ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಕೇಂದ್ರದ ಅನುಮತಿ | ಟೆಂಡರ್ ಕರೆದ ರಾಷ್ಟ್ರೀಯ ಹೆದ್ದಾರಿ ಇಲಾಖೆ

ಮಂಗಳೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ಧಾರಿ ಚತುಷ್ಪತ ಕಾಮಗಾರಿಗೆ ಕೇಂದ್ರದ ಅನುಮತಿ, ಡಿ.ಪಿ.ಆರ್ ಹಾಗೂ ಸಾಧ್ಯತಾ ವರದಿ ತಯಾರಿಸಲು ಟೆಂಡರ್ ಕರೆದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಟೆಂಡರ್ ಕರೆದಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿ ಮೇರೆಗೆ ಬಹು ನಿರೀಕ್ಷಿತ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರ (ಮಾಣಿ-ಮೈಸೂರು-ಬೆಂಗಳೂರು ವಿಭಾಗ) 0.00 ಕಿ.ಮೀ. ನಿಂದ 71.60 ವರೆಗಿನ ರಸ್ತೆಯ ಚತುಷ್ಪಥ ಕಾಮಗಾರಿಗೆ ಯೋಜನಾ ವರದಿ (ಡಿಪಿಆರ್), ಕಾರ್ಯಸಾಧ್ಯತೆಯ ಅಧ್ಯಯನ, ಸಮೀಕ್ಷೆ ಮತ್ತು ಭೂ ಯೋಜನೆಯನ್ನು ಸಿದ್ಧಪಡಿಸಲು ಅರ್ಹ […]

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಕೇಂದ್ರದ ಅನುಮತಿ | ಟೆಂಡರ್ ಕರೆದ ರಾಷ್ಟ್ರೀಯ ಹೆದ್ದಾರಿ ಇಲಾಖೆ Read More »

ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವರ ತಂದೆ ಆನಂದ ಆಳ್ವ ನಿಧನ

ಮಂಗಳೂರು : ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಡಾ. ಮೋಹನ್ ಆಳ್ವರ ತಂದೆ ಆನಂದ ಆಳ್ವ (106) ತಮ್ಮ ಸ್ವಗೃಹದಲ್ಲಿ ಇಂದು ನಿಧನರಾಗಿದ್ದಾರೆ. ಆನಂದ ಆಳ್ವ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರೀಯಾಶೀಲರಾಗಿ ಗುರುತಿಸಿಕೊಂಡಿದ್ದರು. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುವ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿ ಭಾಗವಹಿಸುವ ಕೆಲವೇ ಮಂದಿಗಳಲ್ಲಿ ಆನಂದ ಆಳ್ವರೂ ಒಬ್ಬರಾಗಿದ್ದಾರೆ. ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಹಲವು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಆನಂದ ಆಳ್ವ ಮೂಡಬಿದಿರೆ ಪರಿಸರದಲ್ಲಿ ಜನಾನುರಾಗಿಯಾಗಿ

ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವರ ತಂದೆ ಆನಂದ ಆಳ್ವ ನಿಧನ Read More »

ಬೆಳಂದೂರು ಸರಕಾರಿ ಪ್ರಥಮದರ್ಜೆ ಕಾಲೇಜಿನ ಎನ್‍ಎಸ್‍ಎಸ್‍ ಯೋಜನೆ ಉದ್ಘಾಟನೆ

ಬೆಳಂದೂರು: ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023-24 ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಜೆಸಿಐ ತರಬೇತುದಾರ, ಸುಳ್ಯ ಕಾಲೇಜಿನ ಪ್ರಾಂಶುಪಾಲ ಡಾ ಶಂಕರ್ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಂಪನ್ಮೂಲ ವ್ಯಕ್ತಿ ಮನಮೋಹನ್, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಶಾಂತಿ ಕೆ., ರಂಜಿತ್ ಪಿ ಜೆ., , ಐಕ್ಯೂಎಸಿ ಸಂಚಾಲಕ ಸ್ವಾಮಿ ಎಸ್., ರಾಷ್ಟ್ರೀಯ ಸೇವಾ ಯೋಜನೆಯ ಘಟಕ ನಾಯಕರುಗಳಾದ ಕ್ಷಿತಿಜ್, ಚಂದ್ರಿಕಾ ಉಪಸ್ಥಿತರಿದ್ದರು.

ಬೆಳಂದೂರು ಸರಕಾರಿ ಪ್ರಥಮದರ್ಜೆ ಕಾಲೇಜಿನ ಎನ್‍ಎಸ್‍ಎಸ್‍ ಯೋಜನೆ ಉದ್ಘಾಟನೆ Read More »

ಸುಳ್ಯ ಉಬರಡ್ಕ ನಿವಾಸಿ ಅವಿನಾಶ್ ನಾಪತ್ತೆ | ಪ್ರಕರಣ ದಾಖಲು

ಸುಳ್ಯ: ತಾಲೂಕಿನ ಉಬರಡ್ಕ ಗ್ರಾಮದ ಸೂಂತೋಡು ನಿವಾಸಿ ಅವಿನಾಶ್ ಭಂಡಾರ (39) ಕಳೆದ ಎರಡು ದಿನಗಳಿಂದ ನಾಪತ್ತೆಯಾಗಿರುವ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಅವಿನಾಶ್ ಅವರು ಅ.29 ರಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೋಗಿದ್ದವರು ಹಿಂತಿರುಗಿ ಬರಲಿಲ್ಲ ಎಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಅವರನ್ನು ಯಾರಾದರು ಕಂಡಲ್ಲಿ ಸುಳ್ಯ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಳ್ಯ ಉಬರಡ್ಕ ನಿವಾಸಿ ಅವಿನಾಶ್ ನಾಪತ್ತೆ | ಪ್ರಕರಣ ದಾಖಲು Read More »

ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ | ಒಂದೇ ಕುಟುಂಬದ ಐವರು ಮೃತ್ಯು

ಉತ್ತರ ಪ್ರದೇಶ: ಕಾರೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಹರ್ದೋಯ್’ನ ಸವಯಜ್ ಪುರ ಕೊಟ್ಟಾಲಿ ಪ್ರದೇಶದ ಬಿಲ್ ಹೌರ್-ಕತ್ರಾ ರಸ್ತೆಯ ಖಮಾರಿಯಾ ತಿರುವಿನ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ನಾಲ್ಕು ವರ್ಷದ ಮಗು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಮೃತರು ಪಚ್ ದೇವ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಬರಕಾಂತ್ ಗ್ರಾಮದವರಾಗಿದ್ದು, ಒಂದೇ ಕುಟುಂಬದವರು ಎನ್ನಲಾಗಿದೆ. ಅಪಘಾತದ

ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ | ಒಂದೇ ಕುಟುಂಬದ ಐವರು ಮೃತ್ಯು Read More »

ದ.ಕ.ಜಿಲ್ಲಾ ಮಟ್ಟದ ಕ್ರೀಡಾಕೂಟ | ಕಡಬದ ಚರಿಷ್ಮಾರಿಂದ ಕೂಟ ದಾಖಲೆ

ಮೂಡಬಿದ್ರೆ: ಮೂಡುಬಿದಿರೆಯಲ್ಲಿ ನಡೆಯುತ್ತಿರುವ ದ.ಕ. ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಪ್ರೌಢಶಾಲಾ ಬಾಲಕಿಯರ ವಿಭಾಗದ 1500 ಮತ್ತು 3000 ಕಿ.ಮೀ ಓಟದಲ್ಲಿ ಕಡಬ ಸ.ಪ.ಪೂ.ಕಾಲೇಜಿನ ವಿದ್ಯಾರ್ಥಿನಿ ಚರಿಷ್ಮಾ ಕೂಟ ದಾಖಲೆ ನಿರ್ಮಿಸಿದ್ದಾರೆ. ಎಡಪದವು ಪ.ಪೂ.ಕಾಲೇಜಿನ ಸೌಮ್ಯ ಕೆ.ಪಿ ಅವರು 2004ರಲ್ಲಿ 5:01.70 ಸೆಕುಂಡು ನಲ್ಲಿ ಕ್ರಮಿಸಿ ಮಾಡಿರುವ ದಾಖಲೆಯನ್ನು ಚರಿಷ್ಮಾ ಅವರು 4:53.9 ಸೆಕುಂಡಿನಲ್ಲಿ ಕ್ರಮಿಸುವ ಮೂಲಕ ಹಾಗೂ 3000 ಓಟದಲ್ಲಿ 10:44.7 ಸೆಕುಂಡಿನಲ್ಲಿ ಗುರಿ ಮುಟ್ಟುವ ಮೂಲಕ ಉಜಿರೆ ಎಸ್ ಡಿ.ಎಂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ

ದ.ಕ.ಜಿಲ್ಲಾ ಮಟ್ಟದ ಕ್ರೀಡಾಕೂಟ | ಕಡಬದ ಚರಿಷ್ಮಾರಿಂದ ಕೂಟ ದಾಖಲೆ Read More »

ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು ನಿಧನ

ಕಾರ್ಕಳ: ತಾಲೂಕಿನ ಅಜೆಕಾರು ನಿವಾಸಿ ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು (54) ಹೃದಯಾಘಾತದಿಂದ ನಿಧನರಾದರು. ಶೇಖರ್ ಅಜೆಕಾರ್ ಅವರು ಮಕ್ಕಳ ಸಾಹಿತ್ಯದ ಕುರಿತು ಹೆಚ್ಚು ಆಸಕ್ತಿ ವಹಿಸಿದ್ದು, ಮಕ್ಕಳ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಲೇಖಕ, ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರು ನಿಧನ Read More »

ಹಿರಿಯಡ್ಕದ ಸಂತೋಷ್ ನೇಣು ಬಿಗಿದು ಆತ್ಮಹತ್ಯೆ

ಹಿರಿಯಡ್ಕ: ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕದಲ್ಲಿ ನಡೆದಿದೆ. ಹರಿಖಂಡಿಗೆಯ ಸಂತೋಷ್ (38) ಈ ಕೃತ್ಯ ಎಸಗಿದವರು. ಸರಿಯಾದ ಕೆಲಸ ಇಲ್ಲದೆ ಮಾಡಿದ ಸಾಲ ಮರುಪಾವತಿಸಲು ಆಗದ ಚಿಂತೆಯಲ್ಲಿ ಮಾನಸಿಕವಾಗಿ ನೊಂದು ಮನೆಯ ಬಾವಿಯ ರಾಟೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಈ ಕುರಿತು ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯಡ್ಕದ ಸಂತೋಷ್ ನೇಣು ಬಿಗಿದು ಆತ್ಮಹತ್ಯೆ Read More »

ಸ್ಕೂಟರ್ ಡಿಕ್ಕಿ : ಪಾದಚಾರಿಗೆ ಗಾಯ

ಕೌಡಿಚ್ಚಾರ್: ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಗಾಯಗೊಂಡ ಘಟನೆ ಕೌಡಿಚ್ಚಾರ್ ನಲ್ಲಿ ನಡೆದಿದೆ. ಪಡುವನ್ನೂರು ಗ್ರಾಮದ ನಾರಾಯಣ ರೈ (67) ಗಾಯಗೊಂಡವರು. ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಸುಹೈಲ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ಡಿಕ್ಕಿಯಾಗಿದೆ. ಪರಿಣಾಮ ನಾರಾಯಣ ರೈ ಅವರು ಗಂಭೀರ ಗಾಯಗೊಂಡು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಕೂಟರ್ ಡಿಕ್ಕಿ : ಪಾದಚಾರಿಗೆ ಗಾಯ Read More »

ನಾಳೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ | 10 ಮಂದಿ ಸಾಧಕರಿಗೆ ಸನ್ಮಾನ

ಪುತ್ತೂರು: ನಾಳೆ ನಡೆಯಲಿರುವ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ 10 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಸನ್ಮಾನಿತರ ಆಯ್ಕೆ ಪ್ರಕ್ರಿಯೆ ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ 5 ಮಂದಿಯ ಆಯ್ಕೆ ಸಮಿತಿಯಿಂದ ಈಗಾಗಲೇ ನಡೆದಿದೆ. ಹಿರಿಯ ಪ್ರಸೂತಿ ತಜ್ಞ ಡಾ.ಸುಬ್ರಾಯ ಭಟ್ (ವೈದ್ಯಕೀಯ), ಎ.ಪಿ.ನಾರಾಯಣ ಮರಿಕೆ (ಕೃಷಿ), ನಿರ್ಮಲಾ ಸುರತ್ಕಲ್ (ಸಾಹಿತ್ಯ), ನಾರಾಯಣ ಕೆ. (ಶಿಕ್ಷಣ), ದಯಾನಂದ ರೈ ಕೋರ್ಮಂಡ (ಕ್ರೀಡೆ), ಸುಂದರ ರೈ ಮಂದಾರ (ರಂಗಭೂಮಿ), ರೆ.ವಿಜಯ ಹಾರ್ವಿನ್

ನಾಳೆ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ | 10 ಮಂದಿ ಸಾಧಕರಿಗೆ ಸನ್ಮಾನ Read More »

error: Content is protected !!
Scroll to Top