ಮಹಿಳೆ ಕುತ್ತಿಗೆಯಿಂದ ಕರಿಮಣಿ ಸರ ಕಿತ್ತು ಪರಾರಿ | ಪ್ರಕರಣ ದಾಖಲು

ಮೂಡಿಗೆರೆ : ಮೂಡಿಗೆರೆ ಕೆಎಸ್ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಕದೀಮರು 37 ಗ್ರಾಂ ಮಾಂಗಲ್ಯ ಸರ ಕಿತ್ತು ಪರಾರಿಯಾದ ಘಟನೆ ನಡೆದಿದೆ. ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಬರುತ್ತಿದ್ದ ಮಹಿಳೆ ಯಶೋಧಮ್ಮ ಎಂಬುವರು ಬಸ್ಸಿಗೆ ಹತ್ತುವಾಗ ಕುತ್ತಿಗೆಯಲ್ಲಿ ಹಾಕಿದ್ದ 37 ಗ್ರಾಮ್ ಮಾಂಗಲ್ಯ ಸರ ಕಿತ್ತ ಖದೀಮರು ಪರಾರಿಯಾಗಿದ್ದಾರೆ ಎನ್ನಲಾಗಿದೆ. 1 ಲಕ್ಷ ಕ್ಕಿಂತ ಹೆಚ್ಚು ಬೆಲೆ ಬಾಳುವ ಮಾಂಗಲ್ಯ ಸರ ಆಗಿದ್ದು, ಕಳೆದುಕೊಂಡ ಮಹಿಳೆ ಕೊಟ್ಟಿಗೆಹಾರದ ತರುವೆ ಮೂಲದವರು. ಮೂಡಿಗೆರೆ ಬಸ್ ನಿಲ್ದಾಣದಲ್ಲಿ ಸಿ.ಸಿ.ಕ್ಯಾಮರಾ ಇಲ್ಲದಿರುವುದರಿಂದ ಈ […]

ಮಹಿಳೆ ಕುತ್ತಿಗೆಯಿಂದ ಕರಿಮಣಿ ಸರ ಕಿತ್ತು ಪರಾರಿ | ಪ್ರಕರಣ ದಾಖಲು Read More »

ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಪ್ರಶಾಂತ್ ಪಲ್ಲತ್ತಡ್ಕ ನಿಧನ

ಪುತ್ತೂರು : ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಸಹ ಮಾಲಕ ಪ್ರಶಾಂತ್ ಪಲ್ಲತ್ತಡ್ಕ (32) ಅಲ್ಪಕಾಲದ ಅನಾರೋಗ್ಯದಿಂದ ಇಂದು ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ತೂರು, ಸುಳ್ಯ ಸಹಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಸಮಾರಂಭಕ್ಕೆ ಎಲ್‌ಇಡಿ ಹಾಗೂ ನೇರಪ್ರಸಾರಕ್ಕೆ ಬೇಕಾಗುವ ಪರಿಕರಗಳನ್ನು ಒದಗಿಸುವ ಜತೆ ತಾವೇ ಎಲ್‌ಇಡಿಗಳನ್ನು ಅಳವಡಿಸುವ ಪಿಕ್ಸೆಲ್ ಕ್ರಿಯೇಟಿವ್ಸ್ ಮೂಲಕ ಖ್ಯಾತರಾಗಿದ್ದ ಪ್ರಶಾಂತ್ ರವರು ಕೆಲ ದಿನಗಳಿಂದ ಅನಾರೋಗ್ಯದಿಂದಿದ್ದರು. ಮೃತರು ಪತ್ನಿ, ತಂದೆ ತಾಯಿ ಅಕ್ಕಂದಿರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

ಪಿಕ್ಸೆಲ್ ಕ್ರಿಯೇಟಿವ್ಸ್ ಸಂಸ್ಥೆಯ ಪ್ರಶಾಂತ್ ಪಲ್ಲತ್ತಡ್ಕ ನಿಧನ Read More »

ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ | ವರದಕ್ಷಿಣೆ ಕಿರುಕುಳ ಆರೋಪ

ಬಂಟ್ವಾಳ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ನವವಿವಾಹಿತೆಯೋರ್ವರು ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಸುಭಾಷ್ ನಗರ ನಿವಾಸಿ ನೌಸೀನ್ (22) ಈ ಕೃತ್ಯ ಎಸಗಿದವರು. ಉಳ್ಳಾಲದ ಆಜ್ಮಾನ್ ಜತೆ ನೌಸೀನ್ ಅವರ ವಿವಾಹ ಮೂರು ತಿಂಗಳ ಹಿಂದೆ ನಡೆದಿತ್ತು. ಈ ಸಂದರ್ಭದಲ್ಲಿ ವರನಿಗೆ 18 ಪವನ್ ಚಿನ್ನ ವರದಕ್ಷಿಣೆ ರೂಪದಲ್ಲಿ ನೀಡಿದ್ದರು ಎನ್ನಲಾಗಿದೆ. ತಂಗಿಯ ಸಾವಿಗೆ ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ಕಾರಣ ಎಂದು

ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ | ವರದಕ್ಷಿಣೆ ಕಿರುಕುಳ ಆರೋಪ Read More »

ಮಾಯ್‌ ದೆ ದೇವುಸ್‌  ಸಮೂಹ ಶಿಕ್ಷಣ ಸಂಸ್ಥೆಗಳಿಂದ ಮಾದಕ ದ್ರವ್ಯ ಸೇವನೆಯ ವಿರುದ್ಧ  ಜನ ಜಾಗೃತಿ ನಡಿಗೆ ಜಾಥಾ | ನಗರದಲ್ಲಿ ಸಂಚರಿಸಿದ ಜಾಥಾ

ಪುತ್ತೂರು: ಪುತ್ತೂರಿನ ಕ್ಯಾಥೊಲಿಕ್‌ ಶಿಕ್ಷಣ ಸಂಸ್ಥೆಗಳ ವತಿಯಿಂದ ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೃಹತ್‌ ನಡಿಗೆ ಜಾಥಾ ಸೋಮವಾರ ಆಯೋಜಿಸಲಾಯಿತು. ಸಂತ ಫಿಲೋಮಿನಾ ಕಾಲೇಜು ಪ್ರಾಂಗಣದಲ್ಲಿ ಕಾರ್ಯಕ್ರಮ ರೂವಾರಿ, ಮಾಯ್‌ ದೆ ದೇವುಸ್‌ ಶಿಕ್ಷಣ ಸಂಸ್ಥೆಗಳ ಸಂಚಾಲಕ ಅತಿ ವಂದನೀಯ ಲಾರೆನ್ಸ್‌ ಮಸ್ಕರೇಞಸ್‌ ಚಾಲನೆ ನೀಡಿ, ಮಾದಕ ದ್ರವ್ಯ ಸೇವನೆಯ ವಿದುದ್ಧ ಹೋರಾಡಲು ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ನಡಿಗೆ ಜಾಥಾ ಮುಖ್ಯ ರಸ್ತೆಯಲ್ಲಿ ಸಾಗಿ ಮಹಮ್ಮಾಯಿ ದೇವಸ್ಥಾನ ರಸ್ತೆಯ ಮೂಲಕ ಸಂಚರಿಸಿ ಪುತ್ತೂರು

ಮಾಯ್‌ ದೆ ದೇವುಸ್‌  ಸಮೂಹ ಶಿಕ್ಷಣ ಸಂಸ್ಥೆಗಳಿಂದ ಮಾದಕ ದ್ರವ್ಯ ಸೇವನೆಯ ವಿರುದ್ಧ  ಜನ ಜಾಗೃತಿ ನಡಿಗೆ ಜಾಥಾ | ನಗರದಲ್ಲಿ ಸಂಚರಿಸಿದ ಜಾಥಾ Read More »

ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರು ಪತ್ತೆ | ಆತ್ಮಹತ್ಯೆಗೈದ ಚಿಕ್ಕಮಗಳೂರಿನ ಉದ್ಯಮಿ!!

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 67ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರೊಂದು ಇಂದು ಪತ್ತೆಯಾದ ಬೆನ್ನಲ್ಲೇ ಪರಿಶೀಲನೆ ನಡೆಸಿದಾಗ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಚಿಕ್ಕಮಗಳೂರಿನ ಗೋಕುಲ್ ಫಾರ್ಮ್‌ ನಿವಾಸಿ ಪ್ರಸನ್ನ (37) ಆತ್ಮಹತ್ಯೆ ಮಾಡಿಕೊಂಡವರು. ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುವ ದಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಬಳಿ ಕಾರು ನಿಲ್ಲಿಸಿ ತಡೆಬೇಲಿಯ ಬದಿಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ 3 ವರ್ಷಗಳಿಂದ ಆತ್ಮಹತ್ಯೆಗಳಿಂದ ನಿರಾತಂಕವಾಗಿದ್ದ ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ

ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರು ಪತ್ತೆ | ಆತ್ಮಹತ್ಯೆಗೈದ ಚಿಕ್ಕಮಗಳೂರಿನ ಉದ್ಯಮಿ!! Read More »

ರಾಮ್ ಸೇನಾ ವಾಯುಪುತ್ರ ಘಟಕದಿಂದ ಧನ ಸಹಾಯ ಹಸ್ತಾಂತರ

ಮಂಗಳೂರು: ಕುಪ್ಪೆಪದವು ರಾಮ್ ಸೇನಾ ವಾಯುಪುತ್ರ ಘಟಕದ ವತಿಯಿಂದ ನವರಾತ್ರಿಯಂದು ನಡೆದ ಭವತಿ ಭಿಕ್ಷಾಂದೆಹೀ ಮೂಲಕ ಸಂಗ್ರಹಿಸಿದ ಮೊತ್ತವನ್ನು ಹಸ್ತಾಂತರಿಸಲಾಯಿತು. ಕುಪ್ಪೆಮದವು ಶ್ರೀ ದುರ್ಗೆಶ್ವರಿ ದೇವಸ್ಥಾನನದಲ್ಲಿ ಸಹಾಯಧನವನ್ನು ದೇರೆಬೈಲ್ ಕೊಂಚಾಡಿ ನಿವಾಸಿ ಅನುಪಮಾ ಅವರ 2 ತಿಂಗಳ ನವಜಾತ ಶಿಶುವಿನ ಚಿಕಿತ್ಸೆಗೆ 32,057,  ಕುಪ್ಪೆಪದವು ನಿವಾಸಿ ಮೋಹನ್ ಚಿಕಿತ್ಸೆಗೆ 10,500. ಮೂಡಬಿದಿರೆ ಅಲಂಗಾರು ನಿವಾಸಿ ಸಿಂಚನಳ ಚಿಕಿತ್ಸೆಗೆ 20,100, ಹಾಗೂ ಕುಪ್ಪೆಪದವು ಪರಿಸರದ ಬಡ ಕುಟುಂಬದ ಹೆಣ್ಣು ಮಗಳ ಮದುವೆಗೆ 10,500 ಹೀಗೆ ಒಟ್ಟು 4 ಕುಟುಂಬಕ್ಕೆ

ರಾಮ್ ಸೇನಾ ವಾಯುಪುತ್ರ ಘಟಕದಿಂದ ಧನ ಸಹಾಯ ಹಸ್ತಾಂತರ Read More »

ಬ್ಯಾನರ್ ಅಳಡಿಕೆ ವಿಚಾರ | ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಮತ್ತಿತರರ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ: ಬ್ಯಾನರ್ ವಿಚಾರದ ಹಿನ್ನಲೆಯಲ್ಲಿ ರಾಷ್ಟ್ರೀಯ ಹಿಂದು ಜಾಗರಣ ವೇದಿಕೆ ಮುಖಂಡ ಮಹೇಶ್‌ ಶೆಟ್ಟಿ ತಿಮರೋಡಿ ಹಾಗೂ ಇತರರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಧರ್ಮಸ್ಥಳ ಗ್ರಾಮದ ಸಂದೀಪ್ ರೈ ಎಂಬವರು ತಿಮರೋಡಿ ಹಾಗೂ ಮತ್ತಿತರರ ವಿರುದ್ಧ ದೂರು ನೀಡಿದವರಾಗಿದ್ದಾರೆ. ಬೆಳ್ತಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಧರ್ಮಸಂರಕ್ಷಣಾ ಯಾತ್ರೆಯ ಸಲುವಾಗಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ಯಾತ್ರೆಗೆ ಬೆಂಬಲ ಸೂಚಿಸಿ ಅಳವಡಿಸಲಾಗಿದ್ದ ಬ್ಯಾನರ್‌ಗಳ ಸಮೀಪದಲ್ಲೇ ಪಾದಯಾತ್ರೆಯನ್ನು ನಿಲ್ಲಿಸುವ ಒಳಸಂಚಿನಿಂದ ಪ್ರಾದೇಶಿಕ ಗುಂಪುಗಳ ನಡುವಣ ಸೌಹಾರ್ದಕ್ಕೆ

ಬ್ಯಾನರ್ ಅಳಡಿಕೆ ವಿಚಾರ | ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಮತ್ತಿತರರ ವಿರುದ್ಧ ಪ್ರಕರಣ ದಾಖಲು Read More »

ಉಳ್ಳಾಲ ನೇತ್ರಾವತಿ ನದಿ ಸೇತುವೆಯಲ್ಲಿ ಕಾರು ಪತ್ತೆ | ಆತ್ಮಹತ್ಯೆ ಶಂಕೆ

ಮಂಗಳೂರು:  ರಾಷ್ಟ್ರೀಯ ಹೆದ್ದಾರಿ 67ರ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಅನಾಥ ಕಾರೊಂದು ಇಂದು ಪತ್ತೆಯಾಗಿದ್ದು, ಕಾರು ನಿಲ್ಲಿಸಿ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ.ಕಾರನ್ನು ಪರಿಶೀಲಿಸಿದಾಗ ಚಿಕ್ಕಮಗಳೂರು ಜಿಲ್ಲೆಯ ವ್ಯಕ್ತಿಯೊಬ್ಬರ ಕೆಲವು ಗುರುತಿನ ಕಾರ್ಡ್‌ಗಳು ಕಂಡು ಬಂದಿವೆ. ಅಲ್ಲದೆ ಕಾರಿನ ಕೀ ಕೂಡಾ ಕಾರಿನಲ್ಲೇ ಪತ್ತೆಯಾಗಿದ್ದು, ಏನಾಗಿರಬಹುದು ಎಂಬ ಮಾಹಿತಿ ತಿಳಿದು ಬಂದಿಲ್ಲ.ಕಾರಿನಲ್ಲಿ ಕಂಡು ಬಂದ ಗುರುತಿನ ಚೀಟಿಯ ಆಧಾರದ ಮೇಲೆ ಆ ವ್ಯಕ್ತಿಯ ಮನೆಯವರನ್ನು ಸಂಪರ್ಕಿಸಿ ವಿಷಯ ತಿಳಿಸಲಾಗಿದೆ. ಮನೆ ಮಂದಿ ಬಂದ

ಉಳ್ಳಾಲ ನೇತ್ರಾವತಿ ನದಿ ಸೇತುವೆಯಲ್ಲಿ ಕಾರು ಪತ್ತೆ | ಆತ್ಮಹತ್ಯೆ ಶಂಕೆ Read More »

ಬಸ್‍ ಗೆ ಟಿಪ್ಪರ್ ಡಿಕ್ಕಿ

ಪುತ್ತೂರು: ಟಿಪ್ಪರೊಂದು ಕೆ.ಎಸ್.ಆರ್.ಟಿ.ಸಿ ಬಸ್ ಗೆ ಹಿಂದಿನಿಂದ ಡಿಕ್ಕಿಯಾದ ಘಟನೆ ನಡೆದಿದೆ. ಅರುಣಾ ಥಿಯೇಟರ್ ಬಳಿ ಅಪಘಾತ ಸಂಭವಿಸಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಡಿಕ್ಕಿಯ ಪರಿಣಾಮ ಬಸ್ ನ ಹಿಂಭಾಗಕ್ಕೆ ಹಾನಿಯಾಗಿದೆ. ಅಪಘಾತದಿಂದಾಗಿ ಕೆಲ ಕಾಲ ರಸ್ತೆ ಬ್ಲಾಕ್ ಆಗಿದ್ದು, ಪುತ್ತೂರು ಸಂಚಾರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಬಸ್‍ ಗೆ ಟಿಪ್ಪರ್ ಡಿಕ್ಕಿ Read More »

ಒಕ್ಕಲಿಗ ಸಮುದಾಯಪತ್ತಿನ ಸಹಕಾರ ಸಂಘದಿಂದ ಸಿಬ್ಬಂದಿಗಳ ‘ಸಮ್ಮಿಲನ-ಮಾಹಿತಿ ಕಾರ್ಯಾಗಾರ’

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವತಿಯಿಂದ ಸಿಬ್ಬಂದಿಗಳ ಸಮ್ಮಿಲನ-ಮಾಹಿತಿ ಕಾರ್ಯಾಗಾರ ಬಲ್ನಾಡು ಗ್ರಾಮದ ಉಜಿರುಪಾದೆ ಬೈಲಾಡಿ ನಿವಾಸದಲ್ಲಿ ನಡೆಯಿತು. ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ ಹಾಗೂ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ ಮಾತನಾಡಿ, ಸಿಬ್ಬಂದಿಗಳು ಪ್ರಾಮಾಣಿಕ ಹಾಗೂ ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿ, ಸಂಘ ಬೆಳೆದು ಬಂದ ರೀತಿಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಬಲ್ನಾಡು ಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ, ಬೈಲಾಡಿ ಕುಟುಂಬದ ಯಜಮಾನ ದೇವಪ್ಪ ಗೌಡ ಹಾಗೂ ತರಬೇತಿ

ಒಕ್ಕಲಿಗ ಸಮುದಾಯಪತ್ತಿನ ಸಹಕಾರ ಸಂಘದಿಂದ ಸಿಬ್ಬಂದಿಗಳ ‘ಸಮ್ಮಿಲನ-ಮಾಹಿತಿ ಕಾರ್ಯಾಗಾರ’ Read More »

error: Content is protected !!
Scroll to Top