ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ

ರಾಜ್ಯಾದ್ಯಂತ ಮಾ. 31ರಿಂದ ಏ. 15 ರವರೆಗೆ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಯಲಿದ್ದು, ಪರೀಕ್ಷೆ ಬರೆಯುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 8,42,811 ಎಂದು ವರದಿಗಳು ತಿಳಿಸಿವೆ.ಎಸ್ಎಲ್‌ಸಿ ಪರೀಕ್ಷೆ ನಡೆಸಲು ರಾಜ್ಯದಲ್ಲಿ ಒಟ್ಟು 3,305 ಪರೀಕ್ಷಾ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ಪರೀಕ್ಷೆ ಸುಸೂತ್ರವಾಗಿ ನಡೆಯಲು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿಯೂ ಪೊಲೀಸ್ ಬಿಗಿ ಬಂದೋಬಸ್ತ್ ಇರುತ್ತದೆ. ಪರೀಕ್ಷೆಗೆ ವಿದ್ಯಾರ್ಥಿಗಳು ಮೊಬೈಲ್‌ಫೋನ್, ಸ್ಮಾರ್ಟ್‌ವಾಚ್​​, ಇಯರ್‌ಫೋನ್ ಅಂತಹ ಎಲೆಕ್ಟ್ರಾನಿಕ್ಸ್ ಸಾಧನಗಳನ್ನು ತರುವಂತಿಲ್ಲ. ಮಾ. 31ರಿಂದ ಏ. 15 ರವರೆಗೆ ನಡೆಯಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಯ ಹಿನ್ನೆಲೆಯಲ್ಲಿ […]

ನಾಳೆಯಿಂದ ಎಸ್​ಎಸ್​ಎಲ್​ಸಿ ಪರೀಕ್ಷೆ Read More »

ಅನ್ಯಾಡಿ :  “ನಂದಗೋಕುಲ” ಗೃಹಪ್ರವೇಶದಲ್ಲಿ ಶ್ರೀ ಕ್ಷೇತ್ರ ಅರಿಕೋಡಿಯ ಧರ್ಮದರ್ಶಿ ಶ್ರೀ ಹರೀಶ್  ಉಪಸ್ಥಿತಿ

ಪುತ್ತೂರು: ಕಡಬ ತಾಲೂಕಿನ ಕುದ್ಮಾರು ಗ್ರಾಮದ ಅನ್ಯಾಡಿಯಲ್ಲಿ ನೂತನವಾಗಿ ನಿರ್ಮಿಸಿದ “ನಂದಗೋಕುಲ”ದ ಗೃಹಪ್ರವೇಶೋತ್ಸವ ಮಾ.30 ಗುರುವಾರ ನಡೆಯಿತು. ಗೃಹಪ್ರವೇಶಕ್ಕೆ ಅರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಶ್ರೀ ಹರೀಶ್ ಆಗಮಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಮನೆಯ ಯಜಮಾನ ಹರೀಶ್, ಕುಸುಮ, ಮಕ್ಕಳಾದ ಚಿತ್ರೇಶ್, ವೈಷ್ಣವಿ, ಊರವರು ಆಗಮಿಸಿ ಧರ್ಮದರ್ಶಿಗಳನ್ನು ಗೌರವಿಸಿದರು.

ಅನ್ಯಾಡಿ :  “ನಂದಗೋಕುಲ” ಗೃಹಪ್ರವೇಶದಲ್ಲಿ ಶ್ರೀ ಕ್ಷೇತ್ರ ಅರಿಕೋಡಿಯ ಧರ್ಮದರ್ಶಿ ಶ್ರೀ ಹರೀಶ್  ಉಪಸ್ಥಿತಿ Read More »

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಶ್ರೀ ರಾಮನವಮಿ ಉತ್ಸವ, ಸಾರ್ವಜನಿಕ ನವಗ್ರಹ ಯಾಗ

ಪುತ್ತೂರು: ನಗರದ ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಮನವಮಿ ಉತ್ಸವ ಹಾಗೂ ಸಾರ್ವಜನಿಕ ನವಗ್ರಹ ಯಾಗ ಗುರುವಾರ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಉತ್ಸವದ ಅಂಗವಾಗಿ ಮಠದ ಪ್ರಧಾನ ಅರ್ಚಕ ಎ.ರಾಘವೇಂದ್ರ ಉಡುಪರ ನೇತೃತ್ವದಲ್ಲಿ ಬೆಳಿಗ್ಗೆ 8 ರಿಂದ ಪುಣ್ಯಾಹ ವಾಚನ, ಗ್ರಹಶಾಂತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಬಳಿಕ ಅನ್ನಸಂತರ್ಪಣೆ ಜರಗಿತು. ಈ ಸಂದರ್ಭದಲ್ಲಿ ಮಠದ ಟ್ರಸ್ಟಿಗಳಾದ ಯನ್. ಸುಬ್ರಹ್ಮಣ್ಯಂ, ಬೆಟ್ಟ ಈಶ್ವರ ಭಟ್, ಲೋಕೇಶ್ ಹೆಗ್ಡೆ, ಗಣಪತಿ ನಾಯಕ್, ಕಾರ್ಯದರ್ಶಿ

ಕಲ್ಲಾರೆ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಶ್ರೀ ರಾಮನವಮಿ ಉತ್ಸವ, ಸಾರ್ವಜನಿಕ ನವಗ್ರಹ ಯಾಗ Read More »

ರಸ್ತೆ ದಾಟುವ ವೇಳೆ ಮಹಿಳೆಗೆ ಬಸ್ ಢಿಕ್ಕಿ : ಸ್ಥಳದಲ್ಲೇ ಮೃತ್ಯು

ಮಂಗಳೂರು : ಬೆಂದೂರ್ ವೆಲ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಧಾರುಣ ಘಟನೆ ಮಾ.30 ರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಐರಿನ್ ಡಿಸೋಜ(55) ಎಂದು ಗುರುತಿಸಲಾಗಿದೆ.ಸಿಟಿ ಬಸ್ ಬೆಂದೂರ್ ವೆಲ್ ಜಂಕ್ಷನ್ ನಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದು, ಈ ವೇಳೆ ಅದೇ ಬಸ್ಸಿನಿಂದ ಇಳಿದು ಬಸ್ಸಿನ ಮುಂಭಾಗದಿಂದ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.ಇನ್ನು ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ

ರಸ್ತೆ ದಾಟುವ ವೇಳೆ ಮಹಿಳೆಗೆ ಬಸ್ ಢಿಕ್ಕಿ : ಸ್ಥಳದಲ್ಲೇ ಮೃತ್ಯು Read More »

ಪ್ರಜಾಧ್ವನಿ ಯಾತ್ರೆಯಲ್ಲಿ ಕಲಾವಿದರಿಗೆ ಹಣ ಎಸೆದ ಆರೋಪ : ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಜಾಧ್ವನಿ ಯಾತ್ರೆ ವೇಳೆ ಹಣವನ್ನು ಹಂಚಿದ್ದಾರೆ ಎನ್ನುವ ದೂರಿನ ಮೇರೆಗೆ ಪೊಲೀಸರು ಅವರ ವಿರುದ್ಧ ನಾನ್-ಕಾಗ್ನಿಸೆಬಲ್ ಅಪರಾಧ ಪ್ರಕರಣವನ್ನು ದಾಖಲಿಸಿದ್ದಾರೆ.ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುವ ಮುನ್ನ ಮಂಗಳವಾರ ಮಂಡ್ಯ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಕಲಾವಿದರಿಗೆ ಹಣ ಎಸೆದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರಚಾರದ ವೇಳೆ ನಗದು ಎಸೆದಿದ್ದಾರೆ ಎಂಬ

ಪ್ರಜಾಧ್ವನಿ ಯಾತ್ರೆಯಲ್ಲಿ ಕಲಾವಿದರಿಗೆ ಹಣ ಎಸೆದ ಆರೋಪ : ಡಿಕೆ ಶಿವಕುಮಾರ್ ವಿರುದ್ಧ ಪ್ರಕರಣ ದಾಖಲು Read More »

ಡಿವೈಡರ್‌‌ಗೆ ಕಾರು ಢಿಕ್ಕಿ : ಮಹಿಳೆ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

ಉಪ್ಪಿನಂಗಡಿ : ಮಾ. 30 ರಂದು ನೆಲ್ಯಾಡಿ ಯ ಕರ್ಬಸಂಕ ಬಳಿ ಬೆಳ್ಳಂಬೆಳಿಗ್ಗೆ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ- ಮಂಗಳೂರು ಕಡೆ ಬರುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕರ್ಬಸಂಕ‌ ಬಳಿ ಡಿವೈಡರ್ ಗೆ ಢಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟಿದ್ದು, ಆಕೆಯ ಪತಿ ಮತ್ತು ಮಗ ಗಂಭೀರವಾಗಿ ಗಾಯಗೊಂಡ ಘಟನೆ ನೆಲ್ಯಾಡಿ ಸಮೀಪದ ಕರ್ಬಸಂಕ ಬಳಿ ನಡೆದಿದೆ. ಅನ್ನಪೂರ್ಣ(50)ಮೃತಪಟ್ಟ ಮಹಿಳೆ. ಅಶ್ವಿನ್ (ಮಗ) ಹಾಗೂ ಆತನ ತಂದೆ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು

ಡಿವೈಡರ್‌‌ಗೆ ಕಾರು ಢಿಕ್ಕಿ : ಮಹಿಳೆ ಮೃತ್ಯು, ಇಬ್ಬರಿಗೆ ಗಂಭೀರ ಗಾಯ Read More »

ಶಿರಾಡಿ ದೈವ ನರ್ತನ ವೇಳೆಯೇ ಕುಸಿದು ಬಿದ್ದ ದೈವ ನರ್ತಕ ಸಾವು | ವೀಡಿಯೋ ಇಲ್ಲಿದೆ ನೋಡಿ

ಕಾಣಿಯೂರಿನ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಮಾ. 30ರಂದು ದೈವ ನರ್ತನದ ವೇಳೆಯೇ ದೈವ ನರ್ತಕ, ಮೂಲಂಗೀರಿ ನಿವಾಸಿ ಕಾಂತು ಅಜಿಲ ಮಾಲೆಂಗ್ರಿ ಕುಸಿದು ಬಿಟ್ಟು ಮೃತಪಟ್ಟಿದ್ದಾರೆ.

ಶಿರಾಡಿ ದೈವ ನರ್ತನ ವೇಳೆಯೇ ಕುಸಿದು ಬಿದ್ದ ದೈವ ನರ್ತಕ ಸಾವು | ವೀಡಿಯೋ ಇಲ್ಲಿದೆ ನೋಡಿ Read More »

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಆಡಳಿತ ಮಂಡಳಿ ಚುನಾವಣೆ

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಸಂಸ್ಥೆಯಾದ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಆಡಳಿತ ಮಂಡಳಿಗೆ ಮಾ.26 ರಂದು ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಲೋಕಯ್ಯ ಗೌಡರ ನೇತೃತ್ವದ ತಂಡ ಒಂದು ಸ್ಥಾನದ ಮೂಲಕ ಬಹುಮತ ಪಡೆದಿದೆ. ಎದುರಾಳಿ ತಂಡದ ನಾಯಕತ್ವ ವಹಿಸಿದ್ದ ಕಿರಣ್ ಬುಡ್ಲೆಗುತ್ತು ಅತಿಹೆಚ್ಚು ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಅವರ ತಂಡ 10 ಸ್ಥಾನಗಳನ್ನು ಪಡೆದುಕೊಂಡಿದೆ. ಲೋಕಯ್ಯ ಗೌಡರ ತಂಡ 11 ಸ್ಥಾನಗಳನ್ನು ಗೆದ್ದುಕೊಂಡಿದೆ. ಸಂಘದ ಒಟ್ಟು 21 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಲೋಕಯ್ಯ

ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಆಡಳಿತ ಮಂಡಳಿ ಚುನಾವಣೆ Read More »

ದೋಳ್ಪಾಡಿ: ದೈವ ನರ್ತನದ ವೇಳೆಯೇ ಕುಸಿದು ಬಿದ್ದು ದೈವ ನರ್ತಕ ಸಾವು

ಪುತ್ತೂರು: ದೈವ ನರ್ತನದ ವೇಳೆ ದೈವ ನರ್ತಕರೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಮಾ. 30ರಂದು ನಡೆದಿದೆ. ಕಾಣಿಯೂರು ಗ್ರಾಮ ಪಂಚಾಯತಿಯ ದೋಳ್ಪಾಡಿ ಗ್ರಾಮದ ಇಡ್ಯಡ್ಕದಲ್ಲಿ ಘಟನೆ ವರದಿಯಾಗಿದೆ. ಹೃದಯಾಘಾತದಿಂದ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದ ದೈವ ನರ್ತಕ ಕಾಂತು ಅಜಿಲ ಮಾಲೆಂಗ್ರಿ ಮೃತಪಟ್ಟವರು. ಇವರು ಮೂಲಂಗೀರಿ ನಿವಾಸಿ. ಕಾಂತು ಅಜಿಲ ಅವರು ಹಲವು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಕಟ್ಟಿಗೆ ಸಂಬಂಧಿಸಿದಂತೆ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾ. 30ರಂದು ಕಾಣಿಯೂರು ಗ್ರಾಮದ ಇಡ್ಯಡ್ಕದಲ್ಲಿ

ದೋಳ್ಪಾಡಿ: ದೈವ ನರ್ತನದ ವೇಳೆಯೇ ಕುಸಿದು ಬಿದ್ದು ದೈವ ನರ್ತಕ ಸಾವು Read More »

ದೇಶದ ಜನತೆಗೆ ರಾಮನವಮಿ ಶುಭಾಶಯ ಕೋರಿದ ಪ್ರಧಾನಿ ಮೋದಿ

ದೆಹಲಿ : ಶ್ರೀ ರಾಮನ ಜೀವನವು ಪ್ರತಿ ಯುಗದಲ್ಲೂ ಮಾನವೀಯತೆಗೆ ಸ್ಫೂರ್ತಿಯಾಗಿ ಉಳಿಯುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ. ತ್ಯಾಗ, ತಪಸ್ಸು, ಸಂಯಮ ಮತ್ತು ಸಂಕಲ್ಪವನ್ನು ಆಧರಿಸಿದ ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಜೀವನವು ಪ್ರತಿ ಯುಗದಲ್ಲೂ ಮಾನವೀಯತೆಗೆ ಸ್ಫೂರ್ತಿಯಾಗಿ ಉಳಿಯುತ್ತದೆ ಎಂದು ಹೇಳಿದ್ದಾರೆ.ರಾಮ ನವಮಿಯು ಹಿಂದೂ ಹಬ್ಬವಾಗಿದ್ದು, ವಿಷ್ಣುವಿನ ಅವತಾರವಾದ ಭಗವಾನ್ ರಾಮನ ಜನ್ಮದಿನವನ್ನು ಗೌರವಿಸುವ ಸಲುವಾಗಿ ಈ ದಿನವನ್ನು ಶ್ರೀ ರಾಮನವಮಿ ಎಂದು ಆಚರಿಸಲಾಗುತ್ತದೆ.ಈ ದಿನವು ಒಂಬತ್ತು ದಿನಗಳ ಚೈತ್ರ-ನವರಾತ್ರಿ ಆಚರಣೆಗಳ

ದೇಶದ ಜನತೆಗೆ ರಾಮನವಮಿ ಶುಭಾಶಯ ಕೋರಿದ ಪ್ರಧಾನಿ ಮೋದಿ Read More »

error: Content is protected !!
Scroll to Top