ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ !

ಬೆಳ್ತಂಗಡಿ : ತನ್ನ ವಿದ್ಯಾರ್ಹತೆಗೆ ತಕ್ಕ ಕೆಲಸ ಸಿಗದ ಹಿನ್ನಲೆಯಲ್ಲಿ ಮನನೊಂದು ಯುವಕನೋರ್ವ ಕುತ್ತಿಗೆಗೆ ಚೂರಿಯಿಂದಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಂಗಳೂರಿನ ಮಾದಾವರ ನಿವಾಸಿ ನಾರಾಯಣಪ್ಪ ಎಂಬವರ ಪುತ್ರ ಹಿತೇಶ್ (24) ಆತ್ಮಹತ್ಯೆಗೆ ಯತ್ನಿಸಿದಾತ. ಹಿತೇಶ್ ಸಿವಿಲ್ ಇಂಜಿನಿಯರಿಂಗ್‍ ಪದವಿ ಪಡೆದಿದ್ದು, ಎಷ್ಟೇ ಪ್ರಯತ್ನಿಸಿದರೂ ಕೆಲಸ ಸಿಗದೇ ಇರುವ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ಕಲ್ಲೇರಿ ಎಂಬಲ್ಲಿ ತನ್ನ ಬ್ಯಾಗ್‍ನಲ್ಲಿದ್ದ ಚೂರಿಯಿಂದ ಕುತ್ತಿಗೆಗೆ ಇರಿದುಕೊಂಡು ರಸ್ತೆ ಬದಿ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ. […]

ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ ! Read More »

ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ !

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯಪದವಿನ ಕನ್ನಡ್ಕದಲ್ಲಿ ಭಾನುವಾರ ನಡೆದಿದೆ. ಕನ್ನಡ್ಕ ನಿವಾಸಿ ಕಾಲೇಜೊಂದರ ವಿದ್ಯಾರ್ಥಿನಿ ದೀಕ್ಷಾ (16) ಮೃತಪಟ್ಟ ಯುವತಿ ದೀಕ್ಷಾ ಮನೆಯ ಫ್ಯಾನ್‍ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈಶ್ವಮಂಗಲ ಹೊರಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ

ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ! Read More »

ದ.ಕ., ಕೊಡಗು ಗೌಡ ಸಮಾಜ ದೇಶಕ್ಕೆ ಅಭೂತಪೂರ್ವ ಸಂಸ್ಕಾರ, ಸಂಸ್ಕೃತಿ ನೀಡಿದೆ | ಬೆಂಗಳೂರಿನಲ್ಲಿ ಸ್ನೇಹಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಡಿ.ವಿ.ಸದಾನಂದ ಗೌಡ

ಬೆಂಗಳೂರು: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜದ ವತಿಯಿಂದ ಸ್ನೇಹಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬೆಂಗಳೂರಿನ ಲಗ್ಗೆರೆ ನಮ್ಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಭಾನುವಾರ ನಡೆಯಿತು. ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೊಡಗು, ದ.ಕ. ಗೌಡ ಸಮಾಜ ಇಡೀ ಸಮುದಾಯ, ರಾಜ್ಯ ಒಂದು ಅದ್ಭುತ ಕಾರ್ಯಕ್ರಮ ಸಂಘಟನೆ ಮಾಡುತ್ತಿದೆ. ವಿಶೇಷವಾಗಿ ದ.ಕ., ಕೊಡಗು ಗೌಡ ಸಮಾಜ ಇಡೀ ಸಮುದಾಯ ರಾಜ್ಯಕ್ಕೆ, ದೇಶಕ್ಕೆ ಅಭೂತಪೂರ್ವ

ದ.ಕ., ಕೊಡಗು ಗೌಡ ಸಮಾಜ ದೇಶಕ್ಕೆ ಅಭೂತಪೂರ್ವ ಸಂಸ್ಕಾರ, ಸಂಸ್ಕೃತಿ ನೀಡಿದೆ | ಬೆಂಗಳೂರಿನಲ್ಲಿ ಸ್ನೇಹಮಿಲನ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಡಿ.ವಿ.ಸದಾನಂದ ಗೌಡ Read More »

40 ಸಿಸಿ ಕ್ಯಾಮರಾಗಳ ಪೂಟೇಜ್ ಪರಿಶೀಲನೆ | ಸುಳ್ಯ ಬ್ಯಾನರ್ ವಿವಾದಕ್ಕೆ ತೆರೆ !

ಸುಳ್ಯ: ಸುಳ್ಯ ಖಾಸಗಿ ಬಸ್ ನಿಲ್ದಾಣದ ಬಳಿ, ಸುಳ್ಯ ಆಟೋ ರಿಕ್ಷಾ ಸಂಘದ ವತಿಯಿಂದ ಅಳವಡಿಸಿದ್ದ ಬ್ಯಾನರ್‌ನ ಮಧ್ಯಭಾಗವನ್ನು ಯಾರೋ ಹರಿದು ತೆಗೆದುಕೊಂಡು ಹೋಗಿರುವ ಬಗ್ಗೆ ಜ.06ರಂದು ಆಟೊ ರಿಕ್ಷಾ ಸಂಘದ ಅದ್ಯಕ್ಷರು ಸುಳ್ಯ ಪೊಲೀಸ್‌ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕೃತ್ಯವೆಸಗಿದವರ ಪತ್ತೆಗಾಗಿ ಪೋಲೀಸರು ಸುಳ್ಯದಲ್ಲಿರುವ ಸುಮಾರು 40 ಸಿಸಿ ಕ್ಯಾಮಾರಗಳ ಪೂಟೇಜ್‌ಗಳನ್ನು ಪರಿಶೀಲನೆ ಮಾಡಿದ್ದರು. ಜ.5 ರಂದು ಮಧ್ಯರಾತ್ರಿ ಮಾನಸಿಕ ಅಸ್ವಸ್ಥನಂತೆ ಕಂಡುಬರುತ್ತಿರುವ ಅಪರಿಚಿತ ವಯಸ್ಸಾದ ವ್ಯಕ್ತಿಯೋರ್ವ ಬ್ಯಾನರ್ ಹರಿದು ತನ್ನ

40 ಸಿಸಿ ಕ್ಯಾಮರಾಗಳ ಪೂಟೇಜ್ ಪರಿಶೀಲನೆ | ಸುಳ್ಯ ಬ್ಯಾನರ್ ವಿವಾದಕ್ಕೆ ತೆರೆ ! Read More »

ಜೀವನ ಕೌಶಲ್ಯವನ್ನು ಕಲಿಸುವ ಪ್ರತಿಭಾ ಪುರಸ್ಕಾರ ಮೈಲುಗಲ್ಲಾಗಿ ನಿಲ್ಲಲಿ | ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ‘ಪ್ರತಿಭಾ ಸರಸ್ವತೀ’ ಕಾರ್ಯಕ್ರಮದಲ್ಲಿ ಮಾಲತಿ ಡಿ.

ಪುತ್ತೂರು: ನರಿಮೊಗರು ಕೊಡಂಕಿರಿ ಫೌಂಡೇಶನ್ ಪ್ರಾಯೋಜಿತ ಸರಸ್ವತಿ ವಿದ್ಯಾ ಮಂದಿರದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವರ್ಧಂತ್ಯುತ್ಸವ -2024 ‘ಪ್ರತಿಭಾ ಸರಸ್ವತೀ’ ಕಾರ್ಯಕ್ರಮ ಶನಿವಾರ ಸಂಜೆ ನಡೆಯಿತು. ಮುಖ್ಯ ಅತಿಥಿಯಾಗಿ ಅಂಬಿಕಾ ಸಿಬಿಎಸ್‍ಇ ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ. ಸಮಾರಂಭ ಉದ್ಘಾಟಿಸಿ ಮಾತನಾಡಿ, ಯಾವುದೇ ಮಗುವಿನ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರೋತ್ಸಾಹ ನೀಡಬೇಕು. ಮಗುವಿನಲ್ಲಿ ಇಲ್ಲದೆ ಇರುವ ಕಲೆಯ ಬಗ್ಗೆ ಒತ್ತಡ ಹಾಗಬಾರದು. ಈ ನಿಟ್ಟಿನಲ್ಲಿ ಪ್ರತಿಭಾ ವೇದಿಕೆ ಮಕ್ಕಳಲ್ಲಿನ ಪ್ರತಿಭೆಯನ್ನು ತೋರ್ಪಡಿಸಲು ಸಹಕಾರಿಯಾಗಬಲ್ಲದು. ಇಂತಹಾ ವೇದಿಕೆಯಿಂದ ಮಕ್ಕಳು ಇನ್ನೊಬ್ಬರ

ಜೀವನ ಕೌಶಲ್ಯವನ್ನು ಕಲಿಸುವ ಪ್ರತಿಭಾ ಪುರಸ್ಕಾರ ಮೈಲುಗಲ್ಲಾಗಿ ನಿಲ್ಲಲಿ | ನರಿಮೊಗರು ಸರಸ್ವತಿ ವಿದ್ಯಾ ಮಂದಿರದ ‘ಪ್ರತಿಭಾ ಸರಸ್ವತೀ’ ಕಾರ್ಯಕ್ರಮದಲ್ಲಿ ಮಾಲತಿ ಡಿ. Read More »

ಧ್ವಜ ಒಗ್ಗಟ್ಟಿನ, ವಿಜೇತದ, ಸ್ಪರ್ಧೆಯ ಸಂಕೇತ | ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಕ್ರೀಡಾ ಸಂಭ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗುಮ್ಮಣ್ಣ ಗೌಡ

ಕಡಬ: ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ‘ಕ್ರೀಡಾ ಸಂಭ್ರಮ-2023-24’ ಆಲಂಕಾರು ಶ್ರೀ ದುರ್ಗಾಂಬಾ ಮೈದಾನದಲ್ಲಿ ಜ.7 ರಂದು ನಡೆಯಿತು. ನಿವೃತ್ತ ಅಧ್ಯಾಪಕ ಗುಮ್ಮಣ್ಣ ಗೌಡ ಧ್ವಜಾರೋಹಣ ನೆರವೇರಿಸಿ, ಮಾತನಾಡಿ, ಬಾವುಟ ಅತ್ಯಂತ ಹೆಮ್ಮೆಯ ವಿಷಯವಾಗಿದ್ದು, ಒಗ್ಗಟ್ಟಿನ, ವಿಜೇತದ, ಸ್ಪರ್ಧೆಯ, ದೇಶದ ಸಂಕೇತವಾಗಿದೆ. ಈ ನಿಟ್ಟಿನಲ್ಲಿ ಒಗ್ಗಟ್ಟಿನಲ್ಲಿ, ಸೌಹಾರ್ದದ ಸ್ಪರ್ಧೆಯಲ್ಲಿ ನಾವೆಲ್ಲರೂ ಸಂಭ್ರಮಿಸೋಣ ಎಂದು ಹೇಳಿದರು. ಶಾಸಕ ಸಂಜೀವ ಮಠಂದೂರು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ದೈಹಿಕ ಜತೆಗೆ ಮಾನಸಿಕವಾಗಿ ಕ್ರೀಡೆ ಸಹಕಾರಿಯಾಗಿದೆ. ಸೌಹಾರ್ದ ವಾತಾವರಣ ನಿರ್ಮಾಣ

ಧ್ವಜ ಒಗ್ಗಟ್ಟಿನ, ವಿಜೇತದ, ಸ್ಪರ್ಧೆಯ ಸಂಕೇತ | ಆಲಂಕಾರು ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಕ್ರೀಡಾ ಸಂಭ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಗುಮ್ಮಣ್ಣ ಗೌಡ Read More »

ಸರಕಾರಿ ಶಾಲೆ ಬದುಕು ಧೈರ್ಯ ಕಲಿಸುತ್ತದೆ | ಚೂರಿಪದವು ಶಾಲಾ ನೂತನ ತರಗತಿ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಸರಕಾರಿ ಶಾಲೆಗಳು ಎಲ್ಲವನ್ನೂ ಕಲಿಸುತ್ತದೆ, ಗುಣಮಟ್ಟದ ಶಿಕ್ಷಣವೂ ಇದೆ ಜೊತೆಗೆ ಏನೇ ಸಂಕಷ್ಟ ಬಂದರೂ ಬದುಕುವ ಧೈರ್ಯವನ್ನು ಸರಕಾರಿ‌ ಶಾಲಾ ಶಿಕ್ಷಣ ನೀಡುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು. ಅವರು ಚೂರಿಪದವು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಶಿಕ್ಷಣದ ಜೊತೆಗೆ ಸಂಸ್ಕಾರವನ್ನೂ ಮಕ್ಕಳಿಗೆ ಕಲಿಸಬೇಕಾಗುತ್ತದೆ. ಸರಕಾರಿ ‌ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣದ ಕೊರತೆ ಇದೆ. ಅದನ್ನು ಮುಂದಿನ ದಿನಗಳಲ್ಲಿ ನೀಗಿಸುವ

ಸರಕಾರಿ ಶಾಲೆ ಬದುಕು ಧೈರ್ಯ ಕಲಿಸುತ್ತದೆ | ಚೂರಿಪದವು ಶಾಲಾ ನೂತನ ತರಗತಿ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಅಶೋಕ್ ರೈ Read More »

ಮೀಟರ್ ಬಡ್ಡಿಯವರಿಂದ ಕಿರುಕುಳ | ಆತ್ಮಹತ್ಯೆಗೆ ಶರಣಾದ ಮಹಿಳೆ

ಪುತ್ತೂರು: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯೋರ್ವರು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ. ಬಲ್ನಾಡು ನಿವಾಸಿ ಕೇಸರಿ ಕೊಪ್ಪಳ (38) ಮೃತಪಟ್ಟವರು. ಕೇಸರಿ ಕೊಪ್ಪಳ ಅವರು ಮನೆಯ ದಾಖಲೆ ಪತ್ರ ಇಟ್ಟು ಲೇವಾದೇವಿಯವರಿಂದ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದರು. ಸಾಲ ಕೊಟ್ಟವರು ಕಿರುಕುಳ ನೀಡಿದ್ದಾರೆ ಹಲವರ ಬಳಿ ಹೇಳಿಕೊಂಡಿದ್ದರು. ಬಳಿಕ ನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಈ ಕುರಿತು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತಿ, ಇಬ್ಬರು ಗಂಡು

ಮೀಟರ್ ಬಡ್ಡಿಯವರಿಂದ ಕಿರುಕುಳ | ಆತ್ಮಹತ್ಯೆಗೆ ಶರಣಾದ ಮಹಿಳೆ Read More »

ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ

ಪುತ್ತೂರು: ನಗರದ ಪರ್ಲಡ್ಕದ ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ ಹಾಗೂ ದೈವಗಳ ನೇಮೋತ್ಸವ ಶನಿವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಕೆಮ್ಮಿಂಜೆ ಬ್ರಹ್ಮಶ್ರೀ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ಬೆಳಗ್ಗೆಯಿಂದ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ನಾಗತಂಬಿಲ, ಪಂಚಾಮೃತ ಅಭಿಷೇಕ, ಶ್ರೀ ದೈವಗಳ ಕಲಶ ತಂಬಿಲ ಸೇವೆ, ಸಾಮೂಹಿಕ ಆಶ್ಲೇಷಬಲಿ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆದು ಬಳಿಕ ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ಪಾಂಗಳಾಯಿ ಶ್ರೀ ಅರಸು

ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಪೂಜೆ Read More »

ಊರವರ ಪ್ರೀತಿಯ ಅಭಿನಂದನೆ ಪಡೆದಿದ್ದೇನೆ | ಚೂರಿಪದವು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ ಉದ್ಘಾಟಿಸಿ ಸಂಜೀವ ಮಠಂದೂರು

ಪುತ್ತೂರು: ಚೂರಿಪದವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ, ಪ್ರೊಜೆಕ್ಟರ್ ಹಾಗೂ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ಈ ಹಿಂದೆ ಪುತ್ತೂರು ಕ್ಷೇತ್ರದ ಶಾಸಕನಾಗಿದ್ದ ಸಂದರ್ಭದಲ್ಲಿ ಚೂರಿಪದವು, ನಿಡ್ಪಳ್ಳಿ, ಆನಾಜೆ ಪರಿಸರದಲ್ಲಿ ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನ ಒದಗಿಸಿದ್ದು, ಈ ನಿಟ್ಟಿನಲ್ಲಿ ಊರವರಿಂದ ಪ್ರೀತಿಯ ಅಭಿನಂದನೆಯನ್ನು ಪಡೆದಿದ್ದೇನೆ ಎಂದರು.

ಊರವರ ಪ್ರೀತಿಯ ಅಭಿನಂದನೆ ಪಡೆದಿದ್ದೇನೆ | ಚೂರಿಪದವು ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ನೂತನ ಕೊಠಡಿ ಉದ್ಘಾಟಿಸಿ ಸಂಜೀವ ಮಠಂದೂರು Read More »

error: Content is protected !!
Scroll to Top