ಎಸ್.ಎಸ್.ಎಲ್. ಸಿ ಫಲಿತಾಂಶ : ಉಡುಪಿ, ದಕ್ಷಿಣ ಕನ್ನಡ ಸಾಧನೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭಿನಂದನೆ

ಮಂಗಳೂರು : ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಗಳಿಸಿದೆ.  ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ. ಗುಣ ಮಟ್ಟದ  ಶಿಕ್ಷಣದೊಂದಿಗೆ ಅವಳಿ ಜಿಲ್ಲೆಗಳ ಈ ಸಾಧನೆಗೆ ಕಾರಣೀಭೂತರಾದ ಶಾಲೆಯ ಮುಖ್ಯೋಪಾಧ್ಯಯರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮವನ್ನು ಶ್ಲಾಘಿಸುತ್ತಾ, ಕರಾವಳಿಯ ಉತ್ಕೃಷ್ಟ ಶೈಕ್ಷಣಿಕ ಪರಂಪರೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದ್ದಾರೆ.

ಎಸ್.ಎಸ್.ಎಲ್. ಸಿ ಫಲಿತಾಂಶ : ಉಡುಪಿ, ದಕ್ಷಿಣ ಕನ್ನಡ ಸಾಧನೆಗೆ ಕ್ಯಾಪ್ಟನ್ ಬ್ರಿಜೇಶ್ ಚೌಟ ಅಭಿನಂದನೆ Read More »

ಸ್ವಚ್ಛ ಮಾಡಲು ಬಾವಿಗೆ ಇಳಿದ ಇಬ್ಬರು ಕೂಲಿ ಕಾರ್ಮಿಕರು | ಓರ್ವ ಮೃತ್ಯು, ಇನ್ನೋರ್ವನ ರಕ್ಷಣೆ

ಉಡುಪಿ: ಸ್ವಚ್ಚಗೊಳಿಸಲು ಬಾವಿಗೆ ಇಳಿದಿದ್ದ ಇಬ್ಬರ ಪೈಕಿ ಓರ್ವ ಮೃತಪಟ್ಟ ಘಟನೆ ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ದೇವಾಡಿಗರ ಬೆಟ್ಟುವಿನಲ್ಲಿ ನಡೆದಿದೆ. ದುರ್ಗೇಶ್‍ (34) ಮೃತಪಟ್ಟಿದ್ದು, ಅಡಿವೆಪ್ಪ ಕುರಿ (50) ಅವರನ್ನು ರಕ್ಷಣೆ ಮಾಡಲಾಗಿದೆ. ಕೆಸರು ತೆಗೆದು ಸ್ವಚ್ಚ ಮಾಡಲೆಂದು ಬಾವಿಗೆ ಇಳಿದ ಇಬ್ಬರು ವ್ಯಕ್ತಿಗಳಲ್ಲಿ ಓರ್ವ ಸಾವನ್ನಪ್ಪಿದ್ಯು ಮತ್ತೋರ್ವನನ್ನು ಅಗ್ನಿಶಾಮಕ ದಳದ ಸಿಬ್ಬಂದಿ  ರಕ್ಷಿಸಿದ್ದಾರೆ. ಇಬ್ಬರು ಕೂಡ ಕೊಪ್ಪಳ ಜಿಲ್ಲೆಯವರಾಗಿದ್ದು, ಬ್ರಹ್ಮಾವರದ ಸಾಲಿಕೆರೆಯಲ್ಲಿ ವಾಸಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದರು. 35 ಅಡಿ ಆಳದ ಬಾವಿಯಲ್ಲಿ ಕೆಸರು

ಸ್ವಚ್ಛ ಮಾಡಲು ಬಾವಿಗೆ ಇಳಿದ ಇಬ್ಬರು ಕೂಲಿ ಕಾರ್ಮಿಕರು | ಓರ್ವ ಮೃತ್ಯು, ಇನ್ನೋರ್ವನ ರಕ್ಷಣೆ Read More »

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 93.5 % ಫಲಿತಾಂಶ

ಸವಣೂರು: ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯಕ್ಕೆ ಶೇ.93.5 ಫಲಿತಾಂಶ ಲಭಿಸಿದೆ. ಪರೀಕ್ಷೆಗೆ ಹಾಜರಾದ 31 ವಿದ್ಯಾರ್ಥಿಗಳ ಪೈಕಿ 29 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, 6 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ , 19  ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿಶಿಷ್ಟ ಶ್ರೇಣಿಯ ಸಾಧಕರು : ಸುಪ್ರೀತಾ ಆರ್.- 607 (ರಮೇಶ್ ಮತ್ತು ಶ್ರಿದೇವಿ, ಬೀದರ್ ದಂಪತಿ ಪುತ್ರಿ), ಕನ್ನಡ-125/125, ಇಂಗ್ಲೀಷ್-97/100, ಹಿಂದಿ-97/100, ಗಣಿತ-98/100, ವಿಜ್ಞಾನ-98/100 ಮತ್ತು ಸಮಾಜ ವಿಜ್ಞಾನ-94/100,

ಎಸ್.ಎಸ್.ಎಲ್.ಸಿ.ಯಲ್ಲಿ ವಿದ್ಯಾರಶ್ಮಿಗೆ ಶೇಕಡಾ 93.5 % ಫಲಿತಾಂಶ Read More »

ನರಿಮೊಗರು ಸರಸ್ವತಿ ವಿದ್ಯಾ ಮಂದಿರ ಶಾಲೆಗೆ ದ್ವಿತೀಯ ಬಾರಿಗೆ ಶೇಕಡಾ 100 ಫಲಿತಾಂಶ.

ನರಿಮೊಗರು: 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಸರಸ್ವತಿ ವಿದ್ಯಾ ಮಂದಿರ ನರಿಮೊಗರು ಶಾಲೆಗೆ ಸತತ ದ್ವಿತೀಯ ಬಾರಿಗೆ 100 ಶೇಕಡಾ ಫಲಿತಾಂಶ ಬಂದಿರುತ್ತದೆ. ಪರೀಕ್ಷೆಗೆ ಹಾಜರಾದ 18 ವಿದ್ಯಾರ್ಥಿಗಳಲ್ಲಿ  9 ಡಿಸ್ಟಿಂಕ್ಷನ್, 9 ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳಾದ ಮೋಕ್ಷಿತ್ ಪಿ ಎಸ್ 614, ಆರಾಧ್ಯ 598, ರಾಶಿ ರೈ 590, ಜಿಶ್ಮಿತಾ ಕೆ 587, ಇಂಚರಾ 568, ಸ್ವರೂಪ್ 564, ಕೆ ಎಸ್ ಸುಧನ್ವ 554,

ನರಿಮೊಗರು ಸರಸ್ವತಿ ವಿದ್ಯಾ ಮಂದಿರ ಶಾಲೆಗೆ ದ್ವಿತೀಯ ಬಾರಿಗೆ ಶೇಕಡಾ 100 ಫಲಿತಾಂಶ. Read More »

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ : ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ

ಬೆಂಗಳೂರು: 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಉಡುಪಿ ಪ್ರಥಮ ಹಾಗೂ ದ.ಕ.ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಗಲಕೋಟೆಯ ಅಂಕಿತಾ 625 ರಲ್ಲಿ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಮಧುಗಿರಿಯ ಹರ್ಷಿತ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮೇ 9 ರಂದು ಫಲಿತಾಂಶ ಪ್ರಕಟಿಸುವ ಕುರಿತು ಪರೀಕ್ಷಾ ಬೋರ್ಡ್ ತಿಳಿಸಿತ್ತು. ಯಾದಗಿರಿ ಕೊನೆಯ‌ ಸ್ಥಾನ ಪಡೆದಿದೆ. ಕಳೆದ ಬಾರಿಯ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ.10

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ : ಉಡುಪಿ ಪ್ರಥಮ, ದಕ್ಷಿಣ ಕನ್ನಡ ದ್ವಿತೀಯ Read More »

ಮೇ 12 : ಆರ್ಯಾಪು ಮರಿಕೆಯ ಸಿಂಗಾರ ಮನೆಯಲ್ಲಿ ಧರ್ಮದೈವಗಳ ನೇಮೋತ್ಸವ

ಪುತ್ತೂರು: ಆರ್ಯಾಪು ಮರಿಕೆಯ ಸಿಂಗಾರ ಮನೆಯಲ್ಲಿ ಧರ್ಮದೈವಗಳ ನೇಮೋತ್ಸವ ನಡೆಯಲಿದೆ. ಪೂರ್ವಿಕರ ಕಾಲದಿಂದ ಆರಾಧಿಸಿಕೊಂಡು ಬಂದ ದೈವಗಳನ್ನು ಮಾಯದಿಂದ ಜೋಗಕ್ಕೆ ಬರಿಸಿ, ಒಂದು ಕುಡ್ತೆ ಹಾಲು, ತುಂಬು ಗೆರಸೆ ಬಾರಣೆ ಕೊಡಿಸುತ್ತೇವೆಂದು ಈ ಹಿಂದೆ ಮರಿಕೆಯ ಸಿಂಗಾರ ಮನೆಯವರು ಪ್ರಾರ್ಥಿಸಿಕೊಂಡ ಹಿನ್ನಲೆಯಲ್ಲಿ ನೇಮೋತ್ಸವ ನಡೆಯಲಿದೆ. ರಾತ್ರಿ ಗಂಟೆ 8 ಕ್ಕೆ ಧರ್ಮದೈವ ನೇಮೋತ್ಸವ ನಡೆಯಲಿದೆ ಎಂದು ಡಾ. ನವೀನ್ ಕುಮಾರ್ ಮರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೇ 12 : ಆರ್ಯಾಪು ಮರಿಕೆಯ ಸಿಂಗಾರ ಮನೆಯಲ್ಲಿ ಧರ್ಮದೈವಗಳ ನೇಮೋತ್ಸವ Read More »

ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು : ದ್ವಿತೀಯ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಬೀಬಿ ಅಲಾಬಿ ರಸ್ತೆ ಬಳಿ ನಡೆದಿದೆ. ನಿತೇಶ್ ರಾವ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಹಿಂದುಳಿದ ವರ್ಗಗಳ ಸರಕಾರಿ ಹಾಸ್ಟೆಲ್ನಲ್ಲಿ ವಾಸವಿದ್ದ ನಿತೇಶ್ 2ನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದು, ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಡುಪಿ ಜಿಲ್ಲೆಯವರಾದ ನಿತೇಶ್ ಕಳೆದ ಎರಡು ವರ್ಷಗಳಿಂದ ಮಂಗಳೂರಿನಲ್ಲಿ ಓದುತ್ತಿದ್ದರು. ಮೃತರು ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ನಿತೇಶ್

ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮೂಲಕ ಧನ ಸಹಾಯ ಹಸ್ತಾಂತರ

ಪುತ್ತೂರು : ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮೂಲಕ ಪುತ್ತೂರು ಹಾಗೂ ಊರವರ ಸಹಾಯ ಹಸ್ತದಿಂದ  ಅನಾರೋಗ್ಯದಲ್ಲಿದ್ದ ಸುಂದರ ನಾಯ್ಕ ಬಿ.ಕೆ.ಯವರಿಗೆ 37,000 ಆರ್ಥಿಕ ಧನ ಸಹಾಯ ಹಸ್ತಾಂತರಿಸಲಾಯಿತು. ಸುಂದರ ನಾಯ್ಕ ಅವರ ಮನೆಗೆ ಭೇಟಿ ನೀಡಿ ಅರೋಗ್ಯ ವಿಚಾರಿಸಿದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಧನ ಸಹಾಯ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮುಂಡೂರು ಹಾಲು ಉತ್ಪದಕ ಸಹಕಾರ ಸಂಘದ ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನುಜಿ, ಗ್ರಾಮ ಪಂಚಾಯಿತಿ ಸದಸ್ಯ ಬಾಲಕೃಷ್ಣ ಪೂಜಾರಿ ಕುರೆಮಜಲು, ಶ್ರೀರಾಮ

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಮೂಲಕ ಧನ ಸಹಾಯ ಹಸ್ತಾಂತರ Read More »

ಹೊಸ ತಂತ್ರಜ್ಞಾನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ‘ವಿಬ್ ಜಯಾರ್-2024’ ಸಮಾರಂಭದಲ್ಲಿ ಡಾ.ವೆಂಕಟ್ರಾಜ್ ಬಿ.

ಪುತ್ತೂರು: ಹೊಸ ಹೊಸ ತಂತ್ರಜ್ಞಾನಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪಿದಾಗ ಮಾತ್ರ ಅದರ ಆಶಯಗಳು ಸಾಕಾರವಾಗುತ್ತದೆ. ಅದಕ್ಕಾಗಿ ಯುವ ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳ ರಾಯಭಾರಿಗಳಾಗಬೇಕು ಎಂದು ಮೈಸೂರಿನ ಎಸ್ ಡಿ ಎಂ ರೀಸರ್ಚ್ ಸೆಂಟರ್ ಫಾರ್ ಮೆನೇಜ್ಮೆಂಟ್ ಸ್ಟಡೀಸ್ ಅಧ್ಯಕ್ಷ ಡಾ.ವೆಂಕಟ್ರಾಜ್.ಬಿ ಹೇಳಿದರು. ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ವಾರ್ಷಿಕೋತ್ಸವ ವಿಬ್ ಜಯಾರ್-2024 ಸಮಾರಂಭದ ಮುಖ್ಯ ಅತಿಥಿಯಾಗಿ ಮಾತಾಡಿದರು. ಶಿಕ್ಷಣ ನೀಡುವ ಸಂಸ್ಥೆಗಳು ಸಾಕಷ್ಟಿವೆ. ಆದರೆ ಜೀವನಾನುಭವಗಳನ್ನು, ಸಂಸ್ಕೃತಿ, ಉದ್ದೇಶ, ರಾಷ್ಟ್ರ

ಹೊಸ ತಂತ್ರಜ್ಞಾನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು | ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವಾರ್ಷಿಕೋತ್ಸವ ‘ವಿಬ್ ಜಯಾರ್-2024’ ಸಮಾರಂಭದಲ್ಲಿ ಡಾ.ವೆಂಕಟ್ರಾಜ್ ಬಿ. Read More »

ಸುಳ್ಯದ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ: ಕಾಲೇಜು ವಿದ್ಯಾರ್ಥಿಯೋರ್ವಳು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಪಾಜೆ ಗ್ರಾಮದ ದೊಡ್ಡಡ್ಕದಲ್ಲಿ ಇಂದು ನಡೆದಿದೆ. ಸುಳ್ಯ ಸರಕಾರಿ ಪಿಯು  ಕಾಲೇಜಿನ ವಿದ್ಯಾರ್ಥಿನಿ ರಶ್ಮಿತಾ (16) ಆತ್ಮಹತ್ಯೆ ಮಾಡಿಕೊಂಡವರು. ಸಂಪಾಜೆ ಗ್ರಾಮದ ದೊಡ್ಡಡ್ಕ ಗೋಪಾಲ ಹಾಗೂ ಬಾಬಿ ದಂಪತಿಯ ಪುತ್ರಿಯಾಗಿರುವ ರಶ್ಮಿತಾ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸುಳ್ಯ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುಳ್ಯದ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

error: Content is protected !!
Scroll to Top