‘ನಮ್ಮ ದೇಶ ನಮ್ಮ ಮಣ್ಣು’ ಕಾರ್ಯಕ್ರಮದ ಮಣ್ಣು ಹಸ್ತಾಂತರಕ್ಕೆ ಚಾಲನೆ | ದೆಹಲಿಗೆ ತೆರಳಲಿದ್ದಾರೆ ಐದು ವಿದ್ಯಾರ್ಥಿಗಳು

ಪುತ್ತೂರು: ದೇಶಕ್ಕೆ ಸ್ವಾತಂತ್ರ್ಯೋತ್ಸವ ಸಿಕ್ಕಿ 75 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಹಮ್ಮಿಕೊಳ್ಳಲಾದ ‘ನಮ್ಮ ಮಣ್ಣು ನಮ್ಮ ದೇಶ” ಅಭಿಯಾನದಂಗವಾಗಿ ಪುತ್ತೂರಿನಲ್ಲಿ ಸಂಗ್ರಹಿಸಲಾದ ಮಣ್ಣನ್ನು ಶುಕ್ರವಾರ ಪುತ್ತೂರು ತಾಲೂಕು ಆಡಳಿತ ಸೌಧದ ಬಳಿ ಎನ್.ಎಸ್.ಎಸ್. ಘಟಕಕ್ಕೆ ಹಸ್ತಾಂತರಿಸಲಾಯಿತು. ಎನ್.ಎಸ್.ಎಸ್. ಘಟಕದ ಐವರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ಅವರು ಈ ಮಣ್ಣನ್ನು ದೆಹಲಿಗೆ ತಲುಪಿಸಲಿದ್ದಾರೆ. ಸಂತ ಫಿಲೋಮಿನಾ ಕಾಲೇಜಿನ ಎನ್.ಎಸ್.ಎಸ್. ಘಟಕದ ವಿದ್ಯಾರ್ಥಿ ಮಣ್ಣು ಸ್ವೀಕರಿಸಿದರು. ಮಣ್ಣನ್ನು ಹಸ್ತಾಂತರಿಸಿ ಮಾತನಾಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್, ನಾವು ಸ್ವಾತಂತ್ರ್ಯೋತ್ಸವದ […]

‘ನಮ್ಮ ದೇಶ ನಮ್ಮ ಮಣ್ಣು’ ಕಾರ್ಯಕ್ರಮದ ಮಣ್ಣು ಹಸ್ತಾಂತರಕ್ಕೆ ಚಾಲನೆ | ದೆಹಲಿಗೆ ತೆರಳಲಿದ್ದಾರೆ ಐದು ವಿದ್ಯಾರ್ಥಿಗಳು Read More »

ನ. 3: ರೈಲು ಖಾಸಗಿಕರಣದ ವಿರುದ್ಧ ಜೆಸಿಟಿಯು ಹೋರಾಟ

ಪುತ್ತೂರು: ರೈಲು ಖಾಸಗೀಕರಣದ ವಿರುದ್ದ ಅಖಿಲ ಭಾರತ ಜಂಟಿ ಕಿಸಾನ್ ಮೋರ್ಚಾ, ಸಿಐಟಿಯು, ಜೆಸಿಟಿಯು ವತಿಯಿಂದ ನ. 3ರಂದು ಪುತ್ತೂರು ರೈಲು ನಿಲ್ದಾಣ ಎದುರು ಪ್ರತಿಭಟನೆ ನಡೆಯಲಿದೆ. ಕೇಂದ್ರದ ನರೇಂದ್ರ ಮೋದಿ ಸರಕಾರ ಮಾಡಲುದ್ದೇಶಿಸಿದ ರೈಲು ಖಾಸಗೀಕರಣವನ್ನು ತಡೆಯವುದು ಭಾರತೀಯರಾದ ನಮ್ಮೆಲ್ಲರ ಪ್ರಥಮ ಕರ್ತವ್ಯ ಎಂದು ಸಿಐಟಿಯು ರಾಜ್ಯ ಸಮಿತಿ ಸದಸ್ಯ ಬಿ.ಎಂ. ಭಟ್ ಹೇಳಿದ್ದಾರೆ. ವಂದೇ ಮಾತರಂ ಅತಿ ವೇಗದ ರೈಲು ಈಗ ತಿರುವನಂತಪುರದಿಂದ ಕಾಸರಗೋಡು ತನಕ ಸಂಚರಿಸುತ್ತಿದೆ ಇದನ್ನು ಮುಂದುವರಿಸಿ ಮಂಗಳೂರು ತನಕ ವಿಸ್ತರಿಸಬೇಕು.

ನ. 3: ರೈಲು ಖಾಸಗಿಕರಣದ ವಿರುದ್ಧ ಜೆಸಿಟಿಯು ಹೋರಾಟ Read More »

ಬಡವರ ಬಾಳಿಗೆ ಅದೃಷ್ಟದ ಬೆಳಕು  ಧ್ಯೇಯ ವಾಕ್ಯದ ‘ಆದರ್ಶ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್’

ಸಂಪ್ಯ: ತಾಲೂಕಿನ ಆರ್ಯಾಪು ಗ್ರಾಮದ ಸಂಪ್ಯದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ನೂತನ ಇಲೆಕ್ಟ್ರೋನಿಕ್ಸ್ ಹಾಗೂ ಗೃಹೋಪಕರಣ ಮಾರಾಟ ಮಳಿಗೆ “ಆದರ್ಶ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್”ನಲ್ಲಿ ಸೀಸನ್-3 ರ ಪ್ರಥಮ ಕಂತಿನ ಡ್ರಾ ಅ.31 ರಂದು ನಡೆಯಲಿದೆ. ಬಡವರ ಬಾಳಿಗೆ ಅದೃಷ್ಟದ ಬೆಳಕು ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಈ ಮಳಿಗೆ ಆದರ್ಶ ಟೈಲ್ಸ್ ಆಂಡ್ ಗ್ರಾನೈಟ್ಸ್ ವಿಭಾಗವನ್ನೂ ಹೊಂದಿದೆ. ಇಲ್ಲಿಯ ಸ್ಕೀಂಗೆ ಸದಸ್ಯರಾದವರು 15 ದಿನಕ್ಕೊಮ್ಮೆ 500 ರೂ. ಪಾವತಿಸಿದರಾಯಿತು. ಪ್ರತೀ ತಿಂಗಳ 15ನೇ ಹಾಗೂ 30ನೇ ದಿನಾಂಕದಂದು

ಬಡವರ ಬಾಳಿಗೆ ಅದೃಷ್ಟದ ಬೆಳಕು  ಧ್ಯೇಯ ವಾಕ್ಯದ ‘ಆದರ್ಶ ಇಲೆಕ್ಟ್ರಾನಿಕ್ಸ್ ಆಂಡ್ ಫರ್ನಿಚರ್’ Read More »

ಗಾಂಜಾ ಸೇವನೆ: ಐವರ ಬಂಧನ

ಬಜ್ಪೆ: ಬಜ್ಪೆ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಪೋರ್ಕೊಡಿ ನಿವಾಸಿ ಮುಹಮ್ಮದ್ ಮುನಾಝ್, ಕಸಬಾ ಬೆಂಗ್ರೆಯ ನಿವಾಸಿ ಮುಹಮ್ಮದ್ ಅಫ್ರಾರ್, ಬಡಗುಳಿಪಾಡಿ ಗ್ರಾಮದ ನಿವಾಸಿ ರಾಹಿಲ್ ಮೊಯ್ದಿನ್ ಶರೀಫ್, ಮೂಡುಪೆರಾರ ಗ್ರಾಮದ ಗುರುಕಂಬಳದ ನಿವಾಸಿ ಮುಲ್ಲಾ ಅಬ್ದುಲ್ ಅಮನ್ ಮತ್ತು ಕಂದಾವರ ಗ್ರಾಮದ ಅಮಾನುಲ್ಲಾ ಕಂಪೌಂಡ್ ನಿವಾಸಿ ಮುಹಮ್ಮದ್ ಶಾಹಿನ್ ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತರ ಪೈಕಿ ಮುನಾಝ್ ಮತ್ತು ಮುಹಮ್ಮದ್ ಅಫ್ರಾರ್ ಕಂಜಾರು

ಗಾಂಜಾ ಸೇವನೆ: ಐವರ ಬಂಧನ Read More »

89ನೇ ಪುತ್ತೂರು ಶಾರದೋತ್ಸವದ ಶೋಭಾಯಾತ್ರೆಗೆ 80 ಭಜನಾ ತಂಡಗಳ ಮೆರುಗು

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಅ.15 ರಿಂದ 24ರ ತನಕ ನಡೆಯುವ 89ನೇ ವರ್ಷದ “ಪುತ್ತೂರು ಶಾರದೋತ್ಸವ” ಈ ಬಾರಿ ಅತ್ಯಂತ ವೈಭವದಿಂದ ನಡೆಯಲಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ ಎಂದು ಶೋಭಾಯಾತ್ರೆ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಉತ್ಸವದ ವಿವರ ನೀಡಿದ ಅವರು, 9 ದಿನಗಳು ಶಾರದೋತ್ಸವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಅ. 24ರಂದು ವೈಭವದ ಶೋಭಾಯಾತ್ರೆಗೆ ಬೊಳುವಾರು

89ನೇ ಪುತ್ತೂರು ಶಾರದೋತ್ಸವದ ಶೋಭಾಯಾತ್ರೆಗೆ 80 ಭಜನಾ ತಂಡಗಳ ಮೆರುಗು Read More »

ರಾಷ್ಟ್ರಮಟ್ಟದ ಇನ್‍ಸ್ಪೆಯರ್ ಅವಾರ್ಡ್ ಮನಕ್ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಭು ಭಾಗಿ

ಪುತ್ತೂರು: ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅ.9 ರಿಂದ 11ರ ವರೆಗೆ ನವದೆಹಲಿಯಲ್ಲಿ ನಡೆಸಿದ 2021-22ನೇ ಸಾಲಿನ ಇನ್‍ಸ್ಪೆಯರ್ ಅವಾರ್ಡ್ ಮನಕ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಭು ಭಾಗವಹಿಸಿ, ತಮ್ಮ “Medicinal wax from Kokum seeds” (Ko-Wax) ವಿಜ್ಞಾನ ಯೋಜನೆಯನ್ನು ಪ್ರಸ್ತುತಪಡಿಸಿದ್ದಾರೆ. ಪೃಥ್ವಿರಾಜ್ ಪ್ರಭು ಮುಕ್ರಂಪಾಡಿ ನಿವಾಸಿ ಪುಂಡಲೀಕ ಪ್ರಭು ಹಾಗೂ ನಾಗಮಣಿ ಪ್ರಭು ದಂಪತಿ ಪುತ್ರ. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವಾಗ ವಿಜ್ಞಾನ ಯೋಜನೆಯನ್ನು ತಯಾರಿಸಿ, ಜಿಲ್ಲಾ

ರಾಷ್ಟ್ರಮಟ್ಟದ ಇನ್‍ಸ್ಪೆಯರ್ ಅವಾರ್ಡ್ ಮನಕ್ ಸ್ಪರ್ಧೆಯಲ್ಲಿ ಪೃಥ್ವಿರಾಜ್ ಪ್ರಭು ಭಾಗಿ Read More »

ಆಪರೇಷನ್‌ ಅಜಯ್‌: ಇಸ್ರೇಲ್’ನಿಂದ ಆಗಮಿಸಿದ ಮೊದಲ ವಿಮಾನ

ಹೊಸದಿಲ್ಲಿ: ಭೀಕರ ಸಮರ ನಡೆಯುತ್ತಿರುವ ಇಸ್ರೇಲ್‌ನಲ್ಲಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಕೇಂದ್ರ ಸರಕಾರ ಪ್ರಾರಂಭಿಸಿದ ಆಪರೇಷನ್‌ ಅಜಯ್‌ ಕಾರ್ಯಾಚರಣೆಯ ಮೊದಲ ವಿಮಾನ ಶುಕ್ರವಾರ ಬೆಳಗ್ಗೆ ದಿಲ್ಲಿಯಲ್ಲಿ ಬಂದಿಳಿದಿದೆ. 212 ಭಾರತೀಯರು ಈ ವಿಮಾನದಲ್ಲಿ ಬಂದಿದ್ದಾರೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಇಸ್ರೇಲ್‌ನಿಂದ ಆಗಮಿಸಿದ ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ಆಪರೇಷನ್ ಅಜಯ್ ಅಡಿಯಲ್ಲಿ ಇಸ್ರೇಲ್‌ನಿಂದ ಹಿಂತಿರುಗಲು ಬಯಸುವ ಭಾರತೀಯ ನಾಗರಿಕರಿಗೆ ಮರಳಲು ಅನುಕೂಲವಾಗುವಂತೆ ವಿಮಾನವು ಗುರುವಾರ ಸಂಜೆ ಟೆಲ್ ಅವಿವ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣದಿಂದ ಹೊರಟಿತ್ತು.

ಆಪರೇಷನ್‌ ಅಜಯ್‌: ಇಸ್ರೇಲ್’ನಿಂದ ಆಗಮಿಸಿದ ಮೊದಲ ವಿಮಾನ Read More »

ಜನನ ಮರಣ ನೊಂದಣಿಗೆ ಆಧಾರ್ ಕಡ್ಡಾಯವಲ್ಲ: ಡಾ. ಆನಂದ್ ಕೆ.

ಮಂಗಳೂರು: ಜನನ ಮರಣ ನೋಂದಣಿಗೆ ಆಧಾರ್ ಕಡ್ಡಾಯವಲ್ಲ. ಬೇರೆ ದಾಖಲೆಗಳಾದ ಲೈಸನ್ಸ್ ಮುಂತಾದ ದಾಖಲೆಗಳನ್ನು ಬಳಸಬಹುದು ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜನನ ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನನ ಮರಣ ನೋಂದಣಿಯಲ್ಲಿ ಯಾವುದೇ ವಿಳಂಬ ಹಾಗೂ ಸಾಮಾನ್ಯ ಜನರು ತೊಂದರೆಗಳಿಗೆ ಒಳಗಾಗಬಾರದು. ಇ-ಜನ್ಮ ತಂತ್ರಾಂಶದಲ್ಲಿ ನೋಂದಣಿಯಾಗುವ ಮರಣ ಘಟನೆಗಳಿಗೆ ಮರಣ ಕಾರಣಗಳನ್ನು ಸರಿಯಾಗಿ ನಮೂದಿಸಬೇಕು ಎಂಬ ಕಾರಣಕ್ಕಾಗಿ

ಜನನ ಮರಣ ನೊಂದಣಿಗೆ ಆಧಾರ್ ಕಡ್ಡಾಯವಲ್ಲ: ಡಾ. ಆನಂದ್ ಕೆ. Read More »

13-10-2023ರ ಕೃಷಿ ಮಾರುಕಟ್ಟೆ ಧಾರಣೆ

ಪುತ್ತೂರು: ಶುಕ್ರವಾರದ ಮಾರುಕಟ್ಟೆ ಧಾರಣೆಯನ್ನು ಗಮನಿಸಿದರೆ, ಗುರುವಾರದ ಧಾರಣೆಯನ್ನೇ ಮುಂದುವರಿಸಿದಂತಿದೆ. ಗುರುವಾರ ಅಡಿಕೆ ಇಳಿಕೆ ಹಾದಿಯಲ್ಲಿದ್ದರೆ, ರಬ್ಬರ್ ಕೊಂಚ ಏರುಗತಿಯಲ್ಲಿತ್ತು. ಶುಕ್ರವಾರವೂ ಇದೇ ಹಾದಿ. ಹೊಸಅಡಿಕೆ 325- 365 ರೂ., 5 ರೂ. ಇಳಿಕೆ ಕಂಡಿರುವ ಹಳೆ ಅಡಿಕೆ 380 -425 ರೂ. ಹಾಗೂ 425-430 ರೂ.ನಲ್ಲಿದೆ (ಗುಣಮಟ್ಟ). ಇನ್ನು ಕ್ರಮವಾಗಿ 2 ರೂ. ಹಾಗೂ 1 ರೂ. ಇಳಿಕೆ ಕಂಡಿರುವ ಡಬ್ಬಲ್ ಚೋಲ್ 390 – 468 ರೂ. ಹಾಗೂ 469- 485 ರೂ. (ಗುಣಮಟ್ಟ)ನಲ್ಲಿದೆ.

13-10-2023ರ ಕೃಷಿ ಮಾರುಕಟ್ಟೆ ಧಾರಣೆ Read More »

ಬೆಂಗಳೂರು ಕಂಬಳ: ಸಿ.ಎಂ. ಭೇಟಿಯಾದ ಶಾಸಕ ಅಶೋಕ್ ರೈ

ಪುತ್ತೂರು: ನ. 25 ಹಾಗೂ 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಬೆಂಗಳೂರು ಕಂಬಳದ ಕುರಿತು ಚರ್ಚಿಸಲು ಕಂಬಳ ಸಮಿತಿ ಅಧ್ಯಕ್ಷ, ಶಾಸಕ ಅಶೋಕ್ ರೈ ನೇತೃತ್ವದ ಕಂಬಳ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕರಾವಳಿಯ ಜನಪದ ಕ್ರೀಡೆ ಕಂಬಳವನ್ನು ರಾಜಧಾನಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕೆ ಮುಖ್ಯಮಂತ್ರಿಯವರಿಗೆ ಆಹ್ವಾನ ನೀಡಿದರು. ಮುಖ್ಯಮಂತ್ರಿಯನ್ನು ಭೇಟಿಯಾದ ಅಶೋಕ್ ರೈ ಅವರು, ಚರ್ಚೆ ನಡೆಸಿ, ಕಂಬಳಕ್ಕೆ ವಿವಿಧ

ಬೆಂಗಳೂರು ಕಂಬಳ: ಸಿ.ಎಂ. ಭೇಟಿಯಾದ ಶಾಸಕ ಅಶೋಕ್ ರೈ Read More »

error: Content is protected !!
Scroll to Top