ವಿಷಕಾರಿ ಹಣ್ಣಿನ ಜ್ಯೂಸ್ ಸೇವಿಸಿ ಗೃಹಿಣಿ ಲೀಲಾವತಿ ಮೃತ್ಯು!

ಸುಳ್ಯ: ವಿಷಕಾರಿ ಹಣ್ಣಿನ ಜ್ಯೂಸ್ ತಯಾರಿಸಿ ಕುಡಿದ ಪರಿಣಾಮ ಮಹಿಳೆಯೋರ್ವಳು ಮೃತಪಟ್ಟ ಘಟನೆ ಅ. 2ರಂದು ಅಮರಪಡ್ಡೂರು ಗ್ರಾಮದ ಕುಳ್ಳಾಜಿ ಎಂಬಲ್ಲಿ ನಡೆದಿದೆ. ಮೃತರನ್ನು ಜಗನ್ನಾಥ ನಾಯ್ಕ ದೊಡ್ಡೇರಿ ಅವರ ಪತ್ನಿ ಲೀಲಾವತಿ (35) ಎಂದು ಗುರುತಿಸಲಾಗಿದೆ. ಒಂದು ವಾರದ ಹಿಂದೆ ಕಾಡಿನಲ್ಲಿ ಸಿಗುವ ಮೈರೋಳ್ ಹಣ್ಣನ್ನು ಮನೆಗೆ ತಂದು, ಅದರ ರಸ ತೆಗೆದು ಶರ್ಬತ್ ಮಾಡಿ ಲೀಲಾವತಿ ಹಾಗೂ ಅವರ ತಂದೆ ಸೇವನೆ ಮಾಡಿದ್ದರು. ಇದರ ಪರಿಣಾಮ ತಂದೆ ಮಗಳಿಬ್ಬರೂ ಅಸ್ವಸ್ಥರಾಗಿದ್ದರು. ಮಗಳು ಮೂರು ಮಕ್ಕಳ […]

ವಿಷಕಾರಿ ಹಣ್ಣಿನ ಜ್ಯೂಸ್ ಸೇವಿಸಿ ಗೃಹಿಣಿ ಲೀಲಾವತಿ ಮೃತ್ಯು! Read More »

ಒಂದೇ ಅಡಿಕೆಯಲ್ಲಿ ನಾಲ್ಕು ಗಿಡ!! | ಉಳ್ಳಿಂಜದಲ್ಲಿ ಕಂಡುಬಂತು ಪೂಗಸಿರಿ!

ಬೆಳ್ತಂಗಡಿ: ಇಲ್ಲಿನ ಗರ್ಡಾಡಿ ಗ್ರಾಮದ ಉಳ್ಳಿಂಜ ಜಯರಾಮ್ ಭಟ್ ಅವರ ತೋಟದಲ್ಲಿ ವಿಶೇಷ ಅಡಿಕೆ ಗಿಡವೊಂದು ಗಮನ ಸೆಳೆದಿದೆ. ಒಂದೇ ಅಡಿಕೆಯಲ್ಲಿ ಒಂದೇ ಗಿಡ – ಇದು ಪ್ರಕೃತಿ ನಿಯಮ. ಆದರೆ ಕೆಲವೊಂದು ಸಲ ಈ ನಿಯಮಗಳನ್ನೇ ಪ್ರಕೃತಿ ಮೀರಿ ನಿಲ್ಲುವುದುಂಟು. ಸಸ್ಯ ಸಂಕುಲಗಳಲ್ಲಿಯೂ ಇದು ಹೊಸತಲ್ಲ. ಇಂತಹ ಗಿಡಗಳಿಗೆ ನಮ್ಮ ಹಿರಿಯರು ಒಂದೊಂದು ಹೆಸರನ್ನು ಇಟ್ಟಿದ್ದಾರೆ. ಇದೇ ರೀತಿಯ ಗಿಡವೊಂದು ಉಳ್ಳಿಂಜದಲ್ಲಿ ಕಂಡುಬಂದಿದೆ. ಒಂದೇ ಅಡಿಕೆಯಲ್ಲಿ ನಾಲ್ಕು ಗಿಡಗಳು ಬೆಳೆದಿವೆ. ಇದನ್ನು ಪೂಗಸಿರಿ ಎಂದು ಕರೆಯಲಾಗುತ್ತದೆ

ಒಂದೇ ಅಡಿಕೆಯಲ್ಲಿ ನಾಲ್ಕು ಗಿಡ!! | ಉಳ್ಳಿಂಜದಲ್ಲಿ ಕಂಡುಬಂತು ಪೂಗಸಿರಿ! Read More »

ಟ್ರಿಪಲ್ ಜಂಪ್: ವಿವೇಕಾನಂದ ಪದವಿಪೂರ್ವ ಕಾಲೇಜಿನ ನಿಹಾಲ್ ರಾಜ್‌ಗೆ ಬೆಳ್ಳಿ ಪದಕ

ಪುತ್ತೂರು: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಟ್ರಿಪಲ್ ಜಂಪ್ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ನಿಹಾಲ್ ರಾಜ್ ಬೆಳ್ಳಿಯ ಪದಕ ಪಡೆದುಕೊಂಡಿದ್ದಾರೆ. ಇವರು ಪುತ್ತೂರು ತಾಲೂಕನ್ನು ಪ್ರತಿನಿಧಿಸಿ, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ನಿಹಾಲ್ ರಾಜ್ ಅವರು ಕಬಕದ ಬಿ. ನಾಗರಾಜ್ ಹೆಗ್ಡೆ ಮತ್ತು ಭಾನುಮತಿ ದಂಪತಿ ಪುತ್ರ. ನಿಹಾಲ್ ರಾಜ್ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.

ಟ್ರಿಪಲ್ ಜಂಪ್: ವಿವೇಕಾನಂದ ಪದವಿಪೂರ್ವ ಕಾಲೇಜಿನ ನಿಹಾಲ್ ರಾಜ್‌ಗೆ ಬೆಳ್ಳಿ ಪದಕ Read More »

ಕೆಲಸಕ್ಕೆಂದು ತೆರಳಿದ್ದ ಇಚ್ಲಂಪಾಡಿಯ ಯುವಕ ನಾಪತ್ತೆ; ದೂರು

ಉಪ್ಪಿನಂಗಡಿ: ಇಚ್ಲಂಪಾಡಿ ಗ್ರಾಮದ ಯುವಕನೋರ್ವ ಕಾಣೆಯಾಗಿರುವ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉರೆಜಾಲು ನಿವಾಸಿ  ಜೋಜು ಜೋಸೆಫ್ (35) ನಾಪತ್ತೆಯಾದವರು. ಕೂಲಿ ಕೆಲಸ ಮಾಡುತ್ತಿದ್ದ ಇವರು   ಸೆ. 30ರಂದು ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಸುಬ್ರಹ್ಮಣ್ಯಕ್ಕೆ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋಗಿದ್ದು ರಾತ್ರಿಯಾದರೂ ವಾಪಾಸು ಮನೆಗೆ ಬಂದಿಲ್ಲ. ಪೋನ್ ಮಾಡಿ ಸಂಪರ್ಕಿಸಲು ಪ್ರಯತ್ನಿಸಿದಾಗ ಪೋನ್ ಸ್ವಿಚ್ ಆಪ್ ಆಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇವರನ್ನು  ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಮೇಸ್ತ್ರಿ ಪ್ರಶಾಂತ್‌ ಅವರಿಗೆ ರಾತ್ರಿ ಕರೆ

ಕೆಲಸಕ್ಕೆಂದು ತೆರಳಿದ್ದ ಇಚ್ಲಂಪಾಡಿಯ ಯುವಕ ನಾಪತ್ತೆ; ದೂರು Read More »

ಗುತ್ತಿಗಾರಿನಲ್ಲಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ!

ಪಂಜ: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುತ್ತಿಗಾರಿನಲ್ಲಿ ನಡೆದಿದೆ. ಪ್ರೇಮಾ (55) ಆತ್ಮಹತ್ಯೆ ಮಾಡಿಕೊಂಡವರು. ಪ್ರೇಮಾ ಅವರು ಗುತ್ತಿಗಾರಿನ ವಳಲಂಬೆಯ ಲಕ್ಷ್ಮಣ ಆಚಾರ್ಯ ಅವರ ಪತ್ನಿ. ಮೃತ ಪ್ರೇಮಾ ಅವರು ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುತ್ತಿಗಾರಿನಲ್ಲಿ ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ! Read More »

ಖಾಸಗಿ ವಿಮಾನ ಪತನ: ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ಮೃತ್ಯು

ಹರಾರೆ: ಖಾಸಗಿ ವಿಮಾನ ಪತನಗೊಂಡು ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ನೈಋತ್ಯ ಜಿಂಬಾಬ್ವೆಯಲ್ಲಿ ನಡೆದಿರುವುದು ವರದಿಯಾಗಿದೆ. ಚಿನ್ನ, ಕಲ್ಲಿದ್ದಲು ಮತ್ತು ತಾಮ್ರವನ್ನು ಸಂಸ್ಕರಿಸುವ ರಿಯೋಜಿಮ್ ಗಣಿ ಕಂಪನಿಯ ಮಾಲೀಕ ಹರ್ಪಾಲ್ ರಾಂಧವಾ, ಅವರ ಮಗ ಮತ್ತು ಇತರ ನಾಲ್ವರು ವಿಮಾನ ಅಪಘಾತದಲ್ಲಿ ಮೃತಪಟ್ಟಿರುವುದಾಗಿ ʼಪಿಟಿಐʼ ವರದಿ ಮಾಡಿದೆ. ರಿಯೊಜಿಮ್ ಒಡೆತನದ ಸೆಸ್ನಾ 206 ವಿಮಾನವು ಶುಕ್ರವಾರ (ಸೆ. 29ರಂದು) ಹರಾರೆಯಿಂದ ಜಿಂಬಾಬ್ಬೆಯ ಮುರೊವಾ ವಜ್ರದ ಗಣಿ ಕಡೆಗೆ ತೆರಳುತ್ತಿದ್ದಾಗ

ಖಾಸಗಿ ವಿಮಾನ ಪತನ: ಭಾರತೀಯ ಗಣಿ ಉದ್ಯಮಿ, ಪುತ್ರ ಸೇರಿ 6 ಮಂದಿ ಮೃತ್ಯು Read More »

ಮಹಾಲಿಂಗ ಅಂದರೆ ತ್ರಿಮೂರ್ತಿಗಳ ಸಂಗಮ: ಪಿ.ಜಿ. ಜಗನ್ನಿವಾಸ ರಾವ್ | ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಪದಗ್ರಹಣ

ಪುತ್ತೂರು: ಅರ್ಚಕನ ಪ್ರಭಾವ ಮತ್ತು ಸಂಸ್ಕಾರದಿಂದ ಶಿಲೆಯಾದ ಮೂರ್ತಿ ಶಂಕರನಾಗುತ್ತದೆ. ದೇವರ ಸ್ವರೂಪ ಪಡೆಯುತ್ತದೆ. ಇಲ್ಲಿ ಅರ್ಚಕನೆಂದರೆ ಯಾರೆಲ್ಲಾ ತ್ರಿಕರಣ ಪೂರ್ವಕವಾಗಿ ಶಿಲೆಯಲ್ಲಿ ದೇವರನ್ನು ಏಕನಿಷ್ಠೆಯಿಂದ ಕಾಣುತ್ತಾರೋ ಆ ಭಕ್ತರೆಲ್ಲರೂ ಒಂದು ರೀತಿಯಿಂದ ಅರ್ಚಕರೇ ಆಗುತ್ತಾರೆ. ಭಗವಂತನನ್ನು ತ್ರಿಕರಣಪೂರ್ವಕವಾಗಿ ಭಜಿಸಿದಾಗ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಪುತ್ತೂರು ನಗರಸಭಾ ಸದಸ್ಯ, ಪಿ.ಜಿ. ಜಗನ್ನಿವಾಸ ರಾವ್ ಹೇಳಿದರು. ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ನ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಹಾಲಿಂಗ ಅಂದರೆ

ಮಹಾಲಿಂಗ ಅಂದರೆ ತ್ರಿಮೂರ್ತಿಗಳ ಸಂಗಮ: ಪಿ.ಜಿ. ಜಗನ್ನಿವಾಸ ರಾವ್ | ಶ್ರೀ ಮಹಾಲಿಂಗೇಶ್ವರ ಭಜನಾ ಸೇವಾ ಟ್ರಸ್ಟ್ ಪದಗ್ರಹಣ Read More »

ಎನ್ ಎಸ್ ಎಸ್ ಸೇವಾಸಂಗಮದಿಂದ ಕಾವು ಸರಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ

ಪುತ್ತೂರು: ಸುಳ್ಯ ಕುರಂಜಿ ವೆಂಕಟರಮಣ ಗೌಡ ಪಾಲಿಟೆಕ್ನಿಕ್ ನ ರಾಷ್ಟ್ರೀಯ ಸೇವಾ ಯೋಜನೆಯ ಹಿರಿಯ ವಿದ್ಯಾರ್ಥಿಗಳ ಸಂಘ ಎನ್.ಎಸ್.ಎಸ್.ಸೇವಾ ಸಂಗಮ ಟ್ರಸ್ಟ್ ವತಿಯಿಂದ ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ ನೀಡಲಾಯಿತು. ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಕಾವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಮಾಡಿದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ

ಎನ್ ಎಸ್ ಎಸ್ ಸೇವಾಸಂಗಮದಿಂದ ಕಾವು ಸರಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ಕೊಡುಗೆ Read More »

ಮಂಗಳೂರು ಬೆಡಗಿ ಮುಡಿಗೆ ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಕಿರೀಟ | ಅಂತಾರಾಷ್ಟ್ರೀಯ ಮಟ್ಟದ ಬ್ಯೂಟಿ ಕಾಂಟೆಸ್ಟ್ ನಲ್ಲಿ ಗೆದ್ದ ಯಶಸ್ವಿನಿ ದೇವಾಡಿಗ

ಮಂಗಳೂರು: ಥಾಯ್ಲೆಂಡ್ ನಲ್ಲಿ ನಡೆದ ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಕಿರೀಟವನ್ನು ಕರ್ನಾಟಕದ ಕುವರಿ ಮಂಗಳೂರು ಬೆಡಗಿ ಯಶಸ್ವಿನಿ ದೇವಾಡಿಗ ತನ್ನ ಮುಡಿಗೇರಿಸಿಕೊಂಡಿದ್ದಾರೆ. ವರ್ಷದ ಆರಂಭದಲ್ಲಿ ನಡೆದ ಮಿಸ್ ಟೀನ್ ಇಂಡಿಯಾ ಗ್ಲೋಬ್ ಬ್ಯೂಟಿ ಕಾಂಟೆಸ್ಟ್ ನಲ್ಲಿ ಸ್ಪರ್ಧಿಸಿ ರನ್ನರ್ ಅಪ್ ಪ್ರಶಸ್ತಿ ಪಡೆದು, ಥಾಯ್ಲೆಂಡ್ ನಲ್ಲಿ ನಡೆದ ಫೈನಲ್ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದ್ದರು. ಇದೀಗ ಯಶಸ್ವಿನಿ ದೇವಾಡಿಗ ಅವರು ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಆಗಿ ಹೊರಹೊಮ್ಮಿದರು. ಇಂಡೋನೇಷ್ಯಾದ

ಮಂಗಳೂರು ಬೆಡಗಿ ಮುಡಿಗೆ ಮಿಸ್ ಟೀನ್ ಗ್ಲೋಬ್ ಇಂಟರ್ ನ್ಯಾಷನಲ್ 2023 ಕಿರೀಟ | ಅಂತಾರಾಷ್ಟ್ರೀಯ ಮಟ್ಟದ ಬ್ಯೂಟಿ ಕಾಂಟೆಸ್ಟ್ ನಲ್ಲಿ ಗೆದ್ದ ಯಶಸ್ವಿನಿ ದೇವಾಡಿಗ Read More »

ನೆಲ್ಲಿಕಟ್ಟೆ ಮಿತ್ರಮಂಡಲ, ನೆಲ್ಲಿಕಟ್ಟೆ ಈಶ ವಿದ್ಯಾಲಯದಿಂದ ಸ್ವಚ್ಛತಾ ಆಂದೋಲನ

ಪುತ್ತೂರು: ನೆಲ್ಲಿಕಟ್ಟೆ ಮಿತ್ರಮಂಡಲ ಹಾಗೂ ನೆಲ್ಲಿಕಟ್ಟೆ ಈಶ ವಿದ್ಯಾಲಯದ ಆಶ್ರಯದಲ್ಲಿ ಸ್ವಚ್ಛತಾ ಆಂದೋಲನ ಸೋಮವಾರ ನಡೆಯಿತು. ಮಹಾತ್ಮ ಗಾಂಧೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜನ್ಮದಿನದ ಪ್ರಯುಕ್ತ ನಡೆದ ಸ್ವಚ್ಛತಾ ಕಾರ್ಯ ನೆಲ್ಲಿಕಟ್ಟೆ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ರಸ್ತೆ, ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿ, ನಾಗನ ಕಟ್ಟೆ, ನೆಲ್ಲಿಕಟ್ಟೆ ಬಳಿಯಲ್ಲಿ ನಡೆಯಿತು. ನೆಲಿಕಟ್ಟೆ ಮಿತ್ರ ಮಂಡಲದ ಸ್ಥಾಪಕಾಧ್ಯಕ್ಷ ಜಗನ್ನಾಥ ರೈ ಸೂತ್ರಬೆಟ್ಟು ದೀಪ ಬೆಳಗಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನೆಲ್ಲಿಕಟ್ಟೆ ಮಿತ್ರ ಮಂಡಲದ

ನೆಲ್ಲಿಕಟ್ಟೆ ಮಿತ್ರಮಂಡಲ, ನೆಲ್ಲಿಕಟ್ಟೆ ಈಶ ವಿದ್ಯಾಲಯದಿಂದ ಸ್ವಚ್ಛತಾ ಆಂದೋಲನ Read More »

error: Content is protected !!
Scroll to Top