ಆರ್.ಎಸ್.ಎಸ್. ಕಾರ್ಯಕರ್ತನ ಹತ್ಯೆ ಪ್ರಕರಣ: 15 ಪಿ.ಎಫ್.ಐ. ಕಾರ್ಯಕರ್ತರಿಗೆ ಗಲ್ಲು!! | ಕೇರಳದ ಇತಿಹಾಸದಲ್ಲಿ ದೊಡ್ಡ ಸಂಖ್ಯೆಯ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿದ್ದು ಇದೇ ಮೊದಲು!!

ಕೇರಳ ನ್ಯಾಯಾಲಯ 15 ಮಂದಿ ಪಿ.ಎಫ್.ಐ. ಕಾರ್ಯಕರ್ತರಿಗೆ ಗಲ್ಲು ಶಿಕ್ಷೆ ವಿಧಿಸಿದೆ. 15 ಮಂದಿ ಅಪರಾಧಿಗಳಿಗೆ ಒಟ್ಟಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ಕೇರಳದ ಇತಿಹಾಸದಲ್ಲೇ ಇದೇ ಮೊದಲು ಎಂದು ಹೇಳಲಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ (ಆರ್‌ ಎಸ್‌ ಎಸ್)‌ ಸಂಘದ ಕಾರ್ಯಕರ್ತ, ಬಿಜೆಪಿ ನಾಯಕ ರಂಜಿತ್‌ ಶ್ರೀನಿವಾಸನ್‌ ಹತ್ಯೆ ಪ್ರಕರಣದಲ್ಲಿ ಕೇರಳ ನ್ಯಾಯಾಲಯ ಈ ತೀರ್ಪು ನೀಡಿದೆ. ಕೇರಳದ ಮಾವೇಲಿಕರ ಅಡಿಷನಲ್ ಸೆಷನ್ಸ್ ನ್ಯಾಯಾಲಯ ನ್ಯಾಯಧೀಶೆ ವಿಜಿ ಶ್ರೀದೇವಿ ತೀರ್ಪು ಪ್ರಕಟಿಸಿದ್ದಾರೆ. 2021ರ ಡಿಸೆಂಬರ್ 19ರಂದು ರಂಜಿತ್ […]

ಆರ್.ಎಸ್.ಎಸ್. ಕಾರ್ಯಕರ್ತನ ಹತ್ಯೆ ಪ್ರಕರಣ: 15 ಪಿ.ಎಫ್.ಐ. ಕಾರ್ಯಕರ್ತರಿಗೆ ಗಲ್ಲು!! | ಕೇರಳದ ಇತಿಹಾಸದಲ್ಲಿ ದೊಡ್ಡ ಸಂಖ್ಯೆಯ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿದ್ದು ಇದೇ ಮೊದಲು!! Read More »

ರೈಲು  ಡಿಕ್ಕಿ : ಇಬ್ಬರು ಮೃತ್ಯು

ಕಾಸರಗೋಡು: ರೈಲು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟ ಘಟನೆ ಪಳ್ಳಂ ರೈಲ್ವೇ ಸೇತುವೆ ಬಳಿ ಇಂದು ಮುಂಜಾನೆ ನಡೆದಿದೆ. 20 ರಿಂದ 25 ವರ್ಷದೊಳಗಿನ ಇಬ್ಬರು ಯುವಕರು ಮೃತಪಟ್ಟಿದ್ದು, ಮೃತರ ಗುರುತು ಪತ್ತೆಯಾಗಿಲ್ಲ ಎನ್ನಲಾಗಿದೆ. ಮುಂಜಾನೆ ಸುಮಾರು 5.30 ರ ಹೊತ್ತಿಗೆ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ನೀಡಿದ ದೂರಿನದಂತೆ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ರೈಲು  ಡಿಕ್ಕಿ : ಇಬ್ಬರು ಮೃತ್ಯು Read More »

ಹವಾಲ್ದಾರ್ ತಿರುಮಲೇಶ್ವರ ಎ.ಎಸ್‍. ನಾಳೆ ಸೇವೆಯಿಂದ ನಿವೃತ್ತಿ

ಕಡಬ: ಭಾರತೀಯ ಸೇನೆಯ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಸೆಂಟರ್ ನಲ್ಲಿ ತರಬೇತಿ ಪಡೆದು 13 ವರ್ಷ ಎಂಜಿನಿಯರ್ ರೆಜಿಮೆಂಟ್ ನಲ್ಲಿ ಸುದೀರ್ಘ 24 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಕಡಬ ಅಮೈ ನಿವಾಸಿ ಹವಾಲ್ದಾರ್ ತಿರುಮಲೇಶ್ವರ ಎ.ಎಸ್. ಅವರು ಜ.31 ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ. ತಿರುಮಲೇಶ್ವರ ಅವರು 2000ನೇ ಇಸವಿಯಲ್ಲಿ ಬೆಂಗಳೂರಿನಲ್ಲಿ ಸೇನೆಗೆ ನೇಮಕಗೊಂಡು ಬಳಿಕ ರಾಜಸ್ಥಾನ, ಗುಜರಾತ್, ಲೇಹ್‍ (ಜಮ್ಮು ಕಾಶ್ಮೀರ), ಅಂಧ್ರಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಲ, ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಹವಾಲ್ದಾರ್ ತಿರುಮಲೇಶ್ವರ ಎ.ಎಸ್‍. ನಾಳೆ ಸೇವೆಯಿಂದ ನಿವೃತ್ತಿ Read More »

ನಾಳೆ: ‘ಅನ್ನಪೂರ್ಣೇಶ್ವರಿ ಅನ್ನಛತ್ರ’ ಲೋಕಾರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ‘ಅನ್ನಪೂರ್ಣೇಶ್ವರಿ ಅನ್ನಛತ್ರ’ದ ಲೋಕಾರ್ಪಣೆ ಕಾರ್ಯಕ್ರಮ ಜ.31 ಬುಧವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಲೋಕಾರ್ಪಣೆ ಅಂಗವಾಗಿ ಬುಧವಾರ ಬೆಳಿಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಅನ್ನಪೂರ್ಣೇಶ್ವರಿ ಯಜ್ಞ, ಮಹಾಗಣಪತಿ ಹೋಮ ನಡೆದು ಬಳಿಕ 9.32 ರ ಮೀನ ಲಗ್ನ ಸುಮುಹೂರ್ತದಲ್ಲಿ ಅನ್ನಛತ್ರ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಬೇಕೆಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ

ನಾಳೆ: ‘ಅನ್ನಪೂರ್ಣೇಶ್ವರಿ ಅನ್ನಛತ್ರ’ ಲೋಕಾರ್ಪಣೆ Read More »

ಪ್ಲೈವುಡ್ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ !!

ಬಂಟ್ವಾಳ: ಆಕಸ್ಮಿಕ ಬೆಂಕಿ ತಗುಲಿ ಫೈವುಡ್ ಫ್ಯಾಕ್ಟರಿ ಭಸ್ಮವಾಗಿ 2 ಲಕ್ಷ ರೂ. ನಷ್ಟ ಉಂಟಾದ ಘಟನೆ ಸಜೀಪ ಸಮೀಪದ ಕೋಟೆಕಣಿಯಲ್ಲಿ ನಡೆದಿದೆ. ಶಬೀರ್ ಅವರಿಗೆ ಸೇರಿದ ಫ್ಯಾಕ್ಟರಿಯಲ್ಲಿ ರಾಶಿ ಹಾಕಿದ್ದ ಮರದ ಅವಶೇಷದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಸಿದ ತಕ್ಷಣ ಕಾರ್ಯಾಚರಣೆ ನಡೆಸಿದ ಪಾಂಡೇಶ್ವರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ರಾಜ, ಬಂಟ್ವಾಳ ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳಾದ ಚಂದ್ರಕಾಂತ, ಪುರುಷೋತ್ತಮ, ರಾಜೇಶ್ ಶೆಟ್ಟಿ, ಕಿರಣ್ ಕುಮಾ‌ರ್, ರುಕ್ಕಯ್ಯ ಅಮೀನ್, ಕೆ.ಸುರೇಂದ್ರ, ಭಾಗವಹಿಸಿದ ಬೆಂಕಿ ನಂದಿಸುವಲ್ಲಿ ಸಹಕರಿಸಿದರು.

ಪ್ಲೈವುಡ್ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಬೆಂಕಿ !! Read More »

ಸಂತ ಫಿಲೋಮಿನಾ ಕಾಲೇಜಿನ ದತ್ತು ಗ್ರಾಮದಲ್ಲಿ ಚಂದ್ರಾನ್ವೇಷಣೆ ಕಾರ್ಯಕ್ರಮ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಹವ್ಯಾಸಿ ಖಗೋಳ ವೀಕ್ಷಕರ ಸಂಘ ಹಾಗೂ   ಕೆದಂಬಾಡಿಯ ಗ್ರಾಮ ಪಂಚಾಯಿತಿ ಜಂಟಿ ಆಶ್ರಯದಲ್ಲಿ ‘ಚಂದ್ರಾನ್ವೇಷಣೆ’ ಖಗೋಳ ವೀಕ್ಷಣೆ ಕಾರ್ಯಕ್ರಮ  ತಿಂಗಳಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಕಾಲೇಜಿನ ದತ್ತು ಗ್ರಾಮವಾದ ಕೆದಂಬಾಡಿಯ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪೂರ್ಣಚಂದ್ರನ ರೂಪವನ್ನು ಅತ್ಯಾಧುನಿಕ ದೂರದರ್ಶಕದ ಮೂಲಕ ವೀಕ್ಷಿಸಲಾಯಿತು. ಕಾಲೇಜಿನ ವಿಶ್ರಾಂತ ಉಪ-ಪ್ರಾಂಶುಪಾಲ ಡಾ।ಎ. ಪಿ. ರಾಧಾಕೃಷ್ಣರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಖಗೋಳ ವಿದ್ಯಮಾನಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಸಂತ ಫಿಲೋಮಿನಾ ಕಾಲೇಜಿನ ದತ್ತು ಗ್ರಾಮದಲ್ಲಿ ಚಂದ್ರಾನ್ವೇಷಣೆ ಕಾರ್ಯಕ್ರಮ Read More »

ನವೀನ್ ಕಿಶೋರ್ ಹೃದಯಾಘಾತದಿಂದ ನಿಧನ

ಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕೆಯ ಸಿಬ್ಬಂದಿ ಕುದ್ದುಪದವು ನಿವಾಸಿ ನವೀನ್ ಕಿಶೋರ್ ಎಂಬವರು ಜ.30 ರ ನಸುಕಿನ ಜಾವ ಹೃದಯಾಘಾತದಿಂದ ನಿಧನರಾದರು. ಜ.29ರ ಸಂಜೆ ಮನೆಗೆ ಹೋದವರು ರಾತ್ರಿ ಹೃದಯಾಘಾತಕ್ಕೀಡಾಗಿದ್ದಾರೆ. ತಡ ರಾತ್ರಿ 2 ಗಂಟೆ ಸುಮಾರಿಗೆ ಅವರ ಸಹೋದರ ಎಚ್ಚರಗೊಂಡಾಗ ನವೀನ್ ಕಿಶೋ‌ರ್ ಅವರು  ಕುಸಿದು ಬಿದ್ದಿರುವುದು ಬೆಳಕಿಗೆ ಬಂದಿದೆ. ತಕ್ಷಣ ಮನೆ ಮಂದಿ ಮತ್ತು ಸ್ಥಳೀಯರು ಸೇರಿ ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ನವೀನ್ ಕಿಶೋ‌ರ್ ಆಗಲೇ ಮೃತಪಟ್ಟಿದ್ದರು.  ಮೃತರು ತಾಯಿ ಪದ್ಮನಿ, ಸಹೋದರ

ನವೀನ್ ಕಿಶೋರ್ ಹೃದಯಾಘಾತದಿಂದ ನಿಧನ Read More »

ಅಂಗನವಾಡಿ ಉಳಿಸುವ ಕೆಲಸ ಮಾಡಬೇಕು | ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಶಾಸಕ ಅಶೋಕ್ ಕುಮಾರ್ ರೈ

ಪುತ್ತೂರು: ತೆಂಕಿಲದಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕೇಂದ್ರದ ಉದ್ಘಾಟನಾ ಸಮಾರಂಭ ಇಂದು ನಡೆಯಿತು. ಶಾಸಕ ಅಶೋಕ್ ಕುಮಾರ್ ರೈ ಅಂಗನವಾಡಿ ಕಟ್ಟಡ ಉದ್ಘಾಟಿಸಿ, ಅಂಗನವಾಡಿಯಲ್ಲಿ ತಾಯಿಯ ಶಿಕ್ಷಣ ಮಕ್ಕಳಿಗೆ ದೊರೆಯುತ್ತಿದೆ. ಪೌಷ್ಠಿಕ ಆಹಾರದ ಜೊತೆಗೆ ಮಕ್ಕಳ ಬೆಳವಣಿಗೆಗೆ ಪೂರಕವಾದ ವ್ಯವಸ್ಥೆಗಳು ಅಂಗನವಾಡಿಗಳಲ್ಲಿ ಇದ್ದು ಪೋಷಕರು ಮಕ್ಕಳನ್ನು ಅಂಗನವಾಡಿಗೆ ದಾಖಲಿಸುವ ಮೂಲಕ ಕೇಂದ್ರಗಳನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದರು. ಈ ಭಾಗದಲ್ಲಿ ಅಂಗನವಾಡಿ ಕಟ್ಟಡದ ಕೊರತೆ ಇರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು. ಸುಮಾರು 13 ಲಕ್ಷ

ಅಂಗನವಾಡಿ ಉಳಿಸುವ ಕೆಲಸ ಮಾಡಬೇಕು | ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿ ಶಾಸಕ ಅಶೋಕ್ ಕುಮಾರ್ ರೈ Read More »

ಪುತ್ತೂರಿನ ಹೆಸರು ಭುವನೇಶ್ವರದಲ್ಲಿ ಕೇಳುವಾಗ ಆದ ಖುಷಿಯೇ ಅವಿಸ್ಮರಣೀಯ | ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್, ನ್ಯೂಸ್ ಪುತ್ತೂರು ಇದರ ಸನ್ಮಾನ ಸ್ವೀಕರಿಸಿ ಡಾ. ಸುರೇಶ್ ಪುತ್ತೂರಾಯ

ಪುತ್ತೂರು: ಮಧುಮೇಹ ಜಾಗೃತಿ ಉಪಕ್ರಮ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ಪುತ್ತೂರಿನ ಹೆಸರಾಂತ ವೈದ್ಯ ಡಾ. ಸುರೇಶ್ ಪುತ್ತೂರಾಯ ಅವರಿಗೆ ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಹಾಗೂ ನ್ಯೂಸ್ ಪುತ್ತೂರು ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಸುರೇಶ್ ಪುತ್ತೂರಾಯ, ಸಾಮೂಹಿಕ ಪ್ರಯತ್ನಕ್ಕೆ Diabetes Awareness Initiative Award-2024 ಒಲಿದು ಬಂದಿದೆ. ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಹಲವು ಸ್ವಯಂ ಸೇವಕರ ಶ್ರಮದಿಂದಾಗಿ ಈ ಶಿಬಿರ ಯಶಸ್ಸು ಕಂಡಿದೆ. ಪುತ್ತೂರಿನ ವೈದ್ಯರ ಜೊತೆಗೆ ಸುತ್ತಲಿನ ತಾಲೂಕುಗಳ ವೈದ್ಯರು

ಪುತ್ತೂರಿನ ಹೆಸರು ಭುವನೇಶ್ವರದಲ್ಲಿ ಕೇಳುವಾಗ ಆದ ಖುಷಿಯೇ ಅವಿಸ್ಮರಣೀಯ | ಪುತ್ತೂರು ಸಮರ್ಪಣಾ ಚಾರಿಟೇಬಲ್ ಟ್ರಸ್ಟ್, ನ್ಯೂಸ್ ಪುತ್ತೂರು ಇದರ ಸನ್ಮಾನ ಸ್ವೀಕರಿಸಿ ಡಾ. ಸುರೇಶ್ ಪುತ್ತೂರಾಯ Read More »

ಸಂಸದರನ್ನೇ ಎತ್ತಿ ನೆಲಕ್ಕೆ ಕುಕ್ಕಿದರು: ಮಾಲ್ಡೀವ್ಸ್ ಸಂಸತ್ತಿನ ಫೊಟೋ, ವೀಡಿಯೋ ವೈರಲ್!

ಸಂಸತ್ತಿನಲ್ಲಿ ಆಗಾಗ ವಾದ-ವಿವಾದಗಳು ನಡೆಯುತ್ತಲೇ ಇರುತ್ತವೆ. ಆದರೆ ಮಾಲ್ಡೀವ್ಸ್‌ನ ಸಂಸತ್ತಿನಲ್ಲಿ ನಡೆದಿರುವ ಘಟನೆಯೇ ಅಚ್ಚರಿ ಮೂಡಿಸಿದೆ. ಇಲ್ಲಿ ಸಂಸತ್ತಿನಲ್ಲಿ ಹೊಡೆದಾಟ, ಬಡಿದಾಟ ನಡೆದಿದ್ದು ಮಾತ್ರವಲ್ಲದೆ ಸಂಸದರು ಒಬ್ಬರನ್ನೊಬ್ಬರು ಎತ್ತಿಕೊಂಡು ನೆಲದ ಮೇಲೆ ಕುಕ್ಕಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  ವಿಡಿಯೋದಲ್ಲಿ ಒಬ್ಬ ಸಂಸದ ಮತ್ತೊಬ್ಬನ ಕಾಲು ಎಳೆಯುತ್ತಿರುವುದು ಕಂಡು ಬರುತ್ತಿದೆ. ಮುಯಿಝು ಕ್ಯಾಬಿನೆಟ್ ಮೇಲಿನ ಮತದಾನಕ್ಕಾಗಿ ಇದೆಲ್ಲ ನಡೆದಿದೆ. ವಾಸ್ತವವಾಗಿ ಇಲ್ಲಿ ಸಚಿವ ಸಂಪುಟಕ್ಕೆ ಮತದಾನ ನಡೆಯಬೇಕಿತ್ತು. ಆದರೆ ವಿರೋಧ ಪಕ್ಷವು ನಾಲ್ವರು ಸಚಿವರ

ಸಂಸದರನ್ನೇ ಎತ್ತಿ ನೆಲಕ್ಕೆ ಕುಕ್ಕಿದರು: ಮಾಲ್ಡೀವ್ಸ್ ಸಂಸತ್ತಿನ ಫೊಟೋ, ವೀಡಿಯೋ ವೈರಲ್! Read More »

error: Content is protected !!
Scroll to Top