ಕುಂಜಿಬೆಟ್ಟು ಯುವತಿ ನಾಪತ್ತೆ !

ಉಡುಪಿ: ತಾಲೂಕಿನ ಶಿವಳ್ಳಿ ಕುಂಜಿಬೆಟ್ಟುವಿನ ಯುವತಿಯೊಬ್ಬರು ಕಾಣೆಯಾಗಿರುವ ಕುರಿತು ಉಡುಪಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಜಿಬೆಟ್ಟು ನಿವಾಸಿ ನೇತ್ರಾವತಿ (19) ಕಾಣೆಯಾದ ಯುವತಿ. ಡಿ.18 ರಂದು ಮನೆಯಿಂದ ಹೊರ ಹೋದವರು ವಾಪಾಸ್ಸು ಬಂದಿಲ್ಲ ಎಂದು ಮನೆಯವರು ಠಾಣೆಗೆ ದೂರು ನೀಡಿದ್ದಾರೆ. ನೇತ್ರಾವತಿ 4 ಅಡಿ 5 ಇಂಚು ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಕಪ್ಪು ಮೈಬಣ್ಣ, ಕೋಲು ಮುಖ ಹೊಂದಿದ್ದು, ಕನ್ನಡ ಹಾಗೂ ಇಂಗ್ಲೀಷ್ ಭಾಷೆ ಬಲ್ಲವರಾಗಿದ್ದಾರೆ. ಮಾಹಿತಿ ದೊರೆತಲ್ಲಿ ಉಡುಪಿ ನಗರ ಠಾಣಾಧಿಕಾರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಕುಂಜಿಬೆಟ್ಟು ಯುವತಿ ನಾಪತ್ತೆ ! Read More »

ಡಿ.23: ಗ್ರಾಮ ಸಾಹಿತ್ಯ ಸಂಭ್ರಮ | ಕಿರು ಸಾಹಿತ್ಯ ಸಮ್ಮೇಳನದ ಸ್ವರೂಪ ಪಡೆದ ಗ್ರಾಮ ಸಾಹಿತ್ಯ ಸಂಭ್ರಮ

ಪುತ್ತೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೇತೃತ್ವದಲ್ಲಿ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಹಿರೇಬಂಡಾಡಿ ಗ್ರಾಮ ಪಂಚಾಯಿತಿ, ಚಿಗುರೆಲೆ ಸಾಹಿತ್ಯ ಬಳಗದ ಸಹಕಾರದಲ್ಲಿ ಮಿತ್ರಂಪಾಡಿ ಜಯರಾಮ ರೈ ಅವರ ಮಹಾ ಪೋಷಕತ್ವದಲ್ಲಿ “ಸಾಹಿತ್ಯದ ನಡಿಗೆ ಗ್ರಾಮದ ಕಡೆಗೆ” ಎಂಬ ಘೋಷ ವಾಕ್ಯದಲ್ಲಿ ನಡೆಯುತ್ತಿರುವ ಗ್ರಾಮ ಸಾಹಿತ್ಯ ಸಂಭ್ರಮವು ಈಗಾಗಲೇ 10 ಸರಣಿ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿದ್ದು,11ನೇ ಸರಣಿ ಕಾರ್ಯಕ್ರಮವು  ಹಿರೇಬಂಡಾಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಡಿ.23 ಶನಿವಾರ ನಡೆಯಲಿದೆ. ಯುವಜನತೆಯನ್ನು ಸಾಹಿತ್ಯ ಲೋಕದತ್ತ ಬರಮಾಡಿಕೊಳ್ಳುವ ಹಾಗೂ

ಡಿ.23: ಗ್ರಾಮ ಸಾಹಿತ್ಯ ಸಂಭ್ರಮ | ಕಿರು ಸಾಹಿತ್ಯ ಸಮ್ಮೇಳನದ ಸ್ವರೂಪ ಪಡೆದ ಗ್ರಾಮ ಸಾಹಿತ್ಯ ಸಂಭ್ರಮ Read More »

ಹೆಂಡತಿ-ಮಗಳಿಗೆ ಹಲ್ಲೆ | ಆರೋಪಿ ಬಂಧನ

ಶಿಶಿಲ: ಹೆಂಡತಿ ಮಕ್ಕಳಿಗೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದ್ದು, ಇದೀಗ ಆರೋಪಿ ಪತಿಯನ್ನು ಬಂಧಿಸಲಾಗಿದೆ. ಶಿಶಿಲ ಕೋಟಬಾಗಿಲು ನಿವಾಸಿ ಸುರೇಶ್‍ ಬಂಧಿತ ಆರೋಪಿ. ತನ್ನ ಹೆಂಡತಿ ಮುಖದ ಭಾಗಕ್ಕೆ ಕಚ್ಚಿದ್ದು, ಕಣ್ಣಿಗೆ ಕೋಲಿನಿಂದ ಹೊಡೆದು ಕಣ್ಣನ್ನು ಸಂಪೂರ್ಣ ಹಾನಿಗೊಳ್ಳಿಸಿದ್ದಾರೆ. ಅಲ್ಲದೆ ಮಗಳಿಗೆ ತಲೆ ಭಾಗಕ್ಕೆ ಹೊಡೆದಿದ್ದು, ಹೆಂಡತಿ-ಮಗಳು ಇಬ್ಬರೂ ಪ್ರಾಣ ಭಯದಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದೆ. ತಕ್ಷಣ ಸ್ಥಳೀಯರು ಆಂಬ್ಯುಲೆನ್ಸ್‍ಗೆ ಫೋನಾಯಿಸಿ ಉಜಿರೆ ಎಸ್‍ಡಿಎಂ ಆಸ್ಪತ್ರೆಗೆ ದಾಖಲಿಸಿದ್ದರು. ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆಸ್ಪತ್ರೆಗೆ

ಹೆಂಡತಿ-ಮಗಳಿಗೆ ಹಲ್ಲೆ | ಆರೋಪಿ ಬಂಧನ Read More »

ಹಿಂಜಾವೇ ಕಾರ್ಯಕರ್ತ ಪ್ರವೀಶ್ ಗಡಿಪಾರು | ಆದೇಶ ಹಿಂಪಡೆಯಲು ಪುತ್ತಿಲ ಪರಿವಾರದಿಂದ ಎಸಿಗೆ ಮನವಿ | ಕಾರ್ಯಕರ್ತನಿಗೆ ಸುಳ್ಳು ಪ್ರಕರಣದಲ್ಲಿ ಅನ್ಯಾಯವಾದರೆ ಬಿಡುವ ಪ್ರಶ್ನೆಯೇ ಇಲ್ಲ

ಪುತ್ತೂರು : ಹಲವು ಪ್ರಕರಣಗಳಲ್ಲಿ ಇದ್ದಾರೆಂದು ಬಿಂಬಿಸಿ ಈಶ್ವರಮಂಗಲದ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರವೀಶ್ ನಾಯರ್ ನ ಗಡಿಪಾರು ಆದೇಶವನ್ನು ತಡೆ ಹಿಡಿಯಬೇಕೆಂದು ಪುತ್ತಿಲ ಪರಿವಾರ ಎಸಿಗೆ ಮನವಿ ಮಾಡಿದೆ. ಪುತ್ತೂರಿನ ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರಿಗೆ ಪುತ್ತಿಲ ಪರಿವಾರದ ಪ್ರಮುಖರು ಮನವಿ ಸಲ್ಲಿಸಿ ಪ್ರವೀಶ್ ನಾಯರ್ ರವರ ಗಡಿಪಾರು ಆದೇಶ ಹಿಂಪಡೆಯಬೇಕು ಎಂದು ಮನವಿ ಮಾಡಿದೆ. ಇಲಾಖಾ ಆದೇಶದಂತೆ  ಹಿಂದೂ ಕಾರ್ಯಕರ್ತ ಪ್ರವೀಶ್ ನಾಯರ್ ಕುಂಟಾಪು ಇವರಿಗೆ ವಿನಾಕಾರಣ ಬೀದರ್‌ಗೆ ಗಡಿಪಾರಿಗೆ ಆದೇಶ ನೀಡಿರುತ್ತೀರಿ.

ಹಿಂಜಾವೇ ಕಾರ್ಯಕರ್ತ ಪ್ರವೀಶ್ ಗಡಿಪಾರು | ಆದೇಶ ಹಿಂಪಡೆಯಲು ಪುತ್ತಿಲ ಪರಿವಾರದಿಂದ ಎಸಿಗೆ ಮನವಿ | ಕಾರ್ಯಕರ್ತನಿಗೆ ಸುಳ್ಳು ಪ್ರಕರಣದಲ್ಲಿ ಅನ್ಯಾಯವಾದರೆ ಬಿಡುವ ಪ್ರಶ್ನೆಯೇ ಇಲ್ಲ Read More »

ಡಿ.29-30: ಕಾವು ಬುಶ್ರಾ ವಿದ್ಯಾಸಂಸ್ಥೆಗಳ ಬೆಳ್ಳಿ ಹಬ್ಬ ಸಂಭ್ರಮ ‘ಬುವಿ ಉತ್ಸವ-2023’ | ನವೀಕೃತ ಸಭಾಂಗಣ ‘ಬುಶ್ರಾ ಅಡಿಟೋರಿಯಂ’ ಉದ್ಘಾಟನೆ

ಪುತ್ತೂರು: ಬೆಳ್ಳಿಹಬ್ಬದ ಹೊಸ್ತಿಲಲ್ಲಿರುವ ಪುತ್ತೂರಿನ ಗ್ರಾಮೀಣ ಪ್ರದೇಶದ ಕಾವು ಬುಶ್ರಾ ವಿದ್ಯಾಸಂಸ್ಥೆಯಲ್ಲಿ ಬೆಳ್ಳಿಹಬ್ಬ ಸಂಭ್ರಮ “ಬುವಿ ಉತ್ಸವ-2023” ಹಾಗೂ ನವೀಕೃತಗೊಂಡ ಸಭಾಂಗಣ “ಬುಶ್ರಾ ಅಡಿಟೋರಿಯಂ”ನ ಉದ್ಘಾಟನಾ ಸಮಾರಂಭ ಡಿ.29 ಹಾಗೂ 30 ರಂದು ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಶೈಕ್ಷಣಿಕ ಸಲಗಹೆಗಾರರಾದ ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಿಗ್ಗೆ 9.45 ಕ್ಕೆ ಧ್ವಜಾರೋಹಣವನ್ನು ಕಾವು ಬುಶ್ರಾ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಜ.ಅಬ್ದುಲ್ ಅಝೀಝ್‍ನೆರವೇರಿಸಲಿದ್ದು, ಶ್ರೀ ರಾಮಕೃಷ್ಣ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ

ಡಿ.29-30: ಕಾವು ಬುಶ್ರಾ ವಿದ್ಯಾಸಂಸ್ಥೆಗಳ ಬೆಳ್ಳಿ ಹಬ್ಬ ಸಂಭ್ರಮ ‘ಬುವಿ ಉತ್ಸವ-2023’ | ನವೀಕೃತ ಸಭಾಂಗಣ ‘ಬುಶ್ರಾ ಅಡಿಟೋರಿಯಂ’ ಉದ್ಘಾಟನೆ Read More »

ಕಾರು – ಬೈಕ್‍ ಡಿಕ್ಕಿ : ಬೈಕ್‍ ಸವಾರ ಗಂಭೀರ

ನೆಲ್ಯಾಡಿ: ಕಾರು ಹಾಗೂ ಬೈಕ್ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೈಕ್‍ ಸವಾರ ಗಂಭೀರ ಗಾಯಗೊಂಡ ಘಟನೆ ಇಚ್ಲಂಪಾಡಿಯಲ್ಲಿ ನಡೆದಿದೆ. ಬಲ್ಯ ಗ್ರಾಮದ ಕಂಚಿನಡ್ಕ ನಿವಾಸಿ ಆನಂದ ಶೆಟ್ಟಿ (51) ಗಾಯಗೊಂಡ ಬೈಕ್‍ ಸವಾರ. ಇಚ್ಲಂಪಾಡಿಯಿಂದ ನೇರ್ಲ ಕಡೆ ಬೈಕ್‍ನಲ್ಲಿ ಹೋಗುತ್ತಿದ್ದ ಸಂದರ್ಭ ಸುಬ್ರಹ್ಮಣ್ಯದಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಕಾರು ಇಚ್ಲಂಪಾಡಿ ಚರ್ಚ್‍ ಬಳಿ ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿದೆ. ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸಂದರ್ಭ ಚಾಲಕ ಕಾರು ನಿಲ್ಲಿಸದೇ ಪರಾರಿಯಾಗಿದ್ದು, ತಕ್ಷಣ ಎಚ್ಚೆತ್ತ

ಕಾರು – ಬೈಕ್‍ ಡಿಕ್ಕಿ : ಬೈಕ್‍ ಸವಾರ ಗಂಭೀರ Read More »

ಕೇರಳದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣ | ಗಡಿ ಭಾಗಗಳಲ್ಲಿ ತಪಾಸಣೆ

ಮಂಗಳೂರು: ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಗಡಿ ಪ್ರದೇಶವಾದ ಪೆರುಂಬಾಡಿ ಚೆಕ್‌ಪೋಸ್ಟ್‌ನಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆ ಆರಂಭಿಸಲಾಗಿದೆ. ಕೇರಳದಿಂದ ಬರುವ ಖಾಸಗಿ ವಾಹನಗಳನ್ನು ತಡೆದು ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಆರೋಗ್ಯ ನಿರೀಕ್ಷಣಾಧಿಕಾರಿ ಚಿರಂಜೀವಿ ಈ ಕುರಿತು ಪ್ರತಿಕ್ರಿಯಿಸಿ’ ಇಲಾಖೆಯ ಸೂಚನೆಯಂತೆ ತಪಾಸಣೆ ನಡೆಸಲಾಗುತ್ತಿದೆ. ಸೋಂಕಿನ ಲಕ್ಷಣ ಕಂಡುಬಂದಲ್ಲಿ ಅವರಿಗೆ ವಿರಾಜಪೇಟೆಯ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕಳಿಸಲಾಗುತ್ತದೆ. ಇಲ್ಲಿಯವರೆಗೆ ನಡೆದ ತಪಾಸಣೆಯ ಸಂದರ್ಭ ಯಾರಿಗೂ ಸೋಂಕಿನ

ಕೇರಳದಲ್ಲಿ ಏರುತ್ತಿರುವ ಕೋವಿಡ್ ಪ್ರಕರಣ | ಗಡಿ ಭಾಗಗಳಲ್ಲಿ ತಪಾಸಣೆ Read More »

ಸಿಟಿ ಬಸ್‍ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ

ಉಳ್ಳಾಲ: ಬಸ್ ಚಾಲಕರೊಬ್ಬರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ನಡೆದಿದೆ. ಕೊಂಡಾಣ ಬೆಳರಿಂಗೆ ನಿವಾಸಿ ವೆಂಕಪ್ಪ ಶೆಟ್ಟಿ ಎಂಬವರ ಪುತ್ರ ಜಗದೀಶ್ (39) ಆತ್ಮಹತ್ಯೆ ಮಾಡಿಕೊಂಡವರು. ಸ್ಟೇಟ್ ಬ್ಯಾಂಕ್ ಕಿನ್ಯಾ ನಡುವೆ ಚಲಿಸುವ ಸಿಟಿ ಬಸ್ ನಲ್ಲಿ ಚಾಲಕರಾಗಿದ್ದ ಜಗದೀಶ್‍ ಸೋಮೇಶ್ವರ ರುದ್ರಪಾದೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃತ್ಯ ಎಸಗುವ ಮುನ್ನ ಸಮುದ್ರ ತೀರದಲ್ಲಿ ಬೈಕ್, ಪರ್ಸ್ ಚಪ್ಪಲಿಗಳನ್ನು ಇಟ್ಟು ಸಮುದ್ರಕ್ಕೆ ಹಾರಿದ್ದಾರೆ. ಅವಿವಾಹಿತರಾಗಿರುವ ಜಗದೀಶ್ ಅವರ ಪರ್ಸ್‌ನಲ್ಲಿ ಚಿನ್ನ ಅಡವಿಟ್ಟ

ಸಿಟಿ ಬಸ್‍ ಚಾಲಕ ಸಮುದ್ರಕ್ಕೆ ಹಾರಿ ಆತ್ಮಹತ್ಯೆ Read More »

ಹೆಂಡತಿ-ಮಗಳಿಗೆ ಹಲ್ಲೆ | ಆಸ್ಪತ್ರೆಗೆ ದಾಖಲು !

ಶಿಶಿಲ: ಹೆಂಡತಿ ಮಕ್ಕಳಿಗೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದ ಕುರಿತು ಶಿಶಿಲದಿಂದ ವರದಿಯಾಗಿದೆ. ಶಿಶಿಲ ಕೋಟಬಾಗಿಲು ನಿವಾಸಿ ಸುರೇಶ್‍ ಎಂಬವರು ತನ್ನ ಹೆಂಡತಿ ಮುಖದ ಭಾಗಕ್ಕೆ ಕಚ್ಚಿದ್ದು, ಕಣ್ಣಿಗೆ ಕೋಲಿನಿಂದ ಹೊಡೆದು ಕಣ್ಣನ್ನು ಸಂಪೂರ್ಣ ಹಾನಿಗೊಳ್ಳಿಸಿದ್ದಾರೆ. ಅಲ್ಲದೆ ಮಗಳಿಗೆ ತಲೆ ಭಾಗಕ್ಕೆ ಹೊಡೆದಿದ್ದು, ಹೆಂಡತಿ-ಮಗಳು ಇಬ್ಬರೂ ಪ್ರಾಣ ಭಯದಿಂದ ತಪ್ಪಿಸಿಕೊಂಡಿದ್ದಾರೆ ಎನ್ನಲಾಗಿದ್ದು, ತಕ್ಷಣ ಸ್ಥಳೀಯರು ಉಜಿರೆ ಎಸ್‍ಡಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆಸ್ಪತ್ರೆಗೆ ತೆರಳಿ

ಹೆಂಡತಿ-ಮಗಳಿಗೆ ಹಲ್ಲೆ | ಆಸ್ಪತ್ರೆಗೆ ದಾಖಲು ! Read More »

ಕಾರುಗಳೆರಡು ಮುಖಾಮುಖಿ ಡಿಕ್ಕಿ !

ಪುತ್ತೂರು: ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದುಕೊಂಡ ಘಟನೆ ಮಾಣಿ-ಮೈಸೂರು ಹೆದ್ದಾರಿ ಪೋಳ್ಯದಲ್ಲಿ ಮಂಗಳವಾರ ನಡೆದಿದೆ. ಅಪಘಾತದಲ್ಲಿ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರು ಕಡೆಯಿಂದ ಬರುತ್ತಿದ್ದ ಕಿಯಾ ಕಾರು ಹಾಗೂ ಟಾಟಾ ಕಾರುಗಳ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಕಾರುಗಳೆರಡು ಮುಖಾಮುಖಿ ಡಿಕ್ಕಿ ! Read More »

error: Content is protected !!
Scroll to Top