ಮತ್ತೆ ಶುರುವಾದ ಬುರುಡೆ ಪ್ರಕರಣದ ತನಿಖೆ : ಎಫ್‌ಎಸ್‌ಎಲ್‌ ತಂಡದಿಂದ ಪರಿಶೀಲನೆ

ಬುರುಡೆ ತೆಗೆದ ಸ್ಥಳದಲ್ಲಿ ಘಟನೆಯನ್ನು ಮರಸೃಷ್ಟಿಸಿ ತನಿಖೆ ಮಂಗಳೂರು: ಕೆಲ ಸಮಯದಿಂದ ತಣ್ಣಗಾಗಿದ್ದ ಧರ್ಮಸ್ಥಳದ ಬುರುಡೆ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. 4 ತಿಂಗಳ ಹಿಂದೆ 7 ಅಸ್ಥಿಪಂಜರ ಪತ್ತೆಯಾಗಿದ್ದ ಬಂಗ್ಲೆಗುಡ್ಡೆ ಕಾಡಿಗೆ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಧರ್ಮಸ್ಥಳ ಗ್ರಾಮದ ಬುರುಡೆ ರಹಸ್ಯ ಪ್ರಕರಣದ ತನಿಖೆ ಮತ್ತೆ ಚುರುಕು ಪಡೆದುಕೊಂಡಿದೆ. ಮೂವರು ಅಧಿಕಾರಿಗಳನ್ನೊಳಗೊಂಡ ಎಫ್‌ಎಸ್‌ಎಲ್‌ ಅಧಿಕಾರಿಗಳ ತಂಡ ಗುರುವಾರ ಬೆಂಗಳೂರಿನಿಂದ ಎಸ್‌ಐಟಿ ಅಧಿಕಾರಿಗಳೊಂದಿಗೆ ಬಂಗ್ಲೆಗುಡ್ಡೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದೆ. 4 […]

ಮತ್ತೆ ಶುರುವಾದ ಬುರುಡೆ ಪ್ರಕರಣದ ತನಿಖೆ : ಎಫ್‌ಎಸ್‌ಎಲ್‌ ತಂಡದಿಂದ ಪರಿಶೀಲನೆ Read More »

ತಪ್ಪಿದ ಇನ್ನೊಂದು ಭಾರಿ ವಿಮಾನ ಅವಘಡ : 181 ಪ್ರಯಾಣಿಕರು ಪಾರು

ರನ್‌ವೇಗೆ ಅಪ್ಪಳಿಸಿದ ಇಳಿಯುತ್ತಿದ್ದ ವಿಮಾನದ ಹಿಂಭಾಗ ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ವಿಮಾನದ ಬಾಲವು ನೆಲಕ್ಕೆ ಅಪ್ಪಳಿಸಿದ್ದು, ಭಾರಿ ಅವಘಡ ತಪ್ಪಿದೆ. ಗುರುವಾರ ಬೆಳಗ್ಗೆ 181 ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಆಗಮಿಸುತ್ತಿದ್ದ ಏರ್ ಇಂಡಿಯಾ AI2651 ವಿಮಾನ ಬೆಂಗಳೂರಿನಲ್ಲಿ ಲ್ಯಾಂಡಿಂಗ್ ಆಗುತ್ತಿತ್ತು. ಈ ವೇಳೆ ಇನ್ನೊಂದು ವಿಮಾನ ಅದೇ ರನ್‌ವೇಯಿಂದ ಟೇಕ್-ಆಫ್ ಆಗುತ್ತಿತ್ತು. ಇದರಿಂದಾಗಿ ಗಾಳಿಯಲ್ಲಿ ಅಸಮತೋಲನ ಉಂಟಾದಂತೆ

ತಪ್ಪಿದ ಇನ್ನೊಂದು ಭಾರಿ ವಿಮಾನ ಅವಘಡ : 181 ಪ್ರಯಾಣಿಕರು ಪಾರು Read More »

ದ್ವಿತೀಯ ಪಿಯುಸಿ 2ನೇ ಪರೀಕ್ಷಾ ಫಲಿತಾಂಶ ಪ್ರಕಟ

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಎ. 30 ರಿಂದ ಮೇ 13 ರ ವರೆಗೆ 253 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ 2 ನೇ ಪರೀಕ್ಷೆ ನಡೆದಿತ್ತು. ಪರೀಕ್ಷೆಗೆ 80,535 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 36,764 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ‌. ಫಲಿತಾಂಶ ತಿಳಿಯಲು ನೋಂದಣಿ ಸಂಖ್ಯೆ ಮತ್ತು ಸಂಯೋಜನೆಯನ್ನು ವೆಬ್‌ಸೈಟ್ https://dpue-https://karresults.nic.in ಅಥವಾ https://dpue-exam.karnataka.gov.in/kseabdpue2025e1e2e3/WebForm1.aspx ನಲ್ಲಿ ಅಥವಾ ಕರ್ನಾಟಕ ಒನ್ ಮೊಬೈಲ್ ಅಪ್ಲಿಕೇಶನ್ ಮೂಲಕ ವೀಕ್ಷಿಸಬಹುದು.

ದ್ವಿತೀಯ ಪಿಯುಸಿ 2ನೇ ಪರೀಕ್ಷಾ ಫಲಿತಾಂಶ ಪ್ರಕಟ Read More »

ಕಾರುಗಳ ನಡುವೆ ಅಪಘಾತ: ಆರು ಜನರಿಗೆ ಗಾಯ

ಭಟ್ಕಳ: ಕಾರುಗಳೆರಡರ ನಡುವೆ ನಡೆದ ಅಪಘಾತದಲ್ಲಿ ಆರು ಮಂದಿ ಗಾಯಗೊಂಡು, ಎರಡೂ ಕಾರುಗಳು ಜಖಂ ಆದ ಘಟನೆ ವೆಂಕ್ಟಾಪುರ ಸೇತುವೆ ಸಮೀಪದ ರಾಷ್ಟ್ರೀಯ ಹೆದ್ದಾರಿ -66 ರಲ್ಲಿ ನಡೆದಿದೆ. ಗಾಯಾಳುಗಳನ್ನು ಹಾವೇರಿ ಮೂಲದ ಬೀಮಪ್ಪ ಹನುಮಂತಪ್ಪ ಗಣಜೂರು, ಮೊಹಮ್ಮದ್ ಮುಶಾಫರ್ (26), ಪೌಜಿಯಾ ಎ., ಮೊಹಮ್ಮದ್ ಅಶ್ರಫ್ ಇಸ್ಮಾಯಿಲ್ (34), ಅಬ್ದುಲ್ ಖಾದರ್ ಅಜ್ವಲ್ (21) ಹಾಗೂ ಮೊಹಮ್ಮದ್ ಅಸ್ಥಾನ್ಸ್ (19) ಎಂದು ಗುರುತಿಸಲಾಗಿದೆ. ಹಾವೇರಿಯಿಂದ ಬಂಟ್ವಾಳದತ್ತ ಹೋಗುತ್ತಿದ್ದ ಕಾರಿಗೆ ಭಟ್ಕಳದಿಂದ ಹೊನ್ನಾವರದತ್ತ ಹೋಗುತ್ತಿದ್ದ ಕಾರು ಗುದ್ದಿದೆ.

ಕಾರುಗಳ ನಡುವೆ ಅಪಘಾತ: ಆರು ಜನರಿಗೆ ಗಾಯ Read More »

ಹಿಂದೂ ಯುವತಿ ಮತಾಂತರ ಪ್ರಯತ್ನ ಪ್ರಶ್ನಿಸಿದ ಹಿಂದೂ ಯುವಕನ ಮೇಲೆ‌ ಹಲ್ಲೆ

ಪುತ್ತೂರು: ಹಿಂದೂ ಯುವತಿಯ ಮತಾಂತರ ಯತ್ನವನ್ನು ‌ಪ್ರಶ್ನೆ ಮಾಡಿದ ಹಿಂದೂ ಕಾರ್ಯ ಕೀರ್ತನ ಮೇಲೆ ಹಲ್ಲೆ ನಡೆದ ಘಟನೆ ಪೆರ್ಲದಲ್ಲಿ ನಿನ್ನೆ ನಡೆದಿದೆ. ಹಲ್ಲೆಗೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ಅವಿನಾಶ್ (23) ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳು ಅವಿನಾಶ್ ಅವರನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ನಿಯೋಗ ಭೇಟಿ ಮಾಡಿದ್ದು, ಆರೋಗ್ಯ ವಿಚಾರಣೆ ನಡೆಸಿದೆ.

ಹಿಂದೂ ಯುವತಿ ಮತಾಂತರ ಪ್ರಯತ್ನ ಪ್ರಶ್ನಿಸಿದ ಹಿಂದೂ ಯುವಕನ ಮೇಲೆ‌ ಹಲ್ಲೆ Read More »

ಬಕ್ರೀದ್ ಹಿನ್ನೆಲೆ ಗೋವುಗಳ ಅಕ್ರಮ ಸಾಗಾಟ, ವಧೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ ವಿಎಚ್‌ಪಿ, ಬಜರಂಗದಳ

ಪುತ್ತೂರು: ಇನ್ನೇನು ಕೆಲವೇ ದಿನಗಳಲ್ಲಿ ಬಕ್ರೀದ್ ಹಬ್ಬ ಬರಲಿದ್ದು, ಈ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ಗೋವುಗಳ ಸಾಗಾಟ, ಸಾರ್ವಜನಿಕ ಸ್ಥಳಗಳಲ್ಲಿ ಗೋವುಗಳನ್ನು ಬಲಿ‌ ಕೊಡುವುದು ಮೊದಲಾದ ಕೃತ್ಯಗಳು ನಡೆಯುವ ಸಾಧ್ಯತೆ ಇದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪುತ್ತೂರು ನಗರ ಪೊಲೀಸರಿಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಪುತ್ತೂರು ಜಿಲ್ಲೆಯ ವತಿಯಿಂದ ಮನವಿ ಸಲ್ಲಿಸಲಾಯಿತು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ಮತ್ತು ಜಾನುವಾರು ಸಾಗಾಟ ನಿಯಮಾವಳಿ

ಬಕ್ರೀದ್ ಹಿನ್ನೆಲೆ ಗೋವುಗಳ ಅಕ್ರಮ ಸಾಗಾಟ, ವಧೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದ ವಿಎಚ್‌ಪಿ, ಬಜರಂಗದಳ Read More »

ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಸಾವು

ವಿಜಯಪುರ: ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮಹಿಳೆಯೊಬ್ಬರು ‌ಜೀವಂತ ಸಮಾಧಿಯಾದ ‌ಘಟನೆ ನಿಡಗುಂದಿಯಲ್ಲಿ ನಡೆದಿದೆ. ಮಹಾದೇವಿ ವಾರದ (55) ಎಂಬವರೇ ಮೃತ ದುರ್ದೈವಿ. ಪಟ್ಟಣದ ಗೌರೀಶ್ವರ ದೇಗುಲದ ಸಮೀಪ ಈ ದುರ್ಘಟನೆ ನಡೆದಿರುವುದಾಗಿದೆ. ಮೊನ್ನೆ ಸುರಿದ ಮಳೆಗೆ ಹಳೆಯ ಮನೆಯ ಮೇಲ್ಛಾವಣಿ ಕುಸಿದಿದೆ. ನಸುಕಿನ ಜಾವ ಈ ಘಟನೆ ನಡೆದಿದ್ದು, ಮಹಾದೇವಿ ಅವರ ಮೇಲೆ ಬಿದ್ದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅವರ ಪತಿ ಶಿವಾನಂದ ಅವರು ಮನೆಯ ಹೊರ ಭಾಗದಲ್ಲಿ ಮಲ ಆಗಿದ್ದು, ಇದರಿಂದಾಗಿ

ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಸಾವು Read More »

ಹೋರಿ ಹಾಯ್ದು ಗಾಯಗೊಂಡಿದ್ದ ಯುವಕ ಸಾವು : ವೈದ್ಯರ ನಿರ್ಲಕ್ಷ್ಯ ಆರೋಪ

ಬೆಳ್ತಂಗಡಿ: ತಾಲೂಕಿನ ಗೇರುಕಟ್ಟೆ ನಿವಾಸಿ ಯುವಕಹೋರಿ ಹಾಯ್ದು ಗಾಯಗೊಂಡು ಉಪ್ಪಿನಂಗಡಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಆರೋಗ್ಯ ಹದಗೆಟ್ಟ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಬುಧವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಈ ಬಗ್ಗೆ ಉಪ್ಪಿನಂಗಡಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವಿದೆ ಎಂದು ಆರೋಪಿಸಿ ಮೃತನ ಮನೆಯವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಗೇರುಕಟ್ಟೆಯಲ್ಲಿ ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಮೊಹಮ್ಮದ್ ಶರೀಫ್ (35) ಮೃತ ವ್ಯಕ್ತಿ. ಮೇ 14ರಂದು ಮನೆಯಲ್ಲಿ ಹೋರಿ

ಹೋರಿ ಹಾಯ್ದು ಗಾಯಗೊಂಡಿದ್ದ ಯುವಕ ಸಾವು : ವೈದ್ಯರ ನಿರ್ಲಕ್ಷ್ಯ ಆರೋಪ Read More »

ಜೂ.1ರಿಂದ ಎರಡು ತಿಂಗಳು ಯಾಂತ್ರೀಕೃತ ಮೀನುಗಾರಿಕೆ ನಿಷೇಧ

ಮಂಗಳೂರು: ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರನ್ವಯ ರಾಜ್ಯ ಸರ್ಕಾರದ ಅಧಿಸೂಚನೆಯಂತೆ ಕರ್ನಾಟಕ ಕರಾವಳಿಯಲ್ಲಿ ಎರಡು ತಿಂಗಳು ಮಳೆಗಾಲದ ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಜಾರಿಗೆ ಬರಲಿದೆ. ಯಾಂತ್ರೀಕೃತ ದೋಣಿಗಳು ಮತ್ತು 10 ಅಶ್ವಶಕ್ತಿ (ಎಚ್‌ಪಿ) ಸಾಮರ್ಥ್ಯಕ್ಕಿಂತ ಮೇಲ್ಪಟ್ಟ ಇನ್‌ಬೋರ್ಡ್ ಅಥವಾ ಔಟ್‌ಬೋರ್ಡ್ ಯಂತ್ರಗಳನ್ನು ಅಳವಡಿಸಿರುವ ಸಾಂಪ್ರದಾಯಿಕ ದೋಣಿಗಳ ಮುಖಾಂತರ ಕೈಗೊಳ್ಳುವ ಮೀನುಗಾರಿಕಾ ಚಟುವಟಿಕೆಗಳನ್ನು 2026ರ ಜೂನ್ 1ರಿಂದ ಜುಲೈ 31ರವರೆಗೆ (ಉಭಯ ದಿನಗಳು ಸೇರಿದಂತೆ) ಅಂದರೆ ಒಟ್ಟು 61 ದಿನಗಳ ಕಾಲ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ

ಜೂ.1ರಿಂದ ಎರಡು ತಿಂಗಳು ಯಾಂತ್ರೀಕೃತ ಮೀನುಗಾರಿಕೆ ನಿಷೇಧ Read More »

ದಿಡುಪೆ ಜಲಪಾತದಲ್ಲಿ ಯುವತಿಯರಿಗೆ ಕಿರುಕುಳ : ಮೂವರು ಸೆರೆ, ಕಾರು ವಶ

ತಾವು ಕರೆತಂದಿದ್ದ ಕಾಲೇಜು ಯುವತಿಯರಿಗೆ ಕಿರುಕುಳ ನೀಡಿದ ಕಾಮುಕರು ಬೆಳ್ತಂಗಡಿ : ದಿಡುಪೆ ಜಲಪಾತದಲ್ಲಿ ಮೂವರು ಯುವತಿಯರಿಗೆ ಅವರೊಂದಿಗೆ ಬಂದಿದ್ದ ಯುವಕರೇ ಲೈಂಗಿಕ ಕಿರುಕುಳ ನೀಡಿದ ಘಟನೆ ಬುಧವಾರ ಸಂಬವಿಸಿದ್ದು, ಸಾರ್ವಜನಿಕರು ಈ ಯುವಕರನ್ನು ಹಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಯುವತಿಯರು ಹಾಗೂ ಕಾಸರಗೋಡು ಮೂಲದ ಅಬ್ದುಲ್ ಖಾದರ್ ಅಲ್ತಫ್ (36), ಫೈಜಲ್ ಅದಿಲ್ (27) ಹಾಗೂ ಉಸ್ಮಾನ್ ಸಾಲೀಂ (18) ಎಂಬ ಮೂವರು ಯುವಕರೊಂದಿಗೆ ಮೇ 20ರಂದು ಬೆಳ್ತಂಗಡಿ ತಾಲೂಕಿನ ದಿಡುಪೆ ಜಲಪಾತಕ್ಕೆ

ದಿಡುಪೆ ಜಲಪಾತದಲ್ಲಿ ಯುವತಿಯರಿಗೆ ಕಿರುಕುಳ : ಮೂವರು ಸೆರೆ, ಕಾರು ವಶ Read More »

error: Content is protected !!
Scroll to Top