ಸ್ಥಿರವಾಗುಳಿದ ಅಡಿಕೆ, ರಬ್ಬರ್, ಕರಿಚಿನ್ನ ಧಾರಣೆ!

ಪುತ್ತೂರು: ಶನಿವಾರದ ಮಾರುಕಟ್ಟೆ ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ದಾಖಲಾಗಿಲ್ಲ. ಶುಕ್ರವಾರದಂತೆ ಯಥಾಸ್ಥಿತಿಯಲ್ಲಿ ಸಾಗುತ್ತಿದೆ. ಶನಿವಾರ ಹೊಸಅಡಿಕೆ 325- 365 ರೂ., ಹಳೆ ಅಡಿಕೆ 385 -430 ರೂ., ಗುಣಮಟ್ಟದ ಅಡಿಕೆ 431-435 ರೂ., ಡಬ್ಬಲ್ ಚೋಲ್ 390 – 460 ರೂ., ಗುಣಮಟ್ಟದ ಅಡಿಕೆ 460- 485 ರೂ.ಗೆ ಖರೀದಿ ನಡೆಸುತ್ತಿದೆ. ಕಾಳು ಮೆಣಸು 315 – 590 ರೂ., ಒಣ ಕೊಕ್ಕೊ 230 – 245 ರೂ., ಹಸಿ ಕೊಕ್ಕೊ 56- 60 ರೂ., ಕೊಬ್ಬರಿ […]

ಸ್ಥಿರವಾಗುಳಿದ ಅಡಿಕೆ, ರಬ್ಬರ್, ಕರಿಚಿನ್ನ ಧಾರಣೆ! Read More »

ಕುಂಡಡ್ಕದ ಬಾಲಕ ಅಬೀಲ್ ನಾಪತ್ತೆ!!

ಬೆಳ್ಳಾರೆ: ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಕುಂಡಡ್ಕ ಹನೀಪ್ ಇಂದ್ರಾಜೆ ಅವರ ಪುತ್ರ, ತಲಪಾಡಿ ಬಿಲಾಲ್ ಮಸೀದಿಯ ವಿದ್ಯಾರ್ಥಿ ಅಬೂಬಕ್ಕರ್ ಅಬೀಲ್ ಎಂಬ ಬಾಲಕ ನ. 9ರ ಸಂಜೆಯಿಂದ ನಾಪತ್ತೆಯಾಗಿದ್ದಾನೆ. ಈತ ತಲಪಾಡಿಯ ಬಿಲಾಲ್ ಮಸೀದಿಯಲ್ಲಿ ಮದ್ರಸ ಶಿಕ್ಷಣದ ಜತೆಗೆ ಶಾಲಾ ಶಿಕ್ಷಣ ಪಡೆಯುತಿದ್ದ. ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ಈತ ಗುರುವಾರ ಸಂಜೆ ಶಾಲೆಯಿಂದ ಮಸೀದಿಗೆ ಬಂದಿದ್ದು, ಅಲ್ಲಿ ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮರಳಿ ಬಂದಿಲ್ಲ. ಪೋಷಕರು ಉಳ್ಳಾಲ ಠಾಣೆಯಲ್ಲಿ ದೂರು ನೀಡಿದ್ದು

ಕುಂಡಡ್ಕದ ಬಾಲಕ ಅಬೀಲ್ ನಾಪತ್ತೆ!! Read More »

ಸುರಕ್ಷತಾ ವೈಫಲ್ಯ: ಪ್ಯಾರಾ ಸೈಲಿಂಗ್’ನಿಂದ ಬಿದ್ದು ಗಾಯಗೊಂಡ ಬಾಲಕ

ಮಲ್ಪೆ: ವಿಂಚ್ ಬೋಟ್ ಪ್ಯಾರಾ ಸೈಲಿಂಗ್ ಮಾಡುತ್ತಿದ್ದ ಪ್ರವಾಸಿಗ ಬಾಲಕನೋರ್ವ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ಮಲ್ಪೆ ಬೀಚ್ನಲ್ಲಿ ಸಂಭವಿಸಿದೆ. ಬೆಂಗಳೂರು ಮೂಲದ ಇಕ್ಯಾನ್ ಚೌಧರಿ (12) ಗಾಯಗೊಂಡ ಬಾಲಕ. 10 ಮೀಟರ್ ಎತ್ತರದಿಂದ ಬೋಟಿಗೆ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿದೆ. ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಸುರಕ್ಷತಾ ವೈಫಲ್ಯ: ಪ್ಯಾರಾ ಸೈಲಿಂಗ್’ನಿಂದ ಬಿದ್ದು ಗಾಯಗೊಂಡ ಬಾಲಕ Read More »

ಪುತ್ತೂರು ಡಿವೈಎಸ್‍ಪಿ ಡಾ.ಗಾನ ಪಿ. ಕುಮಾರ್ ವರ್ಗಾವಣೆ

ಪುತ್ತೂರು: :ಪುತ್ತೂರು ಉಪವಿಭಾಗದ ಪೊಲೀಸ್‌ ಉಪಾಧೀಕ್ಷಕರಾಗಿ ಕರ್ತವ್ಯದಲ್ಲಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ಲೋಕಾಯುಕ್ತಕ್ಕೆ ವರ್ಗಾವಣೆಗೊಳಿಸಿ ಸರಕಾರ ಆದೇಶಿಸಿದೆ. ಈ ಹಿಂದೆ ಎರಡು ವರ್ಷಗಳ ಕಾಲ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ಗಾನಾ ಪಿ.ಕುಮಾರ್ ಅವರನ್ನು ಸರಕಾರ ಸಿಐಡಿಗೆ ವರ್ಗಾವಣೆಗೊಳಿಸಿತ್ತು. ಬಳಿಕ ಪುನಃ ಅವರನ್ನು ವರ್ಗಾವಣೆಗೊಳಿಸಿ ಎಸ್ಪಿ ಕಚೇರಿಯ ಡಿಸಿಆರ್‌ಬಿ ಡಿವೈಎಸ್ಪಿಯಾಗಿ ನಿಯೋಜಿಸಲಾಗಿತ್ತು.

ಪುತ್ತೂರು ಡಿವೈಎಸ್‍ಪಿ ಡಾ.ಗಾನ ಪಿ. ಕುಮಾರ್ ವರ್ಗಾವಣೆ Read More »

ಖ್ಯಾತ ಯೂರಾಲಜಿಸ್ಟ್ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಹೃದಯಾಘಾತದಿಂದ ನಿಧನ

ಮಂಗಳೂರು: ಮಂಗಳೂರಿನ ಖ್ಯಾತ ಯೂರಾಲಜಿಸ್ಟ್ (ಮೂತ್ರಶಾಸ್ತ್ರ ವಿಭಾಗ) ತಜ್ಞರಾಗಿದ್ದ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಜಿ.ಜಿ. ಲಕ್ಷ್ಮಣ ಪ್ರಭು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. 61 ವರ್ಷದ ಲಕ್ಷ್ಮಣ ಪ್ರಭು ಅವರು ವಾರದ ಹಿಂದೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಮೂರು ದಶಕಕ್ಕೂ ಹೆಚ್ಚು ಅನುಭವ ಹೊಂದಿದ್ದ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಹಲವು ವರ್ಷಗಳ ಕಾಲ ಕೆಎಂಸಿ

ಖ್ಯಾತ ಯೂರಾಲಜಿಸ್ಟ್ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಹೃದಯಾಘಾತದಿಂದ ನಿಧನ Read More »

ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆ: ಘೋಷಣೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಬೆನ್ನಲ್ಲೇ ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆಯನ್ನು ಬಿಜೆಪಿ ಮಾಡಿದೆ. ಶಾಸಕನಾಗಿ, ಸಚಿವನಾಗಿ, ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಆರ್. ಅಶೋಕ್ ಅವರನ್ನು ವಿಧಾನಸಭೆ ಪ್ರತಿಪಕ್ಷ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಶುಕ್ರವಾರ ಸಂಜೆ ನಡೆದ ಬಿಜೆಪಿ ಶಾಸಕಾಂಗ‌ ಪಕ್ಷದ ನಾಯಕರ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು. ನಿರ್ಮಲಾ ಸೀತಾರಾಮನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ವಿಧಾನಸಭೆ ಪ್ರತಿಪಕ್ಷ ನಾಯಕನ ಆಯ್ಕೆ: ಘೋಷಣೆ Read More »

ಡಿ.1 – 4: ಪುತ್ತೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ | ಕ್ಷೇತ್ರದಾದ್ಯಂತ ಸಂಚರಿಸಲಿದೆ ಕ್ರೀಡಾ ರಥ, ಕ್ರೀಡಾಜ್ಯೋತಿ | 35 ಜಿಲ್ಲೆಗಳಿಂದ 2500 ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ

ಪುತ್ತೂರು: ಪುತ್ತೂರಿನ ತಾಲೂಕು ಕ್ರೀಡಾಂಗಣದಲ್ಲಿ ಡಿ.1, 2, 3 ಹಾಗೂ 4ರಂದು ನಡೆಯುವ ರಾಜ್ಯಮಟ್ಟದ 17ರ ವಯೋಮಾನದ ಪ್ರೌಢಾಶಾಲಾ ವಿಭಾಗದ ಬಾಲಕ-ಬಾಲಕಿಯರ ಕ್ರೀಡಾಕೂಟ ಪುತ್ತೂರಿಗೆ ಮೆರುಗು ತರಲಿದ್ದು, ಈ ನಿಟ್ಟಿನಲ್ಲಿ ವ್ಯವಸ್ಥೆಗಳು ಸಮರೋಪಾದಿಯಲ್ಲಿ ಸಜ್ಜುಗೊಳ್ಳುತ್ತಿವೆ ಎಂದು ಕ್ರೀಡಾಕೂಟ ಸಂಚಾಲಕ, ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ತಿಳಿಸಿದರು. ಅವರು ಶುಕ್ರವಾರ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಕ್ರೀಡಾಕೂಟದ ಯಶಸ್ಸಿಗಾಗಿ ಸುಮಾರು 18 ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ನಾಲ್ಕು ದಿನಗಳ ಕಾಲ

ಡಿ.1 – 4: ಪುತ್ತೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ | ಕ್ಷೇತ್ರದಾದ್ಯಂತ ಸಂಚರಿಸಲಿದೆ ಕ್ರೀಡಾ ರಥ, ಕ್ರೀಡಾಜ್ಯೋತಿ | 35 ಜಿಲ್ಲೆಗಳಿಂದ 2500 ಕ್ರೀಡಾಪಟುಗಳ ಪಾಲ್ಗೊಳ್ಳುವಿಕೆ Read More »

ಅರುಣ್ ಪುತ್ತಿಲರ ಹುಟ್ಟುಹಬ್ಬ: ಪೌರಕಾರ್ಮಿಕರ ಜೊತೆ ಸಹಭೋಜನ

ಪುತ್ತೂರು: ತನ್ನ ಹುಟ್ಟುಹಬ್ಬದ ದಿನದಂದು ಪುತ್ತೂರಿನ ಸ್ವಚ್ಛತಾ ಸೇನಾನಿ ಪೌರ ಕಾರ್ಮಿಕರ ಜೊತೆ ಅರುಣ್ ಕುಮಾರ್ ಪುತ್ತಿಲ ಸಹಬೋಜನಾ ನಡೆಸಿದರು. ಪುತ್ತೂರು ನಗರಸಭೆಯ ಎಂಬತ್ತಕ್ಕೂ ಮಿಕ್ಕಿ ಪೌರ ಕಾರ್ಮಿಕರಿಗೆ ಸಮುದಾಯ ಭವನದಲ್ಲಿ ಸಹಬೋಜನಾ ವ್ಯವಸ್ಥೆ ನಡೆಸಲಾಯಿತು. ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಪುತ್ತಿಲ ಪರಿವಾರದ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಅರುಣ್ ಪುತ್ತಿಲರ ಹುಟ್ಟುಹಬ್ಬ: ಪೌರಕಾರ್ಮಿಕರ ಜೊತೆ ಸಹಭೋಜನ Read More »

ಮಂಗಳೂರು-ಬೆಂಗಳೂರು ನಡುವೆ ಮತ್ತೆರಡು ವಿಮಾನ!

ಮಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್ (ಎಐಇ) ಮಂಗಳೂರು ಮತ್ತು ಬೆಂಗಳೂರು ನಡುವೆ ಎರಡು ವಿಮಾನಗಳ ಸೇವೆಯನ್ನು ಆರಂಭಿಸಿದ್ದು, ಈ ಎರಡೂ ನಗರಗಳ ನಡುವಿನ ಸಂಪರ್ಕವನ್ನು ವಿಸ್ತರಿಸಿದೆ. ಇದರೊಂದಿಗೆ ಮಂಗಳೂರಿಗೆ ಈಗ ಒಟ್ಟು ಏಳು ವಿಮಾನಗಳು ರಾಜ್ಯ ರಾಜಧಾನಿಯಿಂದ ಸಂಚರಿಸಲಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಮೊದಲನೇ ವಿಮಾನ IX 782 ಮಂಗಳವಾರದಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಎರಡನೇ ವಿಮಾನ IX1795 ಕಣ್ಣೂರು-ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದೆ. ಹೊಸ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ, ವಿಮಾನ ನಿಲ್ದಾಣವು ಸಾಂಪ್ರದಾಯಿಕ ಜಲಫಿರಂಗಿ

ಮಂಗಳೂರು-ಬೆಂಗಳೂರು ನಡುವೆ ಮತ್ತೆರಡು ವಿಮಾನ! Read More »

ರಾಜ್ಯಾಧ್ಯಕ್ಷ ಆಯ್ಕೆ ಬೆನ್ನಲ್ಲೇ ಯತ್ನಾಳ್ ಅಸಮಾಧಾನ ಸ್ಫೋಟ!!

ಬೆಂಗಳೂರು: ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ತೋಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವುದೋ ಒಂದು ಕುಟುಂಬದ ಪಕ್ಷವಲ್ಲ. ಇದನ್ನು ನಾವು ಕೂಡ ಒಪ್ಪುವುದಿಲ್ಲ. ಬಿಜೆಪಿಗಾಗಿ, ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಲು ನಾನು ಪ್ರಾಣ ಕೊಡಲೂ ಸಿದ್ಧ. ಆದರೆ ಕೆಲ ಚೇಲಾಗಳ ಮಾತು ಕೇಳಿ ವರಿಷ್ಠರು ನಿರ್ಧಾರ ತೆಗೆದುಕೊಳ್ಳಬಾರದು ಎಂದು ಹೇಳಿದರು. ಯಡಿಯೂರಪ್ಪ, ವಿಜಯೇಂದ್ರರಿಂದ ಯತ್ನಾಳ್ ಸಂಪರ್ಕ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ

ರಾಜ್ಯಾಧ್ಯಕ್ಷ ಆಯ್ಕೆ ಬೆನ್ನಲ್ಲೇ ಯತ್ನಾಳ್ ಅಸಮಾಧಾನ ಸ್ಫೋಟ!! Read More »

error: Content is protected !!
Scroll to Top