ಕೋಡಿಂಬಾಡಿಯಲ್ಲಿ ‘ದೀಪಾ ಎಂಟರ್ ಪ್ರೈಸಸ್’ ಶುಭಾರಂಭ

ಪುತ್ತೂರು: ಇನ್ ವರ್ಟರ್, ಬ್ಯಾಟರಿ, ಸೋಲಾರ್ ಉತ್ಪನ್ನಗಳ ಸಹಿತ ಮೋದಿಕೇರ್ ಸ್ವದೇಶಿ ವಸ್ತುಗಳ ಮಾರಾಟ ಮಳಿಗೆ “ದೀಪಾ ಎಂಟರ್ ಪ್ರೈಸಸ್‍” ಬುಧವಾರ ಕೋಡಿಂಬಾಡಿ ಶಿವ ಕಾಂಪ್ಲೆಕ್ಸ್ ನ ವಾಣಿಜ್ಯ ಸಂಕೀರ್ಣದಲ್ಲಿ ಶುಭಾರಂಭಗೊಂಡಿತು. ಕೋಡಿಂಬಾಡಿ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಕೃಷ್ಣ ಭಟ್ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭಕ್ಕೆ ಹಲವಾರು ಗಣ್ಯರು ಆಗಮಿಸಿ ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಸುರೇಶ ಎಂ.ಕೆ. ಎಲ್ಲರನ್ನು ಸ್ವಾಗತಿಸಿ, ಸಂಸ್ಥೆಯಲ್ಲಿ ಇನ್ ವರ್ಟರ್, ಬ್ಯಾಟರಿ, […]

ಕೋಡಿಂಬಾಡಿಯಲ್ಲಿ ‘ದೀಪಾ ಎಂಟರ್ ಪ್ರೈಸಸ್’ ಶುಭಾರಂಭ Read More »

ಸರ್ವೆ ಕಲ್ಪನೆ ಶಾಲಾ ವಿದ್ಯಾರ್ಥಿ ಸುಪ್ರೀತ್ ನಿಧನ

ಸರ್ವೆ: ಕಲ್ಪನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ 7ನೇ ತರಗತಿ ವಿದ್ಯಾರ್ಥಿ ಸುಪ್ರೀತ್ ಬುಧವಾರ ನಿಧನರಾಗಿದ್ದಾರೆ. ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾದ ಸುಪ್ರೀತ್‍ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆಗೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುಪ್ರೀತ್ ಮುಂಡೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾ ಪೆರಂಟೋಳು ಹಾಗೂ ಕುಂಞ ಮೇಸ್ತ್ರಿ ದಂಪತಿ ಪುತ್ರ.

ಸರ್ವೆ ಕಲ್ಪನೆ ಶಾಲಾ ವಿದ್ಯಾರ್ಥಿ ಸುಪ್ರೀತ್ ನಿಧನ Read More »

ಕನ್ನಡ ಭುವನೇಶ್ವರಿಯ ವೈಭವದ ಮೆರವಣಿಗೆ | ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ

ಪುತ್ತೂರು: ಕರ್ನಾಟಕ ಮರು ನಾಮಕರಣಗೊಂಡು 50ನೇ ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ಪುತ್ತೂರಿನಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕನ್ನಡ ಭುವನೇಶ್ವರಿ ಮೆರವಣಿಗೆಯೊಂದಿಗೆ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಬುಧವಾರ ಆಚರಿಸಲಾಯಿತು. ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ’ ಎಂಬ ಧ್ಯೇಯ ವಾಕ್ಯದೊಂದಿಗೆ ನಡೆದ ಕನ್ನಡ ಭುವನೇಶ್ವರಿ ಮೆರವಣಿಗೆಗೆ ಶಾಸಕ ಅಶೋಕ್ ಕುಮಾರ್ ರೈ ದರ್ಬೆ ವೃತ್ತದ ಬಳಿ ಕನ್ನಡ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು ಉಪಸ್ಥಿತರಿದ್ದರು.

ಕನ್ನಡ ಭುವನೇಶ್ವರಿಯ ವೈಭವದ ಮೆರವಣಿಗೆ | ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ Read More »

ಚೀನಾದಲ್ಲಿ ನಡೆದ 19ನೇ ಏಷಿಯಾ ಚಾಂಪಿಯನ್ ಶಿಪ್: ದೇಶದ ಕೀರ್ತಿ ಪತಾಕೆ ಹಾರಿಸಿದ ಪುತ್ತೂರಿನ ಪ್ರತಿಭೆ ಪ್ರಜ್ಞಾ ವೈ. ಗಾಯತ್ರಿ

ಪುತ್ತೂರು: ಪುತ್ತೂರಿನ ಪ್ರತಿಭೆ ಪ್ರಜ್ಞಾ ವೈ ಗಾಯತ್ರಿ ಚೀನಾದ ನಡೆದ 19ನೇ ಏಷಿಯಾ ಸ್ಟೇಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದು ದೇಶದ ಕೀರ್ತಿ ಪತಾಕೆನ್ನು ಹಾರಿಸಿದ್ದಾರೆ. ಭಾರತೀಯ ಜೂನಿಯರ್ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದು, ಅ.22ರಿಂದ 28ರವರೆಗೆ ಚೀನಾ ದೇಶದ ಬಿಧಾಯಿಯಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ತಂಡ 3ನೇ ಸ್ಥಾನ ಪಡೆದು ಕಂಚಿನ ಪದಕ ಪಡೆದುಕೊಂಡಿತ್ತು. ಕರ್ನಾಟಕದ ಐವರು ಆಟಗಾರರು ಸೇರಿ ಒಟ್ಟು 12 ಆಟಗಾರರೊಂದಿಗಿನ ಈ ತಂಡದಲ್ಲಿ ಪುತ್ತೂರಿನ ಮರೀಲ್ ನಿವಾಸಿ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಪ್ರಜ್ಞಾ

ಚೀನಾದಲ್ಲಿ ನಡೆದ 19ನೇ ಏಷಿಯಾ ಚಾಂಪಿಯನ್ ಶಿಪ್: ದೇಶದ ಕೀರ್ತಿ ಪತಾಕೆ ಹಾರಿಸಿದ ಪುತ್ತೂರಿನ ಪ್ರತಿಭೆ ಪ್ರಜ್ಞಾ ವೈ. ಗಾಯತ್ರಿ Read More »

ನೆಲ್ಲಿಕಟ್ಟೆ ರುಕ್ಮಿಣಿ ನಿಧನ

ಪುತ್ತೂರು: ನೆಲ್ಲಿಕಟ್ಟೆ ನಿವಾಸಿ ರುಕ್ಮಿಣಿ (92) ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾದರು. ನೆಲ್ಲಿಕಟ್ಟೆ ದಿ.ಭಟ್ಯಪ್ಪ ಗೌಡರ ಪತ್ನಿಯಾಗಿರುವ ಅವರು ವಯೋ ಸಹಜ ನಿಧನರಾದರು. ಮೃತರು ಪುತ್ರರಾದ ನಿವೃತ್ತ ಬ್ಯಾಂಕ್ ಉದ್ಯೋಗಿ ರಾಧಾಕೃಷ್ಣ ಗೌಡ, ನಿವೃತ್ತ ಎಸ್ಪಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ ಗೌಡ, ಶ್ರೀ ಮಹಾಲಿಂಗೇಶ್ವರ ಐಟಿಐ ಆಡಳಿತ ಸಮಿತಿ ನಿರ್ದೇಶಕ ಕಿಶೋರ್ ಕುಮಾರ್, ಪುತ್ರಿಯರಾದ ಜಯಲಕ್ಷ್ಮೀ ತಾರಾಮತಿ, ಭಾರತಿ, ಅಂಬಿಕಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

ನೆಲ್ಲಿಕಟ್ಟೆ ರುಕ್ಮಿಣಿ ನಿಧನ Read More »

ಉಪ್ಪಿನಂಗಡಿ ದೇವಳಕ್ಕೆ ಹೊಸ ಲುಕ್ : ಕ್ಷೇತ್ರದ ಅಭಿವೃದ್ದಿಗೆ 174 ಕೋಟಿ ರೂ. ಪ್ರಸ್ತಾವನೆ | ದೇವಸ್ಥಾನದ ಅಭಿವೃದ್ಧಿ ಕುರಿತ ಸಭೆಯಲ್ಲಿ ಶಾಸಕ ಅಶೋಕ್ ರೈ

ಉಪ್ಪಿನಂಗಡಿ: ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ 25 ವರ್ಷಗಳಷ್ಟಾದರೂ ಭವಿಷ್ಯದ ಚಿಂತನೆಯಿರಬೇಕು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ಅಭಿವೃದ್ಧಿಯೂ ಇದೇ ರೀತಿ ನಡೆಯಬೇಕಿದ್ದು, ಬರುವ ಭಕ್ತರಿಗೆ ಉತ್ತಮ ಇಲ್ಲಿ ವ್ಯವಸ್ಥೆ ಮಾಡಿಕೊಡುವ ಕಾರ್ಯವಾಗಬೇಕು. ಪುಣ್ಯಕ್ಷೇತ್ರವಾಗಿರುವ ಈ ಸಂಗಮ ಕ್ಷೇತ್ರವನ್ನು ಪ್ರವಾಸೋದ್ಯಮ ಕೇಂದ್ರವಾಗಿಯೂ ಅಭಿವೃದ್ಧಿ ಪಡಿಸಬೇಕಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಅಭಿವೃದ್ಧಿಯ ವಿಚಾರವಾಗಿ ದೇವಾಲಯದ ಸಭಾಂಗಣದಲ್ಲಿ ನಡೆದ ಹಾಲಿ ಹಾಗೂ ಮಾಜಿ ವ್ಯವಸ್ಥಾಪನಾ ಸಮಿತಿಯ ಸದಸ್ಯರು ಮತ್ತು ಭಕ್ತರ

ಉಪ್ಪಿನಂಗಡಿ ದೇವಳಕ್ಕೆ ಹೊಸ ಲುಕ್ : ಕ್ಷೇತ್ರದ ಅಭಿವೃದ್ದಿಗೆ 174 ಕೋಟಿ ರೂ. ಪ್ರಸ್ತಾವನೆ | ದೇವಸ್ಥಾನದ ಅಭಿವೃದ್ಧಿ ಕುರಿತ ಸಭೆಯಲ್ಲಿ ಶಾಸಕ ಅಶೋಕ್ ರೈ Read More »

ಮಣ್ಣು ಅಗೆತ ಸಂದರ್ಭ ಬರೆ ಕುಸಿದು ಮೂವರು ಮೃತ್ಯು

ಮಡಿಕೇರಿ: ಕಟ್ಟಡ ಕಾಮಗಾರಿ ಹಿನ್ನಲೆಯಲ್ಲಿ ಮಣ್ಣು ತೆಗೆಯುವ ಕೆಲಸ ಮಾಡುತ್ತಿದ್ದ ವೇಳೆ ಬರೆ ಕುಸಿದು ಮೂವರು ಮಣ್ಣಿನ ಅಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಮಂಗಳವಾರ ಮಡಿಕೇರಿಯ ಸ್ಟೀವರ್ಟ್ ಹಿಲ್ ಬಳಿ ನಡೆದಿದೆ. ಮಣ್ಣಿನಡಿಯಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಬಸವ, ಲಿಂಗಪ್ಪ, ಆನಂದ ಎಂದು ಗುರುತಿಸಲಾಗಿದೆ. ಮಣ್ಣಿನಡಿಯಲ್ಲಿ ಸಿಲುಕಿದ್ದ ಓರ್ವನ ಮೃತದೇಹ ಪತ್ತೆಯಾಗಿದ್ದು ಮತ್ತಿಬ್ಬರಿಗಾಗಿ ಅಗ್ನಿಶಾಮಕ ದಳ ಹಾಗೂ ಸ್ಥಳೀಯರಿಂದ ಶೋಧ ಕಾರ್ಯಾ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಮಣ್ಣು ಅಗೆತ ಸಂದರ್ಭ ಬರೆ ಕುಸಿದು ಮೂವರು ಮೃತ್ಯು Read More »

ಅಡಿಕೆ ಕಳ್ಳತನ : ನಾಲ್ವರು ಆರೋಪಿಗಳ ಬಂಧನ | ಸೊತ್ತುಗಳು ವಶಕ್ಕೆ

ಪುತ್ತೂರು: ಅಡಿಕೆ ಕಳ್ಳತನ ಮಾಡಿದ ನಾಲ್ವರು ಆರೋಪಿಗಳನ್ನು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿ ಅಡಿಕೆ ಹಾಗೂ ಕಳ್ಳತನಕ್ಕೆ ಬಳಸಿದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬಡಗನ್ನೂರಿನ ಕೊಯ್ದ ಮನೆ ಶ್ರವಣ್ ಕೆ (20), ಬಾಣಪದವು ಜಯಚಂದ್ರ (21), ನಿಡ್ನಳ್ಳಿ ಡೊಬ್ಬಟ್ಟಗಿರಿಯ ಅಶೋಕ (24), ನಿಡ್ನಳ್ಳಿ ಕಲ್ಲಮೂಲೆಯ ಪುನೀತ್ (20) ಎಂದು ಬಂಧಿತ ಆರೋಪಿಗಳು. ಬಂಧಿತರಿಂದ 1,55,925/- ರೂ. ಮೌಲ್ಯದ ಅಡಿಕೆ, ಕಳವು ಮಾಡಲು ಉಪಯೋಗಿಸಿದ ಸ್ವಿಪ್ಟ್ ಕಾರು, ಮತ್ತು ಆಟೋ ರಿಕ್ಷಾ ಸೇರಿದಂತೆ ಒಟ್ಟು 4,15,925/- ರೂ.

ಅಡಿಕೆ ಕಳ್ಳತನ : ನಾಲ್ವರು ಆರೋಪಿಗಳ ಬಂಧನ | ಸೊತ್ತುಗಳು ವಶಕ್ಕೆ Read More »

ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ ಇನ್ನಿಲ್ಲ

ಪೆರುವೋಡಿ: ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ (96) ಮಂಗಳವಾರ ನಿಧನರಾದರು. ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ  ಪದ್ಯಾಣದಲ್ಲಿ 1927 ರಲ್ಲಿ ಜನಿಸಿದ ಪೆರುವೋಡಿ ಪ್ರಸಿದ್ಧ ಧರ್ಮಸ್ಥಳ ಮೇಳಕ್ಕೆ ಸೇರಿ ಹಲವಾರು ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಪಾಪಣ್ಣ ಭಟ್ರು ಎಂದೇ ಖ್ಯಾತಿ ಪಡೆದ ನಾರಾಯಣ ಭಟ್ ಅವರು ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ವಿಶೇಷ ಮಾನ, ಮಾನ್ಯತೆ ತಂದು ಕೊಟ್ಟಿದ್ದಾರೆ. ‘ಪಾಪಣ್ಣ ವಿಜಯ’ ಪ್ರಸಂಗದ ಪಾಪಣ್ಣ ಪಾತ್ರದ ವಿನ್ಯಾಸ ಹಾಗೂ ಪಾತ್ರಾಭಿವ್ಯಕ್ತಿಯ ಮೂಲಕ ತಮ್ಮ ಕಲ್ಪನಾಶಕ್ತಿಯನ್ನು

ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ ಇನ್ನಿಲ್ಲ Read More »

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ | ದ.ಕ.ಜಿಲ್ಲೆಯ ನಾಲ್ವರು ಪ್ರಶಸ್ತಿಗೆ ಆಯ್ಕೆ

ಬೆಂಗಳೂರು: ರಾಜ್ಯದ ಪ್ರಮುಖ ಸಾಹಿತಿಗಳು, ತೆರೆಮರೆಯ ಸಾಧಕರು, ಸಮಾಜ ಸೇವಕರು ಸೇರಿದಂತೆ 68 ಸಾಧಕರಿಗೆ 2023-24ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದ್ದು, ದ.ಕ.ಜಿಲ್ಲೆಯ ನಾಲ್ವರಿಗೆ ಪ್ರಶಸ್ತಿ ಘೋಷಣೆ ಮಾಡಿದೆ. ಕನ್ನಡ ನಾಡಿನ ಪರವಾಗಿ ಗಣನೀಯ ಸೇವೆ ಸಲ್ಲಿಸಿದ 10 ಸಂಘ-ಸಂಸ್ಥೆಗಳನ್ನೂ ಸರಕಾರ ಗುರುತಿಸಿದೆ. ಪತ್ರಕರ್ತರಾದ ದಿನೇಶ್ , ಚಾರ್ಮಾಡಿ ಹಸನಬ್ಬ, ಹಾಜಿ ಅಬ್ದುಲ್ಲ ಪರ್ಕಳ, ಕೆ. ಷರೀಫಾ, ಹುಸೇನಾಬಿ ಬುಡೇನ್ ಸಾಬ್ ಸೇರಿದಂತೆ ಹಲವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು 10 ಸಂಘ-

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ | ದ.ಕ.ಜಿಲ್ಲೆಯ ನಾಲ್ವರು ಪ್ರಶಸ್ತಿಗೆ ಆಯ್ಕೆ Read More »

error: Content is protected !!
Scroll to Top