ಜ್ಯೋತಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ

ಪುತ್ತೂರು: ತಾಲೂಕಿನ ಬಲ್ನಾಡು ವಲಯದ ಕುಂಜೂರು ಪಂಜ ಕಾರ್ಯ ಕ್ಷೇತ್ರದಲ್ಲಿ ಭಾಗ್ಯ ಜ್ಯೋತಿ ಜ್ಞಾನವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.    ವಿಜಯ ಕರ್ನಾಟಕ ಪತ್ರಿಕೆಯ ಜಿಲ್ಲಾ ವರದಿಗಾರ ಸುಧಾಕರ್  ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮಹಿಳೆಯರು ಜ್ಞಾನವಿಕಾಸ ಕಾರ್ಯಕ್ರಮದಿಂದ ವಿವಿಧ ಮಾಹಿತಿಗಳನ್ನು ಪಡೆದುಕೊಂಡು ಆರ್ಥಿಕವಾಗಿ ಬಲಶಾಲಿಯಾಗುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬಂದಿದ್ದಾರೆ. ಈ ಮೂಲಕ ಮನಸ್ಸಿದ್ದರೆ ಯಾವುದೇ ಕೆಲಸ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದರು. ತಾಲೂಕು ಯೋಜಾಧಿಕಾರಿ ಶಶಿಧರ್  ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಹಲವಾರು […]

ಜ್ಯೋತಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ Read More »

ರೈತರಿಗೆ ವರದಾನವಾದ ಕೇಂದ್ರ ಸರಕಾರದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ| ರೈತರ ಖಾತೆಗೆ ಲಕ್ಷಕ್ಕಿಂತಲೂ ಅಧಿಕ ಜಮೆಯಾದ ಮೊತ್ತ | ದೇಶದ ಬೆನ್ನೆಲುಬಾದ ರೈತ ಫುಲ್ ಖುಷ್

ಹೊಸದಿಲ್ಲಿ: ಕೇಂದ್ರ ಸರಕಾರದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯ ಮೊತ್ತ ಬಿಡುಗಡೆಗೊಂಡಿದ್ದು, ಲಕ್ಷಕ್ಕಿಂತಲೂ ಅಧಿಕ ಮೊತ್ತ ರೈತರ ಖಾತೆಗೆ ಜಮೆಯಾಗುತ್ತಿದೆ. ಪರಿಣಾಮ ರೈತ ವರ್ಗದಲ್ಲಿ ಸಂತಸ ಉಂಟು ಮಾಡಿದೆ. 2016 ರಲ್ಲಿ ಕೇಂದ್ರ ಸರಕಾರದ ಯೋಜನೆಯಾದ ಹವಾಮಾನ ಆಧಾರಿತ ಬೆಳೆವಿಮೆ  ಯೋಜನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜ್ಯಾರಿಗೊಳಿಸಿದ್ದು, ರೈತರಿಗೆ ವರದಾನವಾಗಿ ಪರಿಣಮಿಸಿದೆ. ಈ ಯೋಜನೆಯಡಿ ಸರಕಾರದ ರೈತರ ಬೆಳೆಗಳಿಗೆ ವಿಮೆ ಲಾಭವನ್ನು ನೀಡುತ್ತದೆ. ಪ್ರಾಕೃತಿಕ ವಿಕೋಪದಿಂದ ರೈತನ ಬೆಳೆ ನಾಶವಾದರೆ ರೈತನಿಗೆ ಪರಿಹಾರ ನೀಡುವ ಯೋಜನೆಯಾಗಿದೆ. ಸಂಕಷ್ಟ

ರೈತರಿಗೆ ವರದಾನವಾದ ಕೇಂದ್ರ ಸರಕಾರದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ| ರೈತರ ಖಾತೆಗೆ ಲಕ್ಷಕ್ಕಿಂತಲೂ ಅಧಿಕ ಜಮೆಯಾದ ಮೊತ್ತ | ದೇಶದ ಬೆನ್ನೆಲುಬಾದ ರೈತ ಫುಲ್ ಖುಷ್ Read More »

ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ನಮ್ಮ ಸಹಭಾಗಿತ್ವ ಇಲ್ಲ | ಸ್ಪಷ್ಟನೆ ನೀಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಕಾರ್ಯನಿರ್ವಹಣಾಧಿಕಾರಿ

ಪುತ್ತೂರು: ಡಿ.24 ಹಾಗೂ 25 ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ಕೇವಲ ಸ್ಥಳಾವಕಾಶ ನೀಡಿದ್ದೇವೆ ಹೊರತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸಹಭಾಗಿತ್ವ ಇಲ್ಲ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು. ಸದಸ್ಯರು ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆ ತಿಳಿಸಿದೆ. ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಗೌರವ ಸಲಹೆಗಾರರಾಗಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಕೇಶವ ಪ್ರಸಾದ್ ಮುಳಿಯ, ಅಧ್ಯಕ್ಷರು, ಸರ್ವ ಸದಸ್ಯರುಗಳು ವ್ಯವಸ್ಥಾಪನಾ ಸಮಿತಿ, ಅರ್ಚಕ ವೃಂದ, ನೌಕರ ವೃಂದ ಎಂದು ಸಮಿತಿ

ಶ್ರೀನಿವಾಸ ಕಲ್ಯಾಣೋತ್ಸವಕ್ಕೆ ನಮ್ಮ ಸಹಭಾಗಿತ್ವ ಇಲ್ಲ | ಸ್ಪಷ್ಟನೆ ನೀಡಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಕಾರ್ಯನಿರ್ವಹಣಾಧಿಕಾರಿ Read More »

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಆಯ್ಕೆ

ಪುತ್ತೂರು: ಹಿರಿಯ ವಾಗ್ಮಿ, ಚಿಂತಕ ಲಕ್ಷ್ಮೀಶ ತೋಳ್ಪಾಡಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತೋಳ್ಪಾಡಿ ಅವರ ಮಹಾಭಾರತ ಅನುಸಂಧಾನದ ಭಾರತ ಯಾತ್ರೆ ಕೃತಿಗೆ ಈ ಪುರಸ್ಕಾರ ಲಭಿಸಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ತಿಳಿಸಿದೆ. ಕೃಷಿಕರಾಗಿರುವ ತೋಳ್ಪಾಡಿಯವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದವರಾಗಿದ್ದು, ಕೆಲ ಕಾಲ ಬೆಂಗಳೂರಿನಲ್ಲಿ ವೈ.ಎನ್‍.ಕೆ., ಗೋಪಾಲಕೃಷ್ಣ ಅಡಿಗ, ಲಂಕೇಶ್ ಪತ್ರಿಕೆ, ಮುಂತಾದವರ ಒಡನಾಟವಿತ್ತು. ಕುಮಾರಧಾರೆಗೆ ಅಣೆಕಟ್ಟು ಕಟ್ಟುವುದು, ಸ್ಥಳೀಯ ರೈತರಿಗೆ ತೊಂದರೆಯಾದಾಗ ಕಿಸಾನ್ ಸಂಘದ ಮೂಲಕ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಚಿಂತಕ ಲಕ್ಷ್ಮೀಶ ತೋಳ್ಪಾಡಿ ಆಯ್ಕೆ Read More »

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ನವೀನ್ ಡಿ., ಉಪಾಧ್ಯಕ್ಷರಾಗಿ ಪವಿತ್ರ ಕೆ.ಪಿ. ಆಯ್ಕೆ

ಪುತ್ತೂರು: ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನವೀನ್‍ ಡಿ., ಉಪಾಧ್ಯಕ್ಷರಾಗಿ ಪವಿತ್ರ ಕೆ.ಪಿ. ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಂದಿನ ಐದು ವರ್ಷಗಳ ಅವಧಿಗೆ 12 ಸ್ಥಾನಗಳಿಗೆ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಡಿ.10ರಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದರು. ಡಿ.20 ಬುಧವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ

ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ನವೀನ್ ಡಿ., ಉಪಾಧ್ಯಕ್ಷರಾಗಿ ಪವಿತ್ರ ಕೆ.ಪಿ. ಆಯ್ಕೆ Read More »

ಡಿ.23: ಶ್ರೀ ಆಂಜನೇಯ-55, ಶ್ರೀ ಯಕ್ಷಾಂಜನೇಯ ಪ್ರಶಸ್ತಿ ಪ್ರದಾನ

ಪುತ್ತೂರು: ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಹಾಗೂ ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘದ ಆಶ್ರಯದಲ್ಲಿ ‘ಶ್ರೀ ಆಂಜನೇಯ-55”, ಶ್ರೀ ಯಕ್ಷಾಂಜನೇಯ ಪ್ರಶಸ್ತಿ ಪ್ರದಾನ ಹಾಗೂ ಶ್ರೀ ಆಂಜನೇಯ 55 ರ ಗೌರವ ಕಾರ್ಯಕ್ರಮ ಡಿ.23 ಶನಿವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶ್ರೀ ಆಂಜನೇಯ 55 ರ ಹಿನ್ನಲೆಯಲ್ಲಿ ಐದು

ಡಿ.23: ಶ್ರೀ ಆಂಜನೇಯ-55, ಶ್ರೀ ಯಕ್ಷಾಂಜನೇಯ ಪ್ರಶಸ್ತಿ ಪ್ರದಾನ Read More »

ಮರ ಕಟ್ಟಿಂಗ್ ಮೆಷಿನ್ ಕುತ್ತಿಗೆಗೆ ತಾಗಿ ಮೃತ್ಯು !

ಬೆಳ್ತಂಗಡಿ: ಮರ ಕಡಿಯುವ ಸಂದರ್ಭ ಕಟ್ಟಿಂಗ್ ಮೆಷಿನ್ ಕೈ ತಪ್ಪಿ ಬಿದ್ದ ಪರಿಣಾಮ ಕುತ್ತಿಗೆಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಸಾವ್ಯ ಎಂಬಲ್ಲಿ ಬುಧವಾರ ನಡೆದಿದೆ. ಸಾವ್ಯ ಗ್ರಾಮದ ಸಾವ್ಯ ಹೊಸಮನೆ ನಿವಾಸಿ ಪ್ರಶಾಂತ್‌ ಪೂಜಾರಿ (46) ಮೃತಪಟ್ಟವರು. ಮನೆಗೆ ಕಟ್ಟಿಗೆ ಮಾಡುವ ಸಲುವಾಗಿ ಪ್ರಶಾಂತ್ ಅವರು ಸಹೋದರ ಪ್ರಮೋದ್ ಜೊತೆ ಸೇರಿ ಕಟ್ಟಿಂಗ್ ಮೆಷಿನ್ ಮೂಲಕ ಮರ ಕಡಿಯುತ್ತಿದ್ದರು. ಈ ವೇಳೆ ಮೆಷಿನ್ ಪ್ರಶಾಂತ್ ಹಿಡಿತ ತಪ್ಪಿ ಕೆಳಕ್ಕೆ ಬಿದ್ದಿದ್ದು ಚಲನೆ ಸ್ಥಿತಿಯಲ್ಲಿ

ಮರ ಕಟ್ಟಿಂಗ್ ಮೆಷಿನ್ ಕುತ್ತಿಗೆಗೆ ತಾಗಿ ಮೃತ್ಯು ! Read More »

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಹೆಸರು ಇಡುವಂತೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಒತ್ತಾಯ..

ಬೆಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರಪುರುಷರಾದ ಕೋಟಿ-ಚೆನ್ನಯರ ಹೆಸರಿನ ವಿಚಾರದಲ್ಲಿ ಮತ್ತೆ ಒತ್ತಾಯಗಳು ಕೇಳಿಬರಲಾರಂಭಿಸಿದ್ದು, ರಾಜ್ಯ ವಿಧಾನ ಪರಿಷತ್ ನಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ. ಈ ಹಿಂದೆ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಕೂಡಾ ಇದೇ ಒತ್ತಾಯವನ್ನು ಮಾಡಿದ್ದಾರೆ. ಹರೀಶ್ ಕುಮಾರ್ ಈ ವಿಚಾರವಾಗಿ ಸರಕಾರವನ್ನು ಬಲವಾಗಿ ಒತ್ತಾಯಿಸಿದ್ದು,ಈ ಸಂಬಂಧ ಹೋರಾಟಕ್ಕೂ ಸಿದ್ಧವಾಗಿದ್ದೇನೆ ಎಂದು ಪಟ್ಟು

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯ ಹೆಸರು ಇಡುವಂತೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಒತ್ತಾಯ.. Read More »

ಡಿ.23: ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ 5ನೇ ಕಾಣಿಯೂರು ಶಾಖೆ ಉದ್ಘಾಟನೆ

ಪುತ್ತೂರು : ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಕಾಣಿಯೂರು ಶಾಖೆಯ ಉದ್ಘಾಟನಾ ಸಮಾರಂಭ ಡಿ.23 ಶನಿವಾರ ಬೆಳಿಗ್ಗೆ 10.30 ಕ್ಕೆ ಕಾಣಿಯೂರು ಸಮೃದ್ಧಿ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷೆ ಗೌರಿ ಹೆಚ್ ತಿಳಿಸಿದ್ದಾರೆ. ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರಿಂದ ಮಹಿಳೆಯರಿಗಾಗಿ ಇರುವ ಸಂಘ 1975 ರಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಿ ಪ್ರಸ್ತುತ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದೆ. ತಾಲೂಕು ಸೀಮಿತವಾಗಿ ಕಾರ್ಯಾಚರಿಸುತ್ತಿದ್ದ ಸಂಸ್ಥೆಯ ಇದೀಗ ಜಿಲ್ಲಾ ವ್ಯಾಪ್ತಿಯನ್ನು ಹೊಂದಿದೆ. ಈ ನಿಟ್ಟಿನಲ್ಲಿ ಮೊದಲ

ಡಿ.23: ಪುತ್ತೂರು ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ 5ನೇ ಕಾಣಿಯೂರು ಶಾಖೆ ಉದ್ಘಾಟನೆ Read More »

ಡಿ.24 : ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ತಾಲೂಕು ಸಮಿತಿ ಪದಪ್ರದಾನ

ಪುತ್ತೂರು: ಪುತ್ತೂರು ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ತಾಲೂಕು ಸಮಿತಿಗಳ ಪದಪ್ರದಾನ ಸಮಾರಂಭ ಡಿ.24 ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆಯ್ಯೂರು ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಬೆಳಿಗ್ಗೆ 10 ಗಂಟೆಗೆ ನಡೆಯುವ  ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ, ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಯುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ಹಾಗೂ ಆಯ್ದ

ಡಿ.24 : ಒಕ್ಕಲಿಗ ಗೌಡ ಸೇವಾ ಸಂಘದ ವಾರ್ಷಿಕ ಸಮಾವೇಶ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ತಾಲೂಕು ಸಮಿತಿ ಪದಪ್ರದಾನ Read More »

error: Content is protected !!
Scroll to Top