ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿನಂದನೆ

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ನವೀನ್‍ ಡಿ. ಹಾಗೂ ಉಪಾಧ್ಯಕ್ಷರಾಗಿ ಪವಿತ್ರ ಕೆ.ಪಿ. ಆಯ್ಕೆಯಾಗಿದ್ದು, ಅವರನ್ನು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಅಭಿನಂದಿಸಲಾಯಿತು. ಕಳೆದ ವಾರದಲ್ಲಿ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು, ಚುನಾವಣೆಯಲ್ಲಿ ಸಹಕಾರ ಭಾರತಿ ಜಯಗಳಿಸಿತ್ತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಮುಖಂಡರಾದ ಸಾಜ ರಾಧಾಕೃಷ್ಣ ಆಳ್ವ, ಪುರುಷೋತ್ತಮ ಮುಂಗ್ಲಿಮನೆ, ಹರಿಪ್ರಸಾದ್ ಯಾದವ್, ನವೀನ್‍ ಪಡ್ನೂರು ಮತ್ತಿತರರು ಉಪಸ್ಥಿತರಿದ್ದರು.

ನರಿಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಅಭಿನಂದನೆ Read More »

ಕೇರಳದಲ್ಲಿ ಕೊರೊನಾಗೆ ಮತ್ತೆ ಮೂವರು ಬಲಿ

ತಿರುವನಂತಪುರಂ: ಕೇರಳದಲ್ಲಿ ಕೊರೊನಾ ಆರ್ಭಟಿಸುತ್ತಿದ್ದು, ಇಲ್ಲಿ ಮತ್ತೆ ಮೂವರು ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಕೇರಳದಲ್ಲಿ ಕಳೆದ 24 ಗಂಟೆಗಳಲ್ಲಿ 292 ಹೊಸ ಕೋವಿಡ್ -19 ಸೋಂಕುಗಳು ಮತ್ತು ಮೂರು ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಯವರೆಗೆ ದೇಶಾದ್ಯಂತ ವರದಿಯಾದ 341 ಕೋವಿಡ್ ಸೋಂಕುಗಳಲ್ಲಿ 292 ಕೇರಳದಿಂದ ಬಂದಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,041 ಕ್ಕೆ ತಲುಪಿದೆ ಎಂದು ಸಚಿವಾಲಯದ ವೆಬ್‍ಸೈಟ್ ತಿಳಿಸಿದೆ. ಈ

ಕೇರಳದಲ್ಲಿ ಕೊರೊನಾಗೆ ಮತ್ತೆ ಮೂವರು ಬಲಿ Read More »

ಇನ್ನು ಮುಂದೆ ರಾತ್ರಿ 9 ಗಂಟೆ ವರೆಗೂ ಪ್ರವಾಸಿಗರಿಗೆ ಮೈಸೂರು ಅರಮನೆ ಭೇಟಿಗೆ ಅವಕಾಶ | ಜಿಲ್ಲಾಡಳಿತದಿಂದ ಚಿಂತನೆ

ಮೈಸೂರು: ದಸರಾ ಸಂಭ್ರಮವನ್ನು ಮೀರಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಮತ್ತು ಬ್ರಾಂಡ್ ಮೈಸೂರನ್ನು ಪ್ರಚಾರ ಮಾಡಲು ಉತ್ಸುಕವಾಗಿರುವ ರಾಜ್ಯ ಸರ್ಕಾರವು ಸಂಜೆ ಪ್ರವಾಸಿಗರಿಗೆ ಮೈಸೂರು ಅರಮನೆಯನ್ನು ತೆರೆಯಲು ಚಿಂತಿಸಿದ್ದು, ಇನ್ನು ಮುಂದೆ ಜಿಲ್ಲಾಡಳಿತ ಮತ್ತು ಅರಮನೆ ಮಂಡಳಿಯು ರಾತ್ರಿ 9 ರವರೆಗೆ ಮೈಸೂರು ಅರಮನೆ ಪ್ರವಾಸಿಗರಿಗಾಗಿ ತೆರೆಯುವ ಬಗ್ಗೆ ಚಿಂತನೆ ನಡೆಸಿದೆ. ಅರಮನೆ ನಗರಿ ಮೈಸೂರಿನಲ್ಲಿ ಕ್ರಿಸ್ಮಸ್, ಹೊಸ ವರ್ಷಾಚರಣೆಗೆ ಸಿದ್ಧತೆಗಳು ನಡೆಯುತ್ತಿದ್ದು, ಮೈಸೂರು ಅರಮನೆಯಲ್ಲಿ ಮಾಗಿ ಉತ್ಸವಕ್ಕೆ ವೇದಿಕೆ ಸಿದ್ಧವಾಗಿದೆ. ಇದರ ನಡುವೆ ಮೈಸೂರು ಅರಮನೆಯು ಪ್ರಪಂಚದಾದ್ಯಂತ

ಇನ್ನು ಮುಂದೆ ರಾತ್ರಿ 9 ಗಂಟೆ ವರೆಗೂ ಪ್ರವಾಸಿಗರಿಗೆ ಮೈಸೂರು ಅರಮನೆ ಭೇಟಿಗೆ ಅವಕಾಶ | ಜಿಲ್ಲಾಡಳಿತದಿಂದ ಚಿಂತನೆ Read More »

ಹೆಸರಾಂತ ನಟಿ ಹೇಮಾ ಚೌಧುರಿ ಅಸ್ವಸ್ಥ | ಆಸ್ಪತ್ರೆಗೆ ದಾಖಲು

ಕನ್ನಡದ ಹೆಸರಾಂತ ಹಿರಿಯ ನಟಿ ಹೇಮಾ ಚೌಧುರಿ ಅನಾರೋಗ್ಯಕ್ಕೊಳಗಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ದಿನಗಳ ಹಿಂದೆ ಹೇಮಾ ಚೌಧರಿಗೆ ಬ್ರೈನ್ ಹ್ಯಾಮರೇಜ್ ಆಗಿತ್ತು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೇಮಾ ಅವರ ಮಗ ಐರ್ಲೆಂಡ್‌ನಲ್ಲಿ ಇದ್ದಾರೆ. ಅವರ ಆಗಮನಕ್ಕಾಗಿ ಕಾಯಲಾಗುತ್ತಿದೆ. ಅವರ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ತಿಳಿದು ಬಂದಿದೆ. ಹಿರಿಯ ನಟಿ ಶೀಘ್ರ ಗುಣಮುಖರಾಗಿ ಮೊದಲಿನಂತಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇತ್ತೀಚೆಗೆ

ಹೆಸರಾಂತ ನಟಿ ಹೇಮಾ ಚೌಧುರಿ ಅಸ್ವಸ್ಥ | ಆಸ್ಪತ್ರೆಗೆ ದಾಖಲು Read More »

ಡಿ.24-25 : ಪುತ್ತೂರಿನಲ್ಲಿ ನಡೆಯಲಿದೆ ವೈಭವದ “ಶ್ರೀನಿವಾಸ ಕಲ್ಯಾಣೋತ್ಸವ”, “ಸನಾತನ ಸಮಾಗಮ”

ಪುತ್ತೂರು: ಪುತ್ತೂರು ಪುತ್ತಿಲ ಪರಿವಾರ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಾರಥ್ಯದಲ್ಲಿ ‘ಶ್ರೀನಿವಾಸ ಕಲ್ಯಾಣೋತ್ಸವ’, ‘ಸನಾತನ ಸಮಾಗಮ’ ಡಿ.24 ಹಾಗೂ 25 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸ್ವಾಗತ ಸಮಿತಿ ಸಂಚಾಲಕ ಪ್ರಸನ್ನ ಕುಮಾರ್ ಮಾರ್ತ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ನಡೆಯುವ ಕಾರ್ಯಕ್ರಮ ಅಂತ್ಯಂತ ವೈಭವದಿಂದ ನಡೆಯಲಿದ್ದು, ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಕಾರ್ಯಕ್ರಮದ ಯಶಸ್ಸಿಗಾಗಿ

ಡಿ.24-25 : ಪುತ್ತೂರಿನಲ್ಲಿ ನಡೆಯಲಿದೆ ವೈಭವದ “ಶ್ರೀನಿವಾಸ ಕಲ್ಯಾಣೋತ್ಸವ”, “ಸನಾತನ ಸಮಾಗಮ” Read More »

ಹಿಂಜಾವೇ ಜಿಲ್ಲಾ ಸಹಸಂಯೋಜಕ ದಿನೇಶ್ ಪಂಜಿಗ ಗಡಿಪಾರು | ಯಾಕೆ ಗಡಿಪಾರು ಮಾಡಬಾರದು ಎಂದು ಪ್ರಶ್ನಿಸಿದ ಸಹಾಯಕ ಆಯುಕ್ತರು

ಪುತ್ತೂರು: ಹಿಂಜಾವೇ ಸಹಸಂಯೋಜಕ ದಿನೇಶ್ ಪಂಜಿಗ ಅವರ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 55ರಂತೆ ವಿಜಯಪುರ ಜಿಲ್ಲೆಯ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ಯಾಕೆ ಗಡಿಪಾರು ಮಾಡಬಾರದು ಎಂದು ಕಾರಣ ಕೇಳುವ ಆದೇಶ ಮಾಡಿ ಉಪವಿಭಾಗೀಯ ದಂಡಾಧಿಕಾರಿ ನೊಟೀಸ್ ಜಾರಿ ಮಾಡಿದ್ದಾರೆ. ಪುತ್ತೂರು ತಾಲೂಕಿನ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿಗೋಡು ಗ್ರಾಮದ ಪಂಜಿಗ ಮನೆ ಎಂಬಲ್ಲಿನ ದಿನೇಶ್ (37) ಅವರು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿನಾಕಾರಣ ಕ್ಷುಲ್ಲಕ ವಿಚಾರಗಳಿಗೆ ತನ್ನ

ಹಿಂಜಾವೇ ಜಿಲ್ಲಾ ಸಹಸಂಯೋಜಕ ದಿನೇಶ್ ಪಂಜಿಗ ಗಡಿಪಾರು | ಯಾಕೆ ಗಡಿಪಾರು ಮಾಡಬಾರದು ಎಂದು ಪ್ರಶ್ನಿಸಿದ ಸಹಾಯಕ ಆಯುಕ್ತರು Read More »

ಇಹಲೋಕ ತ್ಯಜಿಸಿದ ಕುಮಾರ ಪರ್ವತ ಚಾರಣಿಗರ ಅನ್ನದಾತ ಗಿರಿಗದ್ದೆ ಮಹಾಲಿಂಗೇಶ್ವರ ಭಟ್ಟರು

ಸುಬ್ರಹ್ಮಣ್ಯ: ಗಿರಿಗದ್ದೆ ಭಟ್ಟರು ಎಂದೇ ಚಿರಪರಿಚಿತರಾದ ಗಿರಿಗದ್ದೆ ಮಹಾಲಿಂಗೇಶ್ವರ ಭಟ್ಟರು ನಿಧನರಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಿಂದ 4 ಕಿಲೋ ಮೀಟರ್ ದೂರದಲ್ಲಿ ಕುಮಾರಪರ್ವತದ ಹಾದಿಯ ಗಿರಿಗದ್ದೆಯಲ್ಲಿದ್ದ ಮಹಾಲಿಂಗೇಶ್ವರ ಭಟ್ಟರು ಇತ್ತೀಚಿನವರೆಗೂ ಗಿರಿಗದ್ದೆಯಲ್ಲಿ ವಾಸವಾಗಿದ್ದುಕೊಂಡು ಚಾರಣಿಗರ ಪಾಲಿನ ಅನ್ನದಾತ, ಅನ್ನದೇವರಾಗಿದ್ದರು. ಗಿರಿಗದ್ದೆ ಭಟ್ಟರು ಎಂದೇ ಚಿರಪರಿಚಿತರಾಗಿದ್ದರು. ಈ ಕುಟುಂಬ ಗಿರಿಗದ್ದೆಗೆ ಬಂದದ್ದು 1974 ರಲ್ಲಿ. ಗಿರಿಗದ್ದೆಯಲ್ಲಿ ಮಣ್ಣಿನ ಮನೆ ಕೊಟ್ಟಿಗೆ, ಹಟ್ಟಿ ನಿರ್ಮಿಸಿಕೊಂಡು ಏಕಾಂತ ಬದುಕು ಸಾಗಿಸಿದರು. ಅಡಿಕೆ ತೋಟ, ತರಕಾರಿ ಕೃಷಿ ಎಲ್ಲವೂ ಅವರ ಏಕಾಂತ ಬರ ಸ್ಫೂರ್ತಿ

ಇಹಲೋಕ ತ್ಯಜಿಸಿದ ಕುಮಾರ ಪರ್ವತ ಚಾರಣಿಗರ ಅನ್ನದಾತ ಗಿರಿಗದ್ದೆ ಮಹಾಲಿಂಗೇಶ್ವರ ಭಟ್ಟರು Read More »

ಕುಲದೇವತೆ ಅಂತ ರೈತರು ಪೂಜಿಸಿದ್ದು ಕಲ್ಲು ಅಲ್ಲ, ಡೈನೋಸಾರ್ ಮೊಟ್ಟೆ! | ಹೊರಬಿತ್ತು ಮಿಲಿಯನ್ ವರ್ಷಗಳ ಮಹಾ ರಹಸ್ಯ!

ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ನಡೆದ ಘಟನೆಯೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ನೂರಾರು ವರ್ಷಗಳಿಂದ ಒಂದು ಕುಟುಂಬವು ಕುಲದೇವತೆಯ ರೂಪದಲ್ಲಿ ಕೆಲವು ಕಲ್ಲಿನ ಚೆಂಡುಗಳನ್ನು ಪೂಜಿಸುತ್ತಿದೆ. ಆದ್ರೆ ಇಂದು ಅದರ ಹಿಂದಿನಿ ಸತ್ಯ ತಿಳಿದು ಇದೀಗ ಬೆಚ್ಚಿಬಿದ್ದಿದ್ದಾರೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ನಡೆದ ಘಟನೆಯೊಂದು ಒಂದು ಕುಟುಂಬವನ್ನು ಬೆಚ್ಚಿಬೀಳುವಂತೆ ಮಾಡಿದೆ. ನೂರಾರು ವರ್ಷಗಳಿಂದ ಒಂದು ಕುಟುಂಬವು ಕುಲದೇವತೆಯ ರೂಪದಲ್ಲಿ ಕೆಲವು ಕಲ್ಲಿನ ಚೆಂಡುಗಳನ್ನು ಪೂಜಿಸುತ್ತಿತ್ತು. ಆದ್ರೆ ಅದರ ಹಿಂದಿರುವ ಸತ್ಯ ಏನೆಂಬುದು ಆ ಕುಟುಂಬಕ್ಕೂ ಗೊತ್ತಿರಲಿಲ್ಲ. ಇತ್ತೀಚೆಗೆ ಅವುಗಳನ್ನು ಪರೀಕ್ಷಿಸಿದ ವಿಜ್ಞಾನಿಗಳು,

ಕುಲದೇವತೆ ಅಂತ ರೈತರು ಪೂಜಿಸಿದ್ದು ಕಲ್ಲು ಅಲ್ಲ, ಡೈನೋಸಾರ್ ಮೊಟ್ಟೆ! | ಹೊರಬಿತ್ತು ಮಿಲಿಯನ್ ವರ್ಷಗಳ ಮಹಾ ರಹಸ್ಯ! Read More »

ಮಣಿಕ್ಕರ ಕಾಲು ಸೇತುವೆ ನಿರ್ಮಾಣಕ್ಕೆ ಶಾಸಕರಿಂದ ಶಿಲಾನ್ಯಾಸ

ಪುತ್ತೂರು: ಕೊಳ್ತಿಗೆ ಗ್ರಾಮದ ಮಣಿಕ್ಕರ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ತೆರಳುವ ರಸ್ತೆಯಲ್ಲಿ ಕಾಲು ಸಂಕ ನಿರ್ಮಾಣಕ್ಕೆ ಶಾಸಕ ಅಶೋಕ್ ಕುಮಾರ್ ರೈ ಶಿಲಾನ್ಯಾಸ ನೆರವೇರಿಸಿದರು. ದೇವಳಕ್ಕೆ ತೆರಳುವ ಈ ರಸ್ತೆಯಲ್ಲಿ ಕಿರಿದಾದ ತೋಡು ಇದ್ದು ಇಲ್ಲಿ ಸೇತುವೆಯ ನಿರ್ಮಾಣ ಮಾಡುವಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಸಾರ್ವಜನಿಕರು ಶಾಸಕರಲ್ಲಿ ಮನವಿ ಮಾಡಿದ್ದರು. ಇಲ್ಲಿ ಸೇತುವೆ ನಿರ್ಮಾಣಕ್ಕೆ ರೂ. 20 ಲಕ್ಷ ಅನುದಾನವನ್ನು ಶಾಸಕರು ಒದಗಿಸಿದ್ದು ಈ ಮೂಲಕ ಇಲ್ಲಿನ ನಿವಾಸಿಗಳ ಮತ್ತು ದೇವಳದ ಭಕ್ತಾದಿಗಳ ಬಹುವರ್ಷದ ಬೇಡಿಕೆ

ಮಣಿಕ್ಕರ ಕಾಲು ಸೇತುವೆ ನಿರ್ಮಾಣಕ್ಕೆ ಶಾಸಕರಿಂದ ಶಿಲಾನ್ಯಾಸ Read More »

ವಿವಾಹಿತ ಮಹಿಳೆಯೊಂದಿಗೆ ಯುವಕನ ಸಲುಗೆಯ ಫೋಟೋ ವೈರಲ್ | ಇಬ್ಬರೂ ಆತ್ಮಹತ್ಯೆಗೆ ಶರಣು

ಮೈಸೂರು:  ವಿವಾಹಿತ ಮಹಿಳೆಯೊಂದಿಗೆ ಯುವಕ ಸಲುಗೆ ಬೆಳೆಸಿದ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ಭಯಗೊಂಡ ಮಹಿಳೆ ಹಾಗೂ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಪಟ್ಟಣದಲ್ಲಿ ಇಂದು ನಡೆದಿದೆ. ಹುಣಸೂರು ಪಟ್ಟಣದ ಕಲ್ಕುಣಿಗೆ ನಿವಾಸಿಗಳಾದ ಶೃತಿ (28) ಹಾಗೂ ಮುರಳಿ (20) ಆತ್ಮಹತ್ಯೆ ಮಾಡಿಕೊಂಡವರು. ವಿವಾಹಿತ ಮಹಿಳೆ ಜೊತೆ ಯುವಕ ಸಲುಗೆಯಿಂದ ಇದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​​ ಆಗಿದೆ. ಫೋಟೋ ಕಣ್ಣಿಗೆ ಬೀಳುತ್ತಿದ್ದಂತೆ ಮನನೊಂದ ಗೃಹಿಣಿ ಶೃತಿ

ವಿವಾಹಿತ ಮಹಿಳೆಯೊಂದಿಗೆ ಯುವಕನ ಸಲುಗೆಯ ಫೋಟೋ ವೈರಲ್ | ಇಬ್ಬರೂ ಆತ್ಮಹತ್ಯೆಗೆ ಶರಣು Read More »

error: Content is protected !!
Scroll to Top