಬ ದೇವಸ್ಥಾನದ ಹಿಂಭಾಗದ ಸರಕಾರಿ ಗುಡ್ಡೆ ಪ್ರದೇಶದಲ್ಲಿ ನಡೆದಿದೆ. ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ ಎಲೆಗಳಿಂದ ಜುಗಾರಿ ಆಟ ಆಡುತ್ತಿದ್ದಾಗ, ವೇಣೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರು ಹಾಗೂ ಸಿಬ್ಬಂದಿಯ ತಂಡ ದಾಳಿ ಮಾಡಿದೆ. ಈ ವೇಳೆ ಅಂಡಿಂಜೆ ಗ್ರಾಮದ ವಾಸಿಗಳಾದ ಸಿರಿಲ್ ಮಿನೇಜಸ್, ಎಂ ಸಿ ಸುಂದರ, ಶೀನ ಮತ್ತು ರಾಘವ ಆಚಾರಿ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ! | ಸಿರಿಲ್ ಮಿನೇಜಸ್ ಸಹಿತ ನಾಲ್ವರು ವಶ Read More »

ಸಂಘಟಿತ ಸಮಾಜಕೋಸ್ಕರ ನಾವೆಲ್ಲರೂ ಒಂದಾಗಬೇಕು: ಶಾಸಕಿ ಭಾಗೀರಥಿ ಮುರುಳ್ಯ | ಹಬ್ಬದ ಸಾರ ಸಂದೇಶ ಅರಿತು ಬದುಕಿದರೆ ಸಮಾಜದಲ್ಲಿ ಗೌರವ: ಶಾಸಕ ಅಶೋಕ್ ರೈ | ಮುಕ್ಕೂರಿನಲ್ಲಿ 14ನೇ ವರ್ಷದ ಗಣೇಶೋತ್ಸವದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ

ಮುಕ್ಕೂರು: ಸಂಘಟಿತ ಸಮಾಜದ ನಿರ್ಮಾಣದ ಜತೆಗೆ ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಹಬ್ಬ ಹರಿದಿನಗಳು ಸಂದೇಶ ನೀಡುತ್ತಿದೆ. ಹಾಗಾಗಿ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗಿರಿಸಿ ಸಮಾಜದ ಏಳಿಗೆಗೋಸ್ಕರ ನಾವೆಲ್ಲರೂ ಒಂದಾಗಿ ಕಾರ್ಯ ನಿರ್ವಹಿಸಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು. ಮುಕ್ಕೂರು- ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಮುಕ್ಕೂರು ಶಾಲಾ ವಠಾರದಲ್ಲಿ ಸೆ. 19ರಂದು ನಡೆದ 14ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಆಚರಣೆ, ಕ್ರೀಡಾಕೂಟ, ಸನ್ಮಾನ ಸಮಾರಂಭ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಕ್ಕೂರು

ಸಂಘಟಿತ ಸಮಾಜಕೋಸ್ಕರ ನಾವೆಲ್ಲರೂ ಒಂದಾಗಬೇಕು: ಶಾಸಕಿ ಭಾಗೀರಥಿ ಮುರುಳ್ಯ | ಹಬ್ಬದ ಸಾರ ಸಂದೇಶ ಅರಿತು ಬದುಕಿದರೆ ಸಮಾಜದಲ್ಲಿ ಗೌರವ: ಶಾಸಕ ಅಶೋಕ್ ರೈ | ಮುಕ್ಕೂರಿನಲ್ಲಿ 14ನೇ ವರ್ಷದ ಗಣೇಶೋತ್ಸವದಲ್ಲಿ ಸನ್ಮಾನ, ಪ್ರತಿಭಾ ಪುರಸ್ಕಾರ Read More »

ನಾರಿ ವಂದನಾ ಅಧಿನಿಯಮ: ಪುತ್ತೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಸಂಭ್ರಮ ಹೀಗಿತ್ತು.. ವೀಡಿಯೋ ನೋಡಿ

ಪುತ್ತೂರು: ಕೇಂದ್ರ ಸರ್ಕಾರ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಮಂಡಿಸಿದ ಹಿನ್ನೆಲೆಯಲ್ಲಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಮಹಿಳಾ ಮೋರ್ಚಾ ವತಿಯಿಂದ ಅಭಿನಂದನಾ ಸಭೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮಹಿಳೆಯರಿಗೆ ಶೇ. 33 ಮೀಸಲಾತಿ ಕಲ್ಪಿಸುವ ನಾರಿ ಶಕ್ತಿ ವಂದನಾ ಅಧಿನಿಯಮವನ್ನು ಮಂಡಿಸಿದ ಬಗ್ಗೆ ಸಂಭ್ರಮ ವ್ಯಕ್ತಪಡಿಸಲಾಯಿತು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಜಯಂತಿ ನಾಯಕ್, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಜಯಶ್ರೀ

ನಾರಿ ವಂದನಾ ಅಧಿನಿಯಮ: ಪುತ್ತೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಸಂಭ್ರಮ ಹೀಗಿತ್ತು.. ವೀಡಿಯೋ ನೋಡಿ Read More »

error: Content is protected !!
Scroll to Top