ತಂದೆಯಿಂದ ಮಗನ ಹತ್ಯೆ | ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು

ಉಜಿರೆ: ತಂದೆಯೇ ಮಗನನ್ನು ಕೊಲೆ ಮಾಡಿದ ಘಟನೆ ಭಾನುವಾರ ರಾತ್ರಿ ಉಜಿರೆಯಲ್ಲಿ  ಸಂಭವಿಸಿದೆ. ಉಜಿರೆ ಗ್ರಾಮದ ಕೊಡೆಕಲ್ಲು ನಿವಾಸಿ ಜಗದೀಶ್ (30) ಮೃತಪಟ್ಟವರು. ಮೃತರ ತಂದೆ ಕೃಷ್ಣಯ್ಯಾಚಾರ್ ಎಂಬವರೇ ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಭಾನುವಾರ ರಾತ್ರಿ ತಂದೆ ಹಾಗೂ ಮಗನ ನಡುವೆ ಮಾತಿನ ಜಗಳ ನಡೆದಿದೆ. ಇದಾದ ಬಳಿಕ ಕೃಷ್ಣಯ್ಯ ಆಚಾರ್ ಮನೆಯ ಕೋಣೆಯೊಳಗೆ ಹೋಗಿ ಚಿಲಕ ಹಾಕಿದ್ದಾರೆ. ಮಗ ಜಗದೀಶ ಬಾಗಿಲು ತೆಗೆಯಲು ಪ್ರಯತ್ನಿಸಿದಾಗ ಏಕಾಏಕಿ ಬಾಗಿಲು ತೆರೆದ ತಂದೆ ಕೃಷ್ಣಯ್ಯ ಆಚಾರ್ ಕೋಣೆಯ ಒಳಗಿನಿಂದ […]

ತಂದೆಯಿಂದ ಮಗನ ಹತ್ಯೆ | ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲು Read More »

ಕೇರಳದಲ್ಲಿ ಬಾಂಬ್ ಸ್ಪೋಟ | ದ.ಕ. ಗಡಿಭಾಗ ಸಹಿತ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್

ಪುತ್ತೂರು: ಕೇರಳದಲ್ಲಿ ಭಾನುವಾರ ನಡೆದ ಬಾಂಬ್ ಸ್ಪೋಟದ ಹಿನ್ನಲೆಯಲ್ಲಿ ಗಡಿಭಾಗ ಸಹಿತ ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸರು ಗಡಿಭಾಗದಲ್ಲಿ ತಪಾಸಣೆ ತೀವ್ರಗೊಳಿಸಿದ್ದು, ಹಿರಿಯ ಅಧಿಕಾರಿಗಳು ಚೆಕ್‍ಪೋಸ್ಟ್ ಗಳಿಗೆ ಭೇಟಿ ನೀಡಿ ಹೆಚ್ಚಿನ ನಿಗಾ ವಹಿಸಿದ್ದಾರೆ. ಮಂಗಳೂರು ನಗರ ಕೇಂದ್ರ ಭಾಗ ಸೇರಿದಂತೆ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿನ ಆಯಕಟ್ಟಿನ ಸ್ಥಳಗಳಲ್ಲಿ, ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ  ಬಂದರು, ಧಾರ್ಮಿಕ ಕ್ಷೇತ್ರಗಳು, ಕಡಲ ತೀರ ಪ್ರದೇಶಗಳಲ್ಲಿ ಪೊಲೀಸರು ನಿಗಾ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್

ಕೇರಳದಲ್ಲಿ ಬಾಂಬ್ ಸ್ಪೋಟ | ದ.ಕ. ಗಡಿಭಾಗ ಸಹಿತ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ Read More »

‘ನ್ಯೂಸ್ ಪುತ್ತೂರು’ ಜನಮನದ ಪ್ರತಿಧ್ವನಿ ವರದಿ ಇಂಪ್ಯಾಕ್ಟ್ | ಏಳ್ಮುಡಿ ಸೇತುವೆ ಗಿಡಗಂಟಿಗಳ ತೆರವು

ಪುತ್ತೂರು: ನಗರದ ಸಮಸ್ಯೆಯೊಂದರ ಕುರಿತು ‘ನ್ಯೂಸ್ ಪುತ್ತೂರು’ ಜನಮನದ ಪ್ರತಿಧ್ವನಿ ಪ್ರಕಟಿಸಿದ ವರದಿಗೆ ಪುತ್ತೂರು ನಗರಸಭೆ ಸ್ಪಂದನೆ ನೀಡಿದೆ. ‘ಏಳ್ಮುಡಿ ಸೇತುವೆ ದಾಟಲು ಏಳು ಮುಡಿ ಹೊತ್ತ ಅನುಭವ!!’ ಎಂಬ ತಲೆಬರಹದಡಿ ವರದಿಯೊಂದನ್ನು ನ್ಯೂಸ್ ಪುತ್ತೂರು ವರದಿ ಪ್ರಕಟಿಸಿತ್ತು. ಇದೀಗ ವರದಿಗೆ ಸ್ಪಂದಿಸಿದ ನಗರಸಭೆ ಗಿಡಗಂಟಿಗಳ ತೆರವು ಕಾರ್ಯ ಕೈಗೊಂಡಿದೆ. ಬಸ್ ನಿಲ್ದಾಣ – ದರ್ಬೆ ಸಂಪರ್ಕ ರಸ್ತೆಯ ಮಧ್ಯ ಭಾಗದ ಏಳ್ಮುಡಿ ಸೇತುವೆಯ ಎರಡೂ ಬದಿಯಲ್ಲಿ ಗಿಡಗಂಟಿಗಳು ಬೆಳೆದಿದ್ದು, ಪಾದಚಾರಿಗಳು ನಡೆದಾಡಲು ಹರಸಾಹಸ ಪಡುವಂತಾಗಿತ್ತು. ಈ

‘ನ್ಯೂಸ್ ಪುತ್ತೂರು’ ಜನಮನದ ಪ್ರತಿಧ್ವನಿ ವರದಿ ಇಂಪ್ಯಾಕ್ಟ್ | ಏಳ್ಮುಡಿ ಸೇತುವೆ ಗಿಡಗಂಟಿಗಳ ತೆರವು Read More »

ಶ್ರೀಧರ ಆಚಾರ್ಯ ನಿಧನ

ಪುತ್ತೂರು: ಮಂಜುಶ್ರೀ ಜ್ಯುವೆಲ್ಲರಿ ಮಾಲಕ ಶ್ರೀಧರ ಆಚಾರ್ಯ (63) ಹೃದಯಾಘಾತದಿಂದ ನಿಧನರಾದರು. ಮುಂಡೂರಿನ ಕಲ್ಲಗುಡ್ಡೆಯಲ್ಲಿ ಮಂಜುಶ್ರೀ ಜ್ಯುವೆಲ್ಲರಿ ಶಾಪ್ ನಡೆಸಿಕೊಂಡಿದ್ದ ಅವರಿಗೆ ಭಾನುವಾರ ರಾತ್ರಿ ಹಠಾತ್ತನೆ ಹೃದಯಾಘಾತವಾಗಿ ನಿಧನರಾದರು. ಮೃತರು ಪತ್ನಿ ಲತಾ, ಪುತ್ರ ಶಿವಕುಮಾರ್ ಹಾಗೂ ಪುತ್ರಿ ಶ್ರುತಿಕಾ ಅವರನ್ನು ಅಗಲಿದ್ದಾರೆ.

ಶ್ರೀಧರ ಆಚಾರ್ಯ ನಿಧನ Read More »

ದಲಿತ ಕುಟುಂಬವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಆಗಿದೆ | ಪುತ್ತೂರು ಬ್ಲಾಕ್ ಎಸ್ ಟಿ ಘಟಕದ ಮಾಸಿಕ ಸಭೆಯಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಪರಿಶಿಷ್ಡ ಪಂಗಡದ ಕುಟುಂಬಗಳ ಅಭಿವೃದ್ದಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿ ಮಾಡಿದ್ದು ಮಾಹಿತಿ ಕೊರತೆಯ ಕಾರಣಕ್ಕೆ ಹಲವರು ಸೌಲಭ್ಯ ವಂಚಿತರಾಗುತ್ತಿದ್ದಾರೆ ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಎಸ್ ಟಿ ಘಟಕದ ಮಾಸಿಕ ಸಭೆಯಲ್ಲಿ ಮಾತನಾಡಿದರು. ದಲಿತ ಕುಟುಂಬಗಳನ್ನು ಮೇಲಕ್ಕೆತ್ತಲು ಕಾಂಗ್ರೆಸ್ ಸರಕಾರ ಸ್ವಾತಂತ್ರ್ಯ ನಂತರ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಯಲ್ಲಿ ತರುವ ಕೆಲಸವನ್ನು ಮಾಡಿದೆ. ಪ್ರತೀಯೊಂದು

ದಲಿತ ಕುಟುಂಬವನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಆಗಿದೆ | ಪುತ್ತೂರು ಬ್ಲಾಕ್ ಎಸ್ ಟಿ ಘಟಕದ ಮಾಸಿಕ ಸಭೆಯಲ್ಲಿ ಶಾಸಕ ಅಶೋಕ್ ರೈ Read More »

ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ.

ಸುಬ್ರಹ್ಮಣ್ಯ: ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯ ಭಾನುವಾರ ಸುಬ್ರಹ್ಮಣ್ಯದಲ್ಲಿ ನಡೆಯಿತು. ಟ್ರಸ್ಟ್ ನ ಸುಮಾರು 25 ಸ್ವಯಂಸೇವಕರನ್ನು ಒಳಗೊಂಡ  ತಂಡ ಕುಮಾರಧಾರ ಸ್ಥಾನಘಟ್ಟ, ಮುಖ್ಯ ದ್ವಾರದ ಇಕ್ಕಲಗಳಲ್ಲಿ, ಹಾಗೂ ಮುಖ್ಯ ರಸ್ತೆಯಲ್ಲಿ ಸ್ವಚ್ಛತೆ ಮಾಡಿದರು. ನವರಾತ್ರಿಯ ರಜಾ ದಿನಗಳಂದು ಹಾಗೂ ಶಾಲೆಗಳಿಗೆ ರಜೆ  ಇದ್ದುದ ರಿಂದ  ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಕ್ಷೇತ್ರಕ್ಕೆ ಆಗಮಿ ಸಿದ್ದರು .ಇದರಿಂದ ಕುಮಾರಧಾರ ಸ್ಥಾನಘಟ್ಟದ ಬಳಿ, ದ್ವಾರದ ಅಕ್ಕ ಪಕ್ಕದಲ್ಲಿ, ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ

ಡಾl ರವಿ ಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ. Read More »

ತಾಲೂಕು ಮಟ್ಟದ ಕ್ರೀಡಾಕೂಟ : ಸಾತ್ವಿಕ್ ಆರ್. ವೈಯಕ್ತಿಕ ಚಾಂಪಿಯನ್

ಪುತ್ತೂರು: ಹಿರೇಬಂಡಾಡಿಯಲ್ಲಿ ಜರಗಿದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ, ಫ್ರೌಢಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟದಲ್ಲಿ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಆರ್ ೩ ಚಿನ್ನದ ಪದಕದೊಂದಿಗೆ ೧೭ ವರ್ಷ ಕೆಳಗಿನ ವಯೋಮಾನದ ವೈಯುಕ್ತಿಕ ಚಾಂಪಿಯನ್‌ಶಿಪ್ ಪಡೆದುಕೊಂಡಿದ್ದಾರೆ. ಲಾಂಗ್ ಜಂಪ್, ಟ್ರಿಪಲ್ ಜಂಪ್, ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಹಾಗೂ ೪*೧೦೦ ಮೀ. ರಿಲೇಯಲ್ಲಿ ಚಿನ್ನದ ಪದಕ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ. ಅವರು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ ರೆಂಜ

ತಾಲೂಕು ಮಟ್ಟದ ಕ್ರೀಡಾಕೂಟ : ಸಾತ್ವಿಕ್ ಆರ್. ವೈಯಕ್ತಿಕ ಚಾಂಪಿಯನ್ Read More »

ವಿಟ್ಲ ಸಮುದಾಯ ಆಸ್ಪತ್ರೆಗೆ ಶಾಸಕರ ಭೇಟಿ: ಪರಿಶೀಲನೆ

ವಿಟ್ಲ: ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಅಶೋಕ್ ಕುಮಾರ್ ರೈ ಭಾನುವಾರ ಭೇಟಿ ನೀಡಿ ಆಸ್ಪತ್ರೆಯ ವ್ಯವಸ್ಥೆಯ ಬಗ್ಹೆ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಹೆರಿಗೆ ತಜ್ಞರ ಕೊರತೆ ಇರುವ ಕಾರಣ‌ ವಿಟ್ಲ ಭಾಗದ ಜನತೆಗೆ ಸಮಸ್ಯೆಯಾಗಿದೆ.‌ ಹಲವು ವರ್ಷಗಳಿಂದ ಇಲ್ಲಿ ಹೆರಿಗೆ ತಜ್ಞರನ್ನು ನೇಮಕ ಮಾಡಿಲ್ಲ. ಗ್ರಾಮೀಣ ಭಾಗದ ಜನತೆಗೆ ಇದರಿಂದ ತುಂಬಾ ಸಮಸ್ಯೆ ಉಂಟಾಗಿದೆ ಎಂದು ಮಾಹಿತಿ ನೀಡಲಾಯಿತು.  ಜನತೆಗೆ ಡಯಾಲಿಸಿಸ್ ಕೇಂದ್ರ ಪ್ರಾರಂಭ ಮಾಡುವಂತೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಸಮುದಾಯ ಕೇಂದ್ರದ ವೈದ್ಯೆ ಡಾ.ವೇದಾವತಿ,

ವಿಟ್ಲ ಸಮುದಾಯ ಆಸ್ಪತ್ರೆಗೆ ಶಾಸಕರ ಭೇಟಿ: ಪರಿಶೀಲನೆ Read More »

ಕೇರಳದ ಎರ್ನಾಕುಲಂನಲ್ಲಿ ಭೀಕರ ಸ್ಪೋಟ | ಓರ್ವ ಮಹಿಳೆ ಮೃತ್ಯು, 23 ಮಂದಿಗೆ ಗಾಯ

ಕೇರಳ: ಎರ್ನಾಕುಲಂನಲ್ಲಿರುವ ಕನ್ವೆನ್ಷನ್‌ ಸೆಂಟರ್‌  ನಲ್ಲಿ ಭೀಕರ ಸ್ಫೋಟ ಸಂಭವಿಸಿ ಓರ್ವ ಮಹಿಳೆ ಮೃತಪಟ್ಟಿದ್ದು, 23 ಮಂದಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ. ಮೃತಪಟ್ಟ ಮಹಿಳೆಯ ಗುರುತು ಪತ್ತೆಯಾಗದಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏಕಾಏಕಿ ಸ್ಫೋಟ ಸಂಭವಿಸಿದ್ದು, ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಇದೊಂದು ಉಗ್ರರ ದಾಳಿಯ ಶಂಕೆ ವ್ಯಕ್ತವಾಗಿದೆ. ಈ ಘಟನೆ ಎರ್ನಾಕುಲಂನ ಕಲಮಶ್ಶೇರಿಯಲ್ಲಿರುವ ಜಾಮ್ರಾ ಇಂಟರ್‌ನ್ಯಾಷನಲ್‌ ಸಭಾಭವನದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಬೆಳಗ್ಗಿನ ಪ್ರಾರ್ಥನೆಗಾಗಿ ನೂರಾರು ಜನ ಸೇರಿದ್ದು, ಬೆಳಿಗ್ಗೆ

ಕೇರಳದ ಎರ್ನಾಕುಲಂನಲ್ಲಿ ಭೀಕರ ಸ್ಪೋಟ | ಓರ್ವ ಮಹಿಳೆ ಮೃತ್ಯು, 23 ಮಂದಿಗೆ ಗಾಯ Read More »

ಹೆರಿಗೆ ವೇಳೆ ಮಾಡಾವಿನ ಮಹಿಳೆ ಮೃತ್ಯು

ಪುತ್ತೂರು: ಪುತ್ತೂರು ತಾಲೂಕಿನ ಮಾಡಾವಿನ ಎರಡು ಮಕ್ಕಳ ತಾಯಿಯೊಬ್ಬರು ಮಂಗಳೂರಿನ ಯುನಿಟಿ ಆಸ್ಪತ್ರೆಯಲ್ಲಿ ಹೆರಿಗೆ ವೇಳೆ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ನ ಸದಸ್ಯೆ, ಪರ್ಲಡ್ಕ ಅಬ್ದುಲ್ ರಶೀದ್ ಹಾಜಿಯವರ ಪುತ್ರಿ ಮರಿಯಮ್ ರಮೀಝಾ ಮೃತಪಟ್ಟ ಮಹಿಳೆ ಪುತ್ತೂರಿನ ಸಂಪ್ಯ ನಿವಾಸಿ ಮರ್ಹೂಮ್ ಅಬೂಬಕ್ಕರ್ ಪಟ್ಲಮೂಲೆ ಅವರ ಮಗ ಮಡಾವು ನಿವಾಸಿ ಗಲ್ಫ್ ನ ಒಮಾನ್‍ ನಲ್ಲಿ ಉದ್ಯೋಗಿಯಾಗಿರುವ ಮುಹಮ್ಮದ್ ರಫೀಖ್ ಅವರ ಪತ್ನಿಯಾಗಿದ್ದು, ಮೂರನೇ ಹೆರಿಗೆಗಾಗಿ ಆಸ್ಪತ್ರೆಗೆ

ಹೆರಿಗೆ ವೇಳೆ ಮಾಡಾವಿನ ಮಹಿಳೆ ಮೃತ್ಯು Read More »

error: Content is protected !!
Scroll to Top