ಹದಿಹರೆಯದಲ್ಲಿ ಜವಾಬ್ದಾರಿ ಅರಿತು ನಡೆದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು | ಜೀವನಕ್ಕಾಗಿ ಅಧ್ಯಯನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಸುಲೇಖ ಪಿ.ಎಮ್.

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಯಶಸ್ವಿಯಾಗಲು ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯಗತ್ಯ. ಹದಿಹರೆಯದಲ್ಲಿ ಹುಡುಗ ಹುಡುಗಿಯರು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಈ ಸಮಯದಲ್ಲಿ ವೈಜ್ಞಾನಿಕವಾಗಿ ದೇಹದಲ್ಲಿ ಕೆಲವೊಂದು ಸಹಜ ಬದಲಾವಣೆಗಳಾಗುತ್ತವೆ. ಹರೆಯದಲ್ಲಿ ಜವಾಬ್ದಾರಿ ಅರಿತು ನಡೆದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂದು ಮಕ್ಕಳ ತಜ್ಞೆ, ಸೈಕೊಥೆರಪಿಸ್ಟ್ ಡಾ.ಸುಲೇಖಾ ಪಿ.ಎಂ. ಹೇಳಿದರು. ನರೇಂದ್ರ ಪ.ಪೂ. ಕಾಲೇಜಿನ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಲಾದ ಜೀವನಕ್ಕಾಗಿ ಅಧ್ಯಯನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪಾಲಕರು ತಮ್ಮ […]

ಹದಿಹರೆಯದಲ್ಲಿ ಜವಾಬ್ದಾರಿ ಅರಿತು ನಡೆದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು | ಜೀವನಕ್ಕಾಗಿ ಅಧ್ಯಯನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಸುಲೇಖ ಪಿ.ಎಮ್. Read More »

ಪಲ್ಲತ್ತಾರು ಜ್ಞಾನವಿಕಾಸ ಕೇಂದ್ರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮ

ಪುತ್ತೂರು: ತಾಲೂಕಿನ ಪಲ್ಲತ್ತಾರು ಜ್ಞಾನವಿಕಾಸ ಕೇಂದ್ರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರದ ಅಧ್ಯಕ್ಷೆ ರಾಧಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಶಾಲಾ ಶಿಕ್ಷಕಿ ರಂಜಿನಿ ಎಸ್. ರಾವ್ ಪಾಲ್ಗೊಂಡು ಶಿಕ್ಷಣದ ಕುರಿತು ಸದಸ್ಯರಿಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿ, ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು, ಸೇವಾ ಪ್ರತಿನಿಧಿಗಳು, ಜ್ಞಾನವಿಕಾಸ ಸದಸ್ಯರು ಉಪಸ್ಥಿತರಿದ್ದರು.

ಪಲ್ಲತ್ತಾರು ಜ್ಞಾನವಿಕಾಸ ಕೇಂದ್ರದಲ್ಲಿ ಜ್ಞಾನವಿಕಾಸ ಕಾರ್ಯಕ್ರಮ Read More »

‘ತೆರೆದ ಮನೆ’ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಅರಿವು | ಮಹಿಳಾ ಠಾಣೆಯಲ್ಲಿ ಮಕ್ಕಳನ್ನು ಕೂರಿಸಿ ಪಾಠ

ಪುತ್ತೂರು: ‘ತೆರೆದ ಮನೆ’ ಕಾರ್ಯಕ್ರಮದಡಿ  ಇಲ್ಲಿಯ ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಲಾಯಿತು. ಠಾಣೆಯ ಪರಿಚಯ, ಪೊಲೀಸ್ ಕಾರ್ಯಚಟುವಟಿಕೆಗಳು, ಪೋಕ್ಸೋ ಕಾಯಿದೆ, ಸಾಮಾಜಿಕ ಜಾಲತಾಣಗಳಿಂದ ಆಗುವ ತೊಂದರೆ, ಅನಾಮಧೇಯ ಕರೆಗಳು ಮತ್ತು ಮೆಸೇಜುಗಳ  ಕುರಿತು ಮಾಹಿತಿ, ಮಕ್ಕಳ ಹಕ್ಕುಗಳು, ಮಕ್ಕಳ ಸಹಾಯವಾಣಿ 1098, 112 ವಾಹನದ ಉಪಯೋಗ ಹಾಗೂ ಇನ್ನಿತರ ಕಾನೂನು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮಹಿಳಾ ಠಾಣೆಯ ನಿರೀಕ್ಷಕರು, ಸಿಬ್ಬಂದಿಗಳು, ಶಾಲಾ

‘ತೆರೆದ ಮನೆ’ ಕಾರ್ಯಕ್ರಮದಡಿ ವಿದ್ಯಾರ್ಥಿಗಳಿಗೆ ಅರಿವು | ಮಹಿಳಾ ಠಾಣೆಯಲ್ಲಿ ಮಕ್ಕಳನ್ನು ಕೂರಿಸಿ ಪಾಠ Read More »

ವಿವೇಕಾನಂದ ಕಾಲೇಜಿನ 42 ನೇ ವರ್ಷದ ಗಣೇಶೋತ್ಸವ | ಧಾರ್ಮಿಕ ಚಿಂತನೆ ಬೆಳೆಸುವತ್ತ ನಮ್ಮ ಯೋಚನೆಯಿರಲಿ: ಡಾ. ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ಗಣೇಶ ಎಲ್ಲಾ ದೇವತೆಗಳ ಅಧಿದೇವತೆ. ಹಿಂದೂ ಸಮಾಜದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಬಾಲಗಂಗಾಧರ ತಿಲಕ್ ಸಾರ್ವಜನಿಕ ಗಣೇಶೋತ್ಸವ ಜಾರಿಗೆ ತಂದರು. ನಮ್ಮ ಧರ್ಮ, ಸಂಸ್ಕೃತಿಯನ್ನು ಉಳಿಸುವ ಬಹುದೊಡ್ಡ ಸವಾಲು ನಮ್ಮ ಮುಂದೆ ಇದೆ. ವಿದ್ಯಾರ್ಥಿಗಳ ಯೋಚನೆಯು ಧಾರ್ಮಿಕ ಚಿಂತನೆ ಬೆಳೆಸುವತ್ತ ಇರಬೇಕು. ನಮ್ಮ ದೇಶದ ಮೂಲ ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ವಿವೇಕಾನಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಾ ಬಂದಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್

ವಿವೇಕಾನಂದ ಕಾಲೇಜಿನ 42 ನೇ ವರ್ಷದ ಗಣೇಶೋತ್ಸವ | ಧಾರ್ಮಿಕ ಚಿಂತನೆ ಬೆಳೆಸುವತ್ತ ನಮ್ಮ ಯೋಚನೆಯಿರಲಿ: ಡಾ. ಕಲ್ಲಡ್ಕ ಪ್ರಭಾಕರ ಭಟ್ Read More »

ದೊಡ್ಡ ಬಜೆಟಿನಲ್ಲಿ `ಕಾಂತಾರ 2’ ಸೆಟ್ಟೇರುವುದು ಪಕ್ಕಾ! | `ಕಾಂತಾರ 2’ ಯಾವ ಹಂತದಲ್ಲಿದೆ ಎನ್ನುವುದು ಈಗ ಬಹಿರಂಗ!!

ಇನ್ನಿಲ್ಲದ ಸಕ್ಸಸ್ ಕಂಡಿದ್ದ ಕಾಂತಾರ ಸಿನಿಮಾದ ಬಳಿಕ ಕಾಂತಾರ 2 ಬರಲಿದೆ ಎನ್ನುವ ಮಾತು ಅಲ್ಲಲ್ಲಿ ಕೇಳಿಬರುತ್ತಿತ್ತು. ಇದೀಗ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರೇ ಇದನ್ನು ಖಾತ್ರಿಪಡಿಸಿದ್ದಾರೆ. ಸುಮಾರು 100 ಕೋಟಿ ರೂ.ನಲ್ಲಿ ಕಾಂತಾರ 2 ಸೆಟ್ಟೇರುವ ಸಾಧ್ಯತೆ ಇದೆ. ಅಂದರೆ ಕಾಂತಾರ ಚಿತ್ರಕ್ಕಿಂತಲೂ ಹೆಚ್ಚು – ಕಮ್ಮಿ 10 ಪಟ್ಟು ಹೆಚ್ಚು ಬಜೆಟ್ ಹೊಂದಿದ್ದು, ಅದ್ಧೂರಿಯಾಗಿ ತೆರೆ ಕಾಣಲಿದೆಯಂತೆ. ಸದ್ಯ ಕಾಂತಾರ 2 ಬರವಣಿಗೆ ಹಂತದಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ. ರಾಜ್ ಬಿ.

ದೊಡ್ಡ ಬಜೆಟಿನಲ್ಲಿ `ಕಾಂತಾರ 2’ ಸೆಟ್ಟೇರುವುದು ಪಕ್ಕಾ! | `ಕಾಂತಾರ 2’ ಯಾವ ಹಂತದಲ್ಲಿದೆ ಎನ್ನುವುದು ಈಗ ಬಹಿರಂಗ!! Read More »

ಪುತ್ತೂರು ಮಾರುಕಟ್ಟೆ ಇಂದಿನ ಧಾರಣೆ

ಹೊಸ ಅಡಿಕೆ 390 – 447 ರೂ. ಹಳೆ ಅಡಿಕೆ 380-480 ರೂ. ಕಾಳು ಮೆಣಸು 315-595 ರೂ. ಒಣ ಕೊಕ್ಕೊ 215-235 ರೂ. ಹಸಿ ಕೊಕ್ಕೊ 53-58 ರೂ. ಕೊಬ್ಬರಿ 70-73 ರೂ. ರಬ್ಬರ್ ಆರ್.ಎಸ್.ಎಸ್ 5 134.50 ರೂ. ಆರ್.ಎಸ್.ಎಸ್ 4 143.00 ರೂ. ಲಾಟ್ 125.00 ರೂ. ಸ್ಕ್ರಾಪ್ 73.50 ರಿಂದ 83.50 ರೂ.

ಪುತ್ತೂರು ಮಾರುಕಟ್ಟೆ ಇಂದಿನ ಧಾರಣೆ Read More »

ಬಲ್ಯ: ಕಟ್ಟಿಗೆ ಕಟ್ಟುವ ಹಗ್ಗ ಮೃತದೇಹ ತೋರಿಸಿತು!

ಕಡಬ: ತೋಟದಿಂದ ಹುಲ್ಲು ತರಲು ಹೋದ ಮಹಿಳೆಯೊಬ್ಬರು ಆಕಸ್ಮಿಕವಾಗಿ ಕೆರೆಗೆ ಜಾರಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಬಲ್ಯ ಗ್ರಾಮದ ದೇರಾಜೆ ನಿವಾಸಿ ಕುಶಲಾವತಿ ಮೃತಪಟ್ಟ ಮಹಿಳೆ. ಕುಶಾಲವತಿ ಮನೆ ಕೆಲಸ ಮಾಡಿಕೊಂಡಿದ್ದರು. ಮೈದುನ ಕೆಲಸಕ್ಕೆ ಹೋಗಿದ್ದು, ತಂಗಿಯ ಮಗ ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಕುಶಲಾವತಿ ಹಸುಗಳಿಗೆ ಹುಲ್ಲು ತರಲು ತೋಟಕ್ಕೆ ಹೋದ ಸಂದರ್ಭ ಕೆರೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮಗ ಪ್ರಜ್ವಲ್ ಸಂಜೆ ಶಾಲೆಯಿಂದ ಮನೆಗೆ ಬಂದು ಹುಡುಕಾಡಿದ್ದಾರೆ. ತೋಟದ ಕಡೆ

ಬಲ್ಯ: ಕಟ್ಟಿಗೆ ಕಟ್ಟುವ ಹಗ್ಗ ಮೃತದೇಹ ತೋರಿಸಿತು! Read More »

ಬೆಂಗಳೂರು ಕಂಬಳಕ್ಕೆ ಸಿದ್ಧತೆ | ಕಂಬಳ ಕೋಣಗಳ ಮಾಲಕರಿಗೆ ನಡೆಯಲಿದೆ ಸೆ. 30ರಂದು ಸಭೆ | ಎಲ್ಲಿ? ಹೇಗೆ ಇಲ್ಲಿದೆ ಮಾಹಿತಿ

ಪುತ್ತೂರು: ಬೆಂಗಳೂರಿನ ಕಂಬಳದಲ್ಲಿ ಭಾಗವಹಿಸಲು ಕಂಬಳ ಕೋಣಗಳಿಗೆ ಅವಕಾಶ ಕಲ್ಪಿಸಿದ್ದು, ಈ ಹಿನ್ನೆಲೆಯಲ್ಲಿ ಕಂಬಳ ಕೋಣಗಳ ಯಜಮಾನರುಗಳ ಸಭೆಯನ್ನು ಕರೆಯಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಸೆ. 30ರಂದು ಸಂಜೆ 3 ಗಂಟೆಗೆ ಮಂಗಳೂರು ಹೊಟೇಲ್ ವುಡ್’ಲ್ಯಾಂಡಿನಲ್ಲಿ ಕೋಣಗಳ ಯಜಮಾನರುಗಳ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ, ಸೂಚನೆ ನೀಡುವಂತೆ ತಿಳಿಸಲಾಗಿದೆ. ನವಂಬರಿನಲ್ಲಿ ರಾಜ್ಯ ರಾಜಧಾನಿಯಾದ ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕಂಬಳ ಕೋಣಗಳ ಯಜಮಾನರುಗಳ ಸಭೆ ಕರೆದಿದ್ದು, ಬೆಂಗಳೂರು ಕಂಬಳದಲ್ಲಿ

ಬೆಂಗಳೂರು ಕಂಬಳಕ್ಕೆ ಸಿದ್ಧತೆ | ಕಂಬಳ ಕೋಣಗಳ ಮಾಲಕರಿಗೆ ನಡೆಯಲಿದೆ ಸೆ. 30ರಂದು ಸಭೆ | ಎಲ್ಲಿ? ಹೇಗೆ ಇಲ್ಲಿದೆ ಮಾಹಿತಿ Read More »

ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸುವುದು ನಮ್ಮ ಸಂಸ್ಕೃತಿಯಲ್ಲ | ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಹೆತ್ತ ತಂದೆ ತಾಯಿಯನ್ನು ಆರೈಕೆ ಮಾಡದೆ, ಅವರನ್ನು ಆಶ್ರಮದಲ್ಲಿ ಹಾಕಿ ಅವರ ಸೇವೆ ಮಾಡುವ ಭಾಗ್ಯವಿಲ್ಲದ ಮಂದಿ ಎಷ್ಟೇ ದೊಡ್ಡ ಪುಣ್ಯದ ಕೆಲಸ ಮಾಡಿದರೂ ಆತನಿಗೆ ದೇವರು ಖಂಡಿತವಾಗಿಯೂ ಒಲಿಯವುದಿಲ್ಲ ಮತ್ತು ಆತನಿಗೆ ದೇವರ ಆಶೀರ್ವಾದ ಪಡೆಯಲು ಸಾಧ್ಯವೇ ಇಲ್ಲ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಕುಂಬ್ರ ಶ್ರೀರಾಮ ಭಜನಾ ಮಂದಿರದಲ್ಲಿ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೊಟ್ಟೆಗೆ ತುತ್ತು ಇಲ್ಲದೇ ಇದ್ದರೂ ನಮ್ಮನ್ನು ಹೆತ್ತು ಸಾಕಿದ, ವಿದ್ಯೆ

ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸುವುದು ನಮ್ಮ ಸಂಸ್ಕೃತಿಯಲ್ಲ | ಕುಂಬ್ರ ಶ್ರೀರಾಮ ಭಜನಾಮಂದಿರದಲ್ಲಿ ನಡೆದ ಗಣೇಶೋತ್ಸವದಲ್ಲಿ ಶಾಸಕ ಅಶೋಕ್ ರೈ Read More »

ಪೆರ್ನೆ ಯುವ ಸ್ಪಂದನದಿಂದ ವಿಜೃಂಭಣೆಯ ಗಣೇಶೋತ್ಸವ, ಶೋಭಾಯಾತ್ರೆ

ಮಾಣಿ: ಪೆರ್ನೆಯ ಕಾರ್ಲ ಯುವ ಸ್ಪಂದನ ನೇತೃತ್ವದಲ್ಲಿ ಶ್ರೀ ರಾಮಾಂಜನೇಯ ಭಜನಾ ಮಂದಿರದ ವತಿಯಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಾಯಾತ್ರೆ ವಿಜೃಂಭಣೆಯಿಂದ ಜರಗಿತು. ಶೋಭಾಯಾತ್ರೆಯಲ್ಲಿ ಆಕರ್ಷಕ ಸುಡುಮದ್ದು ಪ್ರದರ್ಶನದೊಂದಿಗೆ, ನಾಸಿಕ್ ಬ್ಯಾಂಡ್’ನ ಠೇಂಕಾರ ಮುಗಿಲು ಮುಟ್ಟಿತ್ತು. ಕುಣಿತ ಭಜನೆ, ಹುಲಿ ವೇಷಗಳು ಗಣೇಶೋತ್ಸವದ ಶೋಭಾಯಾತ್ರೆಗೆ ಸಾಂಪ್ರದಾಯಿಕ ಟಚ್ ನೀಡಿದವು. ಗೊಂಬೆ, ಟ್ಯಾಬ್ಲೋಗಳು ನೋಡುಗರ ಮನವನ್ನು ಸೂರೆಗೊಳ್ಳುವಂತೆ ಮಾಡಿದವು. ವಿವೇಕಾನಂದರ ಭಾವಚಿತ್ರ ಸಹಿತ ಭಾರತ ಮಾತೆಯ ಭವ್ಯ ಭಾವಚಿತ್ರವನ್ನು ಹೊತ್ತ ಪೆರ್ನೆ ಯುವ ಸ್ಪಂದನದ ವಾಹನ

ಪೆರ್ನೆ ಯುವ ಸ್ಪಂದನದಿಂದ ವಿಜೃಂಭಣೆಯ ಗಣೇಶೋತ್ಸವ, ಶೋಭಾಯಾತ್ರೆ Read More »

error: Content is protected !!
Scroll to Top