ಸತ್ತಲ್ಲಿಂದ ಎದ್ದು ಬಂದಳೇ ನಟಿ ಪೂನಂ ಪಾಂಡೆ!!

ನಟಿ, ಮಾಡೆಲ್ ಪೂನಂ ಪಾಂಡೆಯ ಸಾವಿನ ವರದಿ ಶುಕ್ರವಾರ ದೇಶಾದ್ಯಂತ ಸುದ್ದಿಯಾಗಿತ್ತು. ಆದರೆ ಶನಿವಾರ ಆಕೆ ಸ್ವತಃ ಇನ್’ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿದ್ದಾಳೆ. ವಿವಾದದಿಂದಲೇ ಸುದ್ದಿಯಾಗಿದ್ದ ನಟಿ, ಮಾಡೆಲ್ ಇದೀಗ ಹೊಸ ಗಿಮಿಕ್ ಪ್ರಯೋಗಿಸಿದ್ದಾಳೆ. ಅದೂ, ಗರ್ಭಕಂಠದ ಕ್ಯಾನ್ಸರ್ ಬಗೆಗಿನ ಜಾಗೃತಿಯಂತೆ. ಗರ್ಭಕಂಠ ಕ್ಯಾನ್ಸರಿಗೆ ಸೂಕ್ತ ಔಷದೋಪಚಾರ ಪಡೆದುಕೊಳ್ಳಬಹುದು ಎನ್ನುವ ಬಗ್ಗೆ ಜಾಗೃತಿ ಮೂಡಿಸಲು ತಾನು ಸತ್ತಂತೆ ನಟಿಸಬೇಕಾಯಿತು ಎಂದು ಉತ್ತರಪ್ರದೇಶದ ಕಾನ್ಪುರ ನಿವಾಸಿ, 32ರ ಹರೆಯದ ಪೂನಂ ಪಾಂಡೆ ಹೇಳಿಕೊಂಡಿದ್ದಾಳೆ.

ಸತ್ತಲ್ಲಿಂದ ಎದ್ದು ಬಂದಳೇ ನಟಿ ಪೂನಂ ಪಾಂಡೆ!! Read More »

ಗುರುಪುರ ಮಳಲಿ ಮಸೀದಿಯಲ್ಲಿ ಪತ್ತೆಯಾದ ಮಂದಿರದ ಅವಶೇಷ!! | ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್!

ಮಂಗಳೂರು: ಗುರುಪುರ ಸಮೀಪದ ಮಳಲಿ ಮಸೀದಿಯೊಳಗಡೆ ಮಂದಿರದ ಅವಶೇಷ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಡೆಸಿದ ವಿಚಾರಣೆ ಪೂರ್ಣಗೊಂಡಿದೆ ಎಂದು ತಿಳಿದುಬಂದಿದೆ. ಮಳಲಿಯ ಅಸಯ್ಯದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯಲ್ಲಿ ಮಂದಿರದ ಅವಶೇಷ ಪತ್ತೆಯಾದ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ, ಹಿಂದೆ ಅಲ್ಲಿ ಮಠ ಇತ್ತು ಎಂದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ನ್ಯಾಯಾಲಯದ ಕದ ತಟ್ಟಿತ್ತು. ಹೈಕೋರ್ಟ್ ಮೆಟ್ಟಿಲೇರಿದ ಮಸೀದಿ: ಅರ್ಜಿಯ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸಿವಿಲ್

ಗುರುಪುರ ಮಳಲಿ ಮಸೀದಿಯಲ್ಲಿ ಪತ್ತೆಯಾದ ಮಂದಿರದ ಅವಶೇಷ!! | ವಿಚಾರಣೆ ಪೂರ್ಣಗೊಳಿಸಿದ ಹೈಕೋರ್ಟ್! Read More »

ಬಿಜೆಪಿಯ ಭೀಷ್ಮನಿಗೆ ಒಲಿದ ಭಾರತರತ್ನ

ಬಿಜೆಪಿಯ ಭೀಷ್ಮ ಎಂದೇ ಖ್ಯಾತನಾಮರಾದ ಎಲ್‍.ಕೆ.ಅಡ್ವಾಣಿ ಅವರು ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಘೊಷಣೆ ಮಾಡಿದ್ದು, ಲಾಲ್‍ ಕೃಷ್ಣ ಅಡ್ವಾಣಿ ಅವರು ಬಿಜೆಪಿ ಪಕ್ಷದ ಸಹಸಂಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ. ಅಲ್ಲದೆ ಹಿಂದೂ ರಾಷ್ಟ್ರೀಯತಾವಾದಿ ಸ್ವಯಂಸೇವಕ ಸಂಘಟನೆಯಾದ ಆರ್‍.ಎಸ್‍.ಎಸ್‍.ನ ಸದಸ್ಯರೂ ಆಗಿದ್ದಾರೆ. 2002 ರಿಂದ 2004 ರ ತನಕ ಉಪಪ್ರಧಾನಿಯಾಗಿದ್ದ ಎಲ್‍.ಕೆ.ಅಡ್ವಾಣಿ ಅವರು, 90ರ ದಶಕದಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ಮಾಡಿದ ಧೀಮಂತ ನಾಯಕರಾಗಿದ್ದರು. ಲೋಕಸಭೆಯಲ್ಲಿ ದೀರ್ಘಾವಧಿವರೆಗೆ ವಿರೋಧ ಪಕ್ಷದ ನಾಯಕರಾಗಿದ್ದರು.

ಬಿಜೆಪಿಯ ಭೀಷ್ಮನಿಗೆ ಒಲಿದ ಭಾರತರತ್ನ Read More »

ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಕುರಿತು ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರ ಪ್ರತಿಕ್ರಿಯೆ ಏನು  ? |  ಇಲ್ಲಿದೆ ವಿವರ

ಪುತ್ತೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಂಚಲನವನ್ನುಂಟು ಮಾಡಿದ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಕುರಿತು ಒಳ ಚರ್ಚೆಗಳು ನಡೆಯುತ್ತಿದ್ದು, ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ಪಕ್ಷದಲ್ಲಿ ಕೆಲವೊಂದು ಸ್ಥಾನಗಳನ್ನು ನೀಡಬೇಕು ಎಂಬ ಷರತ್ತುಗಳನ್ನು ವಿಧಿಸಿರುವ ಕುರಿತು ಈ ಹಿಂದೆ ತಾಲೂಕಿನ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಕುರಿತು ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರನ್ನು ಸಂಪರ್ಕಿಸಿದಾಗ, ಅರುಣ್ ಕುಮಾರ್ ಪುತ್ತಿಲ ಸಹಿತ

ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ಕುರಿತು ಬಿಜೆಪಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರ ಪ್ರತಿಕ್ರಿಯೆ ಏನು  ? |  ಇಲ್ಲಿದೆ ವಿವರ Read More »

ಅಕ್ರಮ ವೇಶ್ಯಾವಾಟಿಕೆ ದಂಧೆ : ಮೂವರು ಪೊಲೀಸ್ ವಶಕ್ಕೆ

ಮಣಿಪಾಲ: ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಮೂವರನ್ನು ಮಣಿಪಾಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಪವನ್, ಚೇತನ್ ಸಿ.ಬಿ. ಹಾಗೂ ಪಂಜು ಬಂಧಿತ ಆರೋಪಿಗಳು ಮಹಿಳೆಯರನ್ನು ಪುಸಲಾಯಿಸಿ ಕರೆ ತಂದು ಅಕ್ರಮ ವೇಶ್ಯಾವಾಟಿಕೆಗೆ ಕಳುಹಿಸಿಕೊಡುತ್ತಿರುವ ಕುರಿತು ಬಂದ ಮಾಹಿತಿಯಂತೆ ಸ್ಥಳಕ್ಕೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಮೊದಲಿಗೆ ಆರೋಪಿ ಪವನ್‌ ಎಂಬವನನ್ನು ವಶಕ್ಕೆ ಪಡೆದಿದ್ದಾರೆ. ಪವನ್ ಹೇಳಿಕೆಯಂತೆ ಉಡುಪಿ ತಾಲೂಕು ಬೊಮ್ಮರಬೆಟ್ಟು ಮನೆಗೆ ದಾಳಿ ನಡೆಸಿ ಆರೋಪಿ ಚೇತನ್‌ ಸಿ.ಬಿ. ಹಾಗೂ ಆರೋಪಿ ಪಂಜು ಎಂಬವರನ್ನು ವಶಕ್ಕೆ

ಅಕ್ರಮ ವೇಶ್ಯಾವಾಟಿಕೆ ದಂಧೆ : ಮೂವರು ಪೊಲೀಸ್ ವಶಕ್ಕೆ Read More »

ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಫೈನಲ್ ಪ್ರವೇಶ | ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್‍.

ಪುತ್ತೂರು: 67ನೇ ರಾಷ್ಟ್ರಮಟ್ಟದ ಯೋಗಾಸನಾ ಚಾಂಪಿಯನ್ ಶಿಪ್ -2023-24 ಸ್ಪರ್ಧೆಗೆ ಕರ್ನಾಟಕ ತಂಡ ಆಯ್ಕೆಯಾಗಿದ್ದು, ದ.ಕ.ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್‍.  ಫೈನಲ್‍ ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಮಧ್ಯಪ್ರದೇಶದ ಸಂಗತಾನ್ ಕೇಂದ್ರೀಯ ವಿದ್ಯಾಲಯದಲ್ಲಿ ಫೆ.1 ರಿಂದ ಆರಂಭಗೊಂಡಿದ್ದು, 4 ರ ತನಕ ನಡೆಯಲಿರುವ ಸ್ಪರ್ಧೆಯಲ್ಲಿ ದೆಹಲಿ, ಗುಜರಾತ್, ಕರ್ನಾಟಕ, ಮಹಾರಾಷ್ಟ್ರ, ತ್ರಿಪುರಾ, ವೆಸ್ಟ್ ಬೆಂಗಾಲ್‍ ಆಯ್ಕೆಯಾಗಿದೆ. ಶ್ರೀಮಾ ಕೆ.ಎಚ್‍. ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ

ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ತಂಡ ಫೈನಲ್ ಪ್ರವೇಶ | ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿನಿ ಶ್ರೀಮಾ ಕೆ.ಎಚ್‍. Read More »

ಮಹಿಳೆಯಿಂದ ಚಿನ್ನದ ಸರ ಸುಲಿಗೆ | ಇಬ್ಬರು ಆರೋಪಿಗಳ ಬಂಧನ

ಬೆಳ್ಳಾರೆ: ಚಿನ್ನದ ಸರ ಸುಲಿಗೆ ಮಾಡಿದ ಇಬ್ಬರು ಅಪರಿಚಿತ ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳ ನಿವಾಸಿ ಚಂದ್ರಮೋಹನ್ (42) ಹಾಗೂ ನರಿಮೊಗರು ನಿವಾಸಿ ನೌಶಾದ್ ಬಿ.ಎ. (36) ಬಂಧಿತ ಆರೋಪಿಗಳು ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಪಾಂಬಾರ್ ಎಂಬಲ್ಲಿ ಜ.11 ರಂದು ಇಬ್ಬರು ಅಪರಿಚಿತರು ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರ ಎಳೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಶೀಘ್ರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಇದೀಗ

ಮಹಿಳೆಯಿಂದ ಚಿನ್ನದ ಸರ ಸುಲಿಗೆ | ಇಬ್ಬರು ಆರೋಪಿಗಳ ಬಂಧನ Read More »

ನಾಳೆ : ಶ್ರೀ ರಾಜಗುಳಿಗ ದೈವದ ಕೋಲ, ವಿವಿಧ ವೈದಿಕ ಕಾರ್ಯಕ್ರಮ

ಪುತ್ತೂರು: ಆರ್ಯಾಪು ಗ್ರಾಮದ ಸಂಟ್ಯಾರು ಕಲ್ಲಕಟ್ಟ ಶ್ರೀ ರಾಜಗುಳಿಗ ದೈವದ ಸಾನಿಧ್ಯದಲ್ಲಿ ವೈದಿಕ ಕಾರ್ಯಕ್ರಮ ಹಾಗೂ ಶ್ರೀ ರಾಜಗುಳಿಗ ದೈವದ ಕೋಲ ಫೆ.4 ಭಾನುವಾರ ನಡೆಯಲಿದ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 8 ಕ್ಕೆ ಗಣಹೋಮ, ಶುದ್ಧಕಲಶ, 9.30 ಕ್ಕೆ ತಂಬಿಲ ಸೇವೆ, ಪ್ರಸಾದ ವಿತರಣೆಯಾಗಿ ಮಧ್ಯಾಹ್ನ 12.30 ಕ್ಕೆ ಅನ್ನಸಂತರ್ಪಣೆ ಜರಗಲಿದೆ. ಮಧ್ಯಾಹ್ನ 1.30 ಕ್ಕೆ ರಾಜಗುಳಿಗ ದೈವದ ಕೋಲ ನಡೆದು ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ಜರಗಲಿದೆ ಎಂದು ದೈವಸ್ಥಾನದ ಅಧ್ಯಕ್ಷ ರಾಧಾಕೃಷ್ಣ ರೈ ಕುರಿಯ

ನಾಳೆ : ಶ್ರೀ ರಾಜಗುಳಿಗ ದೈವದ ಕೋಲ, ವಿವಿಧ ವೈದಿಕ ಕಾರ್ಯಕ್ರಮ Read More »

ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು  ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ- ಕೃಷಿ ಸಾಹಿತ್ಯ ಸಂಭ್ರಮ- ದತ್ತಿನಿಧಿ ಕಾರ್ಯಕ್ರಮ

ಪುತ್ತೂರು: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಹೋಬಳಿ ಘಟಕದ ಪದ ಸ್ವೀಕಾರ  ಸಮಾರಂಭ  ಫೆ.6 ಮಂಗಳವಾರ  ಕೆದಂಬಾಡಿಯ ಸಿರಿ ಮಜಲು ಕೃಷಿ ಕ್ಷೇತ್ರದಲ್ಲಿ ನಡೆಯಲಿದೆ. ನೂತನ ಅಧ್ಯಕ್ಷರಾಗಿ ಕಡಮಜಲು ಸುಭಾಷ್ ರೈ, ಕಾರ್ಯದರ್ಶಿಯಾಗಿ ಸಿ. ಶೇ ಕಜೆಮಾರ್, ಕೋಶಾಧ್ಯಕ್ಷರಾಗಿ ಎ.ಕೆ. ಜಯರಾಮ್ ರೈ, ಕೆಯ್ಯೂರು, ಸಂಘಟನಾ ಕಾರ್ಯದರ್ಶಿಯಾಗಿ ವಿನೋದ್ ಕುಮಾರ್ ಕೆ.ಎಸ್, ಮತ್ತು ಸದಸ್ಯರಾಗಿ ಪೂರ್ಣಿಮಾ ಪೆರ್ಲಂಪಾಡಿ, ಬಾಬು ಟಿ, ಡಾ ಮನಮೋಹನ್ ಎಂ., ಎಸ್. ಡಿ ವಸಂತ ಸರ್ವೆ ದೋಳ, ಎಸ್. ಪಿ. ಬಶೀರ್

ಫೆ.6: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು  ಹೋಬಳಿ ಘಟಕದ ಪದಾಧಿಕಾರಿಗಳ ಪದ ಸ್ವೀಕಾರ- ಕೃಷಿ ಸಾಹಿತ್ಯ ಸಂಭ್ರಮ- ದತ್ತಿನಿಧಿ ಕಾರ್ಯಕ್ರಮ Read More »

ಫೆ.1-8: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ

ಪಂಜ: ಪಂಜ ಪರಿವಾರ ಶ್ರೀ  ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ ಫೆ1  ರಿಂದ ಮಾ.8ರ ವರೆಗೆ ವಿವಿಧ ವೈಧಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ . ಜಾತ್ರೋತ್ಸವದ ಅಂಗವಾಗಿ ಫೆ.5 ರಂದು ಬೆಳಿಗ್ಗೆ10.30 ಕ್ಕೆ  ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ಹಾಗೂ ರಾತ್ರಿ ಕಾಚುಕುಜುಂಬೋತ್ಸವ, ಶ್ರೀ ಶೀರಾಡಿ ರುದ್ರಚಾಮುಂಡಿ ಮತ್ತು ಕಾಚುಕುಜುಂಬ ದೈವಗಳ ನರ್ತನ ಸೇವೆ, ಸರ್ವಸೇವೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಲಿದೆ. ಫೆ.6 ರಂದು ರಾತ್ರಿ  9.30 ರಿಂದ ವೈಭವದ ಬ್ರಹ್ಮ ರಥೋತ್ಸವ ನಡೆದು ಕಾಚುಕುಜುಂಬ

ಫೆ.1-8: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ Read More »

error: Content is protected !!
Scroll to Top