ಅ. 6 – 7ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ | 204 ಕಂಪೆನಿಗಳು, ಸಾವಿರಾರು ಉದ್ಯೋಗ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ | ಪುತ್ತೂರು ಶಾಸಕರ ಕಚೇರಿಯಿಂದ ಉದ್ಯೋಗ ಮೇಳಕ್ಕೆ ಬಸ್ ಉಚಿತ ವ್ಯವಸ್ಥೆ ಹೀಗಿರಲಿದೆ…

ಪುತ್ತೂರು: ಅ.6 ಮತ್ತು 7ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ವಿದ್ಯಾವಂತ ಯುವಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಶಾಸಕರಾದ ಅಶೋಕ್ ರೈ ತಿಳಿಸಿದ್ದಾರೆ. ಉದ್ಯೋಗ ಮೇಳದಲ್ಲಿ 204ಕ್ಕೂ ಮಿಕ್ಕಿ ವಿವಿಧ ಕಂಪೆನಿಗಳು ಭಾಗವಹಿಸುತ್ತಿದ್ದು, ಮೇಳದಲ್ಲಿ ಭಾಗವಹಿಸುವ ಸಾವಿರಾರು‌ ಮಂದಿಗೆ ಉದ್ಯೋಗ ದೊರೆಯಲಿದೆ. ಗ್ರಾಮೀಣ ಭಾಗದ ನಿರುದ್ಯೋಗಿ ವಿದ್ಯಾವಂತ ಯುವಕರು ಇದರಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬಹುದು. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಡಿಗ್ರಿ ಕಾಲೇಜು, ಐಟಿಐ ತರಬೇತಿ ಕೇಂದ್ರಗಳು, ಡಿಪ್ಲೋಮಾ ಕೋರ್ಸು‌ಮಾಡಿದವರು, ಬಿಎ, ಬಿಕಾಂ, […]

ಅ. 6 – 7ರಂದು ಮೂಡಬಿದ್ರೆ ಆಳ್ವಾಸ್ ನಲ್ಲಿ ಬೃಹತ್ ಉದ್ಯೋಗ ಮೇಳ | 204 ಕಂಪೆನಿಗಳು, ಸಾವಿರಾರು ಉದ್ಯೋಗ, ಗ್ರಾಮೀಣ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ | ಪುತ್ತೂರು ಶಾಸಕರ ಕಚೇರಿಯಿಂದ ಉದ್ಯೋಗ ಮೇಳಕ್ಕೆ ಬಸ್ ಉಚಿತ ವ್ಯವಸ್ಥೆ ಹೀಗಿರಲಿದೆ… Read More »

ಸುಳ್ಯ ಬಿಜೆಪಿ ಮಂಡಲದಿಂದ ಕುಕ್ಕೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ | ಅಭಿಯಾನದ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಮಾತು ಇಲ್ಲಿದೆ

ಸುಬ್ರಹ್ಮಣ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮಂಡಲ ವತಿಯಿಂದ ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ಉದ್ಘಾಟನೆಗೊಂಡಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು, ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿಯ ಜನ್ಮ ದಿನಾಚರಣೆಯ ಈ ಶುಭದಿನದಂದು ನಾವು ಸು ಳ್ಯ ಬಿಜೆಪಿ ಮಂಡಲ ವತಿಯಿಂದ ವಿವಿಧ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ದರ್ಪಣ ತೀರ್ಥ ನದಿಯನ್ನು ಸ್ವಚ್ಛಗೊಳಿಸುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಮಹಾತ್ಮಾ

ಸುಳ್ಯ ಬಿಜೆಪಿ ಮಂಡಲದಿಂದ ಕುಕ್ಕೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ | ಅಭಿಯಾನದ ಬಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಮಾತು ಇಲ್ಲಿದೆ Read More »

ಬಿಳಿನೆಲೆ ಯುವಕ ಮಂಡಲದಿಂದ ಸ್ವಚ್ಚತಾ ಕಾರ್ಯ

ಬಿಳಿನೆಲೆ: ಬಿಳಿನೆಲೆ ಯುವಕ ಮಂಡಲದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ಸೋಮವಾರ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವಠಾರದಲ್ಲಿ ಹಾಗೂ ಗ್ರಾಮದ ಹಲವೆಡೆ ಸ್ವಚ್ಚತಾ ಆಂದೋಲನ ನಡೆಯಿತು. ಪ್ರತಿ ವರ್ಷದಂತೆ  ಈ ಬಾರಿಯು ಯುವಕ ಮಂಡಲದ ಸದಸ್ಯರು ಸ್ವಚ್ಛತಾ ಕಾರ್ಯಕ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಬಿಳಿನೆಲೆ ಯುವಕ ಮಂಡಲದಿಂದ ಸ್ವಚ್ಚತಾ ಕಾರ್ಯ Read More »

ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣ: 16 ಮಂದಿ ಬಂಧನ

ಕರಾಚಿ: ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳಲು ಗಲ್ಫ್ ರಾಜ್ಯಕ್ಕೆ ಪ್ರಯಾಣಿಸಲು ಪ್ರಯತ್ನಿಸಿದ್ದಕ್ಕಾಗಿ ಯಾತ್ರಿಕರ ವೇಷದಲ್ಲಿದ್ದ ಹದಿನಾರು ಪಾಕಿಸ್ತಾನಿ ಭಿಕ್ಷುಕರನ್ನು ಸೌದಿ ಅರೇಬಿಯಾ ವಿಮಾನದಿಂದ ಇಳಿಸಿ ಬಂಧಿಸಲಾಗಿದೆ ಎಂದು ಭಾನುವಾರ ಮಾಧ್ಯಮ ವರದಿಯೊಂದು ತಿಳಿಸಿದೆ. ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ ಎರಡು ದಿನಗಳ ಹಿಂದೆ ಪಂಜಾಬ್ ಪ್ರಾಂತ್ಯದ ಮುಲ್ತಾನ್‌ನಲ್ಲಿ ಸೌದಿ ವಿಮಾನದಿಂದ ಭಿಕ್ಷುಕರನ್ನು ಕೆಳಗಿಳಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ಎಫ್‌ಐಎ ಪ್ರಕಾರ, ಒಂದು ಮಗು, 11 ಮಹಿಳೆಯರು ಮತ್ತು ನಾಲ್ವರು ಪುರುಷರು ಸೇರಿದಂತೆ 16 ಜನರನ್ನು ಒಳಗೊಂಡ ಗುಂಪು ಉಮ್ರಾ

ಭಿಕ್ಷಾಟನೆಗಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣ: 16 ಮಂದಿ ಬಂಧನ Read More »

ಮೋದಿ ಗೆಲುವಿಗೆ ನಮೋ ಬ್ರಿಗೇಡ್ 2.0 ಪ್ರಚಾರ ರ್ಯಾಲಿ  | ಪುತ್ತೂರಿನಲ್ಲಿ ಸ್ವಾಗತ, ಮಹಾಲಿಂಗೇಶ್ವರ, ಲಕ್ಷ್ಮೀವೆಂಕಟರಮಣ ದೇವಳದಲ್ಲಿ ವಿಶೇಷ ಪ್ರಾರ್ಥನೆ | ಮೋದಿ 9 ವರ್ಷ ಆಡಳಿತಕ್ಕೆ ಫಲ ಸಿಗುವ ಸಮಯ: ಚಂದ್ರಶೇಖರ್

ಪುತ್ತೂರು: ಜನರಿಗೆ ಪ್ರಧಾನಿ ಮೋದಿ ಮಾಡಿದ ಒಳ್ಳೆಯ ಕೆಲಸಗಳ ಬಗ್ಗೆ, ದೇಶಕ್ಕೆ ಬರುವ ಆತಂಕದ ವಿಷಯಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮುಂಬವರು ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆಲುವಿಗೆ ’ನಮೋ ಬ್ರಿಗೇಡ್ 2.0 ಪ್ರಚಾರ ರ್ಯಾಲಿ ಪುತ್ತೂರಿಗೆ ಆಗಮಿಸಿದ ಹಿನ್ನಲೆಯಲ್ಲಿ ಅದ್ದೂರಿಯ ಸ್ವಾಗತ ಮಾಡಿ ಬೈಕ್ ರ್ಯಾಲಿಯ ಮೂಲಕ ಪುತ್ತೂರಿನಿಂದ ಮುಂದಿನ ತಾಲೂಕಿಗೆ ಬೀಳ್ಕೊಡಲಾಯಿತು. ಬೈಕ್ ರ್ಯಾಲಿಯನ್ನು ಪುತ್ತೂರಿನ ಕಾರ್ಯಕರ್ತರು ಸ್ವಾಗತಿಸಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಈ

ಮೋದಿ ಗೆಲುವಿಗೆ ನಮೋ ಬ್ರಿಗೇಡ್ 2.0 ಪ್ರಚಾರ ರ್ಯಾಲಿ  | ಪುತ್ತೂರಿನಲ್ಲಿ ಸ್ವಾಗತ, ಮಹಾಲಿಂಗೇಶ್ವರ, ಲಕ್ಷ್ಮೀವೆಂಕಟರಮಣ ದೇವಳದಲ್ಲಿ ವಿಶೇಷ ಪ್ರಾರ್ಥನೆ | ಮೋದಿ 9 ವರ್ಷ ಆಡಳಿತಕ್ಕೆ ಫಲ ಸಿಗುವ ಸಮಯ: ಚಂದ್ರಶೇಖರ್ Read More »

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅರ್ಥಪೂರ್ಣ ಗಾಂಧೀ ಜಯಂತಿ | ಗಾಂಧೀಜಿ ಜೀವನಾದರ್ಶ ಅನುಕರಣೀಯ : ಸವಣೂರು ಸೀತಾರಾಮ ರೈ | ಹೋರಾಟದಿಂದ ಪಡೆದ ಸ್ವಾತಂತ್ರ್ಯ ದುರುಪಯೋಗ ಆಗದಿರಲಿ: ಅಶ್ವಿನ್ ಎಲ್. ಶೆಟ್ಟಿ

ಸವಣೂರು: ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ 146ನೇ ಗಾಂಧೀ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಠಾರ ಸ್ವಚ್ಛತೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಮವನ್ನು ಗಾಂಧೀ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯ್ಯುವ ಮೂಲಕ ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಾವು ಇತಿಹಾಸವನ್ನು ನೆನಪಿಡಬೇಕಿದೆ. ಗಾಂಧೀಜಿಯವರು ಮಾಡಿದ ಸಾಧನೆ ಅತಿ ವಿಶೇಷವಾದದ್ದು ಮತ್ತು ಅವರ ಜೀವನಾದರ್ಶಗಳನ್ನು ನಾವು ಅನುಸರಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಶಿಕ್ಷಕಿ ಪರಿಮಳಾ ಎನ್.ಎಂ. ಅವರನ್ನು

ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ ಅರ್ಥಪೂರ್ಣ ಗಾಂಧೀ ಜಯಂತಿ | ಗಾಂಧೀಜಿ ಜೀವನಾದರ್ಶ ಅನುಕರಣೀಯ : ಸವಣೂರು ಸೀತಾರಾಮ ರೈ | ಹೋರಾಟದಿಂದ ಪಡೆದ ಸ್ವಾತಂತ್ರ್ಯ ದುರುಪಯೋಗ ಆಗದಿರಲಿ: ಅಶ್ವಿನ್ ಎಲ್. ಶೆಟ್ಟಿ Read More »

ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಹೆಜ್ಜೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ | ಗಾಂಧೀಕಟ್ಟೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಗಾಂಧಿಕಟ್ಟೆ ಸಮಿತಿ, ರೋಟರಿ ಕ್ಲಬ್ ಸಂಸ್ಥೆಗಳು ಹಾಗೂ ಜೆಸಿಐ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಜಯಂತಿ ಆಚರಣೆ ಬಸ್ ನಿಲ್ದಾಣದ ಬಳಿ ಇರುವ ಗಾಂಧಿಕಟ್ಟೆಯಲ್ಲಿ ಸೋಮವಾರ ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಗಾಂಧೀ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ತೋರಿಕೆಯಿಂದ ಸ್ವಚ್ಛತೆ ಸಾಧ್ಯವಿಲ್ಲ. ಕೇವಲ ಭಾಷಣಕ್ಕೆ ಮಾತ್ರ ಸ್ವಚ್ಛತೆ ಸೀಮಿತವಾಗಿರದೆ ಮನಸ್ಸಿನಲ್ಲಿ ಬಾದಲಾವಣೆ ತಂದರೆ ದೇಶದ ಸ್ವಚ್ಛತೆ ಸಾಧ್ಯ ಎಂದ ಅವರು, ಹಲವಾರು ಚಳವಳಿ ಮೂಲಕ ಬ್ರಿಟಿಷರನ್ನು

ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿ ಹೆಜ್ಜೆಗಳು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ | ಗಾಂಧೀಕಟ್ಟೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯಲ್ಲಿ ಶಾಸಕ ಅಶೋಕ್ ರೈ Read More »

ಈದ್ ಮಿಲಾದ್ ಮೆರವಣಿಗೆಯಲ್ಲಿ ಕಲ್ಲು ತೂರಾಟ: ಶಿವಮೊಗ್ಗದಲ್ಲಿ ಸೆಕ್ಷನ್ 144

ಶಿವಮೊಗ್ಗ: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಜನರು ಗುಂಪು ಸೇರುವುದು, ಪ್ರತಿಭಟನೆ, ಮೆರವಣಿಗೆ ಮಾಡುವುದು, ಭಾಷಣ ಮಾಡುವುದು, ಫ್ಲೆಕ್ಸ್, ಬಂಟಿಂಗ್ಸ್ ಬ್ಯಾನರ್ ಕಟ್ಟುವುದು, ಮಾರಕಾಸ್ತ್ರ, ಸ್ಫೋಟಕಗಳ ಬಳಕೆ ನಿರ್ಬಂಧಿಸಲಾಗಿದೆ. ಭಾನುವಾರ ರಾತ್ರಿ ಶಾಂತಿ ನಗರ ರಾಗಿಗುಡ್ಡ ವಾರ್ಡ್ ಗೆ ಸೀಮಿತವಾಗಿ ಸೆಕ್ಷನ್ 144 ಹಾಕಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಶಿವಮೊಗ್ಗ ನಗರಕ್ಕೆ ವಿಸ್ತರಿಸಲಾಗಿದೆ. ಮುಂದಿನ ಆದೇಶದವರೆಗೂ

ಈದ್ ಮಿಲಾದ್ ಮೆರವಣಿಗೆಯಲ್ಲಿ ಕಲ್ಲು ತೂರಾಟ: ಶಿವಮೊಗ್ಗದಲ್ಲಿ ಸೆಕ್ಷನ್ 144 Read More »

ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ರಿಗೆ ಕಸಾಪದಿಂದ ಗೌರವ

ಪುತ್ತೂರು: ಪುಸ್ತಕದ ಹಬ್ಬ ಪುಸ್ತಕ ದಾನಿಗಳ ಸಮಾವೇಶ ಹಾಗೂ ಉಪ್ಪಿನಂಗಡಿ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ಅವರನ್ನು ಅವರ ಮನೆಗೆ ತೆರಳಿ ಗೌರವಾರ್ಪಣೆ ಮಾಡಲಾಯಿತು. ಕಸಾಪ ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ನಾವು ನೀಡಿದ ಸನ್ಮಾನವನ್ನು ಶ್ರೀ ಧರ್ಮಸ್ಥಳ ಮಂಜುನಾಥನ ಪ್ರಸಾದವೆಂದು ಸ್ವೀಕರಿಸಿದ ಭಾವಪೂರ್ಣ ಘಟನೆಗೆ ನಾವೆಲ್ಲ ಸಾಕ್ಷಿಯಾಗಿ ಧನ್ಯತಾ ಭಾವವನ್ನು ಇಂದು ಕಂಡಿದ್ದೇವೆ. ವೆಂಕಟರಮಣ ಭಟ್ ಅವರು ಮಾನಸಿಕ, ದೈಹಿಕವಾಗಿ ಆರೋಗ್ಯವಂತರಾಗಿದ್ದಾರೆ.

ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ರಿಗೆ ಕಸಾಪದಿಂದ ಗೌರವ Read More »

ಮಹೇಶ್ ಬಸ್ ಮಾಲಕ ಆತ್ಮಹತ್ಯೆಗೆ ಶರಣು!!

ಮಂಗಳೂರು : ಮಂಗಳೂರಿನ ಖಾಸಗಿ ಬಸ್ ನ ಮಾಲೀಕರೊಬ್ಬರು ತಾವು ಇರುವ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮಹೇಶ್ ಬಸ್ ಮಾಲೀಕ ಪ್ರಕಾಶ್ (40) ಎಂದು ಗುರುತಿಸಲಾಗಿದೆ. ಅವರು ಕದ್ರಿ ಕಂಬಳ ಸಮೀಪ ಇರುವ ಅಪಾರ್ಟ್ ಮೆಂಟ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಹೇಶ್ ಹೆಸರಿನಲ್ಲಿ ಹಲವಾರು ಸಿಟಿ ಬಸ್ ಗಳು ದಿನನಿತ್ಯ ಸಂಚರಿಸುತ್ತಿದ್ದು, ಜನಮನ್ನಣೆ ಪಡೆದಿದೆ. ಕದ್ರಿ ಪೊಲೀಸ್

ಮಹೇಶ್ ಬಸ್ ಮಾಲಕ ಆತ್ಮಹತ್ಯೆಗೆ ಶರಣು!! Read More »

error: Content is protected !!
Scroll to Top