ಹಿಂದಾರು-ಮರ್ತಡ್ಕ ನೂತನ ರಸ್ತೆ ಉದ್ಘಾಟನೆ

ಪುತ್ತೂರು: ಮುಂಡೂರು ಗ್ರಾಮದ ಹಿಂದಾರು- ಮರ್ತಡ್ಕ ನೂತನ ರಸ್ತೆಯನ್ನು ಶಾಸಕ ಅಶೋಕ್ ರೈ ಭಾನುವಾರ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಡಿ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ,ಕಾಂಗ್ರೆಸ್ ಮುಖಂಡರಾದ ಉಮಾನಾಥ ಶೆಟ್ಟಿ, ಪಂಜಿಗುಡ್ಡೆ ಈಶ್ವರ ಭಟ್, ಅಮಲ ರಾಮಚಂದ್ರ, ಕೃಷ್ಣಪ್ತಸಾದ್ ಆಳ್ವ, ಅನ್ವರ್ ಖಾಸಿಂ, ವಲಯಾಧ್ಯಕ್ಷ ಸುಪ್ರಿತ್ ಕಣ್ಣಾರಾಯ, ಬೂತ್ ಅಧ್ಯಕ್ಷ ಇಬ್ರಾಹಿಂ ಮುಲಾರ್, ಮುಂಡೂರು ಗ್ರಾಪಂ ಸದಸ್ಯ ಕಮಲೇಶ್ ಮತ್ತಿತರರು ಉಪಸ್ಥಿತರಿದ್ದರು. ಯಾಕೂಬ್ ಮುಲಾರ್ ಸ್ವಾಗತಿಸಿದರು.

ಹಿಂದಾರು-ಮರ್ತಡ್ಕ ನೂತನ ರಸ್ತೆ ಉದ್ಘಾಟನೆ Read More »

ಭಾರತೀಯರನ್ನು ಹೊತ್ತ 4ನೇ ವಿಶೇಷ ವಿಮಾನ ಭಾರತಕ್ಕೆ

ಟೆಲ್ ಅವೀವ್: ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆ ಅಂಗವಾಗಿ ವಿಶೇಷ ವಿಮಾನದಲ್ಲಿ 274 ಭಾರತೀಯರ 4ನೇ ತಂಡ ಶನಿವಾರ ಇಸ್ರೇಲ್ ನಿಂದ ವಾಪಸ್ಸಾಗಿದೆ. ಆಪರೇಷನ್ ವಿಜಯ್ ಕಾರ್ಯಾಚರಣೆಯ 4ನೇ ತಂಡ ಇದಾಗಿದ್ದು, ಅ.12ರಂದು ಮೊದಲ ತಂಡ ತಾಯ್ನಾಡಿಗೆ ವಾಪಸ್ಸಾಗಿತ್ತು. 2ನೇ ತಂಡದಲ್ಲಿ 235 ಭಾರತೀಯರು ಮತ್ತು ಮೊದಲ ತಂಡದಲ್ಲಿ 212 ಭಾರತೀಯರು ತಾಯ್ತಾಡಿಗೆ ವಾಪಸ್ಸಾಗಿದ್ದರು. ಈ ಮಧ್ಯೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಪ್ಯಾಲೆಸ್ತೀನ್ ಅಧ್ಯಕ್ಷ ಮೊಹ್ಮದ್ ಅಬ್ಬಾಸ್

ಭಾರತೀಯರನ್ನು ಹೊತ್ತ 4ನೇ ವಿಶೇಷ ವಿಮಾನ ಭಾರತಕ್ಕೆ Read More »

ನಿವೃತ್ತ ಬ್ಯಾಂಕ್ ಉದ್ಯೋಗಿ ರಾಮಚಂದ್ರ ಹೆಗ್ಡೆ ನಿಧನ

ಉಪ್ಪಿನಂಗಡಿ: ರಾಮನಗರ ನಿವಾಸಿ ರಾಮಚಂದ್ರ ಹೆಗ್ಡೆ (89) ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ವಯೋ ಸಹಜದಿಂದ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ನಿವೃತ್ತ ಬ್ಯಾಂಕ್ ಉದ್ಯೋಗಿ ರಾಮಚಂದ್ರ ಹೆಗ್ಡೆ ನಿಧನ Read More »

ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಿದರೆ ಸಾಧನೆ ಮಾಡಲು ಸಾಧ್ಯ: ಶಾಸಕ ಅಶೋಕ್ ರೈ

ಪುತ್ತೂರು: ಮಕ್ಕಳು ಕಲಿತು ಸಾಧನೆ ಮಾಡಬೇಕಾದರೆ ಕೇವಲ ಶಾಲೆಯಲ್ಲಿ ಕಲಿತರೆ ಮಾತ್ರ ಸಾಲದು. ಮಕ್ಕಳಿಗೆ ಮನೆಯಲ್ಲಿ ಓದುವ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದ್ದು,  ಅದು ಪೋಷಕರ ಕರ್ತವ್ಯವಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.  ಶಿಕ್ಷಣ ಇಲಾಖೆ, ಮಣಿಕ್ಕರ ಸ.ಪ್ರೌಢಶಾಲೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಆಶ್ರಯದಲ್ಲಿ 2022-23ನೇ ಸಾಲಿನ ಎಸೆಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ, ನಿವೃತ್ತ ಶಿಕ್ಷಕರಿಗೆ, ದಾನಿಗಳಿಗೆ ಸಮ್ಮಾನ ಹಾಗೂ ಪಾಲ್ತಾಡು ನ್ಯೂ ಬ್ರದರ್ಸ್ ನವರು ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಟೀ ಶರ್ಟ್ ಅನಾವರಣ

ಮಕ್ಕಳಿಗೆ ಓದುವ ವಾತಾವರಣ ನಿರ್ಮಿಸಿದರೆ ಸಾಧನೆ ಮಾಡಲು ಸಾಧ್ಯ: ಶಾಸಕ ಅಶೋಕ್ ರೈ Read More »

ಹುಟ್ಟುಹಬ್ಬದಂದು ಬಡವರಿಗೆ ಹೀಗೊಂದು ಸ್ವ- ಉದ್ಯೋಗದ ನೆರವು

ಪುತ್ತೂರು: ಬಹುತೇಕ ಮಂದಿ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ಸಂಭ್ರಮದಿಂದ, ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಾರೆ. ಅದೂ ಮನೆಯ ನಾಲ್ಕು ಗೋಡೆಗಳ ಮಧ್ಯೆ ಅಥವಾ ಸ್ನೇಹಿತರ ಜೊತೆಗೆ. ಇದಕ್ಕೆ ಅಪವಾದ ಎನ್ನುವಂತೆ ಇಲ್ಲೊಬ್ಬರು ತನ್ನ ಮಕ್ಕಳ ಹುಟ್ಟುಹಬ್ಬವನ್ನು ಬಡವರಿಗೆ ನೆರವಾಗುವ ಮೂಲಕ ಆಚರಿಸಿಕೊಳ್ಳುತ್ತಿದ್ದಾರೆ.  ಚಾರ್ವಾಕ ವಾಲ್ತಾಜೆಯ ರಾಜೇಶ್ ವಾಲ್ತಾಜೆ ಅವರೇ ಹೀಗೆ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುವವರು. ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಎಲ್ಲೂ ಕಾಣದ ವಿಶೇಷತೆಯಿದೆ. ಚಾರ್ವಾಕದಲ್ಲಿ ದುರ್ಗಾ ಅರ್ಥ್ ಮೂವರ್ಸ್ ಸಂಸ್ಥೆಯ ಮಾಲಕರಾಗಿರುವ ರಾಜೇಶ್‍ ಅವರು ತನ್ನ ಹುಟ್ಟುಹಬ್ಬ ಸಹಿತ ತಮ್ಮ

ಹುಟ್ಟುಹಬ್ಬದಂದು ಬಡವರಿಗೆ ಹೀಗೊಂದು ಸ್ವ- ಉದ್ಯೋಗದ ನೆರವು Read More »

ಉಪ್ಪಿನಂಗಡಿ ಯುವಕ ಬೆಂಗಳೂರಿನಲ್ಲಿ ಮೃತ್ಯು

ಉಪ್ಪಿನಂಗಡಿ: ತಾಲೂಕಿನ ಉಪ್ಪಿನಂಗಡಿಯ ಯುವಕನೋರ್ವ ಬೆಂಗಳೂರಿನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಉಪ್ಪಿನಂಗಡಿ ಮಠ ನಿವಾಸಿ ಹಂಝ ಎಂಬವರ ಪುತ್ರ ಅಜ್ಜದ್ (18) ಮೃತಪಟ್ಟ ಯುವಕ. ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅಜ್ಜದ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಉಪ್ಪಿನಂಗಡಿ ಯುವಕ ಬೆಂಗಳೂರಿನಲ್ಲಿ ಮೃತ್ಯು Read More »

ಒಕ್ಕಲಿಗರ ಅವಹೇಳನ: ಕೆ.ಎಸ್. ಭಗವಾನ್ ಮನೆಗೆ ಮುತ್ತಿಗೆ!

ಮೈಸೂರು: ಒಕ್ಕಲಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಒಕ್ಕಲಿಗ ಸಂಘದ ಸದಸ್ಯರು ಶನಿವಾರ ವಿಚಾರವಾದಿ ಕೆ.ಎಸ್. ಭಗವಾನ್ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಘೋಷಣೆ ಕೂಗುತ್ತಾ ರಸ್ತೆಯಲ್ಲೇ ಧರಣಿ ಕುಳಿತರು. ಧರಣಿನಿರತರನ್ನು ಪೊಲೀಸರು ವಶಕ್ಕೆ ಪಡೆದರು. ಮಹಿಷ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಭಗವಾನ್, “ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು ಎಂದು ಕುವೆಂಪು ಹೇಳಿದ್ದರು” ಎಂದು ಹೇಳಿಕೆ ನೀಡಿದ್ದರು.

ಒಕ್ಕಲಿಗರ ಅವಹೇಳನ: ಕೆ.ಎಸ್. ಭಗವಾನ್ ಮನೆಗೆ ಮುತ್ತಿಗೆ! Read More »

ಸಿಎನ್‍ಜಿ ಆಟೋ ರಿಕ್ಷಾಕ್ಕೆ ಬೆಂಕಿ: ಇಬ್ಬರು ಸಜೀವ ದಹನ

ಆಟೋ ರಿಕ್ಷಾವೊಂದಕ್ಕೆ ಹಠಾತ್ತನೇ ಬೆಂಕಿ ತಗುಲಿ ಇಬ್ಬರು ಸಜೀವ ದಹನವಾದ ಘಟನೆ ಕಣ್ಣೂರಿನ ಕತಿರೂರಿನಲ್ಲಿ ನಡೆದಿದೆ. ಅಪಘಾತದಲ್ಲಿ ಚಾಲಕ ಅಭಿಲಾಷ್ (37) ಮತ್ತು ಆತನ ಸ್ನೇಹಿತ ಸಜೀಶ್ (36) ಸುಟ್ಟು ಕರಕಲಾಗಿದ್ದಾರೆ. ಆಟೋರಿಕ್ಷಾ ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅಟೋ ಪಲ್ಟಿಯಾಗಿದ್ದು, ಸಿಎನ್ ಜಿ ಸಿಲಿಂಡರ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಆಟೋ ರಿಕ್ಷಾದ ಹತ್ತಿರಕ್ಕೂ ಹೋಗಲು ಆಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದು, ಪೊಲೀಸರು ಮೃತದೇಹಗಳನ್ನು  ಹೊರ

ಸಿಎನ್‍ಜಿ ಆಟೋ ರಿಕ್ಷಾಕ್ಕೆ ಬೆಂಕಿ: ಇಬ್ಬರು ಸಜೀವ ದಹನ Read More »

ಪುತ್ತೂರು ಅರಣ್ಯ ಇಲಾಖೆ ಕ್ಷೇಮಾಭಿವೃದ್ಧಿ ನೌಕರ ರಮೇಶ್ ನಿಧನ

ಪುತ್ತೂರು: ಇಲ್ಲಿನ ಅರಣ್ಯ ಇಲಾಖೆಯ ಕ್ಷೇಮಾಭಿವೃದ್ಧಿ ವಿಭಾಗದ ನೌಕರ ರಮೇಶ್ (54 ವ.) ಅ. 14ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಕಳೆದ 10 ವರ್ಷಗಳಿಂದ ಪುತ್ತೂರು ಅರಣ್ಯ ಇಲಾಖೆಯ ಕ್ಷೇಮಾಭಿವೃದ್ದಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಮೂಲತಃ ಮಡಿಕೇರಿ ನಿವಾಸಿ. ಪುತ್ತೂರು ಅರಣ್ಯ ಇಲಾಖೆಯ ವಸತಿಗೃಹದಲ್ಲೇ ವಾಸ್ತವ್ಯ ಹೊಂದಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಮೃತರ ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.

ಪುತ್ತೂರು ಅರಣ್ಯ ಇಲಾಖೆ ಕ್ಷೇಮಾಭಿವೃದ್ಧಿ ನೌಕರ ರಮೇಶ್ ನಿಧನ Read More »

ಹಟ್ಟಿಯಿಂದ ದನ ಕಳವು: ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಸುಳ್ಯ: ತಿಂಗಳ ಹಿಂದೆ ಸಂಪಾಜೆ ಕಲ್ಲುಗುಂಡಿಯ ಗೂನಡ್ಕದಲ್ಲಿ ಹಟ್ಟಿಯಿಂದ ದನ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಪೊಲೀಸರು ಆರೋಪಿಗಳನ್ನು ಕೇರಳದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುಳ್ಯ ಮರ್ಕುಂಜ ನಿವಾಸಿ ಗಣೇಶ್ ಕಾಯಾರ ಮತ್ತು ಕೇರಳದ ಚೆಂಬೇರಿಯ ನಿವಾಸಿ ಅಬ್ದುಲ್ ಬಂಧಿತ ಆರೋಪಿಗಳು. ಸೆ. 13ರಂದು ತಡರಾತ್ರಿ ಎರಡು ಗಂಟೆ ವೇಳೆಗೆ ಗೂನಡ್ಕದ ವರದರಾಜ್ ಸಂಕೇಶ್ವರ್ ಅವರ ಮನೆಯ ಹಟ್ಟಿಯಲ್ಲಿದ್ದ ಎರಡು ಹಸುಗಳನ್ನು ಪಿಕಪ್ ಗೆ ತುಂಬಿ ಕದ್ದೊಯ್ಯಲಾಗಿತ್ತು. ಆರೋಪಿಗಳ ಚಲನ ವಲನಗಳನ್ನು ಸಿಸಿ ಕ್ಯಾಮೆರಾಗಳ ಸಹಾಯದಿಂದ ಸೆರೆ

ಹಟ್ಟಿಯಿಂದ ದನ ಕಳವು: ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು Read More »

error: Content is protected !!
Scroll to Top