ಅನಾರೋಗ್ಯದಿಂದಿದ್ದ ಯುವತಿ ಐಶ್ವರ್ಯ ನಿಧನ

ಪುತ್ತೂರು: ಕಲ್ಲೇಗ ರಕ್ತೇಶ್ವರಿ ವಠಾರ ನಿವಾಸಿ ಐಶ್ವರ್ಯ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇಂಜಿನಿಯರಿಂಗ್‍ ಪದವೀಧರೆಯಾಗಿರುವ ಐಶ್ವರ್ಯ ಹಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯತ್ತಿದ್ದರು ಎನ್ನಲಾಗಿದೆ. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮೃತರು ಮನೆಯವರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಅನಾರೋಗ್ಯದಿಂದಿದ್ದ ಯುವತಿ ಐಶ್ವರ್ಯ ನಿಧನ Read More »

ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಶಾಲಾ ಬಸ್ !!

ಉಪ್ಪಿನಂಗಡಿ: ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸು ಮಗುಚಿ ಬಿದ್ದ ಘಟನೆ ಉಪ್ಪಿನಂಗಡಿಯ ರಾಮನಗರದಲ್ಲಿ ಇಂದು ನಡೆದಿದೆ. ಉಪ್ಪಿನಂಗಡಿ ಹಳೆಗೇಟು ಸಮೀಪದ ಅರಫಾ ಶಾಲಾ ಬಸ್ ಹಿರೇಬಂಡಾಡಿ ಕಡೆಯಿಂದ ಮಕ್ಕಳನ್ನು ಕರೆದುಕೊಂಡು ಬರುವ ಸಂದರ್ಭ ಈ ಘಟನೆ ನಡೆದಿದೆ. ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದ ಶಾಲಾ ಬಸ್ !! Read More »

ಬನ್ನೂರು ಹಿ.ಪ್ರಾ. ಶಾಲೆಯಲ್ಲಿ ಎಸ್.ಆರ್.ಕೆ. ಲ್ಯಾಡರ್ಸಿನ ಬೆಳ್ಳಿಹಬ್ಬದ ಸಂಭ್ರಮ | ಶತಮಾನದಂಚಿನ ಶಾಲೆಯಲ್ಲಿ ಶ್ರಮದಾನ ನಡೆಸಿ, ಕೊಡುಗೆ ನೀಡಿದ ಬೆಳ್ಳಿಹಬ್ಬ ಸಂಭ್ರಮದಲ್ಲಿರುವ ಸಂಸ್ಥೆ

ಪುತ್ತೂರು: ಇಲ್ಲಿನ ಎಸ್.ಆರ್.ಕೆ. ಲ್ಯಾಡರ್ಸಿನ ಬೆಳ್ಳಿಹಬ್ಬ ಸಂಭ್ರಮದ ಅಂಗವಾಗಿ ಸರಣಿಯ 5ನೇ ಕಾರ್ಯಕ್ರಮವಾಗಿ ಬನ್ನೂರು ಹಿ.ಪ್ರಾ. ಶಾಲೆಯಲ್ಲಿ ಶ್ರಮದಾನ ಹಾಗೂ ಶಾಲಾ ಕೊಠಡಿ, ದಾಸ್ತಾನು ಕೊಠಡಿಗಳ ನಿರ್ವಹಣೆ ಮಾಡಲಾಯಿತು. ಶಾಲಾ ಮೈದಾನದಲ್ಲಿ ಬೆಳೆದಿದ್ದ ಹುಲ್ಲು, ಗಿಡ – ಗಂಟಿಗಳನ್ನು ತೆರವುಗೊಳಿಸಲಾಯಿತು. ಬಳಿಕ ಶಾಲಾ ತರಗತಿ ಕೊಠಡಿ, ದಾಸ್ತಾನು ಕೊಠಡಿಗಳನ್ನು ಬಳಕೆಗೆ ಯೋಗ್ಯವಾದ ರೀತಿಯಲ್ಲಿ ಸಿದ್ಧಪಡಿಸಿ, ಶುಚಿಗೊಳಿಸಿ ನೀಡಲಾಯಿತು. ದಾರಂದಗಳನ್ನು ಜೋಡಿಸಿ, ಬಾಗಿಲುಗಳನ್ನು ಅಳವಡಿಸಿ, ಗೋಡೆಗಳಿಗೆ ಪೈಂಟಿಂಗ್ ಮಾಡಿಸಲಾಯಿತು. ಸರಣಿ ಕಾರ್ಯಕ್ರಮದ ಅಂಗವಾಗಿ ಇಡೀ ದಿನ ಶಾಲಾ ವಠಾರದಲ್ಲಿ

ಬನ್ನೂರು ಹಿ.ಪ್ರಾ. ಶಾಲೆಯಲ್ಲಿ ಎಸ್.ಆರ್.ಕೆ. ಲ್ಯಾಡರ್ಸಿನ ಬೆಳ್ಳಿಹಬ್ಬದ ಸಂಭ್ರಮ | ಶತಮಾನದಂಚಿನ ಶಾಲೆಯಲ್ಲಿ ಶ್ರಮದಾನ ನಡೆಸಿ, ಕೊಡುಗೆ ನೀಡಿದ ಬೆಳ್ಳಿಹಬ್ಬ ಸಂಭ್ರಮದಲ್ಲಿರುವ ಸಂಸ್ಥೆ Read More »

ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀರಾಮ ರಕ್ಷಾಸ್ತ್ರೋತ್ರ ಮಂತ್ರ ಪಠಣ | ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ ನೆನಪಿಗಾಗಿ ಬಿಲ್ವಪತ್ರೆ, ಪಾರಿಜಾತ ಗಿಡ ನಾಟಿ

ಚಾರ್ವಾಕ: ಅಯೋಧ್ಯ ಶ್ರೀ ರಾಮ ಜನ್ಮ ಭೂಮಿ ಪ್ರಾಣ ಪ್ರತಿಷ್ಠೆ ಅಂಗವಾಗಿ ಚಾರ್ವಕ ನಾಣಿಲ ಉಪವಾಸತಿ ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ರಾಮ ರಕ್ಷಾ ಸ್ತೋತ್ರ ಮಂತ್ರ ಪಠಣ, ನಾಲ್ಕಂಭ ಉಳ್ಳಾಲ್ತಿ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಿತು. ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠೆಯ ಅವಿಸ್ಮರಣೀಯ ನೆನಪಿಗಾಗಿ ಪವಿತ್ರ ಬಿಲ್ವಪತ್ರೆ ಹಾಗೂ ಪಾರಿಜಾತ ಗಿಡ ನೆಡಲಾಯಿತು. ಈ ಸಂದರ್ಭದಲ್ಲಿ ಅಯೋಧ್ಯೆ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರವನ್ನು ಭಕ್ತಾದಿಗಳು ವೀಕ್ಷಿಸಿ ಪುನೀತರಾದರು. ಮಧ್ಯಾಹ್ನ

ಕುಂಬ್ಲಾಡಿ ಶ್ರೀ ಕುಕ್ಕೇನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀರಾಮ ರಕ್ಷಾಸ್ತ್ರೋತ್ರ ಮಂತ್ರ ಪಠಣ | ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ ನೆನಪಿಗಾಗಿ ಬಿಲ್ವಪತ್ರೆ, ಪಾರಿಜಾತ ಗಿಡ ನಾಟಿ Read More »

ಶಾಲಾ ಬೀಗ ಮುರಿದು ಕಳ್ಳತನ | ಸೊತ್ತುಗಳು ಸಹಿತ ನಗದು ಕಳವು

ಪುತ್ತೂರು: ಶಾಲಾ ಕೊಠಡಿಯ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ಸಾವಿರಾರು ರೂಪಾಯಿ ಮೌಲ್ಯದ ಸೊತ್ತುಗಳು ಹಾಗೂ ನಗದು ಹಣವನ್ನು ಕಳವುಗೈದ ಘಟನೆ ಕೊಳ್ತಿಗೆ ಗ್ರಾಮದ ಷಣ್ಮುಖದೇವ ಪ್ರೌಢಶಾಲೆಯಲ್ಲಿ ನಡೆದಿದೆ. ಶನಿವಾರ ಸಂಜೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಕೃಷ್ಣವೇಣಿ ಎಸ್‌. ಶನಿವಾರ ಸಂಜೆ ಶಾಲೆಗೆ ಬೀಗ ಹಾಕಿ ತೆರಳಿದ್ದು, ಭಾನುವಾರ ಹಾಗೂ ಸೋಮವಾರ ಶಾಲೆಗೆ ರಜೆ ಇತ್ತು. ಮಂಗಳವಾರ ಬೆಳಿಗ್ಗೆ ಶಿಕ್ಷಕರಾದ ಅನಿರುದ್ಧ ಹಾಗೂ ವೀಣಾ ಕುಮಾರಿ ಶಾಲೆಗೆ ಬಂದಾಗ ಮುಖ್ಯ ಶಿಕ್ಷಕರ ಕೊಠಡಿಯ ಬೀಗ

ಶಾಲಾ ಬೀಗ ಮುರಿದು ಕಳ್ಳತನ | ಸೊತ್ತುಗಳು ಸಹಿತ ನಗದು ಕಳವು Read More »

ನಾಳೆ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ | ಬಂಟಿಂಗ್ಸ್, ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲ್ಪಟ್ಟ ದೈವಸ್ಥಾನ | ವಾಹನ ಸಂಚಾರದಲ್ಲಿ ಬದಲಾವಣೆ

ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನ ವಾರ್ಷಿಕ ನೇಮೋತ್ಸವ ಜ.24 ಬುಧವಾರ ನಡೆಯಲಿದ್ದು, ಎಲ್ಲಾ ಸಿದ್ಧತೆಗಳು ನಡೆದಿದೆ. ದೈವಸ್ಥಾನ ಹಾಗೂ ಮುಖ್ಯರಸ್ತೆಯಲ್ಲಿ ಸುಮಾರು 500 ಮೀ.ನಷ್ಟು ಉದ್ದಕ್ಕೆ ತಳಿರು ತೋರಣ, ಕೇಸರಿ ಬಂಟಿಂಗ್ಸ್, ವಿದ್ಯುತ್ ಬಲ್ಬುಗಳಿಂದ ಈಗಾಗಲೇ ಸಿಂಗರಿಸಲಾಗಿದೆ. ನೇಮೋತ್ಸವದ ಅಂಗವಾಗಿ ಬೆಳಿಗ್ಗೆ ಕಾರ್ಜಾಲುಗುತ್ತಿನಲ್ಲಿ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿದೆ. ರಾತ್ರಿ 7 ಗಂಟೆಗೆ ಶ್ರೀ ದೈವಗಳ ಮೂಲನೆಲೆ ಕಾರ್ಜಾಲು

ನಾಳೆ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ | ಬಂಟಿಂಗ್ಸ್, ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಂಗರಿಸಲ್ಪಟ್ಟ ದೈವಸ್ಥಾನ | ವಾಹನ ಸಂಚಾರದಲ್ಲಿ ಬದಲಾವಣೆ Read More »

ರಾಮ ಮಂದಿರದ ವಿಚಾರದಲ್ಲಿ ಕಾಂಗ್ರೆಸ್‍ನವರ ವಿರೋಧ ಇನ್ನೂ ಮುಗಿದಿಲ್ಲ | ಪ್ರಧಾನಿ ನರೇಂದ್ರ ಮೋದಿಯವರನ್ನು ಗರ್ಭಗುಡಿ ಪ್ರವೇಶಿಸಲು ಬಿಡಬಾರದಿತ್ತು | ವಿವಾದಾತ್ಮಕ ಹೇಳಿಕೆ ನೀಡಿದ ವೀರಪ್ಪ ಮೊಯಿಲಿ

ಚಿಕ್ಕಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿಯವರನ್ನು ಅಯೋಧ್ಯೆ ಶ್ರೀರಾಮ ಮಂದಿರದ ಗರ್ಭ ಗುಡಿ ಪ್ರವೇಶಿಸಲು ಬಿಡಬಾರದಿತ್ತು. ಹೀಗೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಮಾಜಿ ಸಿಎಂ. ವೀರಪ್ಪ ಮೊಯಿಲಿ. ಕಾಂಗ್ರೆಸ್ ಪಕ್ಷದ ವತಿಯಿಂದ ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರತಿಭಟನೆಯೊಂದಲ್ಲಿ ಅವರು ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‍ನವರು ರಾಮಮಂದಿರ ವಿಚಾರದಲ್ಲಿ ವಿರೋಧವನ್ನು ಇನ್ನೂ ಬಿಟ್ಟಿಲ್ಲ ಎಂದು ಸಾಬೀತು ಮಾಡಿದ್ದಾರೆ. ರಾಮ ಮಂದಿರ ಅಪೂರ್ಣ ರಾಮ ಮಂದಿರವಾಗಿದ್ದು, ಕೇವಲ ಶ್ರೀರಾಮ ಪ್ರಾಣ ಪ್ರತಿಷ್ಠೆ ಮಾಡಿದರೆ ಸಾಲದು. ಅಲ್ಲಿ ರಾಮ,

ರಾಮ ಮಂದಿರದ ವಿಚಾರದಲ್ಲಿ ಕಾಂಗ್ರೆಸ್‍ನವರ ವಿರೋಧ ಇನ್ನೂ ಮುಗಿದಿಲ್ಲ | ಪ್ರಧಾನಿ ನರೇಂದ್ರ ಮೋದಿಯವರನ್ನು ಗರ್ಭಗುಡಿ ಪ್ರವೇಶಿಸಲು ಬಿಡಬಾರದಿತ್ತು | ವಿವಾದಾತ್ಮಕ ಹೇಳಿಕೆ ನೀಡಿದ ವೀರಪ್ಪ ಮೊಯಿಲಿ Read More »

ವಿದ್ಯಾರ್ಥಿ ಶ್ರೇಯಸ್ ಮಂಗಳೂರಿನಲ್ಲಿ ಪತ್ತೆ !!

ಸುಳ್ಯ: ವಿದ್ಯಾರ್ಥಿಯೋರ್ವ ಮನೆಯಿಂದ ಶಾಲೆಗೆ ಹೊರಟವ ಶಾಲೆಗೆ ಹೋಗದೆ, ಮನೆಗೂ ಬಾರದೆ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದ್ದು, ಇದೀಗ ಮಂಗಳೂರಿನಲ್ಲಿ ಬಂದರ್ ಪೊಲೀಸರು ಅಂಗಡಿಯೊಂದರಲ್ಲಿ ಪತ್ತೆ ಮಾಡಿದ್ದಾರೆ. ಲೋಕನಾಥ್‍ ಎಂಬವರ ಪುತ್ರ ಕಾಣಿಯೂರು ಖಾಸಗಿ ಶಾಲಾ 8ನೇ ತರಗತಿ ವಿದ್ಯಾರ್ಥಿ ಶ್ರೇಯಸ್ (15) ಕಾಣೆಯಾಗಿದ್ದು, ಈತನ ಸುಳಿವು ಸಿಕ್ಕಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯೂ ಹೊರಡಿಸಲಾಗಿತ್ತು. ಇದೀಗ ಮಂಗಳೂರಿನಲ್ಲಿ ಪತ್ತೆಯಾಗಿರುವ ಕುರಿತು ಆತನ ಮನೆಯವರಿಗೆ ಮಾಹಿತಿ ಸಿಕ್ಕಿದೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿ ಶ್ರೇಯಸ್ ಮಂಗಳೂರಿನಲ್ಲಿ ಪತ್ತೆ !! Read More »

ವಿದ್ಯಾರ್ಥಿ ಶ್ರೇಯಸ್ ನಾಪತ್ತೆ !!

ಸುಳ್ಯ: ವಿದ್ಯಾರ್ಥಿಯೋರ್ವ ಮನೆಯಿಂದ ಶಾಲೆಗೆ ಹೊರಟವ ಶಾಲೆಗೆ ಹೋಗದೆ, ಮನೆಗೂ ಬಾರದೆ ಕಾಣೆಯಾದ ಕುರಿತು ಪ್ರಕರಣ ದಾಖಲಾಗಿದೆ. ಲೋಕನಾಥ್‍ ಎಂಬವರ ಪುತ್ರ ಕಾಣಿಯೂರು ಖಾಸಗಿ ಶಾಲಾ 8ನೇ ತರಗತಿ ವಿದ್ಯಾರ್ಥಿ ಶ್ರೇಯಸ್ (15) ಕಾಣೆಯಾದವ. 5 ಅಡಿ ಎತ್ತರ, ಸಪೂರ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಗುಲಾಬಿ ಬಣ್ಣದ ಶರ್ಟ್‍, ಕಪ್ಪು ಟೈ, ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಈತನ ಸುಳಿವು ಸಿಕ್ಕಿದಲ್ಲಿ ಸ್ಥಳೀಯ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಸುಳ್ಯ ಠಾಣೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿ ಶ್ರೇಯಸ್ ನಾಪತ್ತೆ !! Read More »

ಹಿಂದೂ ಮುಖಂಡ ಅವಿನಾಶ್‍ ಗೆ ಗಡಿಪಾರು ಆದೇಶ | ವಿಚಾರಣೆಗೆ ಹಾಜರಾಗುವಂತೆ ನೋಟಿಸ್

ಪುತ್ತೂರು: ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನಲೆಯಲ್ಲಿ ಪುರುಷರಕಟ್ಟೆ ನಿವಾಸಿ ಹಿಂದೂ ಮುಖಂಡ ಅವಿನಾಶ್ ಅವರಿಗೆ ದ.ಕ.ಜಿಲ್ಲಾ ವ್ಯಾಪ್ತಿಯಿಂದ ಬೀದರ್ ಜಿಲ್ಲಾ ವ್ಯಾಪ್ತಿಯ ಶಾಂತಪುರ ಪೊಲೀಸ್ ಠಾಣಾ ಸರಹದ್ದಿಗೆ ಗಡಿಪಾರಿಗೆ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಆದೇಶ ಮಾಡುವ ಕುರಿತು ಪುತ್ತೂರು ಸಹಾಯಕ ಆಯುಕ್ತರ ಕಚೇರಿ ನ್ಯಾಯಾಲಯದಲ್ಲಿ ಜ.24 ರಂದು ಬೆಳಿಗ್ಗೆ 11 ಗಂಟೆಗೆ ವಿಚಾರಣೆ ನಡೆಯಲಿದೆ. ಕರ್ನಾಟಕ ಪೊಲೀಸ್ ಅಧಿನಿಯಮ-1963 ರ ಕಲಂ :55 ಪ್ರಕಾರ ಗಡಿಪಾರಿಗೆ ಆದೇಶಿಸಲಾಗಿದೆ. ವಿಚಾರಣೆಗೆ ಸಂಬಂಧಿಸಿ ಅವಿನಾಶ್ ಸ್ವತಃ ಅಥವಾ ವಕೀಲರ

ಹಿಂದೂ ಮುಖಂಡ ಅವಿನಾಶ್‍ ಗೆ ಗಡಿಪಾರು ಆದೇಶ | ವಿಚಾರಣೆಗೆ ಹಾಜರಾಗುವಂತೆ ನೋಟಿಸ್ Read More »

error: Content is protected !!
Scroll to Top