ನೀರ್ಕಜೆ ತರವಾಡು ಮನೆಯ 9ನೇ ವರ್ಧಂತಿ ಪ್ರಯುಕ್ತ ನವಕಕಲಶಾಭಿಷೇಕ, ನೇಮೋತ್ಸವ

ಪುತ್ತೂರು: ಆರ್ಯಾಪು ಗ್ರಾಮದ ನೀರ್ಕಜೆ ತರವಾಡು ಮನೆಯ 9ನೇ ವರ್ಷದ ವರ್ಧಂತಿ ಪ್ರಯುಕ್ತ ಶ್ರೀ ನಾಗದೇವರ ಮತ್ತು ಧರ್ಮದೈವ ಮತ್ತು ಪರಿವಾರ ದೈವಗಳ ನವಕಕಲಶಾಭಿಷೇಕ, ನೇಮೋತ್ಸವ ಜ. 28ರಂದು ನಡೆಯಿತು. ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಮುಡಿಪು ಪೂಜೆ, ನಾಗದೇವರಿಗೆ ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ, ನಾಗತಂಬಿಲ, ಮಹಾಪೂಜೆ ಹಾಗೂ ಧರ್ಮದೈವ ರುದ್ರ ಚಾಮುಂಡಿ ಮತ್ತು ಪರಿವಾರ ದೈವಗಳ ನವಕಕಲಶಾಭಿಷೇಕ ಹಾಗೂ ದೈವಗಳಿಗೆ ತಂಬಿಲ ಪ್ರಸನ್ನ ಪೂಜೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದು, ಸತ್ಯ […]

ನೀರ್ಕಜೆ ತರವಾಡು ಮನೆಯ 9ನೇ ವರ್ಧಂತಿ ಪ್ರಯುಕ್ತ ನವಕಕಲಶಾಭಿಷೇಕ, ನೇಮೋತ್ಸವ Read More »

‘ಡೆವಿಲ್’ ನಾಯಕ ದರ್ಶನ್’ಗೆ ಪುತ್ತೂರಿನ ರಚನಾ ರೈ ನಾಯಕಿ!!

ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಗುರುತಿಸಿಕೊಂಡಿರುವ ಸ್ಯಾಂಡಲ್ ವುಡ್’ನ ನಟ ದರ್ಶನ್ ಅವರ ಹೊಸ ಸಿನಿಮಾ ‘ಡೆವಿಲ್’ಗೆ ನಾಯಕಿ ಫಿಕ್ಸ್ ಆಗಿದ್ದಾರೆ. ನಾಯಕಿಯಾಗುವ ಅದೃಷ್ಟ ಪಡೆದುಕೊಂಡವರು ಕೋಸ್ಟಲ್ ವುಡ್’ನ ನಟಿ ಎನ್ನುವುದು ಲೇಟೆಸ್ಟ್ ಸುದ್ದಿ. ಅದರಲ್ಲೂ ಆಕೆ ಪುತ್ತೂರಿನವರು ಎನ್ನುವುದು ವಿಶೇಷ. ರಚನಾ ರೈ. ಈ ಹೆಸರಿನ ನಟಿಯನ್ನು ನೋಡದವರು ತೀರಾ ಕಡಿಮೆ. ರೂಪೇಶ್ ಶೆಟ್ಟಿ ಅಭಿನಯದ ಸರ್ಕಸ್ ಸಿನಿಮಾ ಕರಾವಳಿ ಮಾತ್ರವಲ್ಲ ದೇಶ – ವಿದೇಶಗಳಲ್ಲೂ ಸದ್ದು ಮಾಡಿತ್ತು. ಇದರಲ್ಲಿ ನಾಯಕಿ ಪಾತ್ರಧಾರಿಯಾಗಿ ಕಾಣಿಸಿಕೊಂಡವರೇ ಈ

‘ಡೆವಿಲ್’ ನಾಯಕ ದರ್ಶನ್’ಗೆ ಪುತ್ತೂರಿನ ರಚನಾ ರೈ ನಾಯಕಿ!! Read More »

‘ಭಾರತ ರತ್ನ’ ನನ್ನ ಆದರ್ಶ, ತತ್ವಗಳಿಗೆ ಸಂದ ಗೌರವ: ಅಡ್ವಾಣಿ

ನವದೆಹಲಿ: ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿಯನ್ನು ಒಬ್ಬ ವ್ಯಕ್ತಿಯಾಗಿ ಮಾತ್ರ ಅಲ್ಲ. ಜೀವನದುದ್ದಕ್ಕೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಕಾರಣವಾದ ಆದರ್ಶಗಳು ಮತ್ತು ತತ್ವಗಳಿಗೆ ಸಂದ ಗೌರವ ಎಂದು ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಶನಿವಾರ ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ತಮ್ಮ ಹೆಸರನ್ನು ಘೋಷಿಸಿದ ಬೆನ್ನಲ್ಲೇ, “ಅತ್ಯಂತ ನಮ್ರತೆ ಮತ್ತು ಕೃತಜ್ಞತೆಯಿಂದ, ಇಂದು ನನಗೆ ನೀಡಲಾದ ಭಾರತ ರತ್ನವನ್ನು ನಾನು ಸ್ವೀಕರಿಸುತ್ತೇನೆ” ಎಂದು

‘ಭಾರತ ರತ್ನ’ ನನ್ನ ಆದರ್ಶ, ತತ್ವಗಳಿಗೆ ಸಂದ ಗೌರವ: ಅಡ್ವಾಣಿ Read More »

ಗ್ಯಾರಂಟಿ ಯೋಜನೆಗಳನ್ನು ಪತ್ರಕರ್ತರು ಬಿಟ್ಟಿ ಎಂದು ಕರೆಯಬಾರದು: ಸಿಎಂ

ಮೌಡ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ. ಇಂದು ದಾವಣಗೆರೆಯಲ್ಲಿ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರಿಗೆ ರಾಜಕೀಯ ಬೇಕಾಗಿಲ್ಲ. ವಸ್ತುನಿಷ್ಠವಾಗಿ ಇರಬೇಕು. ನಾಡಿನ ಬಡವರು ಮತ್ತು ಮಧ್ಯಮ ವರ್ಗದವರ ಆರ್ಥಿಕ ಶಕ್ತಿ ಹೆಚ್ಚಿಸುವ ಗ್ಯಾರಂಟಿ ಯೋಜನೆಗಳನ್ನು ಪತ್ರಕರ್ತರು ಬಿಟ್ಟಿ ಗ್ಯಾರಂಟಿ ಎಂದು ಕರೆಯಬಾರದು. ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಇರುವ ಈ ಯೋಜನೆಯನ್ನು ಬಿಟ್ಟಿ ಗ್ಯಾರಂಟಿ ಎಂದು ಕರೆಯದೆ. ನೀವೇ

ಗ್ಯಾರಂಟಿ ಯೋಜನೆಗಳನ್ನು ಪತ್ರಕರ್ತರು ಬಿಟ್ಟಿ ಎಂದು ಕರೆಯಬಾರದು: ಸಿಎಂ Read More »

ಫೆ.5 : ತುಳಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ವಾರ್ಷಿಕೋತ್ಸವ | ಮಕ್ಕಳ ಯಕ್ಷಗಾನ ಬಯಲಾಟ ‘ಶ್ರೀ ಕೃಷ್ಣ ಜನ್ಮ-ಶ್ರೀ ಕೃಷ್ಣ ಲೀಲೆ’ ಪ್ರದರ್ಶನ

ಬಂಟ್ವಾಳ: ತಾಲೂಕಿನ ಬೋಳಂತೂರು ತುಳಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ವಾರ್ಷಿಕೋತ್ಸವ ಫೆ.5 ಸೋಮವಾರ ವಿವಿಧ ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 6.30 ಕ್ಕೆ ಧ್ವಜಾರೋಹಣ, 7 ಕ್ಕೆ ಗಣಹೋಮ, 9 ರಿಂದ ಸಂಜೆ 4 ರ ತನಕ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಂಜೆ 4 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, 6 ಕ್ಕೆ ಮಹಾ ಮಂಗಳಾರತಿ ನಡೆಯಲಿದೆ. ರಾತ್ರಿ 8 ಕ್ಕೆ ಪ್ರಸಾದ ವಿತರಣೆ ನಡೆದು ಬಳಿಕ

ಫೆ.5 : ತುಳಸೀವನ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ವಾರ್ಷಿಕೋತ್ಸವ | ಮಕ್ಕಳ ಯಕ್ಷಗಾನ ಬಯಲಾಟ ‘ಶ್ರೀ ಕೃಷ್ಣ ಜನ್ಮ-ಶ್ರೀ ಕೃಷ್ಣ ಲೀಲೆ’ ಪ್ರದರ್ಶನ Read More »

ಸ್ವಾಮಿ ಪ್ರಸಾದವು ಅನ್ನಪ್ರಸಾದ ರೂಪದಲ್ಲಿ ನಿರಂತರವಾಗಿ ನಡೆಯಲಿ : ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನ್ನಪೂರ್ಣ ಛತ್ರ ಲೋಕಾರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ಅನ್ನಪೂರ್ಣಾ ಅನ್ನಛತ್ರದ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಫೆ.3 ಶನಿವಾರ ನಡೆಯಿತು. ಬೆಳಿಗ್ಗೆ ಶ್ರೀ ಅನ್ನಪೂರ್ಣಾ ಅನ್ನಛತ್ರದ ಸಮೃದ್ಧಿಗೋಸ್ಕರ ಬೆಳಿಗ್ಗೆ ಉಗ್ರಾಣ ತುಂಬಿಸುವ ಕಾರ್ಯಕ್ರಮ ನಡೆಯಿತು. ಸುವಸ್ತುಗಳನ್ನು ಶ್ರೀ ಮಹಾಲಿಂಗೇಶ್ವರ ದೇವರ ನಡೆಯಲ್ಲಿ ಇರಿಸಿ ಪ್ರಾರ್ಥಿಸಿ, ಬಳಿಕ ಮೆರವಣಿಗೆ ಮೂಲಕ ಎಲ್ಲಾ ಸುವಸ್ತುಗಳನ್ನು ಅನ್ನಪೂರ್ಣ ಅನ್ನಛತ್ರಕ್ಕೆ ತಂದು ಅಲ್ಲಿ ಸಮರ್ಪಣೆ ಮಾಡಲಾಯಿತು. ಇದೇ ಸಂದರ್ಭ ಮಹಿಳೆಯರಿಂದ ವಿಶೇಷ ಕುಂಕುಮಾರ್ಚನೆಕಾರ್ಯಕ್ರಮ ನಡೆಯಿತು. ಅನ್ನಪೂರ್ಣಾ ಛತ್ರವನ್ನು

ಸ್ವಾಮಿ ಪ್ರಸಾದವು ಅನ್ನಪ್ರಸಾದ ರೂಪದಲ್ಲಿ ನಿರಂತರವಾಗಿ ನಡೆಯಲಿ : ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅನ್ನಪೂರ್ಣ ಛತ್ರ ಲೋಕಾರ್ಪಣೆ Read More »

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಗರ್ಭಗುಡಿಯ ದಾರಂದಕ್ಕೆ ಬೆಳ್ಳಿಯ ಕವಚ ಸಮರ್ಪಣೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಗರ್ಭಗುಡಿಯ ದಾರಂದಕ್ಕೆ ಬೆಳ್ಳಿಯ ಕವಚವನ್ನು ಪುತ್ತೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್‍ ಕುಮಾರ್‍ ಭಂಡಾರಿ ದಂಪತಿ ಹಾಗೂ ಮನೆಯವರು ಕೊಡುಗೆಯಾಗಿ ಶ್ರೀ ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ. ಸುಮಾರು 8 ಕೆ.ಜಿ. ಬೆಳ್ಳಿಯನ್ನು ದಾರಂದ ಕವಚಕ್ಕೆ ಬಳಕೆ ಮಾಡಲಾಗಿದ್ದು, ದಾರಂದ ಕವಚ ಕೆಲಸ ನಿರ್ವಹಿಸಿದ ಮುಳಿಯ ಜ್ಯುವೆಲ್ಸ್ ಸಂಸ್ಥೆಯಿಂದ ಬೆಳಿಗ್ಗೆ ಮೆರವಣಿಗೆ ಮೂಲಕ ಬೆಳ್ಳಿಯ ದಾರಂದ ಕವಚವನ್ನು ದೇವಸ್ಥಾನಕ್ಕೆ ತರಲಾಯಿತು. ಬಳಿಕ ದೇವಳದ ಸತ್ಯಧರ್ಮ ನಡೆಯಲ್ಲಿಟ್ಟು ಸಮರ್ಪಣಾ ಪ್ರಾರ್ಥನೆ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಗರ್ಭಗುಡಿಯ ದಾರಂದಕ್ಕೆ ಬೆಳ್ಳಿಯ ಕವಚ ಸಮರ್ಪಣೆ Read More »

ಉಬರಡ್ಕ- ಮಿತ್ತೂರು – ಉಳ್ಳಾಕುಲು ದೈವಸ್ಥಾನ ರಸ್ತೆ ಅಭಿವೃದ್ಧಿ ವಿಳಂಬ! | ಲೋಕೋಪಯೋಗಿ ಇಲಾಖೆಯ ಎದುರು ಪ್ರತಿಭಟನೆಯ ಎಚ್ಚರಿಕೆ!

ಸುಳ್ಯ: ಉಬರಡ್ಕ ಮಿತ್ತೂರು ಗ್ರಾಮದ ಉಳ್ಳಾಕುಲು ದೈವಸ್ಥಾನ ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಂಡರೂ ಕಾಮಗಾರಿ ನಡೆಸಿಲ್ಲವೆಂದು ಆರೋಪಿಸಿರುವ ಗ್ರಾಮಸ್ಥರು, ಲೋಕೋಪಯೋಗಿ ಇಲಾಖೆಯ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಕಳೆದ ಮಾರ್ಚ್ ನಲ್ಲಿ ಸುಳ್ಯ ವಿಧಾನ ಸಭಾ ಕ್ಷೇತ್ರದಾದ್ಯಂತ ವಿವಿಧ ಕಾಮಗಾರಿಗಳಿಗೆ 1 ಸಾವಿರ ಲಕ್ಷ ರೂ. ಬಿಡುಗಡೆಗೊಂಡಿತ್ತು. ಇದರಲ್ಲಿ ಉಬರಡ್ಕ – ಮಿತ್ತೂರು – ಉಳ್ಳಾಕುಲು ದೈವಸ್ಥಾನ ರಸ್ತೆಯ ಅಭಿವೃದ್ಧಿಗಾಗಿ 30 ಲಕ್ಷ ರೂ. ಮೀಸಲಿಡಲಾಗಿತ್ತು. ಇದೀಗ ವಿವಿಧ ಕಡೆಗಳಲ್ಲಿ ಕಾಮಗಾರಿ ನಡೆಸಲಾಗಿದೆ. ಆದರೆ ಉಬರಡ್ಕ

ಉಬರಡ್ಕ- ಮಿತ್ತೂರು – ಉಳ್ಳಾಕುಲು ದೈವಸ್ಥಾನ ರಸ್ತೆ ಅಭಿವೃದ್ಧಿ ವಿಳಂಬ! | ಲೋಕೋಪಯೋಗಿ ಇಲಾಖೆಯ ಎದುರು ಪ್ರತಿಭಟನೆಯ ಎಚ್ಚರಿಕೆ! Read More »

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಿಂದ ತಾಲೂಕು ಮಟ್ಟದ ‘ಪ್ರೇರಣಾ ರಸಪ್ರಶ್ನೆ ಸ್ಪರ್ಧೆ-2024 | ವಿಜೇತರಿಗೆ ಬಹುಮಾನ ವಿತರಣೆ

ಪುತ್ತೂರು: ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯ ವತಿಯಿಂದ ಆಯೋಜಿಸಲಾದ ‘ಪ್ರೇರಣಾ ರಸಪ್ರಶ್ನೆ ಸ್ಪರ್ಧೆ-2024’ ವಿಜೇತರಿಗೆ ಬಹುಮಾನ ವಿತರಣೆ ಶನಿವಾರ ನಡೆಯಿತು. ‘ಪ್ರೇರಣಾ’ ಸಂಸ್ಥೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಪ್ರವೀಣ್‍ ಕುಂಟ್ಯಾಣ, ನಿರ್ದೇಶಕರಾದ ವಸಂತ ವೀರಮಂಗಲ, ನಾಗೇಶ್ ಕೆಡೆಂಜಿ, ಮುರಳೀಧರ ಕೆ.ಎಲ್ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯನಿರ್ವಾಹಕರಾದ ದಯಾಮಣಿ ಹೆಚ್‍.ಕೆ. ಸ್ವಾಗತಿಸಿದರು. ಸಿಬ್ಬಂದಿಗಳಾದ ಮೋಕ್ಷಿತ, ವಿನೋದ್ ಹಾಗೂ ಪ್ರತೀಕ್ಷಾ ಉಪಸ್ಥಿತರಿದ್ದರು. ವಿಜೇತರ ವಿವರ: ಗೌತಮಿ ಕೆ ವಿದ್ಯಾರಶ್ಮಿ ಪಿ ಯು

ಪ್ರತಿಷ್ಠಿತ ‘ಪ್ರೇರಣಾ’ ಸಂಸ್ಥೆಯಿಂದ ತಾಲೂಕು ಮಟ್ಟದ ‘ಪ್ರೇರಣಾ ರಸಪ್ರಶ್ನೆ ಸ್ಪರ್ಧೆ-2024 | ವಿಜೇತರಿಗೆ ಬಹುಮಾನ ವಿತರಣೆ Read More »

ಪುತ್ತೂರು ಮಂಡಲ ಹೊರತುಪಡಿಸಿ ಜಿಲ್ಲೆಯ ಉಳಿದ ಮಂಡಲಗಳಿಗೆ ಅಧ್ಯಕ್ಷರ ನೇಮಕಗೊಳಿಸಿದ ಬಿಜೆಪಿ!! | ಹಸಿರಾಗಿಯೇ ಉಳಿದಿದೆ ಬಿಜೆಪಿ – ಪುತ್ತಿಲ ಪರಿವಾರದ ನಡುವಿನ ಮಾತುಕತೆ!! | ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ ಹರೀಶ್ ಬಿಜತ್ರೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಮೂಡುಬಿದರೆ, ಮಂಗಳೂರು, ಮಂ. ಉತ್ತರ, ಮಂ. ದಕ್ಷಿಣ, ಬಂಟ್ವಾಳ, ಸುಳ್ಯ ಮಂಡಲಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಅಧ್ಯಕ್ಷರನ್ನು ನೇಮಿಸಿದ್ದಾರೆ. ಆದರೆ ಪುತ್ತೂರು ಮಂಡಲದ ಹೆಸರೇ ಪಟ್ಟಿಯಲ್ಲಿಲ್ಲ!! ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರಿನ ಹೆಸರು ರಾಜ್ಯ ರಾಜಕಾರಣದಲ್ಲಿ ಬಹಳ ದೊಡ್ಡದಾಗಿ ಸುದ್ದಿಯಾಗಿತ್ತು. ಅದಕ್ಕೆ ಕಾರಣ ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆ. ಅರುಣ್ ಕುಮಾರ್ ಪುತ್ತಿಲ ಅವರ ಸ್ಪರ್ಧೆ ಹೊಸ ರಾಜಕೀಯ ಶಕೆಗೂ ಕಾರಣವಾಯಿತು. ನಂತರದ ಬೆಳವಣಿಗೆಯಲ್ಲಿ ಪುತ್ತಿಲ

ಪುತ್ತೂರು ಮಂಡಲ ಹೊರತುಪಡಿಸಿ ಜಿಲ್ಲೆಯ ಉಳಿದ ಮಂಡಲಗಳಿಗೆ ಅಧ್ಯಕ್ಷರ ನೇಮಕಗೊಳಿಸಿದ ಬಿಜೆಪಿ!! | ಹಸಿರಾಗಿಯೇ ಉಳಿದಿದೆ ಬಿಜೆಪಿ – ಪುತ್ತಿಲ ಪರಿವಾರದ ನಡುವಿನ ಮಾತುಕತೆ!! | ಎಸ್.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷರಾಗಿ ಹರೀಶ್ ಬಿಜತ್ರೆ Read More »

error: Content is protected !!
Scroll to Top