5 ವರ್ಷಗಳಿಂದ  ತಲೆಮರೆಸಿಕೊಂಡಿದ್ದ 6 ಆರೋಪಿಗಳು ಸೆರೆ!

ಬಂಟ್ವಾಳ: ಫರಂಗಿಪೇಟೆಯಲ್ಲಿ ಅಕ್ರಮ ಮರಳು ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಉತ್ತರಪ್ರದೇಶ ಮೂಲದ ಒಟ್ಟು ಆರು ಮಂದಿ ಆರೋಪಿಗಳನ್ನು ಬಂಟ್ವಾಳ ‌ಗ್ರಾಮಾಂತರ ಪೋಲೀಸರ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಉತ್ತರ ಪ್ರದೇಶ ಮೂಲದ ಬಬುಲು ಸಹಾನಿ, ರಾಮ್ ಗೋವಿಂದ ಸಹಾನಿ, ಅಮಿತ್ ಕುಮಾರ್, ಸತ್ಯೇಂದ್ರ ಸಹಾನಿ, ಸೈದಾನ್ ಸಹಾನಿ, ಅಭಯ್ ನಾರಾಯಣ್ ಬಂಧಿತರು. ಫರಂಗಿಪೇಟೆಯಲ್ಲಿ ಅಕ್ರಮ ಮರಳು ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮೂಲದ ಆರು ಮಂದಿಯ ಮೇಲೆ ಬಂಟ್ವಾಳ ಗ್ರಾಮಾಂತರ […]

5 ವರ್ಷಗಳಿಂದ  ತಲೆಮರೆಸಿಕೊಂಡಿದ್ದ 6 ಆರೋಪಿಗಳು ಸೆರೆ! Read More »

ಮಂಗಳಾದೇವಿ ಅಂಗಳಕ್ಕೆ ಜಿಲ್ಲಾಡಳಿತ: ವಿಹಿಂಪ ಎಚ್ಚರಿಕೆ!

ಮಂಗಳೂರು: ಇತಿಹಾಸ ಪ್ರಸಿದ್ಧ ಮಂಗಳೂರು ಮಂಗಳಾದೇವಿ ದೇವಸ್ಥಾನದ ನವರಾತ್ರಿ ಸಂದರ್ಭ ಮಳಿಗೆಗಳಿಗೆ ಬಹಿರಂಗ ಹರಾಜು ಹಾಕುವಂತೆ ದೇವಸ್ಥಾನದ ಆಡಳಿತ ಮಂಡಳಿಗೆ ಜಿಲ್ಲಾಡಳಿತ ಸೂಚಿಸಿದೆ. ಇದು ಹೊಸ ವಿವಾದಕ್ಕೆ ದಾರಿ ಮಾಡಿಕೊಡಲಿದ್ದು, ಮುಂದೆ ಆಗುವ ಅನಾಹುತಕ್ಕೆ ಜಿಲ್ಲಾಡಳಿತವೇ ಹೊಣೆ ಎಂದು ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ ನೀಡಿದೆ. ನವರಾತ್ರಿ ಉತ್ಸವ ಸಂದರ್ಭ ಮಂಗಳಾದೇವಿ ದೇವಸ್ಥಾನದ ಎದುರು ರಸ್ತೆಯ ಎರಡೂ ಬದಿಯಲ್ಲಿ ಮಳಿಗೆಗಳನ್ನು ಹಾಕಲು ಅವಕಾಶ ಕಲ್ಪಿಸಲಾಗುತ್ತದೆ. ಇದೇ ಪ್ರಕಾರ ಈ ಬಾರಿ, ದೇವಸ್ಥಾನ ಆಡಳಿತ ಮಂಡಳಿ ಏಲಂ ಪ್ರಕ್ರಿಯೆ

ಮಂಗಳಾದೇವಿ ಅಂಗಳಕ್ಕೆ ಜಿಲ್ಲಾಡಳಿತ: ವಿಹಿಂಪ ಎಚ್ಚರಿಕೆ! Read More »

ಅ. 16: ಪುತ್ತೂರು ರೆಡ್ ಕ್ರಾಸ್ ಘಟಕದಿಂದ ಡಯಾಲಿಸಿಸ್ ಯಂತ್ರ ಹಸ್ತಾಂತರ

ಪುತ್ತೂರು : ರಾಷ್ಟ್ರೀಯ ಆರೋಗ್ಯ ಮಿಷನ್ ಅಡಿಯಲ್ಲಿ ಪುತ್ತೂರು ರೆಡ್ ಕ್ರಾಸ್ ವತಿಯಿಂದ ಪುತ್ತೂರು ಸರಕಾರಿ ಆತ್ರೆಯಲ್ಲಿ ಕಾರ್ಯಾಚರಿಸುತ್ತಿರುವ ಡಯಾಲಿಸಿಸ್ ಘಟಕಕ್ಕೆ 7.5 ಲಕ್ಷ ರೂ. ವೆಚ್ಚದಲ್ಲಿ ಡಯಾಲಿಸಿಸ್ ಯಂತ್ರವೊಂದನ್ನು ನೀಡಲಾಗಿದ್ದು, ಹಸ್ತಾಂತರ ಕಾರ್ಯಕ್ರಮ ಅ. 16ರಂದು ನಡೆಯಲಿದೆ ಎಂದು ಪುತ್ತೂರು ರೆಡ್ ಕ್ರಾಸ್ ಸಭಾಪತಿ ಎಸ್. ಸಂತೋಷ್ ಶೆಟ್ಟಿ ತಿಳಿಸಿದ್ದಾರೆ. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಸರಕಾರಿ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗಕ್ಕೆ 1 ಲಕ್ಷ ರೂ. ವೆಚ್ಚದ ಮಲ್ಟಿ ಪ್ಯಾರಾ ಮಾನಿಟರ್ ಕೊಡುಗೆ

ಅ. 16: ಪುತ್ತೂರು ರೆಡ್ ಕ್ರಾಸ್ ಘಟಕದಿಂದ ಡಯಾಲಿಸಿಸ್ ಯಂತ್ರ ಹಸ್ತಾಂತರ Read More »

ನಂದಿನಿ ಹಾಲು ವಿತರಕ ಉದಯ ನಿಧನ

ಪುತ್ತೂರು: ನಂದಿನಿ ಹಾಲು ವಿತರಕ, ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ವ್ಯಾಪಾರ ಮಳಿಗೆಯ ಸಿಬ್ಬಂದಿ ಉದಯ (51 ವ.) ಎಂಬವರು ಅ. 13ರಂದು ರಾತ್ರಿ ನಿಧನರಾದರು. ಕೊಡಿಪ್ಪಾಡಿಯಲ್ಲಿ ವಾಸ್ತವ್ಯ ಹೊಂದಿರುವ ಉದಯ ಅವರು ಮೂಲತಃ ಅಡೂರಿನವರು. ಪುತ್ತೂರು ಜೇನು ವ್ಯವಸಾಯ ಸಹಕಾರ ಸಂಘದ ಕಟ್ಟಡದ ಪಕ್ಕದಲ್ಲಿ ನಂದಿನಿ ಹಾಲು ವಿತರಣೆ ಅಂಗಡಿ ಹೊಂದಿದ್ದರು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್’ಗೆ ಬಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ನಿಧನರಾದರು.

ನಂದಿನಿ ಹಾಲು ವಿತರಕ ಉದಯ ನಿಧನ Read More »

14-10-2023ರ ಕೃಷಿ ಮಾರುಕಟ್ಟೆ ಧಾರಣೆ

ಪುತ್ತೂರು: ಶನಿವಾರ ಮಾರುಕಟ್ಟೆ ಧಾರಣೆಯಲ್ಲಿ ಅಡಿಕೆ ಯಥಾಪ್ರಕಾರ ಇಳಿಕೆ, ರಬ್ಬರ್ ಸಣ್ಣ ಮಟ್ಟಿನ ಏರಿಕೆ ದಾಖಲಿಸಿದೆ. ಇದರ ನಡುವೆ ಕೊಬ್ಬರಿ ಧಾರಣೆ 10 ರೂ. ಏರಿಕೆ ಕಂಡಿದ್ದು, ರೈತರ ನಗುವಿಗೆ ಕಾರಣವಾಗಿದೆ. ಹೊಸಅಡಿಕೆ 325- 365 ರೂ., ಹಳೆ ಅಡಿಕೆ 380 -420 ರೂ. ಹಾಗೂ 420-425 ರೂ.ನಲ್ಲಿದೆ (ಗುಣಮಟ್ಟ). ಡಬ್ಬಲ್ ಚೋಲ್ 390 – 462 ರೂ. ಹಾಗೂ 463- 485 ರೂ. (ಗುಣಮಟ್ಟ)ನಲ್ಲಿದೆ. ಶುಕ್ರವಾರ ಹೊಸಅಡಿಕೆ 325- 365 ರೂ., ಹಳೆ ಅಡಿಕೆ 380

14-10-2023ರ ಕೃಷಿ ಮಾರುಕಟ್ಟೆ ಧಾರಣೆ Read More »

ಅಡಕೆ ಸಾಗಾಟದ ಪಿಕಪ್ ಪಲ್ಟಿ

ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿ ಅಡಕೆ ಸಾಗಾಟದ ಪಿಕಪ್ ಪಲ್ಟಿಯಾದ ಘಟನೆ ಕೋಡಿಂಬಾಡಿಯಲ್ಲಿ ನಡೆದಿದೆ. ಅಡಿಕೆ ಅನ್ಲೋಡ್ ಮಾಡಿ ಸಾಗರದಿಂದ ವಾಪಾಸ್ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅಡಕೆ ಸಾಗಾಟದ ಪಿಕಪ್ ಪಲ್ಟಿ Read More »

235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಭಾರತಕ್ಕೆ ಆಗಮನ

ನವದೆಹಲಿ: ‘ಆಪರೇಷನ್ ಅಜಯ್’ ಭಾಗವಾಗಿ ಆಯೋಜಿಸಲಾಗಿದ್ದ ವಿಶೇಷ ವಿಮಾನದಲ್ಲಿ ಭಾರತೀಯರ ಎರಡನೇ ತಂಡ ಇಂದು ಮುಂಜಾನೆ ಯುದ್ಧ ಪೀಡಿತ ಇಸ್ರೇಲ್‌ನಿಂದ ಸುರಕ್ಷಿತವಾಗಿ ಮನೆಗೆ ಮರಳಿದರು. ಎರಡು ಶಿಶುಗಳು ಸೇರಿದಂತೆ 235 ಭಾರತೀಯರನ್ನು ಹೊತ್ತ ವಿಮಾನ ಶನಿವಾರ ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್‌ ಇಸ್ರೇಲ್ ಮೇಲೆ ದಾಳಿ ನಡೆಸಿದ ಬಳಿಕ ಆರಂಭವಾದ ಯುದ್ದದ ಬಳಿಕ ಇಸ್ರೇಲ್ ನಲ್ಲಿ ಸಾವಿರಾರು ಭಾರತೀಯರು ಸಿಲುಕಿಕೊಂಡಿದ್ದರು ಆ ಬಳಿಕ ಭಾರತ ತಮ್ಮ ದೇಶದ

235 ಭಾರತೀಯರನ್ನು ಹೊತ್ತ ಎರಡನೇ ವಿಮಾನ ಭಾರತಕ್ಕೆ ಆಗಮನ Read More »

ಸಂಟ್ಯಾರು ಅಂಗನವಾಡಿ ಪರಿಸರದಲ್ಲಿ ಸ್ವಚ್ಛತೆ

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರು ಅಂಗನವಾಡಿ ಪರಿಸರದಲ್ಲಿ ಶುಕ್ರವಾರ ಸ್ವಚ್ಚತೆ ನಡೆಸಲಾಯಿತು. ಸ್ವಚ್ಛತಾ ಹೀ ಸೇವಾ ಹಾಗೂ ತ್ಯಾಜ್ಯಮುಕ್ತ ಆಂದೋಲನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಆರ್ಯಾಪು ಗ್ರಾಮ ಪಂಚಾಯಿತಿ 4 ವಾರ್ಡಿನ ಸದಸ್ಯರಾದ ಹರೀಶ್ ನಾಯಕ್ ಬಳಕ್ಕ, ಯತೀಶ್ ದೇವ ಸಂಟ್ಯಾರು, ಕಾರ್ಯದರ್ಶಿ ಮೋನಪ್ಪ, ಹೊನ್ನಪ್ಪ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಅಂಗನವಾಡಿ ಮಕ್ಕಳ ಪೋಷಕರು ಹಾಗೂ ಸ್ತ್ರೀಶಕ್ತಿ ಸಂಘಟನೆ, ಬಾಲವಿಕಾಸ ಸಮಿತಿ , ಸಾರ್ವಜನಿಕರು ಉಪಸ್ಥಿತರಿದ್ದರು.

ಸಂಟ್ಯಾರು ಅಂಗನವಾಡಿ ಪರಿಸರದಲ್ಲಿ ಸ್ವಚ್ಛತೆ Read More »

ಜಮಾಅತೆ ಇಸ್ಲಾಮೀ ಹಿಂದ್’ನಿಂದ ವಿಚಾರ ವಿನಿಮಯ

ಪುತ್ತೂರು: ಪ್ರತಿ ವರ್ಷ ಪ್ರವಾದಿ ಮಹಮ್ಮದ್ ಪೈಗಂಬರ್ (ಸ.ಅ.) ಅವರ ಜನ್ಮ ಮಾಸದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಸೀರತ್ ಅಭಿಯಾನ ನಡೆಸಲಾಗುತ್ತಿದ್ದು, ನ. 17ರಂದು ಸಮಾರೋಪ ಸಮಾರಂಭ ಪುತ್ತೂರು ಪುರಭವನದಲ್ಲಿ ನಡೆಯಲಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಉಪ ಸಂಚಾಲಕ ಅಮೀನ್ ಹಸನ್ ತಿಳಿಸಿದ್ದಾರೆ. ಅಭಿಯಾನದ ಅಂಗವಾಗಿ ಗುರುವಾರ ಸಂಘಟನೆ ವತಿಯಿಂದ ಪುತ್ತೂರಿನಲ್ಲಿ ಪತ್ರಕರ್ತರ ಜತೆಗಿನ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.‘ಸಮಾನತೆಯ ಸಮಾಜ ಶಿಲ್ಪಿ ಅಭಿಯಾನ’ ಎಂಬ ಹೆಸರಿನಲ್ಲಿ ಅಭಿಯಾನ ನಡೆಯುತ್ತಿದ್ದು,

ಜಮಾಅತೆ ಇಸ್ಲಾಮೀ ಹಿಂದ್’ನಿಂದ ವಿಚಾರ ವಿನಿಮಯ Read More »

ಕಡಬ-ಅಲಂಕಾರು- ಶಾಂತಿಮೊಗರಿಗೆ ಹೆಚ್ಚುವರಿ ಬಸ್ ಸೌಲಭ್ಯ

ಪುತ್ತೂರು: ಕಡಬದಿಂದ ಆಲಂಕಾರು ಮಾರ್ಗವಾಗಿ ಶಾಂತಿಮೊಗರಿಗೆ ಬಸ್ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು  ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು ಈ ಕುರಿತು ವಿದ್ಯಾರ್ಥಿಗಳ ತಂಡವೊಂದು ಪುತ್ತೂರು ಶಾಸಕರಿಗೆ ಮನವಿ ಮಾಡಿ ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದೆ. ವಿದ್ಯಾರ್ಥಿಗಳ ಸಂಕಷ್ಟವನ್ನು ಮನಗಂಡ ಪುತ್ತೂರು ಶಾಸಕ ಅಶೋಕ್ ರೈ, ಈ ಮಾರ್ಗವಾಗಿ ಹೆಚ್ಚುವರಿ ಬಸ್ ಓಡಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದರು. ಶಾಸಕರ ಸೂಚನೆಯಂತೆ ಕಡಬ-ಅಲಂಕಾರು ಮಾರ್ಗವಾಗಿ ಶಾಂತಿಮೊಗರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಾದ ಝೈನುದ್ದೀನ್ ಅಲಂಕಾರು, ಹರಿಶ್ಚಂದ್ರ

ಕಡಬ-ಅಲಂಕಾರು- ಶಾಂತಿಮೊಗರಿಗೆ ಹೆಚ್ಚುವರಿ ಬಸ್ ಸೌಲಭ್ಯ Read More »

error: Content is protected !!
Scroll to Top