ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಯ ದೇಹದಿಂದ ವಿಷ ತೆಗೆದು ಸಮಯಪ್ರಜ್ಞೆ ಮೆರೆದ ಆಂಬುಲೆನ್ಸ್ ಸಿಬ್ಬಂದಿ

ಉಪ್ಪಿನಂಗಡಿ: ವಿಷ ಸೇವಿಸಿ ಅಸ್ವಸ್ಥರಾದ ಗೃಹಿಣಿಯೋರ್ವರನ್ನು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿಗೆ ಕರೆದೊಯ್ಯುವ ಸಂದರ್ಭ ಮಹಿಳೆಯ ದೇಹದೊಳಗಿನ ವಿಷ ಹೊರ ತೆಗೆಯುವ ಮೂಲಕ 108 ಅಂಬುಲೆನ್ಸ್‌ನ ಸಿಬ್ಬಂದಿ ತೋರಿದ ಸಮಯ ಪ್ರಜ್ಞೆ ಮೆರೆದ ಘಟನೆ ನಡೆದಿದೆ. ಉಪ್ಪಿನಂಗಡಿಯ ಮಠ ಪರಿಸರದ ಮಹಿಳೆಯೋರ್ವರು ವಿಷ ಸೇವಿಸಿ ಅಸ್ವಸ್ಥರಾದ ಸ್ಥಿತಿಯಲ್ಲಿ ಉಪ್ಪಿನಂಗಡಿ ಸಮುದಾಯ ಆಸ್ಪತ್ರೆಗೆ ಕರೆ ತರಲಾಗಿತ್ತು. ಗಂಭೀರ ಸ್ಥಿತಿಗೆ ತಲುಪಿದ್ದ ಮಹಿಳೆಯನ್ನು ಅಗತ್ಯ ಚಿಕಿತ್ಸೆಯೊಂದಿಗೆ ಮಂಗಳೂರಿಗೆ ಕರೆದೊಯ್ಯುವ ಅನಿವಾರ್ಯತೆ ಎದುರಾಗಿತ್ತು. ಈ ವೇಳೆ ಸ್ಥಳೀಯ ಟೀಮ್ ದಕ್ಷಿಣ ಕಾಶಿ ಅಂಬುಲೆನ್ಸ್‌ […]

ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆಯ ದೇಹದಿಂದ ವಿಷ ತೆಗೆದು ಸಮಯಪ್ರಜ್ಞೆ ಮೆರೆದ ಆಂಬುಲೆನ್ಸ್ ಸಿಬ್ಬಂದಿ Read More »

ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ | ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಪುತ್ತೂರು: ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ವಿರುದ್ಧ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಠಾಣೆಗೆ ದೂರು ನೀಡಿದ್ದಾರೆ. ಅವಧಿ ಮುಗಿದ ಬಾಡಿಗೆ ಕಟ್ಟಡಕ್ಕೆ ಏಲಂ ಪ್ರಕಟಣೆ ಅಂಟಿಸಿದ ನೋಟೀಸನ್ನು ಕಿತ್ತು ಹಾಕಿ, ಅಂಗಡಿ ಕೋಣೆ ಮೇಲೆ ಅಕ್ರಮ ಹಕ್ಕು ಸಾಧಿಸಿದ್ದಲ್ಲದೆ ತಾಲೂಕು ಪಂಚಾಯತ್ ಕಚೇರಿಗೆ ನುಗ್ಗಿ ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪುತ್ತೂರು ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಪುತ್ತೂರು ತಾಲೂಕು ಪಂಚಾಯಿತಿ ವಾಣಿಜ್ಯ ಸಂಕೀರ್ಣ-2

ಸರಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ | ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು Read More »

ಪಿಕಪ್ – ಆಟೋ ರಿಕ್ಷಾ ಡಿಕ್ಕಿ!

ಪುತ್ತೂರು: ರಿಕ್ಷಾ ಹಾಗೂ ಪಿಕಪ್ ಮುಖಾಮುಖಿ ಡಿಕ್ಕಿಯಾದ ಘಟನೆ ಎಪಿಎಂಸಿ ರೈಲ್ವೇ ಅಂಡರ್ ಪಾಸ್ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ. ಆಟೋ ರಿಕ್ಷಾ ಚಾಲಕ ರಝಾಕ್ ಜಿಡೆಕಲ್ ಹಾಗೂ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಉಪ್ಪಿನಂಗಡಿ ಕಡೆಯಿಂದ ಕೋಳಿ ಸಾಗಾಟ ಮಾಡುತ್ತಿದ್ದ ಪಿಕಪ್ ಹಾಗೂ ಪುತ್ತೂರು ಕಡೆಯಿಂದ ಬರುತ್ತಿದ್ದ ರಿಕ್ಷಾ ನಡುವೆ ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾದ ಮುಂಭಾಗ ಜಖಂಗೊಂಡಿದೆ.

ಪಿಕಪ್ – ಆಟೋ ರಿಕ್ಷಾ ಡಿಕ್ಕಿ! Read More »

ಮೂವಪ್ಪೆಯಲ್ಲಿ ಹಾಲು ಸಂಗ್ರಹಣಾ ಉಪಕೇಂದ್ರ ಆರಂಭ

ಕಾಣಿಯೂರು: ಕಾಣಿಯೂರು ಹಾಲು ಉತ್ಪಾದಕರ ಸಂಘದ ಹಾಲು ಸಂಗ್ರಹಣಾ ಉಪಕೇಂದ್ರವನ್ನು ಕೊಡಿಯಾಲದ ಮೂವಪ್ಪೆ ಶಾಲಾ ಬಳಿ ಉದ್ಘಾಟನೆಗೊಂಡಿತು. ಕೆ.ಎಂ.ಎಫ್.ನ ಡಿಎಂ ಸತೀಶ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿದರು. ವಿಸ್ತರಣಾಧಿಕಾರಿ ನಾಗೇಶ್, ಕಾಣಿಯೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಸುರೇಶ್ ಓಡಬಾಯಿ, ನಿರ್ದೇಶಕರಾದ ಮುರಳೀಧರ ಪುಣ್ಚತ್ತಾರು, ಭರತ್ ಅಗಳಿ, ಸದಾನಂದ ನಾವೂರು, ರಾಜೇಶ್ ಮೀಜೆ, ಸೌಮ್ಯ ಪೈಕ, ಹೇಮಾವತಿ ಮುಗರಂಜ, ಮಾಜಿ ನಿರ್ದೇಶಕರಾದ ಜಿನ್ನಪ್ಪ ಗೌಡ ಕಲ್ಪಡ, ಕಾಣಿಯೂರು ಗ್ರಾ.ಪಂ.  ಸದಸ್ಯ ಪ್ರವೀಣ್ ರೈ ಕುಮೇರು, ಕಲ್ಪಡ ಶ್ರೀ

ಮೂವಪ್ಪೆಯಲ್ಲಿ ಹಾಲು ಸಂಗ್ರಹಣಾ ಉಪಕೇಂದ್ರ ಆರಂಭ Read More »

ನೆಕ್ಕರೆ ದೈವಸ್ಥಾನದ ವಾರ್ಷಿಕ ನೇಮೋತ್ಸವ |ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಮಾ. 23 ಹಾಗೂ 24ರಂದು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ನೆಕ್ಕರೆಯಲ್ಲಿರುವ ಶ್ರೀ ಬ್ರಹ್ಮ ಆದಿಮೊಗೇರ್ಕಳ ಹಾಗೂ ಚಾಮುಂಡೇಶ್ವರಿ ಅಮ್ಮನವರ ದೈವಸ್ಥಾನದಲ್ಲಿ ನಡೆಯಲಿರುವ ಚತುರ್ಥ ವರ್ಷದ ವಾರ್ಷಿಕ ಪೂಜೆ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಕ್ಷೇತ್ರದ ಆನುವಂಶಿಕ ಮೊಕ್ತೇಸರ ಬಾಬು ಎನ್. ನೆಕ್ಕರೆ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಬ್ರಹ್ಮ ಆದಿಮೊಗೇರ್ಕಳ ಹಾಗೂ ಚಾಮುಂಡೇಶ್ವರಿ ಅಮ್ಮನವರ ಸೇವಾ ಸಮಿತಿ ಗೌರವಾಧ್ಯಕ್ಷ ಶ್ರೀಧರ ಪೂಜಾರಿ ನೆಕ್ಕರೆ, ಅಧ್ಯಕ್ಷ ರವಿ ಮುಕ್ವೆ, ಉಪಾಧ್ಯಕ್ಷ ಶಿವರಾಮ

ನೆಕ್ಕರೆ ದೈವಸ್ಥಾನದ ವಾರ್ಷಿಕ ನೇಮೋತ್ಸವ |ಆಮಂತ್ರಣ ಪತ್ರಿಕೆ ಬಿಡುಗಡೆ Read More »

ತ್ರೋಬಾಲ್ ಪಂದ್ಯಾಟ : ಪುತ್ತೂರಿನ ಬೆಥನಿ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ

ಪುತ್ತೂರು: ಡಿಸೆಂಬರ್ ನಲ್ಲಿ ಶಾಲಾ ಶಿಕ್ಷಣ ಇಲಾಖೆ ಶಿವಮೊಗ್ಗದಲ್ಲಿ ನಡೆಸಿದ ರಾಜ್ಯ ಮಟ್ಟದ ಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ಬಾಲಕಿಯರ ತ್ರೋಬಾಲ್ ಪಂದ್ಯಾಟದಲ್ಲಿ ಪುತ್ತೂರಿನ ಬೆಥನಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ. ಆಯಿಷತ್ ಹಿಬಾ ಮತ್ತು ನಿರೀಕ್ಷಾ ಎಚ್‍. ಪ್ರಥಮ ಸ್ಥಾನ ಪಡೆದಿದ್ದು, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ನಿರಂಜನ್, ಅಕ್ಷಯ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಸೆಲಿನ್ ಪೇತ್ರಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.

ತ್ರೋಬಾಲ್ ಪಂದ್ಯಾಟ : ಪುತ್ತೂರಿನ ಬೆಥನಿ ಶಾಲಾ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ Read More »

ಕುಕ್ಕೆ ದೇವಾಲಯದಲ್ಲಿ ಪರ್ಸ್, ಮೊಬೈಲ್ ಕಳ‍್ಳತನ! | ಸಿಸಿ ಕ್ಯಾಮರಾ ಸಹಾಯದಿಂದ ಮಹಿಳೆಯನ್ನು ಪತ್ತೆ ಹಚ್ಚಿದ ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿ

ಸುಬ್ರಹ್ಮಣ್ಯ: ಭಕ್ತರೊಬ್ಬರ ಪರ್ಸ್ ಕದ್ದು ಪರಾರಿಯಾಗಲು ಯತ್ನಿಸುತ್ತಿದ್ದ ಮಹಿಳೆಯನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಿಬ್ಬಂದಿಗಳು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದು, ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ದೂರದ ಊರಿನಿಂದ ಆಗಮಿಸಿದ ಭಕ್ತರೊಬ್ಬರ ಮೊಬೈಲ್ ಹಾಗೂ ಪರ್ಸ್ ಕಳೆದು ಹೋಗಿರುವ ಬಗ್ಗೆ ದೇವಸ್ಥಾನದ ಕಚೇರಿಗೆ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಎಲ್ಲಾ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸುವಾಗ ಮಹಿಳೆಯೊಬ್ಬಳು ಪರ್ಸ್ ಕಳ್ಳತನ ಮಾಡುತ್ತಿರುವ ದೃಶ್ಯ ಕಂಡುಬಂದಿತ್ತು.

ಕುಕ್ಕೆ ದೇವಾಲಯದಲ್ಲಿ ಪರ್ಸ್, ಮೊಬೈಲ್ ಕಳ‍್ಳತನ! | ಸಿಸಿ ಕ್ಯಾಮರಾ ಸಹಾಯದಿಂದ ಮಹಿಳೆಯನ್ನು ಪತ್ತೆ ಹಚ್ಚಿದ ಭದ್ರತಾ ಸಿಬ್ಬಂದಿ ಗಂಗಾಧರ ನಾಡೋಳಿ Read More »

ವಿಟ್ಲ ಜಾತ್ರೋತ್ಸವಲ್ಲಿ ‘ಶಾಂಭವಿ’ ನಾಟಕ | ದೇವರ ಸನ್ನಿಧಿಯಲ್ಲಿ ಆಮಂತ್ರಣ ಬಿಡುಗಡೆಗೊಳಿಸಿದ ಸಮರ್ಪಣ್ ವಿಟ್ಲ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ಕಾಲಾವಧಿ ಜಾತ್ರೋತ್ಸವದ ಅಂಗವಾಗಿ ಜ. 15ರಂದು ಸಮರ್ಪಣ್ ವಿಟ್ಲ ಅರ್ಪಿಸುವ ಕಲಾ ಕಾಣಿಕೆ ‘ಶಾಂಭವಿ’ ನಾಟಕ ಪ್ರದರ್ಶನಗೊಳ್ಳಲಿದೆ. ಈ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಸೋಮವಾರ ಸಂಜೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು. ಸಮರ್ಪಣ್ ವಿಟ್ಲದ ಗೌರವಾಧ್ಯಕ್ಷ ವಿಟ್ಲ ಅರಮನೆಯ ಕೃಷ್ಣಯ್ಯ ಕೆ. ಆಮಂತ್ರಣ ಬಿಡುಗಡೆ ಮಾಡಿದರು. ಅಧ್ಯಕ್ಷ ಯಶವಂತ್ ನಿಡ್ಯ, ಉಪಾಧ್ಯಕ್ಷರಾದ ಯಾದವ ಮಡಿವಾಳಕೋಡಿ, ಸೂರಜ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ರೋಹಿತ್ ಕಟ್ಟೆ, ಗೌರವ ಸಲಹೆಗಾರ

ವಿಟ್ಲ ಜಾತ್ರೋತ್ಸವಲ್ಲಿ ‘ಶಾಂಭವಿ’ ನಾಟಕ | ದೇವರ ಸನ್ನಿಧಿಯಲ್ಲಿ ಆಮಂತ್ರಣ ಬಿಡುಗಡೆಗೊಳಿಸಿದ ಸಮರ್ಪಣ್ ವಿಟ್ಲ Read More »

ಸ್ಕೂಟಿ ಸಹಿತ ಸಮುದ್ರಕ್ಕೆ ಬಿದ್ದ ಮೀನುಗಾರ! | ಮೃತದೇಹ, ಸ್ಕೂಟಿ ಮೇಲೆತ್ತಿದ ಆಪದ್ಭಾಂಧವ ಈಶ್ವರ್ ಮಲ್ಪೆ

ಉಡುಪಿ: ಮಲ್ಪೆ ಸಮುದ್ರಕ್ಕೆ ಬಿದ್ದು ಮೃತಪಟ್ಟ ತಮಿಳುನಾಡು ಮೂಲದ ಮೀನುಗಾರನ ಮೃತದೇಹವನ್ನು ಹಾಗೂ ಸ್ಕೂಟಿಯನ್ನು ಮುಳುಗು ತಜ್ಞ ಈಶ್ವರ್ ‍ಮಲ್ಪೆ ಪತ್ತೆ ಮಾಡಿ, ಮೇಲೆತ್ತಿದ್ದಾರೆ. ತಮಿಳುನಾಡು ಮೂಲದ ಮೀನುಗಾರ ಮಲ್ಪೆ ಮೀನುಗಾರಿಕಾ ಬಂದರಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಅವರ ಹೆಸರು ತಿಳಿದುಬಂದಿಲ್ಲ. ಸ್ಕೂಟಿಯಲ್ಲಿ ಸಂಚರಿಸುತ್ತಿದ್ದ ಸಂದರ್ಭ ಅಚಾನಕ್ ಆಗಿ ಸಮುದ್ರಕ್ಕೆ ಬಿದ್ದಿದ್ದರು. ಸ್ಥಳಕ್ಕಾಗಮಿಸಿದ ಆಪದ್ಭಾಂಧವ ಈಶ್ವರ್ ಮಲ್ಪೆ ಅವರು, ಸಮುದ್ರಕ್ಕೆ ಧುಮುಕ್ಕಿದ್ದಾರೆ. ಗಂಟೆಗಳ ಬಳಿಕ ಮೃತದೇಹ ಪತ್ತೆಯಾಗಿತ್ತು. ಕ್ರೇನ್ ಬಳಸಿ ಸ್ಕೂಟಿ ಹಾಗೂ ಮೃತದೇಹವನ್ನು ಸ್ಕೂಟಿ ಹಾಗೂ ಮೃತದೇಹವನ್ನು

ಸ್ಕೂಟಿ ಸಹಿತ ಸಮುದ್ರಕ್ಕೆ ಬಿದ್ದ ಮೀನುಗಾರ! | ಮೃತದೇಹ, ಸ್ಕೂಟಿ ಮೇಲೆತ್ತಿದ ಆಪದ್ಭಾಂಧವ ಈಶ್ವರ್ ಮಲ್ಪೆ Read More »

ಆಟೋ ಚಾಲಕ ಆತ್ಮಹತ್ಯೆಯೋ, ಕೊಲೆಯೋ? | ತನಿಖೆಗೆ ಒತ್ತಾಯಿಸಿದ ಕಣ್ವರ್ಷಿ ಬಿ.ಎಂ.ಎಸ್. ಆಟೋರಿಕ್ಷಾ ಚಾಲಕ ಮಾಲಕರ ಸಂಘ

ಕಾಣಿಯೂರು: ಆಟೋ ಚಾಲಕ ಬೆದ್ರಾಜೆ ವಸಂತ ಗೌಡ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಸಂಶಯ ಮೂಡಿದೆ. ಆದ್ದರಿಂದ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬೆಳ್ಳಾರೆ ಪೊಲೀಸ್ ಠಾಣಾಧಿಕಾರಿಗಳಿಗೆ ಮನವಿ ನೀಡಲಾಗಿದೆ. ಬೆದ್ರಾಜೆ ವಸಂತ ಗೌಡ ಎಂಬವರು ಡಿ. 27ರಂದು ಮಧ್ಯಾಹ್ನ ಎಲುವೆ ಎಂಬಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೇಲ್ನೊಟಕ್ಕೆ ಇದು ಆತ್ಮಹತ್ಯೆಯೆಂದು ಕಂಡುಬಂದಿತ್ತು. ಆದರೆ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಕಾಣಿಯೂರು ಕಣ್ವರ್ಷಿ ಬಿ.ಎಂ.ಎಸ್. ಆಟೋ ರಿಕ್ಷಾ

ಆಟೋ ಚಾಲಕ ಆತ್ಮಹತ್ಯೆಯೋ, ಕೊಲೆಯೋ? | ತನಿಖೆಗೆ ಒತ್ತಾಯಿಸಿದ ಕಣ್ವರ್ಷಿ ಬಿ.ಎಂ.ಎಸ್. ಆಟೋರಿಕ್ಷಾ ಚಾಲಕ ಮಾಲಕರ ಸಂಘ Read More »

error: Content is protected !!
Scroll to Top