ಮಹಿಳೆ ನಾಪತ್ತೆ : ದೂರು ದಾಖಲು
ವಿಟ್ಲ: ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಕುರಿತು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ ಸಮೀಪದ ಪಳಿಕೆ ಜನತಾ ಕಾಲೋನಿ ನಿವಾಸಿ ಲಕ್ಷ್ಮೀ (60) ನಾಪತ್ತೆಯಾದವರು. ಮಾನಸಿಕ ಅಸ್ವಸ್ಥರಾಗಿದ್ದ ಲಕ್ಷ್ಮೀ ಅವರು ವಿಟ್ಲ ಪೇಟೆಯಲ್ಲಿ ಸುತ್ತಾಡುತ್ತಿದ್ದರು ಎನ್ನಲಾಗಿದ್ದು, ಡಿ.16 ರಂದು ಹೋದವರು ಬಳಿಕ ಮರಳಿ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಮಹಿಳೆ ಕುರಿತು ತಿಳಿದು ಬಂದಲ್ಲಿ ವಿಟ್ಲ ಠಾಣೆ ಅಥವಾ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಮಹಿಳೆ ನಾಪತ್ತೆ : ದೂರು ದಾಖಲು Read More »










