ಸಾಧನೆಗೆ ಕೌಶಲ್ಯದ ಜತೆಗೆ ಶಕ್ತಿ ಮುಖ್ಯ | ಜಿಲ್ಲಾ ಮಟ್ಟದ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ಯಾವುದೇ ಸಾಧನೆಗೆ ಕೌಶಲ್ಯ, ಟ್ಯಾಲೆಂಟ್ ಜತೆಗೆ ಶಕ್ತಿ ಮುಖ್ಯ. ಈ ನಿಟ್ಟಿನಲ್ಲಿ ನಾಳೆ ನಡೆಯಲಿರುವ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪುತ್ತೂರಿನ ಕ್ರೀಡಾಪಟುಗಳು ಪುತ್ತೂರಿನ ಕೀರ್ತಿಗೆ ಹಿರಿಮೆ ತರುವಂತಾಗಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಭಾನುವಾರ ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ವತಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು. ಕ್ರೀಡಾಕೂಟ ಸೇರಿದಂತೆ ಇನ್ನಿತರ ಯಾವುದೇ ಕಾರ್ಯಕ್ರಮವಿರಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಗೌರವ […]

ಸಾಧನೆಗೆ ಕೌಶಲ್ಯದ ಜತೆಗೆ ಶಕ್ತಿ ಮುಖ್ಯ | ಜಿಲ್ಲಾ ಮಟ್ಟದ ಕ್ರೀಡಾಪಟುಗಳಿಗೆ ಸಮವಸ್ತ್ರ ವಿತರಿಸಿ ಶಾಸಕ ಅಶೋಕ್ ಕುಮಾರ್ ರೈ Read More »

ಕುಡಿಯುವ ನೀರಿನ ಪೈಪ್‍ಗೆ ಹಾನಿ : ಸ್ಥಳೀಯರಿಂದ ಹೆದ್ದಾರಿ ಕಾಮಗಾರಿಗೆ ತಡೆ

ಉಪ್ಪಿನಂಗಡಿ : ಹೆದ್ದಾರಿ ಅಗಲೀಕರಣದ ಕಾಮಗಾರಿ ನಡೆಯುತ್ತಿರುವ ವೇಳೆ ಕುಡಿಯುವ ನೀರಿನ ಪೈಪುಗಳನ್ನು ಹಾನಿಗೊಳಿಸಿದ ಪರಿಣಾಮ ಕಳೆದ ನಾಲ್ಕು ದಿನಗಳಿಂದ ನೀರಿಲ್ಲದೆ ಸಂಕಷ್ಠಗೀಡಾದವರು ಆಕ್ರೋಶಗೊಂಡು ಕಾಮಗಾರಿಗೆ ತಡೆಯೊಡ್ಡಿದ ಘಟನೆ ನಡೆದಿದೆ. ಉಪ್ಪಿನಂಗಡಿಯ ಕುಡಿಯುವ ನೀರು ಶುದ್ದೀಕರಣ ಘಟಕದಿಂದ ಹಲವೆಡೆಗೆ ಸರಬರಾಜಾಗುವ ನೀರಿನ ಪೈಪುಗಳು ಕಾಮಗಾರಿಯ ವೇಳೆ ಒಡೆದು ಹೋಗಿತ್ತು. ಪೈಪ್ ಸರಿಪಡಿಸಬೇಕೆಂದು ಪಂಚಾಯಿತಿ ಆಡಳಿತ ಕಾಮಗಾರಿ ನಿರತ ಸಂಸ್ಥೆಯ ಅಧಿಕಾರಿಗಳನ್ನು ಒತ್ತಾಯಿಸಿತ್ತು. ಸ್ಪಂದಿಸುವ ಭರವಸೆ ನೀಡಿದ್ದ ಸಂಸ್ಥೆಯ ಅಧಿಕಾರಿಗಳು ಬಳಿಕ ಮೌನವಹಿಸಿದ್ದರಿಂದಾಗಿ ಸತತ ನಾಲ್ಕು ದಿನಗಳ ಕಾಲ

ಕುಡಿಯುವ ನೀರಿನ ಪೈಪ್‍ಗೆ ಹಾನಿ : ಸ್ಥಳೀಯರಿಂದ ಹೆದ್ದಾರಿ ಕಾಮಗಾರಿಗೆ ತಡೆ Read More »

ತೋಡಿಗೆ ಬಿದ್ದ ಕಾರು : ಚಾಲಕ ಅಪಾಯದಿಂದ ಪಾರು

ಪುತ್ತೂರು: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ತೋಡಿಗೆ ಬಿದ್ದ ಘಟನೆ  ಭಾನುವಾರ ಬೆಳಿಗ್ಗೆ ಬೊಳುವಾರಿನಲ್ಲಿ ನಡೆದಿದೆ. ಅಪಘಾತದ ಪರಿಣಾಮ ತೋಡಿನ ಪಕ್ಕದ ಸ್ಲ್ಯಾಬ್‍ ಗೆ ಕಾರು ಡಿಕ್ಕಿಯಾಗಿದೆ. ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

ತೋಡಿಗೆ ಬಿದ್ದ ಕಾರು : ಚಾಲಕ ಅಪಾಯದಿಂದ ಪಾರು Read More »

ಮುಂದಿನ ಬಜೆಟ್ ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ : ಮುಖ್ಯಮಂತ್ರಿ ಸಿದ್ಧರಾಮಯ್ಯ

ಉಡುಪಿ: ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಂಟ ಸಮುದಾಯದ ಅಭಿವೃದ್ಧಿಗಾಗಿ ಮುಂದಿನ ಬಜೆಟ್ ನಲ್ಲಿ ‘ಬಂಟರ ಅಭಿವೃದ್ಧಿ ನಿಗಮ’ದ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಟ ಸಮಾಜಕ್ಕೆ ಭರವಸೆ ನೀಡಿದ್ದಾರೆ. ನಗರದ ಅಜ್ಜರಕಾಡು ಕ್ರೀಡಾಂಗಣದ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ನಡೆದ ನಾಲ್ಕನೇ ವಿಶ್ವ ಬಂಟರ ಸಮ್ಮೇಳನ-2023ನ್ನು ದೀಪ ಪ್ರಜ್ವಲನಗೊಳಿಸಿ, ಹಿಂಗಾರ ಅರಳಿಸಿ, ತೆಂಗಿನ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಬಂಟ ಸಮಾಜದ ಅಭಿವೃದ್ಧಿಗಾಗಿ ಕಳೆದ ನಮ್ಮಚುನಾವಣಾ ಪ್ರಣಾಳಿಕೆ ಯಲ್ಲೇ ಬಂಟರ ಅಭಿವೃದ್ಧಿ

ಮುಂದಿನ ಬಜೆಟ್ ನಲ್ಲಿ ಬಂಟರ ಅಭಿವೃದ್ಧಿ ನಿಗಮ ಘೋಷಣೆ : ಮುಖ್ಯಮಂತ್ರಿ ಸಿದ್ಧರಾಮಯ್ಯ Read More »

ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ | ಪೋಕ್ಸೋ ಪ್ರಕರಣ ದಾಖಲು

ಪುತ್ತೂರು: ಮಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮಂಗಳೂರಿನ ವ್ಯಕ್ತಿಯೊಬ್ಬನನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿ ಪೋಕ್ಸೋ ಪ್ರಕರಣ ದಾಖಲಿಸಿಕೊಂಡ ಘಟನೆ ಶನಿವಾರ ಸಂಜೆ ನಡೆದಿದೆ. ಉದಯ (40) ಬಂಧಿತ ವ್ಯಕ್ತಿ. ಕಿರುಕುಳ ನೀಡಿದ ವಿಚಾರವನ್ನು ಆಕೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ತಿಳಿಸಿದ್ದು, ಪ್ರಯಾಣಿಕರು ಆತನನ್ನು ಇಳಿಯಲು ಬಿಡದೆ ತಡೆದಿದ್ದರು. ಬಳಿಕ ಬಸ್ ನ್ನು ಪೊಲೀಸ್ ಠಾಣೆಯ ಬಳಿಗೆ ಬಂದು ನಿಲ್ಲಿಸಲಾಯಿತು. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡರು ಎಂದು

ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ | ಪೋಕ್ಸೋ ಪ್ರಕರಣ ದಾಖಲು Read More »

ಇಂದು ಚಂದ್ರ ಗ್ರಹಣ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾತ್ರಿ ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ

ಪುತ್ತೂರು: ಅಶ್ವಿಜ ಮಾಸವನ್ನು ಹಬ್ಬಗಳ ಮಾಸ ಎಂದು ಕರೆಯಲಾಗುತ್ತಿದ್ದು, ಜ್ಯೋತಿಷ್ಯ ಮೂಲಗಳ ಪ್ರಕಾರ ಇಂದು ನಡೆಯುವ ಚಂದ್ರ ಗ್ರಹಣ ಎಲ್ಲಾ ರಾಶಿಗಳ ಜನರ ಜೀವನದ ಮೇಲೆ ಪ್ರಭಾವ ಬೀರಲಿದೆ. ಗ್ರಹಣದ ಅವಧಿ ಮಧ್ಯರಾತ್ರಿ 1.04  ರಿಂದ 2.24  ವರಗೆ ಇರಲಿದೆ. ಹಿಂದೂ ಧರ್ಮದ ನಂಬಿಕೆ ಪ್ರಕಾರ ಗ್ರಹಣದ 9 ಗಂಟೆ ಮೊದಲು ಚಂದ್ರಗ್ರಹಣದ ಸೂತಕ ಅವಧಿ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಮುಖ್ಯವಾಗಿ ಗರ್ಭಿಣಿಯರು ಹೊರಗಡೆ ಹೋಗುವುದನ್ನು ಕಡ್ಡಾಯವಾಗಿ ತಪ್ಪಿಸುವ ಮೂಲಕ ವಿಶೇಷ ಕಾಳಜಿ ವಹಿಸಬೇಕು. ಗ್ರಹಣದ ಸಂದರ್ಭದಲ್ಲಿ

ಇಂದು ಚಂದ್ರ ಗ್ರಹಣ | ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾತ್ರಿ ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ Read More »

ನಿಲ್ಲಿಸಿದ್ದ ಆಟೋಕ್ಕೆ ತಗುಲಿದ ಬೆಂಕಿ : ಸಂಪೂರ್ಣ ನಾಶ

ಕುಂಬಳೆ: ನಿಲ್ಲಿಸಿದ್ದ ಆಟೋರಿಕ್ಷಾವೊಂದಕ್ಕೆ ಬೆಂಕಿ ಹತ್ತಿಕೊಂಡು ಸಂಪೂರ್ಣ ನಾಶಗೊಂಡ ಘಟನೆ ಬದಿಯಡ್ಕದಲ್ಲಿ ನಡೆದಿದೆ. ಬಾಯಾರು ಬಳ್ಳೂರು ನಿವಾಸಿ ರವಿಕುಮಾರ್ ಎಂಬವರ ಆಟೋರಿಕ್ಷಾ ಬೆಂಕಿಗಾಹುತಿಯಾಗಿದ್ದು, ರೋಗಿ ಒಬ್ಬರನ್ನು ರಿಕ್ಷಾದಲ್ಲಿ ಕುಂಬಳೆ ಆಸ್ಪತ್ರೆಗೆ ತಲುಪಿಸಿ, ಬಳಿಕ ರಿಕ್ಷಾವನ್ನು ಬದಿಯಡ್ಕ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಸಮೀಪದಲ್ಲಿ ನಿಲ್ಲಿಸಲಾಗಿತ್ತು. ರವಿಕುಮಾರ್ ಸ್ವಲ್ಪ ದೂರದಲ್ಲಿ ನಿಂತು ಓರ್ವರಲ್ಲಿ ಮಾತನಾಡುತ್ತಿದ್ದಂತೆ ರಿಕ್ಷಾ ಉರಿಯುತ್ತಿರುವುದು ಕಂಡುಬಂದಿದೆ. ಕೂಡಲೇ ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದ್ದಾದರೂ ರಿಕ್ಷಾ ಸಂಪೂರ್ಣ ಉರಿದು ಸುಟ್ಟುಹೋಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗಲಿದೆ

ನಿಲ್ಲಿಸಿದ್ದ ಆಟೋಕ್ಕೆ ತಗುಲಿದ ಬೆಂಕಿ : ಸಂಪೂರ್ಣ ನಾಶ Read More »

ಶೀಘ್ರ ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ : ಸಿ.ಎಂ. ಸಿದ್ಧರಾಮಯ್ಯ

ಮಂಗಳೂರು: ರಾಜ್ಯದಲ್ಲಿ ನಿಗಮ ಮಂಡಳಿಗೆ ರಾಜ್ಯದಲ್ಲಿ ಅಧ್ಯಕ್ಷರ ನೇಮಕ ಶೀಘ್ರ ಮಾಡಲಾಗುವುದು. ಮೊದಲ ಹಂತದಲ್ಲಿ ಶಾಸಕರಿಗೆ ಆದ್ಯತೆ ನೀಡಿ, ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಉಡುಪಿಯಲ್ಲಿ ಆಯೋಜಿಸಿರುವ ವಿಶ್ವ ಬಂಟರ ಸಮ್ಮೇಳನದಲ್ಲಿ ಭಾಗವಹಿಸಲು ಬಂದಿರುವ ಮುಖ್ಯಮಂತ್ರಿಗಳು, ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಸೌಜನ್ಯ ಕೊಲೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಿದೆ. ಹೀಗಾಗಿ ಮರು ತನಿಖೆ ಬಗ್ಗೆ ಕೇಂದ್ರ ಸರ್ಕಾರ ಯೋಚಿಸಬೇಕು ಎಂದು

ಶೀಘ್ರ ರಾಜ್ಯದಲ್ಲಿ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ : ಸಿ.ಎಂ. ಸಿದ್ಧರಾಮಯ್ಯ Read More »

‘ನನ್ನ ಮಣ್ಣು ನನ್ನ ದೇಶ’ ಅಭಿಯಾನ : ಪುತ್ತೂರಿನಿಂದ ದೆಹಲಿಗೆ ಪ್ರಯಾಣ

ಪುತ್ತೂರು: ಕೇಂದ್ರ ಸರ್ಕಾರದ ‘ನನ್ನ ಮಣ್ಣು ನನ್ನ ದೇಶ ಅಭಿಯಾನದಡಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಸಂಗ್ರಹಿಸಿದ ಮೃತ್ತಿಕೆಯ ಅಮೃತ ಕಲಶವನ್ನು ದೇಶಕ್ಕಾಗಿ ಹುತಾತ್ಮರಾದವರ ಸ್ಮರಣಾರ್ಥ ದೆಹಲಿಯಲ್ಲಿ ನಿರ್ಮಾಣವಾಗಲಿರುವ ಅಮೃತ ವನಕ್ಕೆ ಸಮರ್ಪಿಸಲು ದೆಹಲಿಗೆ ಪ್ರಯಾಣಿಸಲಾಯಿತು. ಪುತ್ತೂರು ಮಾಜಿ ಶಾಸಕ ಸಂಜೀವ ಮಠದೂರು ದೆಹಲಿಗೆ ತೆರಳಲಿರುವವರನ್ನು ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ, ಉಪಸ್ಥಿತರಿದ್ದರು. ಅಭಿಯಾನ ಸಂಚಾಲಕ, ಪುತ್ತೂರು ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ, ಹರೀಶ್

‘ನನ್ನ ಮಣ್ಣು ನನ್ನ ದೇಶ’ ಅಭಿಯಾನ : ಪುತ್ತೂರಿನಿಂದ ದೆಹಲಿಗೆ ಪ್ರಯಾಣ Read More »

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಪುತ್ತೂರು: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ-2023 ಶನಿವಾರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ತಹಶೀಲ್ದಾರ್ ಜೆ.ಶಿವಶಂಕರ ದೀಪ ಪ್ರಜ್ವಲನೆ ಮಾಡಿ ಮಾತನಾಡಿ, ಜಗತ್ತಿನ ಅತ್ಯಂತ ದೊಡ್ಡ ಕೃತಿ ರಾಮಾಯಣವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರ ತತ್ವ ಆದರ್ಶದ ಹಾದಿಯಲ್ಲಿ ನಾವೆಲ್ಲರೂ ನಡೆಯುವ ಅಗತ್ಯವಿದೆ ಎಂದರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಚಾಲಕ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್‍.ಆರ್‍. ಮಾತನಾಡಿ, ಮನುಷ್ಯ ಸುಖ, ಶಾಂತಿ, ಸಂತೋಷದಿಂದ ಬದುಕಲು, ಎಲ್ಲರಿಗೂ ಸಮಬಾಳು, ಸಮಪಾಲು

ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ Read More »

error: Content is protected !!
Scroll to Top