ಸಿ ಎಂ ಪದಕಕ್ಕೆ ಯುನಿವರ್ಸಲ್ ಕಾಲೇಜಿನ  ಎನ್.ಸಿ.ಸಿ. ಕೆಡೆಟ್ ಗಳು ಆಯ್ಕೆ

ಕರ್ನಾಟಕ ಬೆಟಾಲಿಯನ್ ಆರ್ಮಿ ವಿಂಗ್ ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ನ ಎನ್.ಸಿ.ಸಿ. ಕೆಡೆಟ್ ಗಳಾದ ಜುವೊ ಫಜಲ್ ಎಸ್. ನದಾಫ್ ಹಾಗೂ ಜುವೊ ಸುಜಲ್ ಶಂಖಲಾ  ಮುಖ್ಯಮಂತ್ರಿಗಳ ಶ್ಲಾಘನಾ ಪದಕಕ್ಕೆ ಆಯ್ಕೆಯಾಗಿದ್ದಾರೆ. ಎನ್.ಸಿ.ಸಿ.ಯಲ್ಲಿ ಅಸಾಧಾರಣ ಸೇವೆಗಾಗಿ ಅತ್ಯಂತ ಅರ್ಹ ಕೆಡೆಟ್ ಗಳಿಗೆ  ಮುಖ್ಯಮಂತ್ರಿಗಳ ಶ್ಲಾಘನಾ ಪದಕವನ್ನು ನೀಡಲಾಗುತ್ತದೆ. ಕಾಲೇಜಿನ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ, ಆಡಳಿತಾಧಿಕಾರಿ ಸಂತೋಷ್ ಶೆಟ್ಟಿ, ಪ್ರಾಂಶುಪಾಲ ನವೀನ್ ಪ್ರಸಾದ್, ಸಹಾಯಕ ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಓಂಕಾರ್ ಇಬ್ಬರೂ ಸಾಧಕರನ್ನು ಅಭಿನಂದಿಸಿದ್ದಾರೆ

ಸಿ ಎಂ ಪದಕಕ್ಕೆ ಯುನಿವರ್ಸಲ್ ಕಾಲೇಜಿನ  ಎನ್.ಸಿ.ಸಿ. ಕೆಡೆಟ್ ಗಳು ಆಯ್ಕೆ Read More »

ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಮಹಾಸಭೆ

ಪುತ್ತೂರು: ಮುಂಡೂರು ಮಹಾಲಿಂಗೇಶ್ವರ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ 2022-23ನೇ ಸಾಲಿನ ವಾರ್ಷಿಕ ಮಹಾಸಭೆ ಮುಂಡೂರು ಸಮುದಾಯ ಭವನದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷೆ ಭಾರತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ, ಉಪಾಧ್ಯಕ್ಷೆ ಯಶೋಧ , ಗ್ರಾಮ ಪಂಚಾಯಿತಿ ಸದಸ್ಯ ಉಮೇಶ್, ಕಾರ್ಯದರ್ಶಿ ಸೂರಪ್ಪ ಪಾಲ್ಗೊಂಡಿದ್ದರು. ವಲಯ ಮೇಲ್ವಿಚಾರಕಿ ನಮಿತಾ ವಾರ್ಡ್ ಒಕ್ಕೂಟ ಮತ್ತು ಗ್ರಾಮ ಪಂಚಾಯಿತಿ ಒಕ್ಕೂಟದ ಕಾರ್ಯವೈಖರಿ, ಸಿಬ್ಬಂದಿಗಳ ಕುರಿತು ಮಾಹಿತಿ ನೀಡಿದರು. ಕಾರ್ಯದರ್ಶಿ ಮಮತಾ

ಮಹಾಲಿಂಗೇಶ್ವರ ಸಂಜೀವಿನಿ ಒಕ್ಕೂಟದ ಮಹಾಸಭೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳಲ್ಲಿ ಶ್ರೀ ಮಂಜುನಾಥನ ದರ್ಶನ ಪಡೆದ ಬಿ.ವೈ.ವಿಜಯೇಂದ್ರ

ಧರ್ಮಸ್ಥಳ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ಮುಂಜಾನೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಮಂಗಳೂರಿನಲ್ಲಿ ಜ.30 ರಂದು ನಡೆದ ದ.ಕ.ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಸತೀಶ್ ಕುಂಪಲ ಅವರ ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದರು. ಅಲ್ಲಿಂದ ರಾತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ಅಲ್ಲಿ ತಂಗಿದ್ದರು. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಬೆಳ್ತಂಗಡಿ ಕ್ಷೇತ್ರಕ್ಕೆ ಆಗಮಿಸುತ್ತಿರುವ ಹಿನ್ನೆಲೆ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ

ಶ್ರೀ ಕ್ಷೇತ್ರ ಧರ್ಮಸ್ಥಳಲ್ಲಿ ಶ್ರೀ ಮಂಜುನಾಥನ ದರ್ಶನ ಪಡೆದ ಬಿ.ವೈ.ವಿಜಯೇಂದ್ರ Read More »

‘ಅನ್ನಪೂರ್ಣೇಶ್ವರಿ ಅನ್ನಛತ್ರ’ ಲೋಕಾರ್ಪಣೆ ಮುಂದೂಡಲಾಗಿದೆ | ಜ.31 ರ ಬದಲು ಫೆ.3 ರಂದು ಲೋಕಾರ್ಪಣೆ

ಪುತ್ತೂರು: ಇಂದು ನಡೆಯಬೇಕಾಗಿದ್ದ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ‘ಅನ್ನಪೂರ್ಣೇಶ್ವರಿ ಅನ್ನಛತ್ರ’ದ ಲೋಕಾರ್ಪಣೆ ಕಾರ್ಯಕ್ರಮ ಮುಂದೂಡಲಾಗಿದೆ. ಜ.31 ರಂದು ಕಾರ್ಯಕ್ರಮ ನಿಗದಿಯಾಗಿತ್ತು. ತಾಂತ್ರಿಕ ಕಾರಣಗಳಿಂದ ಮುಂದೂಡಲಾಗಿದ್ದು, ಫೆ.3 ರಂದು ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಲೋಕಾರ್ಪಣೆ ಅಂಗವಾಗಿ ಬೆಳಿಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ಅನ್ನಪೂರ್ಣೇಶ್ವರಿ ಯಜ್ಞ, ಮಹಾಗಣಪತಿ ಹೋಮ ನಡೆದು ಬಳಿಕ ಅನ್ನಛತ್ರ ಲೋಕಾರ್ಪಣೆಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಬೇಕೆಂದು

‘ಅನ್ನಪೂರ್ಣೇಶ್ವರಿ ಅನ್ನಛತ್ರ’ ಲೋಕಾರ್ಪಣೆ ಮುಂದೂಡಲಾಗಿದೆ | ಜ.31 ರ ಬದಲು ಫೆ.3 ರಂದು ಲೋಕಾರ್ಪಣೆ Read More »

ವಿವಿಧ ಶಾಲೆಗಳಿಗೆ ಪದವೀಧರ ಶಿಕ್ಷಕರ ನೇಮಕಾತಿ | ಶಶಿರೇಖಾ ಪಿ.ಕೆ. ಸರಳೀಕಟ್ಟೆ ಹಿರಿಯ ಪ್ರಾಥಮಿಕ ಶಾಲೆಗೆ ನೇಮಕ

ಕಾಣಿಯೂರು: ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಇಲಾಖೆ 2022-23ನೇ ಸಾಲಿನಲ್ಲಿ ಪ್ರಾಥಮಿಕ ಶಾಲೆಗಳಿಗೆ ಆಯ್ಕೆಯಾದ ಪದವೀಧರ ಪ್ರಾಥಮಿಕ ಶಿಕ್ಷಕರ(6ರಿಂದ 8ನೇ ತರಗತಿ)ನ್ನು ವಿವಿಧ ಶಾಲೆಗಳಿಗೆ ನೇಮಕಾತಿ ಮಾಡಿ ಆದೇಶ ಹೊರಡಿಸಿದೆ. ಅದರಂತೆ ಶಶಿರೇಖಾ ಪಿ ಕೆ ಅವರು ಬೆಳ್ತಂಗಡಿ ತಾಲೂಕಿನ ಸರಳೀಕಟ್ಟೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಪದವೀಧರ ಪ್ರಾಥಮಿಕ ಶಿಕ್ಷಕಿಯಾಗಿ ಆಯ್ಕೆಯಾಗಿದ್ದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಪುಣ್ಚತ್ತಾರು ನಿವಾಸಿ ಪುಟ್ಟು ಪಿ ಅವರ ಪುತ್ರಿಯಾಗಿರುವ ಶಶಿರೇಖಾ ಪಿ. ಕೆ. ಅವರು ಕಾಣಿಯೂರು

ವಿವಿಧ ಶಾಲೆಗಳಿಗೆ ಪದವೀಧರ ಶಿಕ್ಷಕರ ನೇಮಕಾತಿ | ಶಶಿರೇಖಾ ಪಿ.ಕೆ. ಸರಳೀಕಟ್ಟೆ ಹಿರಿಯ ಪ್ರಾಥಮಿಕ ಶಾಲೆಗೆ ನೇಮಕ Read More »

ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಸ್ಪರ್ಧೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಟ್ಟದ ಜ್ಞಾನಶರಧಿ/ಜ್ಞಾನವಾರಿಧಿ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ವಿವಿಧ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ ಲಭಿಸಿದೆ. ಧರ್ಮಸ್ಥಳದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದಲ್ಲಿ ಅನನ್ಯ ಎನ್. ಪ್ರಬಂಧ ದ್ವಿತೀಯ, ಪ್ರೌಢಶಾಲಾ ವಿಭಾಗದಲ್ಲಿ ಅಮೋಘ ಕೃಷ್ಣ ಕೆ. ಶ್ಲೋಕ ಕಂಠಪಾಠ

ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಸ್ಪರ್ಧೆ | ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ Read More »

ಮುಂದಿನ ಲೋಕಸಭೆ ಚುನಾವಣೆ ಭಾರತದ ಭವಿಷ್ಯ ರೂಪಿಸಬೇಕಾದ ಮಹತ್ವದ ಚುನಾವಣೆಯಾಗಲಿದೆ | ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಮಂಗಳೂರು: ಮುಂದಿನ ಲೋಕಸಭಾ ಚುನಾವಣೆಯ ತಾಂತ್ರಿಕ ಘೊಷಣೆಯಾಗಿದ್ದು, ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಅವರು ಮಂಗಳವಾರ ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸತೀಶ್ ಕುಂಪಲ ಅವರ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಲೋಕಸಭೆ ಚುನಾವಣೆ ಕುರಿತು ಕರ್ನಾಟಕ ಸೇರಿದಂತೆ ಎಲ್ಲಾ ಕಡೆ ಬಿಜೆಪಿ ಪರ ವಾತಾವರಣ ಉಂಟಾಗಿದೆ. ಇದಕ್ಕೆ ಕಳೆದ ಕಾರ್ಯಕಾರಿಣಿ ಸಭೆಯಲ್ಲಿ ಶೇ.98 ರಷ್ಟು ಮಂದಿ

ಮುಂದಿನ ಲೋಕಸಭೆ ಚುನಾವಣೆ ಭಾರತದ ಭವಿಷ್ಯ ರೂಪಿಸಬೇಕಾದ ಮಹತ್ವದ ಚುನಾವಣೆಯಾಗಲಿದೆ | ಜಿಲ್ಲಾ ಬಿಜೆಪಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ Read More »

ಪುತ್ತೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ | ದಾಖಲೆಗಳ ಹಸ್ತಾಂತರ

ಪುತ್ತೂರು: ಪುತ್ತೂರಿನ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ನಿರ್ಮಾಣವಾಗಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ ಜಾಗದ ದಾಖಲೆಗಳ ಹಸ್ತಾಂತರ ಕಾರ್ಯಕ್ರಮ ಪುತ್ತೂರು ಆಡಳಿತ ಸೌಧದ ಸಹಾಯಕ ಆಯುಕ್ತರ ನ್ಯಾಯಾಲಯ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಹಾಗೂ ಶಾಸಕ ಅಶೋಕ್ ಕುಮಾರ್ ರೈ ಅವರು ದಾಖಲೆಗಳನ್ನು ಕರ್ನಾಟಕ ಕ್ರಿಕೆಟ್ ಅಸೋಶಿಯೇಷನ್ ಅಧ್ಯಕ್ಷ ರಘುರಾಮ್ ಭಟ್ ಅವರಿಗೆ ಹಸ್ತಾಂತರ ಮಾಡಿದರು. ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ 23.25 ಎಕರೆ ಪ್ರದೇಶದಲ್ಲಿ ಪುತ್ತೂರು ಉಪವಿಭಾಗದ ಮೊತ್ತಮೊದಲ ಅಂತಾರಾಷ್ಟ್ರೀಯ

ಪುತ್ತೂರಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ | ದಾಖಲೆಗಳ ಹಸ್ತಾಂತರ Read More »

ಗಾಂಧೀಜಿಯವರು ಪ್ರತಿಪಾದಿಸಿದ ತತ್ವಗಳ ಮೂಲಕ ನಮ್ಮ ನಡುವೆ ಇಂದಿಗೂ ಇದ್ದಾರೆ | ಪುತ್ತೂರು ಗಾಂಧಿಕಟ್ಟೆಯಲ್ಲಿ ಹುತಾತ್ಮರ ದಿನಾಚರಣೆಯಲ್ಲಿ ಜುಬಿನ್ ಮಹಾಪಾತ್ರ

ಪುತ್ತೂರು: ಪುತ್ತೂರಿಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿದ ನಗರದ ಬಸ್ ನಿಲ್ದಾಣದ ಬಳಿ ಇರುವ ಗಾಂಧಿ ಕಟ್ಟೆಯಲ್ಲಿ ಮಂಗಳವಾರ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು. ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮಹಾಪಾತ್ರ ಗಾಂಧಿ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಪ್ರಸ್ತುತ ಗಾಂಧೀಜಿಯವರು ಇಲ್ಲದಿದ್ದರೂ ಅವರ ತತ್ವಗಳ ಮೂಲಕ ನಮ್ಮ ನಡುವೆ ಜೀವಂತ ಇದ್ದಾರೆ. ದೇಶದ ಸ್ವಾತಂತ್ರಕ್ಕೆ ಕಾರಣರಾದ ಗಾಂಧೀಜಿಯವರು ದೇಶದ ಆಡಳಿತಕ್ಕೆ ನಿಯಮಗಳನ್ನು ತಂದವರು. ದೇಶದ ಅಭಿವೃದ್ಧಿ, ಜನರ ಅಭಿವೃದ್ಧಿಗಾಗಿ ಪ್ರಜೆಗಳು ಕೆಲಸ ಮಾಡಬೇಕು ಎಂಬ ಸಂದೇಶ

ಗಾಂಧೀಜಿಯವರು ಪ್ರತಿಪಾದಿಸಿದ ತತ್ವಗಳ ಮೂಲಕ ನಮ್ಮ ನಡುವೆ ಇಂದಿಗೂ ಇದ್ದಾರೆ | ಪುತ್ತೂರು ಗಾಂಧಿಕಟ್ಟೆಯಲ್ಲಿ ಹುತಾತ್ಮರ ದಿನಾಚರಣೆಯಲ್ಲಿ ಜುಬಿನ್ ಮಹಾಪಾತ್ರ Read More »

ಕುಂಬ್ಲಾಡಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ | ಜ. 31ರಂದು ಮಾಚಿಲ ಉಳ್ಳಾಕ್ಲು, ಉಳ್ಳಾಲ್ತಿ ನೇಮೋತ್ಸವ

ಕಾಣಿಯೂರು: ಕುಂಬ್ಲಾಡಿ ಶ್ರೀ ಕುಕ್ಕೆನಾಥ ಬಾಲಸುಬ್ರಹ್ಮಣ್ಯ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವ ಜ. 29ರಂದು ನಡೆಯಿತು. ಜ. 23ರಂದು ಗೊನೆ ಮುಹೂರ್ತ ನಡೆದಿದ್ದು, ಜ. 28ರಂದು ಬೆಳಿಗ್ಗೆ ಅರುವಗುತ್ತು ಮನೆಯಿಂದ ದೇವರ ಆಭರಣ ತರಲಾಯಿತು. ನಂತರ ನಾಲ್ಕಂಬ ಕ್ಷೇತ್ರದಲ್ಲಿ ಪ್ರಾರ್ಥನೆ ನಡೆದು, ದೇವಳದಲ್ಲಿ ತೋರಣ ಮುಹೂರ್ತ ಜರಗಿತು. ಅಂಕದ ಕೂಟೇಲಿನಲ್ಲಿ ಪ್ರತಿಷ್ಠಾಪನಾ ನಿಮಿತ್ತ ಗಣಹೋಮ, ಪ್ರಾರ್ಥನೆ, ದೇವರ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು. ಸಂಜೆ ತಂತ್ರಿ ಪರಿವಾರವನ್ನು ಸ್ವಾಗತಿಸಲಾಯಿತು. ರಾತ್ರಿ ಪ್ರಾಸಾದ ಶುದ್ಧಿ, ವಾಸ್ತು ರಾಕ್ಷೋಘ್ನ ಹೋಮ, ವಾಸ್ತು

ಕುಂಬ್ಲಾಡಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ | ಜ. 31ರಂದು ಮಾಚಿಲ ಉಳ್ಳಾಕ್ಲು, ಉಳ್ಳಾಲ್ತಿ ನೇಮೋತ್ಸವ Read More »

error: Content is protected !!
Scroll to Top