ಗರ್ಭಗುಡಿ ಪ್ರವೇಶ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿ ಕಿಡಿ

ಹಲವು ಬಾರಿ ಮನವಿ ಮಾಡಿದರೂ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯನ್ನು ಬಿಜೆಪಿ ಟೀಕಿಸಿದೆ. ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿರುವ ರಾಜ್ಯ ಬಿಜೆಪಿ ಘಟಕ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡಿದೆ. 39 ಸೆಕೆಂಡುಗಳ ಈ ವಿಡಿಯೋದಲ್ಲಿ, ಸಿಎಂ ಸಿದ್ದರಾಮಯ್ಯ ಅವರು ದೇವಾಲಯದ ಪ್ರವೇಶ ದ್ವಾರದ ಬಳಿ ನಿಂತಿರುವುದನ್ನು ಕಾಣಬಹುದು. ಅಲ್ಲಿಂದ ಅವರನ್ನು ಗರ್ಭಗುಡಿಗೆ ಬರುವಂತೆ ಮನವಿ ಮಾಡಿದರೂ, ಅವರು ಪ್ರವೇಶಿಸಲು ನಿರಾಕರಿಸುತ್ತಾರೆ. ಅವರ […]

ಗರ್ಭಗುಡಿ ಪ್ರವೇಶ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ: ಬಿಜೆಪಿ ಕಿಡಿ Read More »

ಜ. 6ರಂದು ನಗರಸಭೆ ಆಯ-ವ್ಯಯ ತಯಾರಿಕೆ ಪೂರ್ವಭಾವಿ ಸಭೆ

ಪುತ್ತೂರು: ಪುತ್ತೂರು ನಗರಸಭೆಯ 2024-25ನೇ ಸಾಲಿನ ಆಯ – ವ್ಯಯ ತಯಾರಿಕೆ ಕುರಿತು ಪೂರ್ವಭಾವಿ ಸಭೆ ಜ. 6ರಂದು ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ನಗರಸಭಾ ಸಭಾಭವನದಲ್ಲಿ ಸಭೆ ಹಮ್ಮಿಕೊಳ‍್ಳಲಾಗಿದೆ. ಸಭೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆ ನೀಡಬೇಕೆಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ಜ. 6ರಂದು ನಗರಸಭೆ ಆಯ-ವ್ಯಯ ತಯಾರಿಕೆ ಪೂರ್ವಭಾವಿ ಸಭೆ Read More »

ಬಹರೈನಿನಲ್ಲಿ ಕಾರು ಅಪಘಾತ; ಸುಳ್ಯ ಮೂಲದ ಮಗು ಮೃತ್ಯು!

ಕಾರು ಅಪಘಾತದಲ್ಲಿ ಸುಳ್ಯ ಮೂಲದ ಕುಟುಂಬವೊಂದು ಗಂಭೀರ ಗಾಯಗೊಂಡು, ಮಗು ಮೃತಪಟ್ಟ ಘಟನೆ ಬಹರೈನ್‌ನಿಂದ ವರದಿಯಾಗಿದೆ. ಸುಳ್ಯ ಮೂಲದ ದೇವಚಳ್ಳ ಗ್ರಾಮದ ಎಲಿಮಲೆ ಮೆತ್ತಡ್ಕ ನಿವಾಸಿ ಅಶ್ರಫ್ ಮೆತ್ತಡ್ಕ ಅವರ ಮೂರು ವರ್ಷದ ಅಯಾನ್ ಅಬ್ದುಲ್ಲಾ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ದಂಪತಿಗಳು ಕಾರಿನಲ್ಲಿ ಸಂಚರಿಸುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಗಾಯಗೊಂಡಿರುವ ಅಶ್ರಫ್ ಮತ್ತು ಅವರ ಪತ್ನಿ ಬಹರೈನ್ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಹರೈನಿನಲ್ಲಿ ಕಾರು ಅಪಘಾತ; ಸುಳ್ಯ ಮೂಲದ ಮಗು ಮೃತ್ಯು! Read More »

ಪೆರ್ನಾಜೆ: ಗುಂಪಿನಿಂದ ಬೇರ್ಪಟ್ಟ ಸಲಗದಿಂದ ಕೃಷಿ ಹಾನಿ!!

ಪುತ್ತೂರು: ಪೆರ್ನಾಜೆ ಆಸುಪಾಸಿನಲ್ಲಿ ಒಂಟಿ ಸಲಗದ ಕಾಟ ಕಾಣಿಸಿಕೊಂಡಿದ್ದು, ಕೃಷಿಯನ್ನು ಹಾನಿಗೊಳಿಸಿದೆ. ಘಟನೆಯಿಂದ ಕೃಷಿಕರಲ್ಲಿ ಆತಂಕ ಮನೆಮಾಡಿದೆ. ಪುತ್ತೂರು – ಸುಳ್ಯ – ಕೇರಳ ಗಡಿಭಾಗದ ಆನೆಗುಂಡಿ ರಕ್ಷಿತಾರಣ್ಯದಿಂದ ಕೃಷಿ ತೋಟಕ್ಕೆ ಒಂಟಿ ಸಲಗ ಬುಧವಾರ ಮುಂಜಾನೆ ದಾಳಿ ನಡೆಸಿದೆ. ಕುಮಾರ್ ಪೆರ್ನಾಜೆ ಎಂಬವರ ತೋಟಕ್ಕೆ ನುಗ್ಗಿ ಬಾಳೆ ಗಿಡ, ನಾಲ್ಕು ದೀವಿ ಹಲಸು ಮರ, ಅಡಿಕೆ ತೋಟವನ್ನು ಹಾಳುಗೆಡವಿದೆ. ಗುಂಪಿನಿಂದ ಬೇರ್ಪಟ್ಟ ಸಲಗ: ಗುಂಪಿನಿಂದ ಬೇರ್ಪಟ್ಟ ಒಂಟಿ ಸಲಗ ಇದೆಂದು ಹೇಳಲಾಗುತ್ತಿದೆ. ಈ ಮೊದಲು ಮಂಡೆಕೋಲು,

ಪೆರ್ನಾಜೆ: ಗುಂಪಿನಿಂದ ಬೇರ್ಪಟ್ಟ ಸಲಗದಿಂದ ಕೃಷಿ ಹಾನಿ!! Read More »

ರಾಜ್ಯದಲ್ಲಿ ವಿದ್ಯುತ್, ಮದ್ಯದ ಬಳಿಕ ಇದೀಗ ಶಿಕ್ಷಣವೂ ದುಬಾರಿ! | ಕಾಲೇಜು ಶುಲ್ಕವನ್ನು ಏರಿಸಿ ಶಾಕ್ ನೀಡಿದ ರಾಜ್ಯ ಸರ್ಕಾರ!

ರಾಜ್ಯ ಸರ್ಕಾರ ಇದೀಗ ಕಾಲೇಜು ವಿದ್ಯಾರ್ಥಿಗಳಿಗೆ ಶಾಕ್​ ನೀಡಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವಂತೆ ಕಾಲೇಜು ಮತ್ತು ಯೂನಿವರ್ಸಿಟಿಗಳ ಶುಲ್ಕವನ್ನು ಶೇ. 10ರಷ್ಟು ಏರಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪದವಿ ಕೋರ್ಸ್​ಗಳ ಶುಲ್ಕ ಶೇ.10 ಏರಿಕೆ ಮಾಡಲು ಶಿಕ್ಷಣ ಸಂಸ್ಥೆಗಳಿಗೆ ಉನ್ನತ ಶಿಕ್ಷಣ ಇಲಾಖೆ ಅವಕಾಶ ಕೊಟ್ಟಿದೆ. ಬಿಎ, ಬಿಕಾಂ, ಬಿಎಸ್​ಸಿ ಸೇರಿದಂತೆ ಅನೇಕ ಪದವಿ ಪ್ರವೇಶಕ್ಕೆ ಕಳೆದ ವರ್ಷ ಇದ್ದ ಶುಲ್ಕಕ್ಕೆ ಶೇ. 10ರಷ್ಟು ಏರಿಕೆಗೆ ಅವಕಾಶ ನೀಡಿದೆ. ಈ ಮೂಲಕ ಸರ್ಕಾರ ವಿದ್ಯಾರ್ಥಿಗಳ

ರಾಜ್ಯದಲ್ಲಿ ವಿದ್ಯುತ್, ಮದ್ಯದ ಬಳಿಕ ಇದೀಗ ಶಿಕ್ಷಣವೂ ದುಬಾರಿ! | ಕಾಲೇಜು ಶುಲ್ಕವನ್ನು ಏರಿಸಿ ಶಾಕ್ ನೀಡಿದ ರಾಜ್ಯ ಸರ್ಕಾರ! Read More »

ನಾಳೆ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಕ್ರೀಡೋತ್ಸವ, ವಾರ್ಷಿಕೋತ್ಸವ

ಪುತ್ತೂರು: ನರಿಮೊಗರು ಗ್ರಾಮೀಣ ವಿದ್ಯಾಸಂಸ್ಥೆಗಳ ಹೊನಲು ಬೆಳಕಿನ ಕ್ರೀಡೋತ್ಸವ, ವಾರ್ಷಿಕೋತ್ಸವ ಸಮಾರಂಭ ಜ. 4ರಂದು ಗುರುವಾರ ಸಂಜೆ 5.10ಕ್ಕೆ ವಿದ್ಯಾಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿಯವರು ಕೋಟಿ ಗೀತಾ ಲೇಖನ ಯಜ್ಞ ದೀಕ್ಷಾ ಪ್ರದಾನ ಮತ್ತು ಆಶೀರ್ವಚನ ನೀಡಲಿದ್ದಾರೆ. ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಸ್.ಜಯರಾಮ ಕೆದಿಲಾಯ ಅಧ್ಯಕ್ಷತೆ ವಹಿಸುವರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಅಶೋಕ್ ಕುಮಾರ್ ರೈ, ಹಿಂದೂ

ನಾಳೆ ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಕ್ರೀಡೋತ್ಸವ, ವಾರ್ಷಿಕೋತ್ಸವ Read More »

ತನ್ನದೇ ಗ್ರಾಮದ ಮೇಲೆ ಬಾಂಬ್ ದಾಳಿ ನಡೆಸಿದ ರಶ್ಯ!

ಮಾಸ್ಕೋ: ಉಕ್ರೇನ್ ಗಡಿ ಸಮೀಪದಲ್ಲಿರುವ ತನ್ನದೇ ಪ್ರಾಂತವಾದ ದಕ್ಷಿಣ ವೊರೊನೆಝ್ನ ಗ್ರಾಮವೊಂದರ ಮೇಲೆ ರಶ್ಯ ವಾಯುಪಡೆ ಮಂಗಳವಾರ ಪ್ರಮಾದವಶಾತ್ ಬಾಂಬ್ ದಾಳಿ ನಡೆಸಿದೆ. ಆದರೆ ಯಾವುದೇ ಸಾವು ನೋವು ಸಂಭವಿಸಿಲ್ಲವೆಂದು ವರದಿಯಾಗಿದೆ. ಬಾಂಬ್ ದಾಳಿಗೆ ಗುರಿಯಾದ ಪೆಟ್ರೊಪವ್ಲೋವ್ಕಾ ಗ್ರಾಮವು ಉಕ್ರೇನ್ ಗಡಿಯಿಂದ 93 ಮೈಲು ಪೂರ್ವದಲ್ಲಿದೆ. ಆಕಸ್ಮಿಕ ಬಾಂಬ್ ಎಸೆತದಿಂದಾಗಿ ಆರು ಮನೆಗಳಿಗೆ ಹಾನಿಯಾಗಿವೆಯೆಂದು ರಶ್ಯನ್ ಸುದ್ದಿಸಂಸ್ಥೆಗಳು ವರದಿ ಮಾಡಿವೆ. ‘‘ಈ ಘಟನೆಗೆ ಕಾರಣವಾದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಯುತ್ತಿದೆ. ಹಾನಿಯ ರೀತಿಯನ್ನು ಅಂದಾಜಿಸಲು ಆಯೋಗವೊಂದು ಕೆಲಸ

ತನ್ನದೇ ಗ್ರಾಮದ ಮೇಲೆ ಬಾಂಬ್ ದಾಳಿ ನಡೆಸಿದ ರಶ್ಯ! Read More »

ಇಸ್ರೇಲ್ ಪರ ಬೇಹುಗಾರಿಕೆ?: 33 ಜನರ ಬಂಧನ

ಇಸ್ತಾನ್ ಬುಲ್: ಇಸ್ರೇಲ್ನ ವಿದೇಶಿ ಗುಪ್ತಚರ ಸೇವೆ ಮೊಸಾದ್ ಪರವಾಗಿ ಬೇಹುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿರುವ ಶಂಕೆಯ ಮೇಲೆ ಟರ್ಕಿ ಅಧಿಕಾರಿಗಳು 33 ಜನರನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ಅನಾಡೋಲು ಸುದ್ದಿ ಸಂಸ್ಥೆ ಭದ್ರತಾ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದು, ಬಂಧಿತ ಶಂಕಿತರು ಮೊಸಾದ್ ಪರವಾಗಿ ಕಣ್ಗಾವಲು, ಹಲ್ಲೆ ಮತ್ತು ಅಪಹರಣದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಇಸ್ತಾಂಬುಲ್ ಪ್ರಾಸಿಕ್ಯೂಟರ್ ಕಚೇರಿಯ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳ ತನಿಖಾ ಬ್ಯೂರೊ ತನಿಖೆ ನಡೆಸುತ್ತಿದೆ

ಇಸ್ರೇಲ್ ಪರ ಬೇಹುಗಾರಿಕೆ?: 33 ಜನರ ಬಂಧನ Read More »

ಪರವಾನಿಗೆ ಇಲ್ಲದೆ ಮರಳು ಸಾಗಾಟ | ವಾಹನ ವಶ, ಪ್ರಕರಣ ದಾಖಲು

ಕಡಬ: ಪರವಾನಿಗೆ ಇಲ್ಲದೇ ಮರಳು ಸಾಗಾಟ ಪ್ರಕರಣವನ್ನು ಕಡಬ ಪೊಲೀಸರು ಕಳಾರ ಎಂಬಲ್ಲಿ ಪತ್ತೆ ಹಚ್ಚಿ ಸಾಗಾಟಕ್ಕೆ ಬಳಸುತ್ತಿದ್ದ ಪಿಕಪ್ ವಾಹನ ವಶಪಡಿಸಿಕೊಂಡ ಘಟನೆ ನಡೆದಿದೆ. ಕಡಬ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಅಭಿನಂದನ್ ಎಂ.ಎಸ್. ಹಾಗೂ ಸಿಬ್ಬಂದಿಗಳು ಮಂಗಳವಾರ ಸಂಜೆ ಕಡಬ ಗ್ರಾಮದ ಕಳಾರ ಎಂಬಲ್ಲಿ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಕಡಬ ಕಡೆಗೆ ಬರುತ್ತಿದ್ದ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ ಅದರಲ್ಲಿ ಮರಳು ಕಂಡು ಬಂದಿದೆ. ಈ ಬಗ್ಗೆ ಚಾಲಕ ಕುಂತೂರು ನಿವಾಸಿ

ಪರವಾನಿಗೆ ಇಲ್ಲದೆ ಮರಳು ಸಾಗಾಟ | ವಾಹನ ವಶ, ಪ್ರಕರಣ ದಾಖಲು Read More »

ಬಡವರ ಪಾಲಿಗೆ ‘ಆಶೀರ್ವಾದ’ | ಮನೆ, ಕಾರು, ಬೈಕ್, ಚಿನ್ನ, ನಗದು ಸೇರಿದಂತೆ ಹತ್ತಾರು ಬಹುಮಾನಗಳ ಮಹಾಪೂರ | ಆಶೀರ್ವಾದ ಎಂಟರ್ ಪ್ರೈಸಸ್’ನಿಂದ ಗ್ರಾಹಕರಿಗೆ ಲಕ್ಕಿ ಸ್ಕೀಮ್

ಪುತ್ತೂರು: ಗ್ರಾಹಕರಿಗೆ ಅದೃಷ್ಟದ `ಆಶೀರ್ವಾದ’ ಸಿಕ್ಕಿದರೆ ಹೇಗಿರಬಹುದು!! ಇಂತಹ ಅಭೂತಪೂರ್ವ ಅವಕಾಶವೊಂದನ್ನು ಆಶೀರ್ವಾದ ಎಂಟರ್ ಪ್ರೈಸಸ್ ಗ್ರಾಹಕರ ಮುಂದಿಡುತ್ತಿದೆ. ಲಕ್ಕಿ ಸ್ಕೀಂ ನಡೆಸಿ ಅದನ್ನು ನೇರ ಪ್ರಸಾರದ ಮೂಲಕ ಡ್ರಾ ಮಾಡಿ ಜನರಿಗೆ ಅವಕಾಶಗಳ ಮಹಾಪೂರವನ್ನು ನೀಡುವ ಸದುದ್ದೇಶದ ಯೋಜನೆಯನ್ನು ಸಿದ್ಧಪಡಿಸಿದೆ. ಬಡವರ ಪಾಲಿಗೆ ಬೆಳಕಾಗಿ, ಗ್ರಾಹಕರ ಪಾಲಿಗೆ ಆಶೀರ್ವಾದವಾಗಿ ಲಕ್ಕಿ ಸ್ಕೀಂ ಅನ್ನು ಪ್ರಸ್ತುತ ಪಡಿಸುತ್ತಿರುವ ಆಶೀರ್ವಾದ ಎಂಟರ್ಪ್ರೈಸಸ್, ಸ್ಕೀಂ ಇತಿಹಾಸದಲ್ಲೇ ಅತೀ ದೊಡ್ಡ ಬಂಪರ್ ಡ್ರಾವನ್ನು ಜನರ ಮುಂದಿಡುತ್ತಿದೆ. ಪ್ರತೀ ತಿಂಗಳು ಕಾರು, ಬೈಕ್,

ಬಡವರ ಪಾಲಿಗೆ ‘ಆಶೀರ್ವಾದ’ | ಮನೆ, ಕಾರು, ಬೈಕ್, ಚಿನ್ನ, ನಗದು ಸೇರಿದಂತೆ ಹತ್ತಾರು ಬಹುಮಾನಗಳ ಮಹಾಪೂರ | ಆಶೀರ್ವಾದ ಎಂಟರ್ ಪ್ರೈಸಸ್’ನಿಂದ ಗ್ರಾಹಕರಿಗೆ ಲಕ್ಕಿ ಸ್ಕೀಮ್ Read More »

error: Content is protected !!
Scroll to Top