ಕರೆಂಟ್ ಶಾಕ್‌ ಹೊಡೆದು ಇಬ್ಬರು ಸಾವು

ತೆಲಂಗಾಣ: ಕಬ್ಬಿಣದ ಸ್ಟ್ಯಾಂಡ್ ಹಿಡಿದು ಹೋಗುತ್ತಿದ್ದ ಇಬ್ಬರಿಗೆ ಕರೆಂಟ್ ಶಾಕ್ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಚ ಘಟನೆ ಮೇದರೀಪೇಟೆ ಎಂಬಲ್ಲಿ ನಡೆದಿದೆ. ಸಲ್ಲಾ ‌ಲಕ್ಷ್ಮೀನಾರಾಯಣ ಮತ್ತು ಚಂದನಗರಿಯ ನಾಗರಾಜು ಎಂಬವರೇ ಮೃತ ದುರ್ದೈವಿಗಳು. ಮಂಚೇರಿಯಲ್ ಜಿಲ್ಲೆಯ ಪೆಟ್ರೋಲ್ ಬಂಕ್ ಒಂದರ ಸಮೀಪ ಈ ದುರಂತ ಸಂಭವಿಸಿದೆ. ಮೂವರು ಕೂಲಿ ಕಾರ್ಮಿಕರು ಎತ್ತರವಾದ ಕಬ್ಬಿಣದ ಸ್ಟಾಂಡ್ ಅನ್ನು ಸಾಗಿಸುತ್ತಿದ್ದರು. ಆ ಸ್ಟ್ಯಾಂಡ್ ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ ಪರಿಣಾಮ ಇಬ್ಬರು ಕಾರ್ಮಿಕರು ಸುಟ್ಟು ಕರಕಲಾಗಿದ್ದಾರೆ. ಜೊತೆಗಿದ್ದ ಮತ್ತೊಬ್ಬ ವ್ಯಕ್ತಿ ಅದೃಷ್ಟವಶಾತ್ […]

ಕರೆಂಟ್ ಶಾಕ್‌ ಹೊಡೆದು ಇಬ್ಬರು ಸಾವು Read More »

ಚಾಲಕನ ನಿಯಂತ್ರಣ ತಪ್ಪಿ ಕಾರು ಕಂಬಕ್ಕೆ ಡಿಕ್ಕಿ

ಸುಳ್ಯ: ನಿನ್ನೆ ರಾತ್ರಿ ದೊಡ್ಡತೋಟ ಬಳಿಯ ಕಾಸಿನಗೋಡ್ಲು ತಿರುವಿನಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಕಾರಿಗೆ ಸ್ವಲ್ಪ ಮಟ್ಟಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಕಾರು ಮಾವಿನಕಟ್ಟೆಯಿಂದ ಸುಳ್ಯದತ್ತ ಬರುತ್ತಿರುವ ಸಮಯದಲ್ಲಿ ಈ ದುರಂತ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಕಾರು ಕಂಬಕ್ಕೆ ಡಿಕ್ಕಿ Read More »

ಕರೆಂಟ್ ಶಾಕ್‌ನಿಂದ ವಿದ್ಯಾರ್ಥಿ ಸಾವು: ಶವವನ್ನು ನೀರಿಗೆಸೆದ ‌ಸ್ನೇಹಿತರು

ರಾಯಚೂರು: ಕರೆಂಟ್ ಶಾಕ್‌ನಿಂದ 9 ನೇ ತರಗತಿಯ ಬಾಲಕನೊಬ್ಬ ಮೃತಪಟ್ಚ ಘಟನೆ ನಡೆದಿದ್ದು, ಸ್ನೇಹಿತರು ಆತನ ಶವವನ್ನು ಕೆರೆಗೆಸೆದ ಘಟನೆ ನಡೆದಿದೆ. ಮೃತನನ್ನು ಗುಂಡಸಾಗರ ‌ಗ್ರಾಮದ ಕಾರ್ತಿಕ್(15) ಎಂದು ಗುರುತಿಸಲಾಗಿದೆ. ಕಾರ್ತಿಕ್ ಓದುತ್ತಿದ್ದ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ಆ ಕಾರ್ಯಕ್ರಮಕ್ಕೆ ಹೊಸ ಬಟ್ಟೆ ಖರೀದಿ ಮಾಡಲು ಹತ್ತನೇ ತರಗತಿಯ ತನ್ನ ಇಬ್ಬರು ಸ್ನೇಹಿತರ ಜೊತೆಗೆ ಹೋಗಿದ್ದ. ದಾರಿ ಮಧ್ಯೆ ನೀರು ಕುಡಿಯಲು ಬಾವಿಯೊಂದರ ಸಮೀಪ ಹೋಗಿದ್ದು, ಕರೆಂಟ್ ಶಾಕ್ ತಗುಲಿ ಮೃತಪಟ್ಟಿದ್ದಾನೆ.

ಕರೆಂಟ್ ಶಾಕ್‌ನಿಂದ ವಿದ್ಯಾರ್ಥಿ ಸಾವು: ಶವವನ್ನು ನೀರಿಗೆಸೆದ ‌ಸ್ನೇಹಿತರು Read More »

ಅಪ್ರಾಪ್ತ‌ನಿಂದ ಯುವಕನ ಹತ್ಯೆ: ಯುವತಿಯ ವಿಷಯಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ಬಾಗಲಕೋಟೆ: ಯುವತಿಯೊಬ್ಬಳ‌ ವಿಷಯದಲ್ಲಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ನಡೆದಿದೆ. ಅಪ್ರಾಪ್ತ ಯುವಕ ಆರೋಪಿಯಾಗಿದ್ದು, ರಾಹುಲ್ ಎಂಬಾತನೇ ಕೊಲೆಯಾದ ದುರ್ದೈವಿ. ಯುವತಿಯ ವಿಷಯಕ್ಕೆ ಸಂಬಂಧಿಸಿದ ಹಾಗೆ ರಾಹುಲ್ ಮತ್ತು ಅಪ್ರಾಪ್ತ ಯುವಕನ ನಡುವೆ ಹೋಳಿ ಹಬ್ಬದ ಸಂದರ್ಭದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಯುವಕ ರಾಹುಲ್‌ನ ಕುತ್ತಿಗೆಗೆ ಬೈಕ್‌ನ ಕೀ ಚೈನ್‌ನಿಂದ ಚುಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಹುಲ್ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ. ತೇರದಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಅಪ್ರಾಪ್ತ‌ನಿಂದ ಯುವಕನ ಹತ್ಯೆ: ಯುವತಿಯ ವಿಷಯಕ್ಕೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ Read More »

ವಿವಾಹ ಆರತಕ್ಷತೆ ಪ್ರಯುಕ್ತ ಯಕ್ಷಗಾಯನ

ನಾಳ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿದ ಸನತ್ ಮತ್ತು ಹರ್ಷಿತಾ ಆರತಕ್ಷತೆ ಪ್ರಯುಕ್ತ ಯಕ್ಷ ಗಾಯನ ಜರಗಿತು. ಭಾಗವತರಾಗಿ ಮಹೇಶ್ ಕನ್ಯಾಡಿ, ಸುಶಾಂತ್ ಆಚಾರ್ಯ ಕೈಕಂಬ, ಪದ್ಮನಾಭ ಕುಲಾಲ್ ಇಳಂತಿಲ, ಡಿ.ಕೆ. ಆಚಾರ್ಯ ಅಲಂಕಾರು ಮತ್ತು ಸಂಧ್ಯಾ ಬಂಟ್ವಾಳ ಭಾಗವಹಿಸಿದರು. ಹಿಮ್ಮೇಳದಲ್ಲಿ ಚಂದ್ರಶೇಖರ ಆಚಾರ್ಯ ಗುರುವಾಯನಕೆರೆ, ಮೋಹನ ಶರವೂರು ಭಾಗವಹಿಸಿದ್ದರು. ಕಲಾವಿದ ಸತೀಶ್ ಆಚಾರ್ಯ ಮಾಣಿ ಕಾರ್ಯಕ್ರಮ ನಿರೂಪಿಸಿದರು. ಕಲಾವಿದರನ್ನು ದಿವಾಕರ ಆಚಾರ್ಯ ಗೇರುಕಟ್ಟೆ ಮತ್ತು ಭಾರತಿ ಎಂ. ಎಲ್. ಗೌರವಿಸಿದರು. ಕುಟುಂಬದ ಹಿರಿಯರಾದ ಯಕ್ಷಗಾನ ಕಲಾವಿದ

ವಿವಾಹ ಆರತಕ್ಷತೆ ಪ್ರಯುಕ್ತ ಯಕ್ಷಗಾಯನ Read More »

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದ ಪ್ರಗತಿಯ ಮೊದಲ ಹೆಜ್ಜೆ: ಡಾ. ಅನುರಾಧಾ ಕುರುಂಜಿ

ಪುತ್ತೂರು: ಹೆಣ್ಣು ಮಗಳು ಶಿಕ್ಷಣ ಪಡೆದರೆ ಕುಟುಂಬ ಮಾತ್ರವಲ್ಲ, ಸಮಾಜವೂ ಪ್ರಗತಿ ಸಾಧಿಸುತ್ತದೆ. ಶಿಕ್ಷಣವು ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಉತ್ತಮ ಭವಿಷ್ಯವನ್ನು ನೀಡುತ್ತದೆ. ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದ ಪ್ರಗತಿಯ ಮೊದಲ ಹೆಜ್ಜೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರೆ, ಎನ್ನೆಂಸಿಯ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಅನುರಾಧಾ ಕುರುಂಜಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹಿಳಾ ದಿನಾಚರಣೆಯಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಯನಗರ ಕಾರ್ಯಕ್ಷೇತ್ರದ ಬಾಂಧವ್ಯ ಜ್ಞಾನ ವಿಕಾಸ ಕೇಂದ್ರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸಂಪನ್ಮೂಲ

ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದ ಪ್ರಗತಿಯ ಮೊದಲ ಹೆಜ್ಜೆ: ಡಾ. ಅನುರಾಧಾ ಕುರುಂಜಿ Read More »

32 ವರ್ಷದ ಯುವಕನ ದಯಾಮರಣಕ್ಕೆ ಅನುಮತಿ : ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ಮಹತ್ವದ ತೀರ್ಪು

13 ವರ್ಷದಿಂದ ಕೋಮಾದಲ್ಲಿರುವ ಯುವಕನಿಗೆ ಗೌರವಯುತವಾದ ಸಾವು ಕರುಣಿಸಲು ನ್ಯಾಯಾಲಯದಿಂದ ಅನುಮತಿ ನವದೆಹಲಿ : ಐತಿಹಾಸಿಕ ಮಹತ್ವದ ತೀರ್ಪೋಂದರಲ್ಲಿ ಸುಪ್ರೀಂ ಕೋರ್ಟ್‌ ಕಳೆದ ಹದಿಮೂರು ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ (32) ಎಂಬ ಯುವಕನಿಗೆ ದಯಾಮರಣ ನೀಡಲು ಅನುಮತಿಸಿದೆ. ದಯಾಮರಣ ದೇಶದಲ್ಲಿ ಕಳೆದ ಹಲವು ದಶಕಗಳಿಂದ ಚರ್ಚೆಯಲ್ಲಿರುವ ವಿಷಯವಾಗಿದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಭಾರಿ ಭಿನ್ನಾಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೇ ಅತ್ಯಂತ ಅಪರೂಪದ್ದು ಎನ್ನಲಾಗಿದೆ. ಮುಂದಿನ

32 ವರ್ಷದ ಯುವಕನ ದಯಾಮರಣಕ್ಕೆ ಅನುಮತಿ : ಸುಪ್ರೀಂ ಕೋರ್ಟ್‌ನಿಂದ ಐತಿಹಾಸಿಕ ಮಹತ್ವದ ತೀರ್ಪು Read More »

ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಉಳ್ಳಾಲ: ಕೆಲಸಕ್ಕೆಂದು ಮನೆಯಿಂದ ತೆರಳಿ ಸೋಮವಾರದಿಂದ ನಾಪತ್ತೆಯಾಗಿದ್ದ ಯುವಕನ ಮೃತ ದೇಹ ಸೋಮೇಶ್ವರ ಸೋಮನಾಥ ಗದಾತೀರ್ಥ ಕೆರೆಯಲ್ಲಿ ಪತ್ತೆಯಾಗಿದೆ. ಮೃತನನ್ನು ವಿವೇಕ್ ಶೆಟ್ಟಿಗಾರ್(32) ಎಂದು ಗುರುತಿಸಲಾಗಿದೆ. ಪತ್ನಿಯಿಂದ ‌ವಿಚ್ಛೇದನಗೊಂಡು ಖಿನ್ನತೆಯಿಂದ ವಿವೇಕ್ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ವಿವೇಕ್ ಕದ್ರಿ ವೇದ ಮೋಟಾರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಸೋಮವಾರ ಕೆಲಸಕ್ಕೆಂದು ‌ಮನೆಯಿಂದ ಹೋಗಿದ್ದರು. ಅದೇ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ತಾಯಿಗೆ ಕರೆ ಮಾಡಿ ತಾನು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ್ದರು. ಆದರೆ ರಾತ್ರಿ

ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ Read More »

ರಾಜ್ಯಾದ್ಯಂತ ಗ್ಯಾಸ್‌ ಸಿಲಿಂಡರ್‌ಗೆ ಹಾಹಾಕಾರ : ಮೆನು ಕಡಿತ ಮಾಡಿದ ಹೋಟೆಲ್‌ಗಳು

ಸಾವಿರಾರು ಮಾಲೀಕರು, ಲಕ್ಷಾಂತರ ಕಾರ್ಮಿಕರಿಗೆ ಸಂಕಷ್ಟ ಸ್ಥಿತಿ ಮಂಗಳೂರು : ಮಧ್ಯಪ್ರಾಚ್ಯದ ಯುದ್ಧದಿಂದಾಗಿ ರಾಜ್ಯದಲ್ಲಿ ಎದುರಾಗಿರುವ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಕೊರತೆ ಹೋಟೆಲ್ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದೆ. ಕರಾವಳಿಯೂ ಸೇರಿದಂತೆ ರಾಜ್ಯಾದ್ಯಂತ ಕಮರ್ಷಿಯಲ್‌ ಸಿಲಿಂಡರ್‌ ಸಿಗದೆ ಹೋಟೆಲ್‌, ಬೇಕರಿ, ಕ್ಯಾಂಟೀನ್‌ ಮಾಲೀಕರು ಒದ್ದಾಡುತ್ತಿದ್ದಾರೆ. ಈಗಾಗಲೇ ಕೆಲವು ಹೋಟೆಲ್‌ಗಳು ಅನಿವಾರ್ಯವಾಗಿ ಮುಚ್ಚಿವೆ. ಸಿಲಿಂಡರ್ ಸಿಗದೆ ಅಡುಗೆ ಮಾಡುವುದು ಅಸಾಧ್ಯವಾಗಿದ್ದು, ಇನ್ನೂ ಹಲವು ಹೋಟೆಲ್‌ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬಹುತೇಕ ಹೋಟೆಲ್‌ಗಳನ್ನು ಮುಚ್ಚಬೇಕಾಗಬಹುದು ಎಂದು ಹೋಟೆಲ್‌

ರಾಜ್ಯಾದ್ಯಂತ ಗ್ಯಾಸ್‌ ಸಿಲಿಂಡರ್‌ಗೆ ಹಾಹಾಕಾರ : ಮೆನು ಕಡಿತ ಮಾಡಿದ ಹೋಟೆಲ್‌ಗಳು Read More »

ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 201 ಮೊಬೈಲ್‌ ವಶ

ವಾರಿಸುದಾರರಿಲ್ಲದ ಬ್ಯಾಗ್‌ ಪರಿಶೀಲಿಸಿದಾಗ ಸಿಕ್ಕಿದ ಮೊಬೈಲ್‌ ಮಂಗಳೂರು: ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 201 ಹಳೆಯ ಮೊಬೈಲ್‌ಗಳನ್ನು ರೈಲ್ವೆ ರಕ್ಷಣಾ ದಳದವರು (ಆರ್‌ಪಿಎಫ್) ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಸೋಮವಾರ ವಶಪಡಿಸಿಕೊಂಡಿದ್ದಾರೆ. ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಣ್ಗಾವಲು ತೀವ್ರಗೊಳಿಸಿರುವ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಆರ್‌ಪಿಎಫ್ ರೈಲುಗಳ ಮೂಲಕ ನಗದು, ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳ ಅಕ್ರಮ ಸಾಗಾಟದ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯ ವೇಳೆ ಸುಮಾರು 10.05 ಲಕ್ಷ ರೂ. ಮೌಲ್ಯದ 201 ಹಳೆಯ ಮೊಬೈಲ್

ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 201 ಮೊಬೈಲ್‌ ವಶ Read More »

error: Content is protected !!
Scroll to Top