ಬೈಕ್-ಕಾರು ಡಿಕ್ಕಿ : ಬೈಕ್ ಸವಾರ ಗಂಭೀರ

ಪುತ್ತೂರು: ಬೈಕ್ ಮತ್ತು ಕಾರು ಡಿಕ್ಕಿಯಾದ ಘಟನೆ ಇಂದು ಬೆಳಿಗ್ಗೆ ಕೊಡಿನೀರು ಎಂಬಲ್ಲಿ ನಡೆದಿದೆ. ಸವಣೂರಿನಿಂದ ಪುತ್ತೂರು ಕಡೆ ಬರುತ್ತಿದ್ದ ಬೈಕ್ ಸವಾರ ಬಾಲಕೃಷ್ಣ ಗೌಡ, ಪುತ್ತೂರಿನಿಂದ ಸುಬ್ರಹ್ಮಣ್ಯ ಕಡೆಗೆ ಬರುತ್ತಿದ್ದ ಕಾರು ನಡುವೆ ಡಿಕ್ಕಿ ಸಂಭವಿಸಿದೆ. ಅಪಘಾತದಿಂದ ಬೈಕ್ ಸವಾರನಿಗೆ ಗಂಭಿರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಕ್-ಕಾರು ಡಿಕ್ಕಿ : ಬೈಕ್ ಸವಾರ ಗಂಭೀರ Read More »

ಸಂತ ಫಿಲೋಮಿನಾ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ  ಶಿಬಿರದ ಸಮಾರೋಪ

ಪುತ್ತೂರು: ಸಂತ ಫಿಲೋಮಿನ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ  ಶಿಬಿರದ ಸಮಾರೋಪ ಸಮಾರಂಭ ಬಿಳಿಯೂರು  ದ.ಕ.ಜಿ.ಪ.ಹಿ.ಪ್ರಾ. ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ  ಅಧ್ಯಕ್ಷತೆ  ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ವಂ. ಡಾ.ಆ್ಯಂಟನಿಪ್ರಕಾಶ್ ಮೊಂತೇರೊ ಮಾತನಾಡಿ, ಈ ರೀತಿಯ ಶಿಬಿರಗಳಲ್ಲಿ ದೊರೆಯುವ  ಜೀವನಾನುಭವ ಅಮೂಲ್ಯವಾದುದು. ನಾವು ಮಾಡುತ್ತಿರುವ ಕೆಲಸವು  ಎಷ್ಟೇ  ಚಿಕ್ಕದಾಗಿದ್ದರೂ  ಅದು  ಪ್ರತಿಫಲಾಪೇಕ್ಷೆಯಿಲ್ಲದೆ  ಮಾಡುವ ಕಾರ್ಯವಾಗಿದೆ. ಒಂದು ಪುಟ್ಟ ಸಹಾಯ ಇನ್ನೊಬ್ಬರಲ್ಲೆ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡಿದಲ್ಲಿ ನಮ್ಮ ಕರ್ತವ್ಯವನ್ನು ನಾವು ಯಶಸ್ವಿಯಾಗಿ ನೆರವೇರಿಸಿದ್ದೇವೆಂದು ಅರ್ಥ. ಈ ಶಿಬಿರದ

ಸಂತ ಫಿಲೋಮಿನಾ ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ  ಶಿಬಿರದ ಸಮಾರೋಪ Read More »

ಮೇ 13: ಪುತ್ತೂರು  ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ

ಪುತ್ತೂರು: ಮಹತೋಭಾರ ಪುತ್ತೂರು  ಶ್ರೀ ಮಹಾಲಿಂಗೇಶ್ವರ  ದೇವಸ್ಥಾನದಲ್ಲಿ ಮೇ 13ರಂದು ಪ್ರತಿಷ್ಠಾ ವರ್ಧಂತ್ಯುತ್ಸವ  ನಡೆಯಲಿದೆ. ಕುಂಟಾರು  ರವೀಶ ತಂತ್ರಿಗಳ  ನೇತೃತ್ವದಲ್ಲಿ ವಿವಿಧ  ಧಾರ್ಮಿಕ  ಕಾರ್ಯಕ್ರಮ  ನಡೆಯಲಿದೆ. ರಾತ್ರಿ  7.30ಕ್ಕೆ  ದೇವರ ಬಲಿ ಹೊರಟು ಹೊರಾಂಗಣದಲ್ಲಿ ಉತ್ಸವ, ಪಲ್ಲಕ್ಕಿ ಉತ್ಸವ ಹಾಗೂ ಬಂಡಿ  ಉತ್ಸವ ಜರಗಲಿದೆ  ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಮೇ 13: ಪುತ್ತೂರು  ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ Read More »

ದಿ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಶ್ರದ್ಧಾಂಜಲಿ ಸಭೆ

ಪುತ್ತೂರು: ಹಿರಿಯ ಸಾಹಿತಿ ದಿ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅನುರಾಗ ವಠಾರದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಹಿರಿಯ ಸಾಹಿತಿ ಬಿ. ಪುರಂದರ್ ಭಟ್ ಅಗಲಿದ ದಿವ್ಯ ಚೇತನಕ್ಕೆ ನುಡಿ ನಮನ ಸಲ್ಲಿಸಿದರು. ನಿವೃತ್ತ ಶಿಕ್ಷಕರಾದ ಶ್ರೀಧರ್ ರೈ ಅಧ್ಯಕ್ಷತೆ ವಹಿಸಿದ್ದರು. ಡಾ ವರದರಾಜ ಚಂದ್ರಗಿರಿ, ನಾರಾಯಣ ರೈ ಕುಕ್ಕುವಳ್ಳಿ, ವಿಜಯಕುಮಾರ್, ಬಿ ವಿ ಸೂರ್ಯನಾರಾಯಣ, ಬಿ ಐತಪ್ಪ ನಾಯ್ಕ್ ಮುಂತಾದವರು ದಿ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರೊಂದಿಗೆನ ಒಡನಾಟದ ಅನುಭವವನ್ನು

ದಿ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಶ್ರದ್ಧಾಂಜಲಿ ಸಭೆ Read More »

ನಿರಂಜನ ಪ್ರಶಸ್ತಿಗೆ ಭಾಜನರಾದ ಪ್ರೊ ವಿ ಬಿ ಅರ್ತಿಕಜೆಯವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ : ನಿರಂಜನ ಪ್ರಶಸ್ತಿ, ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ನಿರಂಜನ ವಾನಳ್ಳಿ

ಪುತ್ತೂರು: ನಿರಂಜನ ಪ್ರಶಸ್ತಿ ಹಾಗೂ ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ವಿವೇಕಾನಂದ ಕಾಲೇಜಿನಲ್ಲಿ ನಡೆಯಿತು. ಸಾಹಿತಿ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಪ್ರೊ ವಿ ಬಿ ಅರ್ತಿಕಜೆಯವರಿಗೆ ನಿರಂಜನ ಪ್ರಶಸ್ತಿ ನೀಡಿ  ಮಾತನಾಡಿದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ವಾನಳ್ಳಿ, ಪುತ್ತೂರು ವಿವೇಕಾನಂದ ಕಾಲೇಜು ನಿರಂಜನರನ್ನು ಸದಾ ನೆನಪಿನಲ್ಲಿಟ್ಟುಕೊಂಡು ಅವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿರುವುದು ಸಮರ್ಥನೀಯ. ನಿರಂಜನರ ಕಾದಂಬರಿಗಳಿಂದ, ಅಂಕಣಗಳಿಂದ ಅಂದು ಮಾತ್ರವಲ್ಲ ಇಂದಿಗೂ ಜನ ಮನದಲ್ಲಿ  ಜೀವಂತವಾಗಿರುವವರು, ಪ್ರಗತಿ ಶೀಲರಾಗಿ ಉಚ್ಚ ಮಟ್ಟದಲ್ಲಿ

ನಿರಂಜನ ಪ್ರಶಸ್ತಿಗೆ ಭಾಜನರಾದ ಪ್ರೊ ವಿ ಬಿ ಅರ್ತಿಕಜೆಯವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ : ನಿರಂಜನ ಪ್ರಶಸ್ತಿ, ಶಂಕರ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ನಿರಂಜನ ವಾನಳ್ಳಿ Read More »

ಎಸ್‍ ಎಸ್‍ ಎಲ್‍ ಸಿ ಪರೀಕ್ಷೆಯಲ್ಲಿ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಶೇ.100 ಫಲಿತಾಂಶ

ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಹಾಜರಾದ  46 ವಿದ್ಯಾರ್ಥಿಗಳ ಪೈಕಿ 46 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100ಫಲಿತಾಂಶ ದಾಖಲಿಸಿದೆ. 4 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 10 ವಿದ್ಯಾರ್ಥಿಗಳು ಪ್ರಥಮ, 13 ವಿದ್ಯಾರ್ಥಿಗಳು ದ್ವಿತೀಯ ಹಾಗೂ 5 ವಿದ್ಯಾರ್ಥಿಗಳು  ತೃತೀಯ ಶ್ರೇಣಿಯೊಂದಿಗೆ ಉತ್ತೀರ್ಣಗೊಂಡಿದ್ದಾರೆ. ಫಾತಿಮತ್ ಅಫ್ರೀನ  519 ಅಂಕಗಳೊಂದಿಗೆ ಪ್ರಥಮ, ಪ್ರಾರ್ಥನ್ ಕೆ.  514 ಅಂಕಗಳೊಂದಿಗೆ ದ್ವಿತೀಯ ಹಾಗೂ ಫಾತಿಮತ್ ಶರೀಫ 513 ಅಂಕಗಳೊಂದಿಗೆ ತೃತೀಯ ಸ್ಥಾನ

ಎಸ್‍ ಎಸ್‍ ಎಲ್‍ ಸಿ ಪರೀಕ್ಷೆಯಲ್ಲಿ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗೆ ಶೇ.100 ಫಲಿತಾಂಶ Read More »

ಆಟೋ ರಿಕ್ಷಾ ಡಿಕ್ಕಿ : ಪಾದಚಾರಿ ಸೂರ್ಯನಾರಾಯಣ ಕಾರಂತ್ ಮೃತ್ಯು

ಪುತ್ತೂರು : ಪುತ್ತೂರು ಸಂಪ್ಯದಲ್ಲಿ  ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಪಾದಚಾರಿಯಾಗಿದ್ದ ನಿವೃತ ಗಣಿತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಕಾರಂತ (80.ವ)ರವರು ಮೃತಪಟ್ಟ ಘಟನೆ ಮೇ 9 ರಂದು ನಡೆದಿದೆ. ನಿವೃತ್ತ ಗಣಿತ ಶಿಕ್ಷಕ ಮರಿಕೆ ನಿವಾಸಿ ಸೂರ್ಯನಾರಾಯಣ ಭಟ್ (80 ವ)  ಅವರು ಪುತ್ತೂರು ಸಂಪ್ಯದಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಗರ್ಬಿಣಿಯೊಬ್ವರನ್ನು ತಿಂಗಳ ಪರೀಕ್ಷೆಗೆಂದು ಕರೆದು ಕೊಂಡು ಬರುತ್ತಿದ್ದ ಆಟೋ ರಿಕ್ಷಾವೊಂದು ಅವರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸೂರ್ಯನಾರಾಯಣ ಅವರು ರಸ್ತೆಗೆ

ಆಟೋ ರಿಕ್ಷಾ ಡಿಕ್ಕಿ : ಪಾದಚಾರಿ ಸೂರ್ಯನಾರಾಯಣ ಕಾರಂತ್ ಮೃತ್ಯು Read More »

ಪ್ರಗತಿ ಸ್ಟಡಿ ಸೆಂಟರ್‌ಗೆ ಎಸ್.ಎಸ್.ಎಲ್. ಸಿ ಯಲ್ಲಿ ಶೇ. 98 ಫಲಿತಾಂಶ

ಪುತ್ತೂರು: ಇಲ್ಲಿಯ ಧರ್ಮಸ್ಥಳ ಬಿಲ್ಡಿಂಗ್‍ ನಲ್ಲಿ ಕಾರ್ಯಾಚರಿಸುತ್ತಿರುವ  ಪ್ರಗತಿ ಸ್ಟಡಿ ಸೆಂಟರ್ ಗೆ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.98 ಫಲಿತಾಂಶ ಲಭಿಸಿದೆ. ಪರೀಕ್ಷೆ ಬರೆದ ಒಟ್ಟು 150 ವಿದ್ಯಾರ್ಥಿಗಳಲ್ಲಿ 7 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 44 ವಿದ್ಯಾರ್ಥಿಗಳು ಪ್ರಥಮ, 50 ವಿದ್ಯಾರ್ಥಿಗಳು  ದ್ವಿತೀಯ ಶ್ರೇಣಿ ಹಾಗೂ 46  ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು: ಕೆ. ಟಿ ಪ್ರಣಮ್-590, ಫಾತಿಮತ್ ಫರ್ ಹನ -572, ಐರಾ ಖಾನಮ್-560, ಸಾನಿಕಾ ರೈ-553, ಪ್ರಣಮ್

ಪ್ರಗತಿ ಸ್ಟಡಿ ಸೆಂಟರ್‌ಗೆ ಎಸ್.ಎಸ್.ಎಲ್. ಸಿ ಯಲ್ಲಿ ಶೇ. 98 ಫಲಿತಾಂಶ Read More »

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗೆ ಎಸ್.ಎಸ್.ಎಲ್.ಸಿ. ಯಲ್ಲಿ ಶೇ.100 ಫಲಿತಾಂಶ

ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆ 2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಯಲ್ಲಿ ಶೇ.100 ಫಲಿತಾಂಶ ಪಡೆದುಕೊಂಡಿದೆ. ಪರೀಕ್ಷೆಗೆ ಹಾಜರಾದ ಒಟ್ಟು 81 ವಿದ್ಯಾರ್ಥಿಗಳ ಪೈಕಿ 18 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 52 ವಿದ್ಯಾರ್ಥಿಗಳು ಪ್ರಥಮ ಹಾಗೂ 11 ವಿದ್ಯಾರ್ಥಿಗಳು  ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಪಿ.ಕೆ.ರಕ್ಷಿತ್-597(95.52ಶೇ.), ತೃಷಾ.ಕೆ.ಆರ್-578 (92.48), ದೃತಿ.ಬಿ.ಎಸ್-575 (92ಶೇ.), ಚಿನ್ಮಯಿ ಪುತ್ತಿಲ-574( 91.84ಶೇ.), ತ್ವಿಷಾ. ಎಸ್-573 (91.68ಶೇ.), ಕೌಶಿಕ್.ಕೆ-573 (91.68 ಶೇ.), ಶ್ರವಣ ಶ್ಯಾಮ.ಕೆ.ಎನ್-568 (90.88ಶೇ.),  ತನ್ವಿ. ಎಸ್.ಡಿ-558 (89.28 ಶೇ.), ಪ್ರಥಮ್.ಕೆ.ಜೆ-542

ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗೆ ಎಸ್.ಎಸ್.ಎಲ್.ಸಿ. ಯಲ್ಲಿ ಶೇ.100 ಫಲಿತಾಂಶ Read More »

ನೆಕ್ಕಿಲಾಡಿ ಆದರ್ಶನಗರ ತಿರುವು ರಸ್ತೆ ಸುಗಮ ಸಂಚಾರಕ್ಕೆ ಸಂಜೀವ ಮಠಂದೂರುರವರಿಂದ ಸೂಚನೆ

ಪುತ್ತೂರು: ಪುತ್ತೂರು-ಉಪ್ಪಿನಂಗಡಿ-ಗುರುವಾಯನಕೆರೆ ರಾಜ್ಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ನೆಕ್ಕಿಲಾಡಿ ಆದರ್ಶ ನಗರ ತಿರುವು ರಸ್ತೆಯನ್ನು ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಗುತ್ತಿಗೆದಾರ ದಯಾನಂದ ಅವರಿಗೆ ಮಾಜಿ ಶಾಸಕ ಸಂಜೀವ ಮಠಂದೂರು ಸೂಚನೆ ನೀಡಿದ್ದಾರೆ. ಈ ಕುರಿತು ಸ್ಥಳೀಯರು ಕಳೆದ ಕೆಲವು ದಿನಗಳ ಹಿಂದೆ ಬೇಡಿಕೆಯಿಟ್ಟಿದ್ದರು. ಈ ನಿಟ್ಟಿನಲ್ಲಿ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ ನೆಕ್ಕಿಲಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸದಾನಂದ ಶೆಟ್ಟಿ, ಮಾಜಿ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ ಎನ್., ಸೇವಾ ಸಹಕಾರಿ ನಿರ್ದೇಶಕ

ನೆಕ್ಕಿಲಾಡಿ ಆದರ್ಶನಗರ ತಿರುವು ರಸ್ತೆ ಸುಗಮ ಸಂಚಾರಕ್ಕೆ ಸಂಜೀವ ಮಠಂದೂರುರವರಿಂದ ಸೂಚನೆ Read More »

error: Content is protected !!
Scroll to Top