ಅನುಮತಿ ಪಡೆದಿದ್ದರೂ ಸೌಜನ್ಯ ಪ್ರಕರಣದ ಫ್ಲೆಕ್ಸ್ ತೆರವು!! | ಸುಳ್ಯದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಜಿಲ್ಲಾ ಹೋರಾಟ ಸಮಿತಿಯಿಂದ ಆಗ್ರಹ

ಸುಳ್ಯ: ಸೌಜನ್ಯ ಪ್ರಕರಣದ ಫ್ಲೆಕ್ಸನ್ನು ಅನುಮತಿ ಪಡೆದೇ ಸುಳ್ಯ ಪೇಟೆಯಲ್ಲಿ ಅಳವಡಿಸಿದ್ದರೂ, ಪೊಲೀಸರೇ ಮುಂದೆ ಬಂದು ಫ್ಲೆಕ್ಸ್ ತೆರವುಗೊಳಿಸಿದ್ದಾರೆ. ಇದು ಸೌಜನ್ಯ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರ ಎಂದು ಆರೋಪಿಸಿರುವ ಸೌಜನ್ಯ ಪ್ರಕರಣ ಒಕ್ಕಲಿಗರ ಜಿಲ್ಲಾ ಹೋರಾಟ ಸಮಿತಿ, ಫ್ಲೆಕ್ಸ್ ತೆರವಿಗೆ ಕಾರಣವಾದ ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು ಎಂದು ಎಸ್.ಪಿ. ರಿಷ್ಯಂತ್ ಸಿ.ಬಿ. ಅವರನ್ನು ಒತ್ತಾಯಿಸಿದೆ. ಸುಳ್ಯ ಪೇಟೆಯಲ್ಲಿ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಫ್ಲೆಕ್ಸ್ ನ್ನು ಅನುಮತಿ ಪಡೆದು ಅಳವಡಿಸಲಾಗಿತ್ತು. ಆದರೆ ಇಂದು ಸುಳ್ಯಕ್ಕೆ ಕಾರ್ಯಕ್ರಮ ನಿಮಿತ್ತ […]

ಅನುಮತಿ ಪಡೆದಿದ್ದರೂ ಸೌಜನ್ಯ ಪ್ರಕರಣದ ಫ್ಲೆಕ್ಸ್ ತೆರವು!! | ಸುಳ್ಯದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡುವಂತೆ ಜಿಲ್ಲಾ ಹೋರಾಟ ಸಮಿತಿಯಿಂದ ಆಗ್ರಹ Read More »

ಅಕ್ಷಯ ಕಾಲೇಜಿನಲ್ಲಿ ‘ಏಕ್ ತಾರೀಕ್, ಏಕ್ ಘಂಟಾ’ ಸ್ವಚ್ಛತಾ ಅಭಿಯಾನ

ಪುತ್ತೂರು: ಇಲ್ಲಿನ ಸಂಪ್ಯ ಅಕ್ಷಯ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ  ಏಕ್ ತಾರಿಕ್, ಏಕ್ ಘಂಟಾ ಎಂಬ ಶಿರೋನಾಮೆಯಲ್ಲಿ ಸ್ವಚ್ಛತಾ ಅಭಿಯಾನ ಸಂಪ್ಯ ವಠಾರದಲ್ಲಿ ನಡೆಯಿತು. ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲು ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮಾಧಿಕಾರಿಗಳಾದ ಕಿಶೋರ್ ರೈ, ಮೇಘಶ್ರೀ, ಕಾಲೇಜಿನ ಉಪನ್ಯಾಸಕ ವೃಂದ, ಸ್ವಯಂ ಸೇವಕ ಸೇವಕಿಯರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.

ಅಕ್ಷಯ ಕಾಲೇಜಿನಲ್ಲಿ ‘ಏಕ್ ತಾರೀಕ್, ಏಕ್ ಘಂಟಾ’ ಸ್ವಚ್ಛತಾ ಅಭಿಯಾನ Read More »

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪರಿಮಳಾ ಎನ್.ಎಂ.ಗೆ ಸನ್ಮಾನ

ಸವಣೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ ನಡೆದ 149ನೇ ಗಾಂಧೀ ಜಯಂತಿ ಆಚರಣೆ ಸಂದರ್ಭ ಪರಿಮಳಾ ಎನ್.ಎಂ. ಅವರನ್ನು ಸನ್ಮಾನಿಸಲಾಯಿತು. ಕನ್ನಡ ಭಾಷಾ ಶಿಕ್ಷಕಿಯಾಗಿರುವ ಪರಿಮಳಾ ಎನ್.ಎಂ. ಅವರು ಇತ್ತೀಚೆಗೆ ಬೆಳಗಾವಿಯ ಕನ್ನಡ ದೈನಿಕ ಸಂಸ್ಥೆಯಿಂದ ಸಾವಿತ್ರಿ ಬಾಯಿ ಫುಲೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಅವರಿಗೆ ಸನ್ಮಾನ ಮಾಡಲಾಯಿತು. ಸನ್ಮಾನ ನೆರವೇರಿಸಿ ಮಾತನಾಡಿದ ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ, ಪರಿಮಳಾ ಅವರ ಶ್ರಮದ ಪರಿಣಾಮವಾಗಿ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಈ ಸನ್ಮಾನದಿಂದ ನಮ್ಮ ಶಿಕ್ಷಕಿಯವರಿಗೆ

ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಪರಿಮಳಾ ಎನ್.ಎಂ.ಗೆ ಸನ್ಮಾನ Read More »

ಮಾಣಿಲ ಶಾಲೆಯಲ್ಲಿ ಗಾಂಧೀ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ, ಸಭಾ ವೇದಿಕೆ ಉದ್ಘಾಟನೆ, ಬೀಳ್ಕೊಡುಗೆ

ವಿಟ್ಲ: ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಅ. 2ರಂದು ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಿಸಲಾಯಿತು. ಇದೇ ಸಂದರ್ಭ ನವೀಕರಣಗೊಂಡ ಶಾಲಾ ಸಭಾ ವೇದಿಕೆಯ ಉದ್ಘಾಟನೆ ಹಾಗೂ ವರ್ಗಾವಣೆಗೊಂಡ ಶಿಕ್ಷಕ ಭುವನೇಶ್ವರ್ ಸಿ. ಅವರಿಗೆ ಸನ್ಮಾನ, ಬೀಳ್ಕೊಡುಗೆ ನಡೆಯಿತು. ಕುಕ್ಕಾಜೆ ಶ್ರೀ ಕಾಳಿಕಾ ಅಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಮಾತನಾಡಿ, ಗುರುವೃಂದ ಹಾಗೂ ಪೋಷಕರ ಸಮರ್ಪಣಾ ಭಾವದಿಂದ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದರು. ಹಿರಿಯ ಯಕ್ಷಗಾನ ಕಲಾವಿದ ಹರೀಶ್ ಬಳಂತಿಮೊಗರು ಮಾತನಾಡಿ, 15 ವರ್ಷಗಳ

ಮಾಣಿಲ ಶಾಲೆಯಲ್ಲಿ ಗಾಂಧೀ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ, ಸಭಾ ವೇದಿಕೆ ಉದ್ಘಾಟನೆ, ಬೀಳ್ಕೊಡುಗೆ Read More »

ಸಮವಸ್ತ್ರ ಹಾಕಿಕೊಂಡೇ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ! | ಪತ್ನಿಯ ಅಗಲುವಿಕೆ ಸಹಿಸದೇ ನೇಣಿಗೆ ಕೊರಳೊಡ್ಡಿದರೇ?

ಶಿವಮೊಗ್ಗ: ಪತ್ನಿಯ ಅಗಲುವಿಕೆಯಿಂದ ಮನನೊಂದ ಪೊಲೀಸ್ ಹೆಡ್ ಕಾನ್ಸ್’ಟೇಬಲ್ ಒಬ್ಬರು ಪೊಲೀಸ್ ಸಮವಸ್ತ್ರ ಧರಿಸಿಕೊಂಡೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದ ವಿನೋಬನಗರದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಜಯಪ್ಪ ಎಂದು ಗುರುತಿಸಲಾಗಿದೆ. ಜಯಪ್ಪ ಅವರು ಶಿವಮೊಗ್ಗ ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯ ಮುಖ್ಯಪೇದೆಯಾಗಿದ್ದರು. ಮಂಗಳವಾರ ಬೆಳಗ್ಗೆ ಕೆಲಸಕ್ಕೆ ಹಾಜರಾಗಿದ್ದ ಜಯಪ್ಪ ಅವರು ಮನೆಗೆ ವಾಪಸ್ ತೆರಳಿದ್ದರು. ಹೀಗೆ ಹಿಂದಿರುಗುವಾಗ ಹಗ್ಗ ಖರೀದಿಸಿಕೊಂಡಿದ್ದರು. ಮನೆಗೆ ತೆರಳಿದವರೇ, ಮನೆ ಮೇಲ್ಭಾಗದಲ್ಲಿ ಹಾಕಲಾಗಿರುವ

ಸಮವಸ್ತ್ರ ಹಾಕಿಕೊಂಡೇ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆ! | ಪತ್ನಿಯ ಅಗಲುವಿಕೆ ಸಹಿಸದೇ ನೇಣಿಗೆ ಕೊರಳೊಡ್ಡಿದರೇ? Read More »

ಎಸ್.ಕೆ.ಪಿ.ಎ.ಯಿಂದ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ

ಉಪ್ಪಿನಂಗಡಿ: ಸೌತ್ ಕೆನರಾ ಫೊಟೋಗ್ರಾಫರ್ ಅಸೋಸಿಯೇಶನ್ (ಎಸ್.ಕೆ.ಪಿ.ಎ.)ನ ಪುತ್ತೂರು ವಲಯದ ವತಿಯಿಂದ ಗಾಂಧೀ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಉಪ್ಪಿನಂಗಡಿಯ ಪೌರ ಸೈನಿಕರಿಗೆ ಸನ್ಮಾನ ಹಾಗೂ ಮಾಜಿ ಸೈನಿಕರಾದ ಉಪ್ಪಿನಂಗಡಿಯ ಕೊಯಿಲ ಚೆನ್ನಪ್ಪ ಗೌಡ ಅವರನ್ನು ಸನ್ಮಾನಿಸಲಾಯಿತು. ಪೌರ ಸೈನಿಕರಿಗೆ ಸಮಾರಂಭದಲ್ಲಿ ಸನ್ಮಾನ ನೆರವೇರಿಸಿದ್ದು, ಮಾಜಿ ಸೈನಿಕ ಚೆನ್ನಪ್ಪ ಗೌಡ ಅವರಿಗೆ ಅವರ ಮನೆಯಲ್ಲಿ ಸನ್ಮಾನಿಸಲಾಯಿತು.

ಎಸ್.ಕೆ.ಪಿ.ಎ.ಯಿಂದ ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ Read More »

ಪರ್ಪುಂಜ ಸ.ಹಿ.ಪ್ರಾ. ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ, ಸನ್ಮಾನ | ಶಾಲೆಗಳನ್ನು ವಿಲೀನಗೊಳಿಸುವುದರಿಂದ ಗುಣಮಟ್ಟದ ಶಿಕ್ಷಣ ಸಾಧ್ಯ: ಅಶೋಕ್ ರೈ

ಪುತ್ತೂರು: ತಮ್ಮ ಪ್ರತಿಷ್ಠೆಗೋಸ್ಕರ ಅಲ್ಲೊಂದು ಶಾಲೆ, ಇಲ್ಲೊಂದು ಶಾಲೆ ಕಟ್ಟುವುದರಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಿಲ್ಲ. ಇರುವ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಆಗಬೇಕಾಗಿದೆ. ಆದಕ್ಕಾಗಿ ಈಗ ಇರುವ ಶಾಲೆಗಳನ್ನು ವಿಲೀನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರಕಾರ ಕೂಡ ಚಿಂತನೆ ಮಾಡುತ್ತಿದೆ. ಇದಲ್ಲದೆ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಿಗೆ ಕರೆದುಕೊಂಡು ಹೋಗಲು ಬಸ್ಸಿನ ವ್ಯವಸ್ಥೆಯನ್ನು ಮಾಡುವ ಬಗ್ಗೆಯೂ ಸರಕಾರ ಚಿಂತನೆ ನಡೆಸಿದೆ ಎಂದು ಶಾಸಕ ಅಶೋಕ್

ಪರ್ಪುಂಜ ಸ.ಹಿ.ಪ್ರಾ. ಶಾಲೆಯಲ್ಲಿ ವಿವೇಕ ಕೊಠಡಿ ಉದ್ಘಾಟನೆ, ಸನ್ಮಾನ | ಶಾಲೆಗಳನ್ನು ವಿಲೀನಗೊಳಿಸುವುದರಿಂದ ಗುಣಮಟ್ಟದ ಶಿಕ್ಷಣ ಸಾಧ್ಯ: ಅಶೋಕ್ ರೈ Read More »

ನೆಕ್ಕಿಲಾಡಿ: ತ್ಯಾಜ್ಯ ಎಸೆದವರಿಗೆ ತಕ್ಕ ಶಾಸ್ತಿ!!

ಉಪ್ಪಿನಂಗಡಿ: ರಸ್ತೆ ಬದಿ ತ್ಯಾಜ್ಯ ಎಸೆದು ಹೋಗಿದ್ದವನ್ನು ಪತ್ತೆಹಚ್ಚಿ, ದಂಡ ವಿಧಿಸಿದ ಘಟನೆ ಬೇರಿಕೆ ಎಂಬಲ್ಲಿ ನಡೆದಿದೆ. ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿರುವ 34 ನೆಕ್ಕಿಲಾಡಿ ಗ್ರಾಪಂ, 5050 ರೂ. ದಂಡ ವಿಧಿಸಿದೆ. ಮನೆಯೊಂದರ ತ್ಯಾಜ್ಯವನ್ನು ಸಂಗ್ರಹಿಸಿ ತಂದು, ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗಿದ್ದರು. ಇಂತಹ ಘಟನೆ ಅಲ್ಲಲ್ಲಿ ನಡೆಯುತ್ತಿದ್ದು, ಸ್ಥಳೀಯಾಡಳಿತ ಅರಿವು ಕಾರ್ಯಕ್ರಮ ನಡೆಸುತ್ತಿದೆ. ಮಾತ್ರವಲ್ಲ, ತ್ಯಾಜ್ಯ ಎಸೆಯುವ ಬಗ್ಗೆ ಮಾಹಿತಿ ನೀಡಿ, ಇಂತಹ ತಪ್ಪು ಪುನರಾವರ್ತನೆ ಆಗದಂತೆ ತಿಳಿ ಹೇಳುವ ಕೆಲಸವನ್ನು ಮಾಡಿತ್ತು. ಆದರೂ

ನೆಕ್ಕಿಲಾಡಿ: ತ್ಯಾಜ್ಯ ಎಸೆದವರಿಗೆ ತಕ್ಕ ಶಾಸ್ತಿ!! Read More »

ಮುರ: 13 ತಿಂಗಳ ಮಗು ನಿಧನ

ಪುತ್ತೂರು: ಮೂಲತಃ ಮಂಜೇಶ್ವರದವರಾದ ಪುತ್ತೂರಿನ ಮುರದಲ್ಲಿ ವಾಸವಾಗಿದ್ದ ಹನೀಫ್ ಎಂಬವರ ಪುತ್ರಿ, 13 ತಿಂಗಳ ಮಗು ಆಯಿಷತ್ ಹಝಾ ಅನಾರೋಗ್ಯದಿಂದ ನಿಧನವಾಗಿದ್ದಾಳೆ. ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಗು, ಇದೀಗ ಚಿಕಿತ್ಸೆ ಫಲಕಾರಿಯಾಗದೇ ನಿಧನವಾಗಿದೆ. ಕಲ್ಲೇಗ ಖಾದರ್‌ ಅವರ ಹಿರಿಯ ಮಗಳ ಪುತ್ರಿಯಾಗಿರುವ ಆಯಿಷತ್‌ ಹಝಾ ತಂದೆ, ತಾಯಿಯನ್ನು ಅಗಲಿದ್ದಾರೆ.

ಮುರ: 13 ತಿಂಗಳ ಮಗು ನಿಧನ Read More »

ಮೌಲ್ಯಗಳನ್ನು ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ : ಚಿದಾನಂದ ಬೈಲಾಡಿ | ಅಂಬಿಕಾ ಕಾಲೇಜಿನ ಎನ್.ಎಸ್.ಎಸ್. ತಂಡದಿಂದ ನಗರದಲ್ಲಿ ಜಾಗೃತಿ ಅರಿವು

ಪುತ್ತೂರು: ನಾವಿಂದು ಚಂದ್ರಲೋಕಕ್ಕೂ ಅಡಿಯಿಡುವ ಯೋಗ್ಯತೆಯನ್ನು ಸಂಪಾದಿಸಿದ್ದೇವೆ. ಆದರೆ ಪಕ್ಕದ ಮನೆಗೆ ಹೋಗಲಾರದಷ್ಟು ಸಮಯಹೀನರಾಗಿದ್ದೇವೆ. ಮನುಷ್ಯನ ಮೌಲ್ಯಗಳು ಹಂತಹoತವಾಗಿ ಕುಸಿಯುತ್ತಿವೆ. ಆದ್ದರಿಂದ ನಿರ್ನಾಮವಾಗುತ್ತಿರುವ ಮೌಲ್ಯಗಳನ್ನು ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ. ನಮ್ಮ ಸುತ್ತಲಿನ ಪರಿಸರವನ್ನು ಚೆನ್ನಾಗಿ ರೂಪಿಸುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಹಿರಿಯ ನ್ಯಾಯವಾದಿ ಚಿದಾನಂದ ಬೈಲಾಡಿ ಹೇಳಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಆಯೋಜಿಸಲಾದ ಸ್ವಚ್ಚ ಭಾರತ – ಜಾಗೃತಿ ಅರಿವು ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ

ಮೌಲ್ಯಗಳನ್ನು ನಿರ್ಮಾಣ ಮಾಡುವ ಕಾರ್ಯ ಆಗಬೇಕಿದೆ : ಚಿದಾನಂದ ಬೈಲಾಡಿ | ಅಂಬಿಕಾ ಕಾಲೇಜಿನ ಎನ್.ಎಸ್.ಎಸ್. ತಂಡದಿಂದ ನಗರದಲ್ಲಿ ಜಾಗೃತಿ ಅರಿವು Read More »

error: Content is protected !!
Scroll to Top