ಮಾಜಿ ಶಾಸಕರ ಆರೋಗ್ಯ ವಿಚಾರಿಸಿದ ಹಾಲಿ ಶಾಸಕ!
ಪುತ್ತೂರು: ಮಾಜಿ ಶಾಸಕ ಸಂಜೀವ ಮಠಂದೂರುರವರು ಹಾವು ಕಡಿತಕ್ಕೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ವಿಚಾರ ಗೊತ್ತಾದ ತಕ್ಷಣವೇ ಶಾಸಕ ಅಶೋಕ್ ರೈಯವರು ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಮುಂಬೈ ಪ್ರವಾಸದಲ್ಲಿರುವ ಶಾಸಕ ಅಶೋಕ್ ರೈಯವರು ಆಸ್ಪತ್ರೆಯಲ್ಲಿರುವ ಮಾಜಿ ಶಾಸಕರ ಪುತ್ರನ ಮೊಬೈಲ್ ಗೆ ಕರೆ ಮಾಡಿ ಮಠಂದೂರು ಜೊತೆ ಮಾತನಾಡಿದರು. ಆಸ್ಪತ್ರೆಯಲ್ಲಿ ದಾಖಲಾಗಿರುವ ಸಂಜೀವ ಮಠಂದೂರು ಅವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಮಾಜಿ ಶಾಸಕರ ಆರೋಗ್ಯ ವಿಚಾರಿಸಿದ ಹಾಲಿ ಶಾಸಕ! Read More »










