ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಿಂದ ಐಕ್ಯಂ ಜಿಲ್ಲಾ ಸಮ್ಮೇಳನ

ಪುತ್ತೂರು: ರೋಟರ್ಯಾಕ್ಟ್ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ನೇತೃತ್ವದಲ್ಲಿ ಐಕ್ಯಂ ಜಿಲ್ಲಾ ಸಮ್ಮೇಳನ ಶನಿವಾರ ಇಲ್ಲಿನ ಕೋಟೆಚಾ ಹಾಲಿನಲ್ಲಿ ಉದ್ಘಾಟನೆಗೊಂಡಿತು. ಎರಡು ದಿನಗಳ ಕಾಲ ನಡೆಯಲಿರುವ ಜಿಲ್ಲಾ ಸಮ್ಮೇಳನವನ್ನು ರೋಟರಿ ಗವರ್ನರ್ ಎಚ್.ಆರ್. ಗವರ್ನರ್ ಎಚ್.ಆರ್. ಕೇಶವ್ ಉದ್ಘಾಟಿಸಿ, ಶುಭಹಾರೈಸಿದರು. ಎ.ಆರ್.ಪಿ.ಐ.ಸಿ. ಝೋನ್ 7ರ ಪಿಡಿಜಿ ಅಭಿನಂದನ್ ಶೆಟ್ಟಿ ದಿಕ್ಸೂಚಿ ಭಾಷಣ ಮಾಡಿದರು. ಡಿ.ಆರ್.ಸಿ.ಸಿ. ಮಹಮ್ಮದ್ ಅಸ್ಲಾಂ, ರೋಟರಿ ಝೋನ್ 5ರ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ […]

ಪುತ್ತೂರು ರೋಟರ್ಯಾಕ್ಟ್ ಕ್ಲಬ್ಬಿನಿಂದ ಐಕ್ಯಂ ಜಿಲ್ಲಾ ಸಮ್ಮೇಳನ Read More »

ಶತಾಯುಷಿ ಪಮಣ ಗೌಡ ನಿಧನ

ಕೊಕ್ಕಡ:: ಪಟ್ರಮೆ ಗ್ರಾಮದ ಅಶ್ವತ್ತಡಿ ನಿವಾಸಿ ಶತಾಯುಷಿ ಪಮಣ ಗೌಡ (101) ಜ.6 ರಂದು ನಿಧನರಾದರು. 1923ನೇ ಇಸವಿಯಲ್ಲಿ ಜನಿಸಿದ ಪಮಣ ಗೌಡರು ಸಿಪಿಐಎಂ ತಾಲೂಕು ಸಮಿತಿ ಮುಖಂಡರಾಗಿದ್ದರು. ಮೃತರು ನಾಲ್ವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಶತಾಯುಷಿ ಪಮಣ ಗೌಡ ನಿಧನ Read More »

ಹಿಂದೂಗಳ ಭಾವನೆ ಜೊತೆ ಆಟವಾಡುವ ರಾಮ ವಿರೋಧಿಗಳನ್ನು ತಕ್ಷಣ ಬಂಧಿಸಿ : ಅರುಣ್ ಕುಮಾರ್ ಪುತ್ತಿಲ

ಸುಳ್ಯ : ಶ್ರೀರಾಮಚಂದ್ರನ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬ್ಯಾನರನ್ನು ಕಿಡಿಗೇಡಿಗಳು ಹರಿದಿದ್ದು, ಅವರನ್ನು ತಕ್ಷಣ ಬಂಧಿಸಬೇಕು ಎಂದು ಅರುಣ್ ಪುತ್ತಿಲ ಒತ್ತಾಯಿಸಿದ್ದಾರೆ. ಸುಳ್ಯದ ಮುಖ್ಯರಸ್ತೆಯಲ್ಲಿ ಸುಳ್ಯ ಜಾತ್ರೆ, ಅಯೋಧ್ಯೆ ರಾಮಮಂದಿರ ಹಾಗೂ ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ನ ಬೆಳ್ಳಿಹಬ್ಬಕ್ಕೆ ಶುಭಕೋರಿ, ಬೃಹತ್‌ ಬ್ಯಾನ‌ರ್ ಅಳವಡಿಕೆ ಮಾಡಲಾಗಿತ್ತು. ಅದರಲ್ಲಿ ನಡುವಿನಲ್ಲಿದ್ದ ಶ್ರೀರಾಮ ದೇವರ ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯವನ್ನು ಯಾರೋ ಕಿಡಿಗೇಡಿಗಳು ರಾತ್ರಿ ಹರಿದು ಹಾಕಿದ್ದಾರೆ. ಹಿಂದೂಗಳ ಭಾವನೆ ಜೊತೆ ಆಟವಾಡುವ ಇಂತಹ

ಹಿಂದೂಗಳ ಭಾವನೆ ಜೊತೆ ಆಟವಾಡುವ ರಾಮ ವಿರೋಧಿಗಳನ್ನು ತಕ್ಷಣ ಬಂಧಿಸಿ : ಅರುಣ್ ಕುಮಾರ್ ಪುತ್ತಿಲ Read More »

ಚಿಲ್ಲರೆ ನೆಪ | ಹಿರಿಯ ನಾಗರಿಕರನ್ನು ದಾರಿಮಧ್ಯೆ ಇಳಿಸಿದ ಬಸ್ ನಿರ್ವಾಹಕ

ಕಡಬ: ಚಿಲ್ಲರೆ ನೆಪ ನೀಡಿ ಸರಕಾರಿ ಬಸ್ ನಿರ್ವಾಹರೊಬ್ಬರು ಹಿರಿಯ ನಾಗರಿಕರೊಬ್ಬರನ್ನು ದಾರಿಮಧ್ಯೆ ಬಸ್ಸಿನಿಂದ ಇಳಿಸಿದ ಘಟನೆ ಕಡಬ ತಾಲೂಕಿನ ಕಲ್ಲುಗುಡ್ಡೆ ಎಂಬಲ್ಲಿ ಶನಿವಾರ ನಡೆದಿದ್ದು, ಈ ಕುರಿತು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕಲ್ಲುಗುಡ್ಡೆ ಶಾಂತಿಗುರಿ ನಿವಾಸಿ ಬಾಬು ಗೌಡ (75) ಕಲ್ಲುಗುಡ್ಡೆಯಲ್ಲಿ ಸರಕಾರಿ ಬಸ್ ಹತ್ತಿದ್ದಾರೆ. ಬಸ್ ನಿರ್ವಾಹಕ ಟಿಕೆಟ್ ಗೆ ದುಡ್ಡು ಕೇಳುವಾಗ 200ರೂ ನೀಡಿದ್ದಾರೆ. ಚಿಲ್ಲರೆ ಇಲ್ಲ ಎಂಬ ಕಾರಣಕ್ಕೆ ನಿರ್ವಾಹಕ ಹಿರಿಯ ನಾಗರಿಕರಾದ ಬಾಬು ಗೌಡ ಅವರನ್ನು ಕಲ್ಲುಗುಡ್ಡೆ

ಚಿಲ್ಲರೆ ನೆಪ | ಹಿರಿಯ ನಾಗರಿಕರನ್ನು ದಾರಿಮಧ್ಯೆ ಇಳಿಸಿದ ಬಸ್ ನಿರ್ವಾಹಕ Read More »

126 ದಿನಗಳ ಪಯಣ: ಹಾಲೋ ಕಕ್ಷೆ ಸೇರಲಿರುವ ಆದಿತ್ಯ ಎಲ್-1

126 ದಿನಗಳ ಕಾಲ ಪ್ರಯಾಣಿಸಿದ ನಂತರ, ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ವೀಕ್ಷಣಾಲಯವಾದ ಆದಿತ್ಯ-ಎಲ್ 1 ಉಪಗ್ರಹ ಅಂತಿಮವಾಗಿ ಇಂದು ಶನಿವಾರ ಅಪರಾಹ್ನ 4 ಗಂಟೆ ಸುಮಾರಿಗೆ ಅದರ ಗೊತ್ತುಪಡಿಸಿದ ಹಾಲೋ ಕಕ್ಷೆ ಸೇರಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ವಿಜ್ಞಾನಿಗಳು ಮೊದಲ ಬಾರಿಗೆ ಲ್ಯಾಗ್ರೇಂಜ್ ಪಾಯಿಂಟ್ 1 ನಲ್ಲಿರುವ ಹಾಲೋ ಕಕ್ಷೆಯಲ್ಲಿ ಉಪಗ್ರಹವನ್ನು ಇರಿಸುವ ನಿರ್ಣಾಯಕ ಕುಶಲತೆ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆಯನ್ನು ಸೆ. 2, 2023 ರಂದು ಶ್ರೀಹರಿಕೋಟಾದ ಸತೀಶ್

126 ದಿನಗಳ ಪಯಣ: ಹಾಲೋ ಕಕ್ಷೆ ಸೇರಲಿರುವ ಆದಿತ್ಯ ಎಲ್-1 Read More »

ಪ್ರತೀ ವಲಯಕ್ಕೆ ಹೆಚ್ಚುವರಿಯಾಗಿ  20 ಲಕ್ಷ ರೂ. ಅನುದಾನ | ಬ್ಲಾಕ್‍ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಎಲ್ಲಾ ವಲಯ ಕೇಂದ್ರಕ್ಕೆ ತಲಾ 20 ಲಕ್ಷ ರೂ. ಅನುದಾನ ಹೆಚ್ಚುವರಿಯಾಗಿ ನೀಡುವುದಾಗಿ ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ. ಪುತ್ತೂರು ಬ್ಲಾಕ್‍ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಪ್ರತೀ ವಲಯಾಧ್ಯಕ್ಷರುಗಳ ಮೂಲಕ ಕ್ಷೇತ್ರದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯಲಿದೆ. ಗ್ರಾಮದಲ್ಲಿ ಅಗತ್ಯವಾಗಿ ಆಗಬೇಕಾದ ಕಾಮಗಾರಿಯನ್ನು ಮಾಡಲು ಈ ಅನುದಾನವನ್ನು ಬಳಕೆ ಮಾಡಲಾಗುತ್ತದೆ. ಪ್ರತೀ ಗ್ರಾಮಗಳಿಗೂ ಸಮಾನ ರೀತಿಯಲ್ಲಿ ಅನುದಾನವನ್ನು ವಿತರಣೆ ಮಾಡಲಾಗುತ್ತದೆ. ಕಾರ್ಯಕರ್ತರು ಯಾವುದೇ ಸಮಸ್ಯೆ

ಪ್ರತೀ ವಲಯಕ್ಕೆ ಹೆಚ್ಚುವರಿಯಾಗಿ  20 ಲಕ್ಷ ರೂ. ಅನುದಾನ | ಬ್ಲಾಕ್‍ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಅಶೋಕ್ ರೈ Read More »

ಬ್ಯಾನರ್ ಪ್ರಕರಣ : 24 ಗಂಟೆಯಲ್ಲಿ ಆರೋಪಿಗಳನ್ನು‌ ಬಂಧಿಸದಿದ್ದಲ್ಲಿ ಪ್ರತಿಭಟನೆ : ವರ್ಷಿತ್‌ ಚೊಕ್ಕಾಡಿ

ಸುಳ್ಯ: ಅಯೋಧ್ಯ ಶ್ರೀ ರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಲುವಾಗಿ ಹಾಕಲಾದ ಬ್ಯಾನರ್ ನ್ನು ರಾತ್ರಿ ಹೊತ್ತಿನಲ್ಲಿ ಯಾರೋ ಕಿಡಿಗೇಡಿಗಳು ಹಾನಿ ಮಾಡಿದ್ದು, ಆರೋಪಿಗಳನ್ನು ಪೊಲೀಸ್ ಇಲಾಖೆ ಮುಂದಿನ 24 ಗಂಟೆಯೊಳಗೆ ಬಂಧಿಸದಿದ್ದರೆ ಪ್ರತಿಭಟನೆ ಮಾಡಲಿದ್ದೇವೆ ಎಂದು ಬಜರಂಗದಳ ಸುಳ್ಯ ನಗರ ಸಂಚಾಲಕರು ವರ್ಷಿತ್ ಚೊಕ್ಕಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಳೆ ಬೆಳಗ್ಗೆ 10.00 ಗಂಟೆಗೆ ರಾಜ್ಯ ಹೆದ್ದಾರಿ ರಸ್ತೆ ತಡೆದು ಪ್ರತಿಭಟನೆ ಮಾಡಲಿದ್ದೇವೆ. ಬ್ಯಾನರ್ ಹರಿಯುವ ಮೂಲಕ ಈ ರೀತಿಯ ವಿಕೃತಿ ಮರೆದು ಶಾಂತಿ ಭಂಗ ಉಂಟುಮಾಡುಲು

ಬ್ಯಾನರ್ ಪ್ರಕರಣ : 24 ಗಂಟೆಯಲ್ಲಿ ಆರೋಪಿಗಳನ್ನು‌ ಬಂಧಿಸದಿದ್ದಲ್ಲಿ ಪ್ರತಿಭಟನೆ : ವರ್ಷಿತ್‌ ಚೊಕ್ಕಾಡಿ Read More »

ಸುಳ್ಯ ಬ್ಯಾನರ್ ಹರಿದ ಪ್ರಕರಣ | ಆರೋಪಿಗಳನ್ನು ಬಂಧಿಸುವಂತೆ ಆಗ್ರಹ

ಸುಳ್ಯ : ಶ್ರೀರಾಮಚಂದ್ರನ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಬ್ಯಾನರನ್ನು ಹರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಖಂಡನೆ ವ್ಯಕ್ತಪಡಿಸಿದ್ದಾರೆ. ಸುಳ್ಯ ಜಾತ್ರೆ ಹಾಗೂ ಅಯೋಧ್ಯೆ ರಾಮಮಂದಿರ ಮತ್ತು ಸುಳ್ಯ ತಾಲೂಕು ಆಟೋ ರಿಕ್ಷಾ ಚಾಲಕರ ಸಂಘ ಬಿಎಂಎಸ್ ನ ಬೆಳ್ಳಿಹಬ್ಬಕ್ಕೆ ಶುಭಕೋರಿ ಬೃಹತ್ ಬ್ಯಾನರ್ ಅಳವಡಿಕೆ ಮಾಡಲಾಗಿತ್ತು. ಇದನ್ನು ಯಾರೋ ಕಿಡಿಗೇಡಿಗಳು ಶ್ರೀರಾಮ ದೇವರ ಸಹಿತ ರಾಮಮಂದಿರ ಲೋಕಾರ್ಪಣೆ ವಿಷಯದ ಬ್ಯಾನ‌ರ್ ನ್ನು ಹರಿದು ಹಾಕಿದ್ದಾರೆ. ಈ ಬಗ್ಗೆ ಸಂಸದ ನಳಿನ್ ಕುಮಾರ್ ಕಟೀಲ್

ಸುಳ್ಯ ಬ್ಯಾನರ್ ಹರಿದ ಪ್ರಕರಣ | ಆರೋಪಿಗಳನ್ನು ಬಂಧಿಸುವಂತೆ ಆಗ್ರಹ Read More »

ನಾಳೆ: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದಿಂದ ಸ್ನೇಹಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ

ಬೆಂಗಳೂರು: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಬೆಂಗಳೂರು ವತಿಯಿಂದ ಸ್ನೇಹಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜ.7 ಭಾನುವಾರ ಲಗ್ಗೆರೆ ‘ನಮ್ಮನೆ’ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ನಡೆಯಲಿದೆ. ಬೆಳಿಗ್ಗೆ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ, ಲೋಕಸಭಾ ಸದಸ್ಯ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಉದ್ಘಾಟಿಸಲಿದ್ದು, ಬೆಂಗಳೂರು ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ಅಧ್ಯಕ್ಷ ಪಳಂಗಪ್ಪ ಪಾಣತ್ತಲೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ, ಶಾಸಕ ಮುನಿರತ್ನ, ಮಡಿಕೇರಿ

ನಾಳೆ: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದಿಂದ ಸ್ನೇಹಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ Read More »

ಮಹಿಳೆಗೆ ಆ್ಯಸಿಡ್ ಎರಚುವ ಬೆದರಿಕೆ!!  ಪ್ರಕರಣ ದಾಖಲು

ಬೆಳ್ಳಾರೆ : ಮಹಿಳೆಯೋರ್ವರ ಮೇಲೆ ಆ್ಯಸಿಡ್ ಎರಚುವುದಾಗಿ ಬೆದರಿಕೆ ಹಾಕಿರುವ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಳ್ತಿಗೆ ನಿವಾಸಿ ಚಿತ್ರಪ್ರಭಾ ರೈ ನೀಡಿರುವ ದೂರಿನ ಮೇರೆಗೆ ಪ್ರದೀಪ್ ಶೆಟ್ಟಿ, ಭಾಸ್ಕರ ರೈ ಧರ್ಮಸ್ಥಳ, ರವೀಂದ್ರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸರಳ ರೈ, ಜಯಶ್ರೀ ಶೆಟ್ಟಿ, ಕನ್ಯಾಕುಮಾರಿ ರೈ, ಕಾವ್ಯ ರೈ, ಅಮಿತಾ ರೈ, ವಾರಿಜ ರೈ, ಯತೀಂದ್ರನಾಥ ಶೆಟ್ಟಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಚಿತ್ರಪ್ರಭಾ ರೈ ಎಂಬವರು ಶುಕ್ರವಾರ ಸಂಜೆ ಮನೆಗೆ ನಡೆದುಕೊಂಡು

ಮಹಿಳೆಗೆ ಆ್ಯಸಿಡ್ ಎರಚುವ ಬೆದರಿಕೆ!!  ಪ್ರಕರಣ ದಾಖಲು Read More »

error: Content is protected !!
Scroll to Top