ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಪ್ರತ್ಯಕ್ಷವಾದ ಕಾಡಾನೆ | ಸ್ಥಳೀಯರಲ್ಲಿ ಆತಂಕ

ಪುತ್ತೂರು: ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಕಾಡಾನೆ ಪತ್ಯಕ್ಷಗೊಂಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇಂದು ಬೆಳಿಗ್ಗೆ ಕೋರಿಕ್ಕಾರು ಗಣೇಶ್ ಭಂಡಾರಿ ಎಂಬವರ ಜಮೀನಿನಲ್ಲಿ ಕಾಡಾನೆ ಬಂದಿರುವುದನ್ನು ನೋಡಿರುವುದಾಗಿ ಕೊಳ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್‍. ತಿಳಿಸಿದ್ದಾರೆ. ಈ ಭಾಗದ ಜನರು ಈ ಕುರಿತು ಜಾಗೃತರಾಗಿರುವಂತೆ ಅವರು ತಿಳಿಸಿದ್ದಾರೆ.

ದುಗ್ಗಲ, ಕೋರಿಕ್ಕಾರು ಪ್ರವೇಶದಲ್ಲಿ ಮತ್ತೆ ಪ್ರತ್ಯಕ್ಷವಾದ ಕಾಡಾನೆ | ಸ್ಥಳೀಯರಲ್ಲಿ ಆತಂಕ Read More »

ಜ.25 : 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2024

ಪುತ್ತೂರು: ಭಾರತ ಚುನಾವಣಾ ಆಯೋಗ ಪುತ್ತೂರು ತಾಲೂಕು ವತಿಯಿಂದ 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2024 ಜ.25 ರಂದು ಮಧ್ಯಾಹ್ನ 2.30 ಕ್ಕೆ ಪುರಭವನದಲ್ಲಿ ನಡೆಯಲಿದೆ. ಮತದಾರರ ನೋಂದಣಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿವೇಕಾನಂದ ಪದವಿ ಕಾಲೇಜು ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್‍., ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್‍ ಎಸ್‍.ಆರ್‍., ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್

ಜ.25 : 14ನೇ ರಾಷ್ಟ್ರೀಯ ಮತದಾರರ ದಿನಾಚರಣೆ-2024 Read More »

ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಕುರಿತು ಪೂರ್ವಭಾವಿ ಸಭೆ

ಪುತ್ತೂರು: ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್  ನ ದಶಮಾನೋತ್ಸವದ ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ಸೋಮವಾರ ಸ್ವಸಹಾಯ ಟ್ರಸ್ಟ್ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ದಶಮಾನೋತ್ಸವದ ಅಂಗವಾಗಿ ಪ್ರತೀ ತಿಂಗಳು ಒಂದು ಕಾರ್ಯಕ್ರಮ ನಡೆಸುವುದರ ಜತೆಗೆ ಪ್ರತೀ ವಲಯದಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ತೀರ್ಮಾನಿಸಲಾಯಿತು. ವೇದಿಕೆಯಲ್ಲಿ ಒಕ್ಕಲಿಗ ಟ್ರಸ್ಟ್ ನ ಡಿ.ವಿ.ಮನೋಹರ, ಎ.ವಿ.ನಾರಾಯಣ, ದಿವ್ಯಪ್ರಸಾದ್ ಎ.ಎಮ್., ವಸಂತ ವೀರಮಂಗಲ, ಜಿನ್ನಪ್ಪ ಗೌಡ ಮಳವೇಲು, ಪದ್ಮಯ್ಯ ಗೌಡ ವಾರಣಾಸಿ, ವೆಂಕಪ್ಪ ಗೌಡ, ಶ್ರೀಧರ ಗೌಡ ಕಣಜಾಲು ಉಪಸ್ಥಿತರಿದ್ದರು. ಸಭೆಯಲ್ಲಿ ಒಳಮೊಗ್ರು

ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಕುರಿತು ಪೂರ್ವಭಾವಿ ಸಭೆ Read More »

ಹಿರಿಯ ಅಯೋಧ್ಯಾ ಕರಸೇವಕ ನಟ್ಟೋಜ ಶಿವಾನಂದ ರಾವ್ ಅವರಿಗೆ ಪುತ್ತಿಲ ಪರಿವಾರದಿಂದ ಸನ್ಮಾನ

ಪುತ್ತೂರು: ಪುತ್ತೂರಿನ ಅತ್ಯಂತ ಹಿರಿಯ ಅಯೋಧ್ಯಾ ಕರಸೇವಕರಾದ ನಟ್ಟೋಜ ಶಿವಾನಂದ ರಾವ್ ಅವರನ್ನು ಪುತ್ತಿಲ ಪರಿವಾರದಿಂದ ಸನ್ಮಾನಿಸಲಾಯಿತು. ನಟ್ಟೋಝ ಶಿವಾನಂದ ರಾವ್ ಅವರು ಪುತ್ತೂರಿನ ಹಳ್ಳಿ ಹಳ್ಳಿ ತಿರುಗಿ ರಾಮ ಜನ್ಮ ಭೂಮಿಯ ಜಾಗೃತಿ ಮೂಡಿಸಿರುವುದರ ಜತೆಗೆ ಶ್ರೀರಾಮ ಶಿಲಾಪೂಜನ ಸಮಿತಿ ಪುತ್ತೂರು ಪ್ರಖಂಡದ ಮಾಜಿ ಅಧ್ಯಕ್ಷರು, ಪುತ್ತೂರು ನಗರ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರೂ ಆಗಿದ್ದರು. ಅಯೋಧ್ಯೆ ಈ ಸಂದರ್ಭ ಅವರ ಪುತ್ರ, ಪುತ್ತೂರು ಅಂಬಿಕಾ ವಿದ್ಯಾಲಯದ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ,  ಹಿಂದೂ ಮುಖಂಡ ಅರುಣ್

ಹಿರಿಯ ಅಯೋಧ್ಯಾ ಕರಸೇವಕ ನಟ್ಟೋಜ ಶಿವಾನಂದ ರಾವ್ ಅವರಿಗೆ ಪುತ್ತಿಲ ಪರಿವಾರದಿಂದ ಸನ್ಮಾನ Read More »

ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ | ಕರಸೇವಕರಿಗೆ ಗೌರವಾರ್ಪಣೆ

ಕೆದಿಲ: ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಟೆ ಅಂಗವಾಗಿ ಕೆದಿಲ ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ರಾಮ ಭಕ್ತರಿಂದ ಭಜನೆ, ಬಳಿಕ ಶ್ರೀ ರಾಮ ಕಲ್ಪೋಕ್ತ ಪೂಜೆ, ಸಾಮೂಹಿಕ ರಾಮತಾರಕ ಮಂತ್ರ ನಡೆಯಿತು. ಕಾರ್ಯಕ್ರಮದಲ್ಲಿ ಕರಸೇವಕರಿಗೆ ಗೌರವಾರ್ಪಣೆ ನಡೆಯಿತು. ಮೈರ ಕೃಷ್ಣ ಭಟ್ ಕರಸೇವೆಗೆ  ತೆರಳಿದವರನ್ನು ಪ್ರಶಂಸಿಸಿದರು. ಕರಸೇವೆಯ ಸಮಯದಲ್ಲಿ ಭಾಗವಹಿಸಿದವರು ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡರು. ಅಯೋಧ್ಯೆಯಲ್ಲಿ ನಡೆದ ಕಾರ್ಯಕ್ರಮವನ್ನು ಪರದೆಯ ಮೂಲಕ ಸುಮಾರು 500ಕ್ಕೂ ಮಿಕ್ಕಿ ರಾಮಭಕ್ತರು ವೀಕ್ಷಿಸಿದರು.

ಸಾಕೇತನಗರ ಶ್ರೀ ರಾಮ ಭಜನಾ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ | ಕರಸೇವಕರಿಗೆ ಗೌರವಾರ್ಪಣೆ Read More »

ಎಣ್ಮೂರು ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನದಿಂದ ಎಣ್ಮೂರು ಶ್ರೀರಾಮ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ | ಕರಸೇವಕರಿಗೆ ಗೌರವ ಸನ್ಮಾನ

ಕಡಬ: ಎಣ್ಮೂರು ಕೋಟಿ-ಚೆನ್ನಯ ನಗರದ ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನ ವತಿಯಿಂದ ಅಯೋಧ್ಯ ಪ್ರಭು ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆಯ ಪ್ರಯುಕ್ತ ಎಮ್ಮೂರಿನ ಶ್ರೀರಾಮ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು. ಬೆಳಗ್ಗೆ ಗಣಪತಿ ಹವನ, ಶ್ರೀರಾಮನಾಮ ತಾರಕ ಹೋಮ, ವಿವಿಧ ಭಜನಾ ತಂಡಗಳಿಂದ ಭಜನೆ, ಶ್ರೀರಾಮ ದೇವರಿಗೆ ಕಲಶಾಭಿಷೇಕ ನಡೆದು, ಮಧ್ಯಾಹ್ನ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಹಿಂದು ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಗಣರಾಜ ಕೆದಿಲ ಹಾಗೂ ಯತೀಶ್ ರೈ ದುಗಲಡ್ಕ, ಪ್ರಫುಲ್ಲಚಂದ್ರ

ಎಣ್ಮೂರು ಶ್ರೀ ಸೀತಾರಾಮಚಂದ್ರ ಸೇವಾ ಪ್ರತಿಷ್ಠಾನದಿಂದ ಎಣ್ಮೂರು ಶ್ರೀರಾಮ ಮಂದಿರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ | ಕರಸೇವಕರಿಗೆ ಗೌರವ ಸನ್ಮಾನ Read More »

ಹಿರೇಬಂಡಾಡಿ ಮಂಜುಶ್ರೀ ಭಜನಾ ಮಂದಿರದಲ್ಲಿ ರಾಮ ತಾರಕ ಮಂತ್ರ ಜಪ, ಭಜನೆ | ಕರಸೇವಕರಿಗೆ ಗೌರವಾರ್ಪಣೆ

ಉಪ್ಪಿನಂಗಡಿ: ಹಿರೇಬಂಡಾಡಿ ಮಂಜುಶ್ರೀ ಭಜನಾ ಮಂದಿರದಲ್ಲಿ ಅಯೋಧ್ಯ ಶ್ರೀ ರಾಮ ಪ್ರಾಣ ಪ್ರತಿಷ್ಠೆ ಪ್ರಯುಕ್ತ ರಾಮ ತಾರಕ ಮಂತ್ರ ಜಪ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 10 ರಿಂದ ಎಲ್‍.ಇ.ಡಿ. ಪರದೆಯಲ್ಲಿ ಅಯೋಧ್ಯೆ ಶ್ರೀ ರಾಮಚಂದ್ರನ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರ ನಡೆಯಿತು. ಇದೇ ಸಂದರ್ಭ ಕರಸೇವಕರಿಗೆ ಗೌರವಾರ್ಪಣೆ ನಡೆಯಿತು.

ಹಿರೇಬಂಡಾಡಿ ಮಂಜುಶ್ರೀ ಭಜನಾ ಮಂದಿರದಲ್ಲಿ ರಾಮ ತಾರಕ ಮಂತ್ರ ಜಪ, ಭಜನೆ | ಕರಸೇವಕರಿಗೆ ಗೌರವಾರ್ಪಣೆ Read More »

ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ | ರಾಮಕ್ಷತ್ರೀಯ ಸೇವಾ ಸಂಘದಿಂದ ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದಲ್ಲಿ ವಿಶೇಷ ಮಹಾಪೂಜೆ

ಪುತ್ತೂರು: ಅಯೋಧ್ಯೆ ಶ್ರೀ ರಾಮ ಮಂದಿರದ ಲೋಕಾರ್ಪಣೆ ಪ್ರಯುಕ್ತ ಕೆಮ್ಮಿಂಜೆ ಶ್ರೀರಾಮ ಭಜನಾ ಮಂಡಳಿ ಹಾಗೂ ರಾಮಕ್ಷತ್ರೀಯ ಸೇವಾ ಸಂಘದ ಜಂಟಿ ಆಶ್ರಯದಲ್ಲಿ ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದಲ್ಲಿ ವಿಶೇಷ ಮಹಾಪೂಜೆ ನಡೆಯಿತು. ಈ ಸಂದರ್ಭದಲ್ಲಿ ಆಗಮಿಸಿದ ರಾಮಭಕ್ತರು ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮನ ಪ್ರಾಣಪ್ರತಿಷ್ಠೆಯನ್ನು ಎಲ್‍.ಇ.ಡಿ. ಪರದೆ ಮೂಲಕ ವೀಕ್ಷಿಸಿದರು. ಕಾರ್ಯಕ್ರಮದ ಅಂಗವಾಗಿ ಶ್ರೀರಾಮ ಮತ್ತು ಆಂಜನೇಯ ವೇಷಧಾರಿಗಳನ್ನು ಬೊಳುವಾರಿನಿಂದ ಮೆರವಣಿಗೆ ಮೂಲಕ ಕರೆ ತರಲಾಯಿತು. ಕರಸೇವಕ ಚಂದ್ರಶೇಖರ ರಾವ್ ಬಪ್ಪಳಿಗೆ

ಅಯೋಧ್ಯೆಯಲ್ಲಿ ಶ್ರೀ ರಾಮ ಪ್ರಾಣಪ್ರತಿಷ್ಠೆ | ರಾಮಕ್ಷತ್ರೀಯ ಸೇವಾ ಸಂಘದಿಂದ ಕೆಮ್ಮಿಂಜೆ ಶ್ರೀ ರಾಮ ಭಜನಾ ಮಂದಿರದಲ್ಲಿ ವಿಶೇಷ ಮಹಾಪೂಜೆ Read More »

ಬೊಳ್ಳಾಣ ಶ್ರೀ ಆಂಜನೇಯ ಭಜನಾ ಮಂದಿರ ಲೋಕಾರ್ಪಣೆ | ಕರಸೇವಕರಿಗೆ ಸನ್ಮಾನ

ಪುತ್ತೂರು: ಆರ್ಯಾಪು ಗ್ರಾಮದ ಬೊಳ್ಳಾಣ ಶ್ರೀ ಆಂಜನೇಯ ಭಜನಾ ಮಂದಿರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಲೋಕಾರ್ಪಣೆಗೊಂಡಿತು. ಲೋಕಾರ್ಪಣೆ ಅಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಯೋಧ್ಯ ಶ್ರೀ ರಾಮನ ಕರಸೇವೆಯಲ್ಲಿ ಭಾಗಿಯಾದ ವಿಶ್ವನಾಥ್ ಕುಲಾಲ್ ಅವರನ್ನು ಸನ್ಮಾನಿಸಲಾಯಿತು. ಮಾಜಿ ಶಾಸಕ ಸಂಜೀವ ಮಠಂದೂರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಅಧ್ಯಕ್ಷ ಕಿಶೋರ್ ಪೂಜಾರಿ, ನಗರಸಭೆ ಸದಸ್ಯೆ ದೀಕ್ಷಾ ಪೈ, ಮತ್ತಿತರರು ಉಪಸ್ಥಿತರಿದ್ದರು.

ಬೊಳ್ಳಾಣ ಶ್ರೀ ಆಂಜನೇಯ ಭಜನಾ ಮಂದಿರ ಲೋಕಾರ್ಪಣೆ | ಕರಸೇವಕರಿಗೆ ಸನ್ಮಾನ Read More »

ಕಾವುನಲ್ಲಿ ಪುತ್ತಿಲ ಪರಿವಾರದಿಂದ ಶ್ರೀ ರಾಮನಿಗೆ ಹಣತೆ ದೀಪ

ಪುತ್ತೂರು: ಕಾವು ಪುತ್ತಿಲ ಪರಿವಾರ ಘಟಕದ ವತಿಯಿಂದ ಅಯೋಧ್ಯೆಯಲ್ಲಿ ನೆಲೆನಿಂತ ಶ್ರೀ ರಾಮನ ಸಂಭ್ರಮವನ್ನು ಕಾವು ಪಂಚವಟಿ ನಗರದ ಶ್ರೀ ಪಂಚಲಿಂಗೇಶ್ವರ ದೇವರ ಕಟ್ಟೆಯಲ್ಲಿ ಸಂಜೆ ಹಣತೆ ದೀಪಗಳನ್ನು ಹಚ್ಚುವ ಮೂಲಕ ಆಚರಿಸಲಾಯಿತು. ಪುತ್ತಿಲ ಪರಿವಾರದ ಪದಾಧಿಕಾರಿಗಳು, ಸದಸ್ಯರು ಮತ್ತು ಸಾರ್ವಜನಿಕರೂ ಸೇರಿದಂತೆ ಅನೇಕ ಹಿರಿಯ ರಾಮಭಕ್ತರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸಂಭ್ರಮಾಚರಣೆಯ ಅಂಗವಾಗಿ ಕಾವು ಮೂರೂ ಪೇಟೆಯಲ್ಲಿ ಪಾಯಸ ಮತ್ತು ಲಾಡು ವಿತರಿಸಲಾಯಿತು.

ಕಾವುನಲ್ಲಿ ಪುತ್ತಿಲ ಪರಿವಾರದಿಂದ ಶ್ರೀ ರಾಮನಿಗೆ ಹಣತೆ ದೀಪ Read More »

error: Content is protected !!
Scroll to Top