ಒತ್ತಡದಿಂದ ರಹಿತ ಜೀವನ ಸಾಗಿಸಲು ಇಂತಹಾ ರೆಸಾರ್ಟ್ ಗಳು ಅನುಕೂಲದಾಯಕ | ನೂತನ ‘ಸನ್ ರಾಕ್ ಬಲಿಪ ರೆಸಾರ್ಟ್’ ಉದ್ಘಾಟಿಸಿ ಶಾಸಕ ಹರೀಶ್ ಪೂಂಜಾ
ಬೆಳ್ತಂಗಡಿ: ತಾಲೂಕಿನ ಪ್ರವಾಸಿ ಸ್ಥಳಗಳಿಗೆ ತೆರಳುವ ರಸ್ತೆಗಳನ್ನು ನನ್ನ ಕಳೆದ ಶಾಸಕತ್ವದ ಅವಧಿಯಲ್ಲಿ ಅಭಿವೃದ್ಧಿಪಡಿಸಿ ಜನತೆಗೆ ಕೊಡುಗೆಯಾಗಿ ನೀಡಲಾಗಿದ್ದು, ಇದೀಗ ಕೇಂದ್ರ ಸರಕಾರದ ನೆರವಿನಿಂದ ಕರಾವಳಿ ಕರ್ನಾಟಕದ ಮಂಗಳೂರನ್ನು ಸಂಪರ್ಕಿಸಲು ಎಲ್ಲ ಕಡೆಗಳಿಂದ ರಾಷ್ಟ್ರೀಯ ಹೆದ್ದಾರಿಗಳು ಸಿದ್ಧವಾಗುತ್ತಿದೆ. ಇನ್ನೆರಡು ವರ್ಷದಲ್ಲಿ ಬೆಂಗಳೂರಿನ ಐಟಿ ಕ್ಷೇತ್ರ ಉದ್ಯೋಗಿಗಳು ವಾರಾಂತ್ಯದಲ್ಲಿ ಜಿಲ್ಲೆಗೆ ಅತೀ ಸರಳವಾಗಿ ತಲುಪುವ ಕೊಂಡಿಯಾಗಿ ಅಭೂತಪೂರ್ವ ಪರಿವರ್ತನೆ ಕಾಣಲಿದ್ದೇವೆ ಎಂದು ಶಾಸಕ ಹರೀಶ್ ಪೂಂಜ ವಿಶ್ವಾಸ ವ್ಯಕ್ತಪಡಿಸಿದರು. ಅವರು ನಡ ಗ್ರಾಮದ ಮಂಜೊಟ್ಟಿ ಸನ್ ರಾಕ್ ರೆಸಾರ್ಟ್ […]










