ಖತರ್‌ನಾಕ್‌ ಹನಿಟ್ರ್ಯಾಪ್‌ ಗ್ಯಾಂಗ್‌ ಬಂಧನ

ಆನ್‌ಲೈನ್‌ನಲ್ಲಿ ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ ಬೆಂಗಳೂರು : ಆನ್‌ಲೈನ್‌ನಲ್ಲಿ ಹನಿಟ್ರ್ಯಾಪ್‌ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಗಾಂಗನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಮೋಹದ ಬಲೆಗೆ ಬೀಳಿಸಿ ಸುಲಿಗೆ ಮಾಡುತ್ತಿದ್ದ ಗ್ಯಾಂಗ್‌ನ ಇಬ್ಬರು ಯುವತಿಯರು ಸೇರಿ ಐವರನ್ನು ಆರ್‌ ಆರ್‌ ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸುಮಲತಾ ಅಲಿಯಾಸ್ ಅಂಜಲಿ (28), ಹರ್ಷಿಣಿ ಅಲಿಯಾಸ್ ಸ್ವೀಟಿ (26) ಹಾಗೂ ಅವರ ಸಹಚರರಾದ ಜಗದೀಶ್ (35), ಮಂಜುನಾಥ್ (30) ಮತ್ತು ಲೋಕೇಶ್ (32) ಎಂದು ಗುರುತಿಸಲಾಗಿದೆ. ಸಾಫ್ಟ್‌ವೇರ್ […]

ಖತರ್‌ನಾಕ್‌ ಹನಿಟ್ರ್ಯಾಪ್‌ ಗ್ಯಾಂಗ್‌ ಬಂಧನ Read More »

ಪ್ರಿಯಾಂಕಾ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಮಾಡಿ : ಪತಿ ರಾಬರ್ಟ್‌ ವಾದ್ರಾ ಆಗ್ರಹ

ಕಾಂಗ್ರೆಸ್‌ನಲ್ಲಿ ಪ್ರಿಯಾಂಕಾ ಗಾಂಧಿ ಪರ ಬ್ಯಾಟ್‌ ಬೀಸುವವರ ಸಂಖ್ಯೆ ಹೆಚ್ಚಳ ನವದೆಹಲಿ: ಕಾಂಗ್ರೆಸ್‌ನಲ್ಲಿ ಪ್ರಿಯಾಂಕ ಗಾಂಧಿಗೆ ಪ್ರಮುಖ ಹುದ್ದೆ ನೀಡಬೇಕೆಂದು ಒತ್ತಾಯಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಚಳಿಗಾಲದ ಅಧಿವೇಶನದ ಬಳಿಕ ರಾಹುಲ್‌ ಗಾಂಧಿಗಿಂತ ಪ್ರಿಯಾಂಕ ಗಾಂಧಿಯೇ ಪಕ್ಷ ಮುನ್ನಡೆಸಲು ಸಮರ್ಥ ನಾಯಕಿ ಎಂಬ ಅಭಿಪ್ರಾಯ ಬಹಿರಂಗವಾಗಿ ವ್ಯಕ್ತವಾಗಲಾರಂಭಿಸಿದೆ. ಕಾಂಗ್ರೆಸ್‌ ಸಂಸದ ಇಮ್ರಾನ್ ಮಸೂದ್ ಕೆಲದಿನಗಳ ಹಿಂದೆಯಷ್ಟೇ ಪ್ರಿಯಾಂಕಾ ಗಾಂಧಿ ವಾದ್ರಾ ಪರ ಬ್ಯಾಟಿಂಗ್‌ ಮಾಡಿದ್ದರು. ಇದೀಗ ಪತಿ ರಾಬಾರ್ಟ್‌ ವಾದ್ರಾ ಅವರು ಪತ್ನಿಯ ಪರ ವಹಿಸಿ ಮಾತನಾಡಿ

ಪ್ರಿಯಾಂಕಾ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಮಾಡಿ : ಪತಿ ರಾಬರ್ಟ್‌ ವಾದ್ರಾ ಆಗ್ರಹ Read More »

ಕೊಲೆ ಪ್ರಕರಣ : ಶಾಸಕ ಬೈರತಿ ಬಸವರಾಜ್‌ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ

ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿರುವ ಶಾಸಕ ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಜಾರಿಮಾಡಿದ್ದಾರೆ. ಹೀಗಾಗಿ ಬೈರತಿಗೆ ಬಂಧನ ಭೀತಿ ಹೆಚ್ಚಾಗಿದ್ದು, ಯಾವುದೇ ಕ್ಷಣದಲ್ಲಿ ಅರೆಸ್ಟ್ ಮಾಡುವ ಸಾಧ್ಯತೆಯಿದೆ. ಕಳೆದ ಐದು ದಿನಗಳಿಂದ ಬೈರತಿ ಬಸವರಾಜ್ ನಾಪತ್ತೆಯಾಗಿದ್ದು, ಮಹಾರಾಷ್ಟ್ರ ತಮಿಳುನಾಡು, ಗೋವಾದಲ್ಲಿ ಮೂರು ವಿಶೇಷ ತಂಡಗಳು ಹುಡುಕಾಟ ನಡೆಸಿವೆ. ನಿರೀಕ್ಷಣಾ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಬೈರತಿ ಬಸವರಾಜ್‌ಗೆ ಕೋರ್ಟ್

ಕೊಲೆ ಪ್ರಕರಣ : ಶಾಸಕ ಬೈರತಿ ಬಸವರಾಜ್‌ ವಿರುದ್ಧ ಲುಕ್‌ಔಟ್‌ ನೋಟಿಸ್‌ ಜಾರಿ Read More »

ಷೇರು ಮಾರ್ಕೆಟಿಂಗ್ ಹೂಡಿಕೆಯ ನೆಪದಲ್ಲಿ 85.68 ಲ.ರೂ. ಮೋಸ

ಮಂಗಳೂರು : ಷೇರು ಮಾರ್ಕೆಟಿಂಗ್ ಹೂಡಿಕೆಯ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಆನ್‌ಲೈನ್ ಮೂಲಕ ಬರೋಬ್ಬರಿ 85,68,387 ರೂ. ವಂಚನೆ ಮಾಡಿರುವ ಪ್ರಕರಣವೊಂದು ಮಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಈ ಕುರಿತು ಸೆನ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ, ಪ್ರಸ್ತುತ ನಿರುದ್ಯೋಗಿಯಾಗಿರುವ ವ್ಯಕ್ತಿ ಮೋಸ ಹೋಗಿದ್ದಾರೆ. ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ಷೇರು ಮಾರುಕಟ್ಟೆ ಆನ್‌ಲೈನ್ ಟ್ರೇಡಿಂಗ್ ಕ್ಲಾಸ್‌ಗೆ ಲಿಂಕ್ ಮೂಲಕ ಸೇರ್ಪಡೆಗೊಂಡೆ. ಅ.31ರಂದು ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ತನ್ನ ಮೊಬೈಲ್ ನಂಬರ್ ಸೇರ್ಪಡೆಯಾಗಿದೆ. ಬಳಿಕ ಗ್ರೂಪ್‌ನಲ್ಲಿದ್ದ ಕಾವ್ಯ ಎಂಬಾಕೆ ಅಸಿಸ್ಟೆಂಟ್ ಆಗಿ

ಷೇರು ಮಾರ್ಕೆಟಿಂಗ್ ಹೂಡಿಕೆಯ ನೆಪದಲ್ಲಿ 85.68 ಲ.ರೂ. ಮೋಸ Read More »

ಪತಿಯನ್ನು ಕೊಂದರೂ ಪತ್ನಿ ಅಪರಾಧಿಯಲ್ಲ!

ಕೊಲೆ ಪ್ರಕರಣದಲ್ಲಿ ಮಹಿಳೆಯನ್ನು ಖುಲಾಸೆಗೊಳಿಸಿದ ನ್ಯಾಯಾಲಯ ಮಂಗಳೂರು : ಪತಿಯನ್ನು ಪತ್ನಿಯೇ ಕೊಂದಿರುವುದು ಸಾಬೀತಾಗಿದ್ದರೂ ನ್ಯಾಯಾಲಯ ಪತ್ನಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಹೀಗೊಂದು ಅಪರೂಪದ ತೀರ್ಪು ನೀಡಿರುವುದು ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ. ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ನಡೆದ ಪತಿ ಹತ್ಯೆ ಪ್ರಕರಣದಲ್ಲಿ ಈ ಅಪರೂಪದ ನ್ಯಾಯಾಂಗ ನಿರ್ಣಯ ಹೊರಬಿದ್ದಿದೆ. ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮೋಹನ ಜೆ.ಎಸ್. ಅವರು, ಆರೋಪಿಯಾದ ಎಲಿಯಮ್ಮ ಎಂಬವರು ಗಂಡನನ್ನು ಕೊಂದಿರುವುದು ಸಾಬೀತಾದರೂ,

ಪತಿಯನ್ನು ಕೊಂದರೂ ಪತ್ನಿ ಅಪರಾಧಿಯಲ್ಲ! Read More »

ಅ. ಕ. ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್: ಚತುರ್ಥ ವಾರ್ಷಿಕೋತ್ಸವ

ಮೇಲ್ಕಾರ್: ಬದುಕಿನಲ್ಲಿ ಚಿಂತನೆಯಿಂದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಸಾಧ್ಯ. ಜ್ಞಾನ ಸಂಪನ್ನರಾದ ಹಿರಿಯರ ಚಿಂತನೆಗಳನ್ನು ಕಿರಿಯರು ಪಾಲಿಸಿಕೊಂಡು ಬಂದರೆ ಸಮಾಜದಲ್ಲಿ ನೆಮ್ಮದಿಯ ಬದುಕನ್ನು ಕಾಣಲು ಸಾಧ್ಯವಿದೆ ಎಂದು ಕೇಮಾರು ಶ್ರೀ ಈಶ ವಿಠಲ ದಾಸ ಸ್ವಾಮೀಜಿ ತಿಳಿಸಿದರು. ಪಾವಂಜೆ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಅ. ಕ. ಹಿರಿಯರ ಸೇವಾ ಪ್ರತಿಷ್ಠಾನದ ನಾಲ್ಕನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಕೆಯ್ಯೂರು ನಾರಾಯಣ ಭಟ್ ಮಾತನಾಡಿ,

ಅ. ಕ. ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರ್: ಚತುರ್ಥ ವಾರ್ಷಿಕೋತ್ಸವ Read More »

ಭಜನೆಯಿಂದ ಸಂಸ್ಕಾರ ಬೆಳೆಯುತ್ತದೆ, ಮನೆ ಮನ ಬೆಳಗುತ್ತದೆ : ರಾಧಾಕೃಷ್ಣ ಅಡ್ಯಂತಾಯ

ವಿಟ್ಲ: ಭಜನಾ ಮಂದಿರ, ದೇವಸ್ಥಾನಗಳಲ್ಲಿ ಭಜನಾ ಕಾರ್ಯಕ್ರಮ ಮಾಡುವುದರ ಜೊತೆಗೆ ಪ್ರತಿ ಮನೆಯಲ್ಲೂ ನಿರಂತರ ಭಜನೆ ನಡೆಯಬೇಕು. ವ್ಯಕ್ತಿ ನಿರ್ಮಾಣ ಶಿಕ್ಷಣ ದೊರೆತಲ್ಲಿ ಮನುಷ್ಯನ ಮನಸ್ಸು ಚಂಚಲಗೊಳ್ಳುವುದಿಲ್ಲ. ಅದಕ್ಕಾಗಿ ಧಾರ್ಮಿಕ ಶಿಕ್ಷಣ ಅತ್ಯಗತ್ಯ. ಇಂತಹ ಕಾರ್ಯಕ್ರಮಗಳು ಬಹಳಷ್ಟು ಪ್ರೇರಣೆ ನೀಡುತ್ತಿದ್ದು ಭಜನಾ ಪರಿಷತ್ತಿನ ಕಾರ್ಯ ಚಟುವಟಿಕೆಗಳು ಶ್ಲಾಘನೀಯ ಎಂದು ನಿವೃತ್ತ ಅಧ್ಯಾಪಕ ರಾಧಾಕೃಷ್ಣಾಯ ಅಡ್ಯಂತಾಯ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ. ಸಿ. ಟ್ರಸ್ಟ್( ರಿ) ವಿಟ್ಲ ತಾಲ್ಲೂಕು ಅಳಿಕೆ ವಲಯ ,ಶ್ರೀ ಧರ್ಮಸ್ಥಳ

ಭಜನೆಯಿಂದ ಸಂಸ್ಕಾರ ಬೆಳೆಯುತ್ತದೆ, ಮನೆ ಮನ ಬೆಳಗುತ್ತದೆ : ರಾಧಾಕೃಷ್ಣ ಅಡ್ಯಂತಾಯ Read More »

ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ : ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಅನಾವರಣ

ಸುಳ್ಯ: ಎನ್.ಎಸ್.ಎಸ್ ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ ಇದರ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮ ತಾಲೂಕಿನ ಸ. ಹಿ. ಪ್ರಾಥಮಿಕ ಶಾಲೆ, ಮುಳ್ಯ ಅಟ್ಲೂರಿನಲ್ಲಿ ನಡೆಯಿತು. ಟ್ರಸ್ಟ್‌ನ ಗೌರವ ಅಧ್ಯಕ್ಷ ಬಾಲಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಗೌರವ ಸಲಹೆಗಾರ ಫಾಲಚಂದ್ರ ವೈ.ವಿ, ಸಲಹಾ ಸಮಿತಿ ಸದಸ್ಯೆೋೋ ಡಾ. ಅನುರಾಧಾ ಕುರುಂಜಿ, ಸ್ಥಳೀಯ ಸಮಿತಿಯ ಗೌರವ ಸಂಚಾಲಕ ಶಿವರಾಮ್ ಕೇನಾಜೆ, ಸಂಚಾಲಕ ನಾಗರಾಜ್ ಮುಳ್ಯ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಿರಣ್ ಅಟ್ಲೂರು, ಶಾಲಾ

ಎನ್.ಎಸ್.ಎಸ್. ಸೇವಾ ಸಂಗಮ ಟ್ರಸ್ಟ್ (ರಿ.), ಸುಳ್ಯ : ದಶಮಾನೋತ್ಸವದ ಆಮಂತ್ರಣ ಪತ್ರಿಕೆ ಅನಾವರಣ Read More »

ಮಲ್ಪೆ ಸಮುದ್ರದಲ್ಲಿ ಸಿಕ್ಕಿದ ದೇವರ ವಿಗ್ರಹ : ವಿಡಿಯೋ ವೈರಲ್‌

ಇಸ್ಕಾನ್‌ ಅನುಯಾಯಿಗಳಿಗೆ ಸಿಕ್ಕಿದ ವಿಗ್ರಹ ಕುರಿತು ನಾನಾ ವದಂತಿ ಉಡುಪಿ: ಇಲ್ಲಿನ ಮಲ್ಪೆ ಕಡಲ ತೀರದಲ್ಲಿ ಭಾನುವಾರ ದೇವರ ವಿಗ್ರಹವೊಂದು ಸಮುದ್ರದಲ್ಲಿ ಸಿಕ್ಕಿ ಭಾರಿ ಕುತೂಹಲ ಕೆರಳಿಸಿದೆ. ಕೃಷ್ಣನೂರಿಗೆ ಸಾಕ್ಷಾತ್‌ ಕೃಷ್ಣನ ವಿಗ್ರಹವೇ ತೇಲಿ ಬಂದಿದೆ ಎಂದು ಭಾವಿಸಿ ಜನ ಸಂಭ್ರಮಿಸಿದ್ದಾರೆ. ಇದು ದೇವರ ಮಹಿಮೆ ಸಾವಿರಾರು ಜನ ವಿಗ್ರಹ ನೋಡಲು ಧಾವಿಸಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ. ಮಲ್ಪೆಯಲ್ಲಿ ಪವಾಡ ಸಂಭವಿಸಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಭಾನುವಾರ ಉಡುಪಿ ಕೃಷ್ಣಮಠದಲ್ಲಿ ಇಸ್ಕಾನ್

ಮಲ್ಪೆ ಸಮುದ್ರದಲ್ಲಿ ಸಿಕ್ಕಿದ ದೇವರ ವಿಗ್ರಹ : ವಿಡಿಯೋ ವೈರಲ್‌ Read More »

ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಸ್ಕೂಟರ್‌ ಸವಾರನಿಗೆ ಗಂಭೀರ ಗಾಯ

ಡಿಕ್ಕಿ ಹೊಡೆದು ಪರಾರಿಯಾಗಿರುವ ಅಪರಿಚಿತ ವಾಹನ ಬಂಟ್ವಾಳ : ಅಪರಿಚಿತ ವಾಹನವೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಮಲ್‌ಕಟ್ಟೆ ಎಂಬಲ್ಲಿ ನಡೆದಿದೆ. ಗಾಯಗೊಂಡವರು ರಾಮಲ್‌ಕಟ್ಟೆ ನಿವಾಸಿ ಉಸ್ಮಾನ್ ಎಂದು ತಿಳಿದುಬಂದಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸ್ಮಾನ್ ಅವರು ಅಂಗಡಿಯಿಂದ ಹಾಲು ತೆಗೆದುಕೊಂಡು ಮನೆಗೆ ಹೋಗುವ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸಂಪೂರ್ಣ ಜಖಂಗೊಂಡಿದ್ದು, ಸವಾರ ಉಸ್ಮಾನ್ ಅವರಿಗೆ ಗಂಭೀರ ಸ್ವರೂಪದ

ಬಂಟ್ವಾಳ : ಹಿಟ್‌ & ರನ್‌ ಅಪಘಾತದಲ್ಲಿ ಸ್ಕೂಟರ್‌ ಸವಾರನಿಗೆ ಗಂಭೀರ ಗಾಯ Read More »

error: Content is protected !!
Scroll to Top