ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ತಾಂತ್ರಿಕ ಸಮಿತಿ ಸಭೆ

ಕಡಬ: ಒಕ್ಕಲಿಗ ಗೌಡ ಸೇವಾ ಸಂಘದ ಮಹತ್ವಾಕಾಂಕ್ಷಿ ಯೋಜನೆಯಾದ ಸಮುದಾಯ ಭವನ ನಿರ್ಮಾಣ ಯೋಜನೆಯ ತಾಂತ್ರಿಕ ಸಮಿತಿ ಸಭೆ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಸಂಘದ ನಿರ್ದೇಶಕ ಬಾಲಕೃಷ್ಣ ಕೋಲ್ಪೆ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭವನ ನಿರ್ಮಾಣ ಕಾರ್ಯದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಸಂಘದ ಕಾರ್ಯದರ್ಶಿ ಪ್ರಶಾಂತ್ ಪಂಜೋಡಿ, ಸಮುದಾಯದ ಸಿವಿಲ್ ಇಂಜಿನಿಯರ್ಸ್ ಮತ್ತು ಕಾಂಟ್ರಾಕ್ಟರ್ ಗಳು ಉಪಸ್ಥಿತರಿದ್ದರು.

ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ತಾಂತ್ರಿಕ ಸಮಿತಿ ಸಭೆ Read More »

ಪುತ್ತೂರು ತಹಸೀಲ್ದಾರ್ ಜಿ.ಶಿವಶಂಕರ್ ವರ್ಗಾವಣೆ!

ಪುತ್ತೂರು: ಇಲ್ಲಿನ ತಹಸೀಲ್ದಾರ್ ಜಿ. ಶಿವಶಂಕರ್ ಅವರು ವರ್ಗಾವಣೆಗೊಂಡಿದ್ದು, ತೆರವಾದ ಪುತ್ತೂರು ತಹಸೀಲ್ದಾರ್ ಹುದ್ದೆಗೆ ಪುರಂದರ ನೇಮಕಗೊಂಡಿದ್ದಾರೆ. ಪುರಂದರ ಅವರು ಬಾಗಲಕೋಟೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಪುತ್ತೂರಿಗೆ ವರ್ಗಾವಣೆಗೊಂಡಿದ್ದಾರೆ. ಪುತ್ತೂರು ತಹಸೀಲ್ದಾರ್ ಗ್ರೇಡ್ 1 ಹುದ್ದೆಯಾಗಿದ್ದು, ವರ್ಗಾವಣೆಗೊಂಡಿರುವ ಜಿ. ಶಿವಶಂಕರ್ ಅವರು ಗ್ರೇಡ್ 2 ತಹಸೀಲ್ದಾರ್ ಆಗಿದ್ದರು. ಜಿ. ಶಿವಶಂಕರ್ ಅವರು ಮುಂದಿನ ಸ್ಥಳ ನಿಯುಕ್ತಿಗಾಗಿ ಸರಕಾರದಲ್ಲಿ ವರದಿ ಮಾಡಿಕೊಳ್ಳುವಂತೆ ಸರಕಾರದ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ ಹೆಚ್.ಜಿ. ಆದೇಶ ಹೊರಡಿಸಿದ್ದಾರೆ.

ಪುತ್ತೂರು ತಹಸೀಲ್ದಾರ್ ಜಿ.ಶಿವಶಂಕರ್ ವರ್ಗಾವಣೆ! Read More »

ನಾಳೆ : ಎವಿಜಿ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ “ಎವಿಜಿ ಚಿಣ್ಣರೋತ್ಸವ’

ಪುತ್ತೂರು: ಕೃಷ್ಣನಗರದ ಅಲುಂಬುಡದಲ್ಲಿ ಕಾರ್ಯಾಚರಿಸುತ್ತಿರುವ ಎ.ವಿ.ಜಿ. ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದ ಸಮಾರಂಭ ‘ಎವಿಜಿ ಚಿಣ್ಣರೋತ್ಸವ’ ಜ.26 ರಂದು ಶಾಲಾ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ಎವಿಜಿ ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿ.ಎಲ್.ಗ್ರೂಫ್ ಆಫ್ ಕಂಪೆನಿಯ ಬಲರಾಮ ಆಚಾರ್ಯ, ಬನ್ನೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶೀನಪ್ಪ ಕುಲಾಲ್, ನಗರಸಭೆ ಸದಸ್ಯೆ ಗೌರಿ ಬನ್ನೂರು ಪಾಲ್ಗೊಳ್ಳಲಿದ್ದಾರೆ. ಶಾಲಾ ಸಂಚಾಲಕ ಎ.ವಿ.ನಾರಾಯಣ

ನಾಳೆ : ಎವಿಜಿ ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವ “ಎವಿಜಿ ಚಿಣ್ಣರೋತ್ಸವ’ Read More »

ಪುಣಚಾ ಗ್ರಾಮದಲ್ಲಿ 75 ಲಕ್ಷ ರೂ. ವಿವಿಧ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ

ಪುತ್ತೂರು:ಪುಣಚಾ ಗ್ರಾಮದಲ್ಲಿನ ಒಳ ರಸ್ತೆಗಳಲ್ಲಿ ಕಾಂಕ್ರೀಟ್ ಕಾಮಗಾರಿ ನಡೆದಿಲ್ಲ. ಕೆಲವೊಂದು ರಸ್ತೆಗಳಿಗೆ ಇದುವರೆಗೂ ಯಾವುದೇ ಅನುದಾನ ನೀಡಿಲ್ಲ. ಗ್ರಾಮದ ಅಭಿವೃದ್ದಿಗೆ ಜನಪ್ರತಿನಿಧಿಗಳ ಅನುದಾನ ಶೂನ್ಯವೆಂದೇ ಹೇಳಿದರೂ ತಪ್ಪಾಗಲಾರದು ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು. ಅವರು ಪುಣಚಾ ಗ್ರಾಮದ ವಿವಿಧ ರಸ್ತೆಗಳಿಗೆ ಒಟ್ಟು 75 ಲಕ್ಷ ಅನುದಾನವನ್ನು ಬಿಡುಗಡೆಮಾಡಿದ್ದು, ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಜನರ ಬೇಡಿಕೆ ಹಿನ್ನಲೆಯಲ್ಲಿ ಅನುದಾನವನ್ನು ನೀಡುವ ಕೆಲಸವನ್ನು ಮಾಡಿದ್ದೇನೆ. ಜನಪ್ರತಿನಿಧಿಗಳು ಪುಣಚಾ ಗ್ರಾಮವನ್ನು ಸಂಪೂರ್ಣ ಕಡೆಗಣಿಸಿದ್ದಾರೆ ಎಂದು ಹೇಳಿದರು. ಕೆಪಿಸಿಸಿ

ಪುಣಚಾ ಗ್ರಾಮದಲ್ಲಿ 75 ಲಕ್ಷ ರೂ. ವಿವಿಧ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ Read More »

ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ | ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ

ಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನ ವಾರ್ಷಿಕ ನೇಮೋತ್ಸವದ ಅಂಗವಾಗಿ ವಿವಿಧ ವೈದಿಕ ಕಾರ್ಯಕ್ರಮ ಬುಧವಾರ ನಡೆಯಿತು. ನೇಮೋತ್ಸವದ ಅಂಗವಾಗಿ ಬೆಳಿಗ್ಗೆ ಕಾರ್ಜಾಲುಗುತ್ತಿನಲ್ಲಿ ಸ್ಥಳಶುದ್ಧಿ ಹೋಮ, ಕಲಶ ಪ್ರತಿಷ್ಠೆ, ಶ್ರೀ ದೈವಸ್ಥಾನದಲ್ಲಿ ಗಣಹೋಮ, ಶ್ರೀ ದೈವಗಳ ತಂಬಿಲ, ನಾಗತಂಬಿಲ ನಡೆಯಿತು. ಬಳಿಕ ಮಧ್ಯಾಹ್ನ ಸುಮಾರು 10 ಸಾವಿರ ಮಂದಿಗೆ ಅನ್ನಸಂತರ್ಪಣೆ ಜರಗಿತು. ರಾತ್ರಿ 7 ಗಂಟೆಗೆ ಶ್ರೀ ದೈವಗಳ ಮೂಲನೆಲೆ ಕಾರ್ಜಾಲು ಗುತ್ತಿನಿಂದ ಭಂಡಾರು ಬಂದು, 9 ಗಂಟೆಗೆ ಗೊಂದಳ ಪೂಜೆ, ರಾತ್ರಿ 12 ಕ್ಕೆ

ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ | ಸಹಸ್ರಾರು ಮಂದಿಗೆ ಅನ್ನಸಂತರ್ಪಣೆ Read More »

ಭಾರತದಲ್ಲಿ ಜಾತಿಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್‍. ಶೆಟ್ಟಿ

ಭಾಗ -2 2019 ರ  ಲೋಕಸಭೆ  ಚುನಾವಣೆಯಲ್ಲಿ ಬಿಜೆಪಿಯ 113 ಮಂದಿ ಓಬಿಸಿ ಸಂಸದರು, 43 ಮಂದಿ ಪರಿಶಿಷ್ಟ ಪಂಗಡದ ಸಂಸದರು, 53 ಮಂದಿ ಪರಿಶಿಷ್ಟ ಜಾತಿಯ ಸಂಸದರು ಅಯ್ಕೆಯಾದರು. ಅಂದರೆ ಬಿಜೆಪಿಯ  ಚುನಾಯಿತ ಸಂಸದರಲ್ಲಿ 37% ಓಬಿಸಿ, 14%  ಪರಿಶಿಷ್ಟ ಪಂಗಡ ಮತ್ತು 17% ಪರಿಶಿಷ್ಟ ಜಾತಿ ಅಂದರೆ 303 ಲೋಕಸಭಾ ಸಂಸದರ ಪೈಕಿ69% ರಷ್ಟು ಮಂದಿ ಮೇಲ್ಜಾತಿ ಅಲ್ಲದವರಾಗಿರುವುದು ಕಂಡು ಬರುತ್ತದೆ.  ನಳಿನ್  ಮೆಹ್ತಾರವರ ಪ್ರಕಾರ, ಬಿಜೆಪಿಯು ಅತೀಹೆಚ್ಚು ಜಾತಿ ವರ್ಗವನ್ನು ಪ್ರತೀ ಸಂಘಟನಾ

ಭಾರತದಲ್ಲಿ ಜಾತಿಗಣತಿ ಯಾಕೆ ಅಪಾಯಕಾರಿ ? : ಅಶ್ವಿನ್ ಎಲ್‍. ಶೆಟ್ಟಿ Read More »

ನಿವೃತ್ತ ಪ್ರಾಂಶುಪಾಲ ವಿಶ್ವನಾಥ ಶೆಟ್ಟಿ ನಿಧನ

ಪುತ್ತೂರು: ನಿವೃತ್ತ ಪ್ರಾಂಶುಪಾಲ ಕಲ್ಲಾರೆ ನಿವಾಸಿ ವಿಶ್ವನಾಥ ಶೆಟ್ಟಿ (78) ಇಂದು ನಿಧನರಾದರು. ವಿಶ್ವನಾಥ ಶೆಟ್ಟಿಯವರು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಉಪನ್ಯಾಸಕರಾಗಿ ಬಳಿಕ ಬಂಟ್ವಾಳ ತಾಲೂಕಿನ ವಾಮದಪದವು ಜೂನಿಯ‌ರ್ ಕಾಲೇಜ್‌ನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ವಿಶ್ವನಾಥ ಶೆಟ್ಟಿಯವರ ಪುತ್ರ ಕಳೆದ ಒಂದು ವರ್ಷಗಳ ಹಿಂದೆ ಹೃದಯಾಘಾತದಿಂದ  ನಿಧನರಾಗಿದ್ದರು.

ನಿವೃತ್ತ ಪ್ರಾಂಶುಪಾಲ ವಿಶ್ವನಾಥ ಶೆಟ್ಟಿ ನಿಧನ Read More »

ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್ | ಹಿಂಪಡೆಯಬೇಕೆಂದು ಸಾಜ ರಾಧಾಕೃಷ್ಣ ಆಳ್ವ ಆಗ್ರಹ

ಪುತ್ತೂರು: ಹಿಂದೂ ಸಂಘಟನೆಯ ಅಮಾಯಕ ಕಾರ್ಯಕರ್ತರಿಗೆ ಉಪವಿಭಾಗೀಯ ದಂಢಾಧಿಕಾರಿಗಳು ಗಡಿಪಾರಿಗೆ ನೋಟಿಸ್ ನೀಡಿರುವುದನ್ನು ಪುನರ್ ಪರಿಶೀಲಿಸಿ ಹಿಂಪಡೆಯ ಬೇಕೆಂದು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ ಅಗ್ರಹಿಸಿದ್ದಾರೆ… ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಯೋoಜಕ ದಿನೇಶ್ ಪಂಜಿಗ ಹಾಗೂ ಹಿಂಜಾವೇ ಮುಖಂಡ ಅವಿನಾಶ್ ರವರ ಮೇಲೆ ವಿನಾಕಾರಣ ಯಾವುದೇ ಗಂಭೀರವಾದ ಅಪರಾಧ ಇಲ್ಲದಿದ್ದರೂ ಸರಕಾರ ಹಿಂದೂ ಕಾರ್ಯಕರ್ತನನ್ನು ಧಮನಿಸುವ ಷಡ್ಯಂತ್ರಕ್ಕೆ ಕೈ ಹಾಕಿರುವುದು ಹಿಂದೂ ವಿರೋಧಿ ನೀತಿಯಾಗಿದೆ ಎಂದು ಹೇಳಿದರು. ಈ

ಹಿಂದೂ ಕಾರ್ಯಕರ್ತರಿಗೆ ಗಡಿಪಾರು ನೋಟೀಸ್ | ಹಿಂಪಡೆಯಬೇಕೆಂದು ಸಾಜ ರಾಧಾಕೃಷ್ಣ ಆಳ್ವ ಆಗ್ರಹ Read More »

ಜ.27 : ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ | ಮಾಹಿತಿ ನೀಡಿದ ಕಾರ್ಯದರ್ಶಿ ಪಿ.ರಾಜೀವ್

ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಜ.27 ರಂದು ನಡೆಸಲು ನಿರ್ಧರಿಸಲಾಗಿದೆ. ಬಿಜಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಈ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿ, ಲೋಕಸಭೆ ಚುನಾವಣೆ ಇನ್ನೇನು ಬರಲಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 5.30 ರ ತನಕ ಸಭೆ ಏರ್ಪಡಿಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೈಗೊಳ್ಳಬೇಕಾದ ಚುನಾವಣಾ ಸಿದ್ಧತೆಗಳು, ಪ್ರಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಸಭೆಯಲ್ಲಿ ಕೇಂದ್ರ ಸಚಿವ

ಜ.27 : ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ | ಮಾಹಿತಿ ನೀಡಿದ ಕಾರ್ಯದರ್ಶಿ ಪಿ.ರಾಜೀವ್ Read More »

ಪ್ರತಿಷ್ಠಿತ ಸವಣೂರು ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ತಾರನಾಥ ಕಾಯರ್ಗ, ಉಪಾಧ್ಯಕ್ಷರಾಗಿ ಚೇತನ್ ಕುಮಾರ್ ಕೋಡಿಬೈಲ್

ಪುತ್ತೂರು: ಪ್ರತಿಷ್ಠಿತ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ತಾರನಾಥ ಕಾಯರ್ಗ, ಉಪಾಧ್ಯಕ್ಷರಾಗಿ ಚೇತನ್ ಕುಮಾರ್ ಕೋಡಿಬೈಲ್ ಆಯ್ಕೆಯಾಗಿದ್ದಾರೆ. ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಚುನಾವಣೆ ಜ.13 ರಂದು ನಡೆದಿದ್ದು, ಎಲ್ಲಾ ಸ್ಥಾನ ಸಹಕಾರಿ ಭಾರತಿ ಪಾಲಾಗಿತ್ತು. ಒಟ್ಟು 12 ಸ್ಥಾನಗಳಿಗೆ 23 ಸ್ಪರ್ಧಿಗಳು ಕಣದಲ್ಲಿದ್ದರು. ಈ ಪೈಕಿ ಒಂದು ಸ್ಥಾನಕ್ಕೆ ಸಾಲಗಾರರ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ  ಪ್ರಕಾಶ್ ರೈ ಸಾರಕರೆ ಅವಿರೋಧ ಆಯ್ಕೆಯಾಗಿದ್ದರು. ಉಳಿದಂತೆ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಸಾಮಾನ್ಯ ಕ್ಷೇತ್ರದಿಂದ

ಪ್ರತಿಷ್ಠಿತ ಸವಣೂರು ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ | ಅಧ್ಯಕ್ಷರಾಗಿ ತಾರನಾಥ ಕಾಯರ್ಗ, ಉಪಾಧ್ಯಕ್ಷರಾಗಿ ಚೇತನ್ ಕುಮಾರ್ ಕೋಡಿಬೈಲ್ Read More »

error: Content is protected !!
Scroll to Top