ಬಸ್-ಟ್ಯಾಂಕರ್ ಡಿಕ್ಕಿ : 19 ಮಂದಿಗೆ ಗಾಯ

ಬೆಳ್ತಂಗಡಿ: ಬಸ್ ಹಾಗೂ ಟ್ಯಾಂಕರ್ ಡಿಕ್ಕಿ ಹೊಡೆದುಕೊಂಡ ಪರಿಣಾಮ 19 ಮಂದಿ ಗಾಯಗೊಂಡ ಘಟನೆ ಬೆಳ್ತಂಗಡಿ ಮಾರಿಗುಡಿ ಬಳಿ ಇಂದು ನಡೆದಿದೆ. ಬೆಳ್ತಂಗಡಿ ಕಡೆಯಿಂದ ಗುರುವಾಯನಕೆರೆಯತ್ತ ಬರುತ್ತಿದ್ದ ವಿಶಾಲ್ ಬಸ್‍, ಎದುರಿನಿಂದ ಬರುತ್ತಿದ್ದ ಎಚ್‍.ಪಿ. ಕಂಪೆನಿಯ ಪೆಟ್ರೋಲಿಯಂ ಕಂಪೆನಿಯ ಟ್ಯಾಂಕರ್ ನಡುವೆ ಮಾರಿಗುಡಿ ಬಳಿ ಡಿಕ್ಕಿ ಸಂಭವಿಸಿದೆ. ಅಪಘಾತದಿಂದ ಎರಡೂ ವಾಹನಗಳ ಚಾಲಕರು ಸಹಿತ  ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಗಾಯಾಳುಗಳನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಿಂದ ಎರಡೂ ವಾಹನಗಳ ಮುಂಭಾಗದ ಗಾಜು ಒಡೆದು ಜಖಂಗೊಂಡಿದೆ.

ಬಸ್-ಟ್ಯಾಂಕರ್ ಡಿಕ್ಕಿ : 19 ಮಂದಿಗೆ ಗಾಯ Read More »

ಪ್ರಭಾವಿ ನಾಯಕ, ಮಾಜಿ ಶಾಸಕ ವಸಂತ ಬಂಗೇರ ನಿಧನ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕ, ಕಾಂಗ್ರೆಸ್ ಮುಖಂಡ ಬೆಳ್ತಂಗಡಿಯ ಐದು ಬಾರಿ ಶಾಸಕರಾಗಿದ್ದ ಕೆ.ವಸಂತ ಬಂಗೇರ (79) ಮೇ 8 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕೇದೆ ಸುಬ್ಬ ಪೂಜಾರಿ – ದೇವಕಿ ದಂಪತಿಯ ಪ್ರಥಮ ಪುತ್ರನಾಗಿ 1946ರ ಜನವರಿ 15ರಂದು ಜನಿಸಿದ್ದ ಅವರ ಆರೋಗ್ಯ ಇತ್ತೀಚೆಗೆ ತೀವ್ರವಾಗಿ ಹದಗೆಟ್ಟಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಅವರು ಕೊನೆಯುಸಿರೆಳೆದಿದ್ದಾರೆ. ಮೇ 9ರಂದು ಮುಂಜಾನೆ ಪಾರ್ಥಿವ ಶರೀರ

ಪ್ರಭಾವಿ ನಾಯಕ, ಮಾಜಿ ಶಾಸಕ ವಸಂತ ಬಂಗೇರ ನಿಧನ Read More »

ನಾಳೆ ವಿದ್ಯುತ್‍ ನಿಲುಗಡೆ | ಎಲ್ಲೆಲ್ಲಿ ? : ಇಲ್ಲಿದೆ ಡಿಟೈಲ್ಸ್

ಪುತ್ತೂರು: ನಿರ್ವಹಣೆ ಹಾಗೂ ತುರ್ತು ಕಾಮಗಾರಿ ನಿಮಿತ್ತ ಮೇ 9 ಗುರುವಾರ ಬೆಳಿಗ್ಗೆ 10 ರಿಂದ ಸಂಜೆ 4 ರ ತನಕ ವಿದ್ಯುತ್ ನಿಲುಗಡೆ ಮಾಡಲಾಗುವುದು. 33/11 ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಕ್ಯಾಂಪ್ಕೋ ಫ್ಯಾಕ್ಟರಿ, ಮುಕ್ವೆ, ಕೆಮ್ಮಿಂಜೆ ಹಾಗೂ ಮುಕ್ರಂಪಾಡಿ ಫೀಡರ್‍ ನಲ್ಲಿ ಮೇ 9 ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11 ಕೆವಿ ಕ್ಯಾಂಪ್ಕೋ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ ನಿಂದ ವಿದ್ಯುತ್ ಸರಬರಾಜಾಗುವ ಮುಕ್ವೆ, ಮುಂಡೂರು, ಕೆಮ್ಮಿಂಜೆ, ದರ್ಬೆ,

ನಾಳೆ ವಿದ್ಯುತ್‍ ನಿಲುಗಡೆ | ಎಲ್ಲೆಲ್ಲಿ ? : ಇಲ್ಲಿದೆ ಡಿಟೈಲ್ಸ್ Read More »

ಕನ್ನಡ ಓದಲು, ಬರೆಯಲು ಬಾರದವನಿಗೆ ನ್ಯಾಯಾಲಯದಲ್ಲಿ ಜವಾನ ಹುದ್ದೆ : ನ್ಯಾಯಾಧೀಶರಿಂದ ಸ್ವಯಂಪ್ರೇರಿತ‌ ಪ್ರಕರಣ ದಾಖಲು

ಕೊಪ್ಪಳ : ಕನ್ನಡ ಸರಿಯಾಗಿ ಓದಲು ಮತ್ತು ಬರೆಯಲು ಬಾರದಿದ್ದರೂ ಒಬ್ಬ 625ರಲ್ಲಿ 622 ಅಂಕ ಪಡೆದಿದ್ದ.  ಅಂಕಗಳ ಆಧಾರದಲ್ಲಿ ನ್ಯಾಯಾಲಯದ ಜವಾನ ಹುದ್ದೆಗೆ ಆಯ್ಕೆಯಾಗಿದ್ದ.ಈ ಬಗ್ಗೆ ಆತನ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುವಂತೆ ಕೊಪ್ಪಳ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ಕೊಪ್ಪಳ ಸಿವಿಲ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ  ಶ್ರೀ. ಎಂ ಹರೀಶ್ ಕುಮಾರ್ ರವರ ದಿಟ್ಟತನದ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ

ಕನ್ನಡ ಓದಲು, ಬರೆಯಲು ಬಾರದವನಿಗೆ ನ್ಯಾಯಾಲಯದಲ್ಲಿ ಜವಾನ ಹುದ್ದೆ : ನ್ಯಾಯಾಧೀಶರಿಂದ ಸ್ವಯಂಪ್ರೇರಿತ‌ ಪ್ರಕರಣ ದಾಖಲು Read More »

ಚಲನಚಿತ್ರದ ಮೂಲಕ ಪ್ರಭು ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥದ ಅಪಮಾನ | ‘ರಾಮನ ಅವತಾರ’ ಚಲನಚಿತ್ರ ನಿಷೇಧಿಸಲು ಆಗ್ರಹ

ಬೆಂಗಳೂರು : ವಿನಯ ಪಂಪಾಪತಿ ಮತ್ತು ವಿಕಾಸ ಪಂಪಾಪತಿ ನಿರ್ದೇಶನದ ಹಾಗೂ ಅಮ್ರೆಜ್ ಸೂರ್ಯವಂಶಿ ನಿರ್ಮಾಣದ ‘ರಾಮನ ಅವತಾರ’ಕನ್ನಡ ಚಲನಚಿತ್ರ ಮೇ 10 ರಂದು ಬಿಡುಗಡೆಗೊಳ್ಳಲಿದ್ದು ಅದರ ಟೀಸರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಲನಚಿತ್ರದಲ್ಲಿ ಕೋಟ್ಯಾಂತರ ಹಿಂದೂಗಳು ಅತ್ಯಂತ ಭಕ್ತಿಯಿಂದ ಪೂಜಿಸುವ ಪ್ರಭು ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥದ ಅಪಮಾನ ಮಾಡಲಾಗಿದೆ. ಆದ್ದರಿಂದ ಸಿನಿಮಾದ ಹೆಸರನ್ನು ಬದಲಾಯಿಸಬೇಕು ಮತ್ತು ಅದರಲ್ಲಿನ ರಾಮಾಯಣದ ಅಪಮಾನಾತ್ಮಕ ಸನ್ನಿವೇಶಗಳನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯ ಶರತ್ ಕುಮಾರ್ ಕರ್ನಾಟಕ

ಚಲನಚಿತ್ರದ ಮೂಲಕ ಪ್ರಭು ಶ್ರೀ ರಾಮಚಂದ್ರ ಮತ್ತು ರಾಮಾಯಣ ಧರ್ಮಗ್ರಂಥದ ಅಪಮಾನ | ‘ರಾಮನ ಅವತಾರ’ ಚಲನಚಿತ್ರ ನಿಷೇಧಿಸಲು ಆಗ್ರಹ Read More »

ಮೇ 9: ಎಸ್‌ ಎಸ್‌ ಎಲ್ ಸಿ ಫಲಿತಾಂಶ ಪ್ರಕಟ

ಬೆಂಗಳೂರು : 2023-24 ನೇ ಶೈಕ್ಷಣಿಕ ವರ್ಷದ  ಎಸ್‌ ಎಸ್‌ ಎಲ್ ಸಿ ಫಲಿತಾಂಶದ ದಿನಾಂಕ ಸಾರ್ವಜನಿಕ ಶಿಕ್ಷಣ ಇಲಾಖೆ ಘೋಷಿಸಿದೆ. ಮಾರ್ಚ್ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ 2023-24ನೇ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶವು ಮೇ 9ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆಗಳು ಹಾಗೂ ಮೌಲ್ಯಮಾಪನ ಮಂಡಳಿ ಅಧ್ಯಕ್ಷೆ ಎನ್.ಮಂಜುಶ್ರೀ ತಿಳಿಸಿದ್ದಾರೆ. ಮೇ.9ರಂದು ಬೆಳಿಗ್ಗೆ 10.30 ಕ್ಕೆ ಆನ್ ಲೈನ್ ನಲ್ಲಿ ಫಲಿತಾಂಶ ಘೋಷಣೆಯಾಗಲಿದೆ ಎಂದು ಇಲಾಖೆ ಘೋಷಿಸಿದೆ. ಲಕ್ಷಾಂತರ ವಿದ್ಯಾರ್ಥಿಗಳು ಈ

ಮೇ 9: ಎಸ್‌ ಎಸ್‌ ಎಲ್ ಸಿ ಫಲಿತಾಂಶ ಪ್ರಕಟ Read More »

ಮೇ 10 : ಎಂ.ಸಂಜೀವ ಶೆಟ್ಟಿ ಸಾರೀಸ್ & ರೆಡಿಮೇಡ್ಸ್ ನೂತನ ಮಳಿಗೆ ಶುಭಾರಂಭ

ಪುತ್ತೂರು: ಖ್ಯಾತ ವಸ್ತ್ರ ಮಳಿಗೆ ಎಂ. ಸಂಜೀವ ಶೆಟ್ಟಿ ಸಾರೀಸ್ & ರೆಡಿಮೇಡ್ಸ್ ನೂತನ ಮಳಿಗೆ ದರ್ಬೆ ವೃತ್ತದ ಬಳಿ ಮೇ 10 ಶುಕ್ರವಾರ ಅಕ್ಷಯ ತೃತೀಯದಂದು ಶುಭಾರಂಭಗೊಳ್ಳಲಿದೆ. ಕಳೆದ 80 ವರ್ಷಗಳಿಂದ ವಸ್ತ್ರ ವ್ಯಾಪಾರದಲ್ಲಿ ತನ್ನ ಛಾಪನ್ನು ಜನಮಾನಸದಲ್ಲಿ ಮೂಡಿಸಿರುವ ಸಂಸ್ಥೆ ಪುತ್ತೂರಲ್ಲದೆ ಹತ್ತೂರಿನಲ್ಲಿ ಪ್ರಸಿದ್ಧಿ ಪಡೆದಿದೆ. ದರ್ಬೆ ವೃತ್ತದ ಬಳಿ ಶುಭಾರಂಭಗೊಳ್ಳಲಿರುವ ಮಳಿಗೆಯಲ್ಲಿ ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ಶುಭಾರಂಭಗೊಳ್ಳುತ್ತಿದೆ.

ಮೇ 10 : ಎಂ.ಸಂಜೀವ ಶೆಟ್ಟಿ ಸಾರೀಸ್ & ರೆಡಿಮೇಡ್ಸ್ ನೂತನ ಮಳಿಗೆ ಶುಭಾರಂಭ Read More »

ಸಮುದ್ರ ಪಾಲಾಗುತ್ತಿದ್ದ ಇಬ್ಬರ ರಕ್ಷಣೆ

ಮಂಗಳೂರು: ಸಮುದ್ರದಲ್ಲಿ ಬೆಳ್ಳಂಬೆಳಿಗ್ಗೆ ಸಮುದ್ರ ಪಾಲಾಗುತ್ತಿದ್ದ ಇಬ್ಬರು ಯುವಕರನ್ನು ರಕ್ಷಣೆ ಮಾಡಿದ ಘಟನೆ ಉಡುಪಿ ತಾಲೂಕಿನ ಮಲ್ಪೆ ಸಮೀಪದ ತೊಟ್ಟಂನಲ್ಲಿ ನಡೆದಿದೆ. ಬಳ್ಳಾರಿಯ ಕೊಟ್ಟೂರು ತಾಲೂಕಿನಿಂದ ಬಂದಿದ್ದ ಯುವಕರ ತಂಡವೊಂದು ಇಂದು ಬೆಳಿಗ್ಗೆ ನೀರಿನಲ್ಲಿ ಆಟವಾಡಲು ಸಮುದ್ರಕ್ಕಿಳಿದಿತ್ತು. ಈ ವೇಳೆ ಯುವಕರ ತಂಡವು ರಕ್ಕಸ ಗಾತ್ರದ ಅಲೆಗೆ ಸಿಲುಕಿ ಒದ್ದಾಡುತ್ತಿತ್ತು. ತಕ್ಷಣ ಅಪಾಯವನ್ನು ಗಮನಿಸಿದ ಲೈಫ್ ಗಾರ್ಡ್ ಸಿಬ್ಬಂದಿ, ಗೋಪಿನಾಥ್ (25) ಮತ್ತು ರಂಗನಾಥ್ (26) ಎಂಬ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಿದ್ದಾರೆ.  ಮಲ್ಪೆ ಪೊಲೀಸ್ ಠಾಣಾ

ಸಮುದ್ರ ಪಾಲಾಗುತ್ತಿದ್ದ ಇಬ್ಬರ ರಕ್ಷಣೆ Read More »

ಕೆದಂಬಾಡಿ ಗ್ರಾ.ಪಂ. ಸದಸ್ಯ ಭಾಸ್ಕರ ರೈ ಮಿತ್ರಂಪಾಡಿ ನಿಧನ

ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಭಾಸ್ಕರ ರೈ ಮಿತ್ರಂಪಾಡಿಯವರು ನಿಧನರಾದರು. ಬಂಟ್ವಾಳ ಅರ್ಕುಳದಲ್ಲಿರುವ ತನ್ನ ಅತ್ತೆ ಮನೆಯಲ್ಲಿ ಮೇ.7 ರಂದು ರಾತ್ರಿ ನಿಧನರಾದರು. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕೆದಂಬಾಡಿ ಗ್ರಾ.ಪಂ. ಸದಸ್ಯ ಭಾಸ್ಕರ ರೈ ಮಿತ್ರಂಪಾಡಿ ನಿಧನ Read More »

ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಖ್ಯಾತ ಜನರಲ್ ಫಿಸಿಷಿಯನ್ ಡಾ.ಸ್ವಾತಿ ಆರ್ ಭಟ್ ಸೇವೆಗೆ ಲಭ್ಯ

ಪುತ್ತೂರು: ಪುರುಷರಕಟ್ಟೆಯಲ್ಲಿರುವ ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಪುತ್ತೂರಿನ ಖ್ಯಾತ ಜನರಲ್ ಫಿಸಿಷಿಯನ್, ಮಧುಮೇಹ ಹಾಗೂ ಹೃದ್ರೋಗ ತಜ್ಞೆ ಡಾ.ಸ್ವಾತಿ. ಆರ್ ಭಟ್ ಸೇವೆಗೆ ಲಭ್ಯರಿದ್ದಾರೆ. ಸೋಮವಾರದಿಂದ ಶನಿವಾರದ ತನಕ ಬೆಳಿಗ್ಗೆ 9 ಗಂಟೆಯಿಂದ 10ರ ತನಕ ಸೇವೆಗೆ ಲಭ್ಯರಿರುತ್ತಾರೆ. ಪುತ್ತೂರಿನ ಮುಕ್ವೆ ನಿವಾಸಿ ನಿವೃತ್ತ ಮಣೆಗಾರರಾದ ರಾಮಚಂದ್ರ ಭಟ್ ಮತ್ತು ಲಕ್ಷ್ಮೀ.ಆರ್.ಭಟ್ ದಂಪತಿ ಸುಪುತ್ರಿಯಾದ ಸ್ವಾತಿ ಎ.ಜೆ. ಇನ್ಸ್ಟಿಟ್ಯೂಟ್ ಒಫ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ಮಂಗಳೂರಿನಲ್ಲಿ ತಮ್ಮ ಎಂ.ಬಿ.ಬಿ.ಎಸ್ ಪದವಿ ಮುಗಿಸಿ ವೈದ್ಯಕೀಯ

ಆತ್ರೇಯ ಮಲ್ಟಿ ಸ್ಪೆಷಾಲಿಟಿ ಕ್ಲಿನಿಕ್ ನಲ್ಲಿ ಖ್ಯಾತ ಜನರಲ್ ಫಿಸಿಷಿಯನ್ ಡಾ.ಸ್ವಾತಿ ಆರ್ ಭಟ್ ಸೇವೆಗೆ ಲಭ್ಯ Read More »

error: Content is protected !!
Scroll to Top