ಸುದ್ದಿ

ಬೆಳ್ತಂಗಡಿ: ಸರಕು ಸಾಗಿಸುವ ವಾಹನದಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಹೆಡ್‌ಮಾಸ್ಟ್ರು!

ಶತಮಾನೋತ್ಸವ ಅಚರಿಸಿದ ಶಾಲಾ ಮುಖ್ಯಶಿಕ್ಷಕರ ನಡೆಗೆ ಪೋಷಕರ ತೀವ್ರ ಆಕ್ರೋಶ ಬೆಳ್ತಂಗಡಿ : ಸರಕುಗಳನ್ನು ಸಾಗಿಸುವ ಪಿಕಪ್‌ ವಾಹನ ಮತ್ತು ಟಿಪ್ಪರ್‌ನಲ್ಲಿ ಶಾಲಾ ಮಕ್ಕಳನ್ನು ಅಧ್ಯಯನ ಪ್ರವಾಸಕ್ಕೆ ಕರೆದುಕೊಂಡು ಹೋದ ಶಾಲೆಯ ಮುಖ್ಯಶಿಕ್ಷಕರೊಬ್ಬರ ನಡೆಗೆ ಪಾಲಕರಿಂದ ಅಕ್ರೋಶ ವ್ಯಕ್ತವಾಗಿದೆ. ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದಲ್ಲಿ ಸರಕುಗಳಂತೆ ಶಾಲಾ ಮಕ್ಕಳನ್ನು ವಾಹನಗಳಿಗೆ ತುಂಬಿಸಿ ಜೇನು ಕೃಷಿ ಅಧ್ಯಯನ ಮಾಡಲು ತೆರೆದ ಪಿಕಪ್ ಮತ್ತು ಟಿಪ್ಪರ್ ನಲ್ಲಿ ಕರೆದುಕೊಂಡು ಹೋದ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಶತಮಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ […]

ಬೆಳ್ತಂಗಡಿ: ಸರಕು ಸಾಗಿಸುವ ವಾಹನದಲ್ಲಿ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದ ಹೆಡ್‌ಮಾಸ್ಟ್ರು! Read More »

ಪಿಕಪ್‌ ಪಲ್ಟಿಯಾಗಿ ಚಾಲಕ ಸಾವು

ಉಪ್ಪಿನಂಗಡಿ: ತೆಕ್ಕಾರು ಗ್ರಾಮದ ಕನರಾಜೆ ಎಂಬಲ್ಲಿ ಪಿಕಪ್ ವಾಹನ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ಫೆ.11ರಂದು ನಡೆದಿದೆ. ಮೃತ ವ್ಯಕ್ತಿ ಅಳಕೆ ನಿವಾಸಿ ಪುಟ್ಟ (31) ಎಂಬವರಾಗಿದ್ದಾರೆ. ಸೆಂಟ್ರಿಂಗ್ ಕೆಲಸದ ಸಾಮಾಗ್ರಿಗಳನ್ನು ಸಾಗಿಸುವ ವೇಳೆ ಪಿಕಪ್‌ ವಾಹನ ಪಲ್ಟಿಯಾಗಿದೆ. ಮೇಲ್ಬಾಗದ ರಸ್ತೆಯಿಂದ ವಾಹನ ಕೆಳಭಾಗದ ರಸ್ತೆಗೆ ಪಿಕಪ್‌ ಉರುಳಿ ಬಿದ್ದಿದ್ದು, ಚಾಲಕ ಅಳಕ್ಕೆ ನಿವಾಸಿ ಹರಿಶ್ಚಂದ್ರ ಎಂಬವರ ಮಗ ಹೇಮಚಂದ್ರ (32) ಎಂಬವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಹಾಗೂ ಪಿಕಪ್‍ನಲ್ಲಿದ್ದ ಉಮ್ಮರಬ್ಬ (51) ಎಂಬವರು ಗಾಯಗೊಂಡು

ಪಿಕಪ್‌ ಪಲ್ಟಿಯಾಗಿ ಚಾಲಕ ಸಾವು Read More »

ಇಂದು ಭಾರತ್‌ ಬಂದ್‌ ಇದ್ದರೂ ಜನಜೀವನ ಮಾಮೂಲಿ

ಎಂದಿನಂತೆ ಓಡಾಟ ನಡೆಸಲಿರುವ ವಾಹನ, ರೈಲುಗಳು ನವದೆಹಲಿ : ಹಲವು ಕಾರ್ಮಿಕ ಸಂಘಟನೆಗಳು ಇಂದು ಭಾರತ್ ಬಂದ್‌ಗೆ ಕರೆ ಕೊಟ್ಟಿವೆ. ಕೇಂದ್ರ ಸರ್ಕಾರದ ಹೊಸ ಕಾರ್ಮಿಕ ಸಂಹಿತೆಗಳು ಮತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಬಂದ್ ನಡೆಯುತ್ತಿದ್ದು, ರಾಜ್ಯದಲ್ಲೂ ಪ್ರತಿಭಟನೆಗೆ ಕರೆ ನೀಡಲಾಗಿದೆ. ಆದರೆ ಬಂದ್‌ನಲ್ಲಿ ಸಾರಿಗೆ ಸಂಘಟನೆಗಳು ಸೇರದಿರುವುದರಿಂದ ವಾಹನಗಳ ಓಡಾಟ ಎಂದಿನಂತಿದೆ. ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಟಿಯುಸಿಸಿ, ಎಸ್‌ಇಡಬ್ಲ್ಯೂಎ, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಯುಟಿಯುಸಿ ಸೇರಿದಂತೆ 10 ಕೇಂದ್ರ ಕಾರ್ಮಿಕ

ಇಂದು ಭಾರತ್‌ ಬಂದ್‌ ಇದ್ದರೂ ಜನಜೀವನ ಮಾಮೂಲಿ Read More »

ಪುತ್ರನಿಂದಲೇ ತಂದೆ-ತಾಯಿಯ ಬರ್ಬರ ಕೊಲೆ

ಕ್ಷುಲ್ಲಕ ಕಾರಣಕ್ಕೆ ಅಪ್ಪ-ಅಮ್ಮನನ್ನು ಚಾಕುವಿನಿಂದ ಇರಿದು ಕೊಂದ ಟೆಕ್ಕಿ ಪುತ್ರ ಬೆಂಗಳೂರು : ಟೆಕ್ಕಿ ಪುತ್ರನೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ವಿಜ್ಞಾನ ನಗರದ ಆದರ್ಶ ವಿಸ್ತಾ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ. ನವೀನ್ ಚಂದ್ರ ಭಟ್(60) ಮತ್ತು ಡಾ.ಶ್ಯಾಮಲಾ ಭಟ್(55) ಕೊಲೆಯಾದವರು. ಕೊಲೆಯಾದ ನವೀನ್ ಚಂದ್ರ ಭಟ್ ನೌಕಾಪಡೆಯ ನಿವೃತ್ತ ಕ್ಯಾಪ್ಟನ್‌ ಆಗಿದ್ದರೆ, ಡಾ.ಶ್ಯಾಮಲಾ ಭಟ್ ದಂತ ವೈದ್ಯೆಯಾಗಿದ್ದರು. ಕೌಟುಂಬಿಕ ವಿಚಾರಕ್ಕೆ ಪುತ್ರ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ

ಪುತ್ರನಿಂದಲೇ ತಂದೆ-ತಾಯಿಯ ಬರ್ಬರ ಕೊಲೆ Read More »

ಮನೆ ಮುಂದೆ ಕೆಮ್ಮಿದ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ರಾಮನಗರ: ಮನೆ ಪಕ್ಕ ಕೆಮ್ಮಿದ ಕಾರಣಕ್ಕೆ ವ್ಯಕ್ತಿಯೊಬ್ಬರ ‌ಮೇಲೆ ಕೆಲವರು ಸೇರಿ ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಹಲ್ಲೆಗೊಳಗಾದ ವ್ಯಕ್ತಿ ಮೃತಪಟ್ಟ ಘಟನೆ ಬಿಡದಿಯಲ್ಲಿ ನಡೆದಿದೆ. ರಾಜಸ್ಥಾನ ಮೂಲದ ವಿನೋದ್(34) ಎಂಬವರೇ ‌ಮೃತ ದುರ್ದೈವಿ. ಬಿಡದಿಯ ಖಾಸಗಿ ಕಂಪನಿಯೊಂದರಲ್ಲಿ ವಿನೋದ್ ಅವರು ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮನೆಯ ಮುಂದೆ ನಿಂತು ವಿನೋದ್ ಅವರು ಕೆಮ್ಮಿದರು ಎಂಬ ಕಾರಣಕ್ಕೆ ಆರೋಪಿಗಳಾದ ಸ್ಥಳೀಯ ನಿವಾಸಿಗಳಾದ ಹೊಂಬಯ್ಯ, ವಿಜಯ್ ಸೇರಿದಂತೆ ಇನ್ನಿತರರು ಅವರ ಮೇಲೆ ಗಂಭೀರ ಹಲ್ಲೆ ನಡೆಸಿದ್ದಾರೆ.

ಮನೆ ಮುಂದೆ ಕೆಮ್ಮಿದ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು Read More »

ಐಟಿಐ ವಿದ್ಯಾರ್ಥಿಗಳ ಜಗಳ: ಚೂರಿ ಇರಿತದಲ್ಲಿ ಅಂತ್ಯ

ವಿಟ್ಲ: ಐಟಿಐ ವಿದ್ಯಾರ್ಥಿಗಳಿಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಉಂಟಾಗಿ, ಚೂರಿ ಇರಿತದಲ್ಲಿ ಕೊನೆಗೊಂಡ ಘಟನೆ ವಿಟ್ಲದಲ್ಲಿ ನಡೆದಿದೆ. ಇರಿತಕ್ಕೊಳಗಾದ ಬನ್ವೂರಿನ ಮಹಮ್ಮದ್ ರಿಯಾನ್ ಮತ್ತು ಮಂಜೇಶ್ವರದ ದೈಗೋಳಿ ನಿವಾಸಿ ಯಜೇಶ್ ವಿಶ್ವದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳಾದ ರಿಯಾನ್ ಮತ್ತು ಹೇಮಂತ್ ನಡುವೆ ಜಗಳವಾಗಿದ್ದು, ಜಗಳ ಬಿಡಿಸಲು ಬಂದ ಯಜೇಶ್‌ಗೂ ಗಾಯಗಳಾಗಿವೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಐಟಿಐ ವಿದ್ಯಾರ್ಥಿಗಳ ಜಗಳ: ಚೂರಿ ಇರಿತದಲ್ಲಿ ಅಂತ್ಯ Read More »

ಫೆ. 12 – 21: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ, ದೈವಗಳ ‌ನೇಮ

ಈಶ್ವರಮಂಗಲ: ಇಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ ಮತ್ತು ಕಿನ್ನಿಮಾಣಿ, ಪೂಮಾಣಿ ಮತ್ತು ಪಿಲಿ ಚಾಮುಂಡಿ ದೈವಗಳ ‌ನೇಮ ಫೆ. 12 ರಿಂದ ಫೆ. 21 ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ನಡೆಯಲಿದೆ. ಫೆ. 12 ರಿಂದ 20 ರ ವರೆಗೆ ದೇವಾಲಯದಲ್ಲಿ ಜಾತ್ರೆ ಮತ್ತು ಫೆ. 21 ರಂದು ಮಾಡದ ಗುಡ್ಡೆಯಲ್ಲಿ ದೈವಗಳ ನೇಮ ನಡೆಯಲಿದೆ. ಜಾತ್ರಾ ಪ್ರಯುಕ್ತ ಫೆ. 12 ರಂದು ಹಸಿರುವಾಣಿ ಹೊರೆಕಾಣಿಕೆ ‌ಸಮರ್ಪಣೆಯಾಗಲಿದ್ದು, ದೇಗುಲದ ಆಡಳಿತ

ಫೆ. 12 – 21: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ, ದೈವಗಳ ‌ನೇಮ Read More »

ವಿವಿಧ ಕಾರ್ಯಕ್ರಮಗಳೊಂದಿಗೆ ಬಾರ್ಯ ಜಾತ್ರೋತ್ಸವ ಸಂಪನ್ನ

ಉಪ್ಪಿನಂಗಡಿ: ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಆರನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಸಾಮೂಹಿಕ ಪ್ರಾರ್ಥನೆ ,ಹೊರೆ ಕಾಣಿಕೆ ಸಮರ್ಪಣೆ ,ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಪುತ್ತಿಲ ಅಂಗನವಾಡಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ , ತಾಂಬೂಲ ಕಲಾವಿದರು ಪುಂಜಾಲಕಟ್ಟೆ ತಂಡದಿಂದ ತುಳು ನಾಟಕ ,ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ತಂಡದಿಂದ ಜಾಂಬವತಿ ಕಲ್ಯಾಣ ತಾಳಮದ್ದಳೆ, ದೇವರಿಗೆ ಪಂಚ ವಿಂಶತಿ ಕಲಶಾಭಿಷೇಕ, ನಾಗತಂಬಿಲ, ದರ್ಶನ ಬಲಿ,

ವಿವಿಧ ಕಾರ್ಯಕ್ರಮಗಳೊಂದಿಗೆ ಬಾರ್ಯ ಜಾತ್ರೋತ್ಸವ ಸಂಪನ್ನ Read More »

ಅಕ್ರಮ ಕೋಳಿ ಅಂಕಕ್ಕೆ ‌ಪೊಲೀಸ್ ದಾಳಿ

ಮಡಿಕೇರಿ: ಅಕ್ರಮ ಕೋಳಿ ಅಂಕ ಚೆಂಬು ಗ್ರಾಮದಲ್ಲಿ ನಡೆಯುತ್ತಿದ್ದ ಕುರಿತು ಮಾಹಿತಿ ಪಡೆದ ಮಡಿಕೇರಿ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ಸ್ಥಳದಲ್ಲಿ ಕೋಳಿ ಅಂಕ ನಡೆಸಲು ಕಬ್ಬಿಣದ ಬೇಲಿಯನ್ನು ಅಳವಡಿಸಲಾಗಿತ್ತು. ಹಲವಾರು ಕೋಳಿಗಳು ‌ಸಹ ಉದ್ದೇಶಿತ ಸ್ಥಳದಲ್ಲಿ ಇದ್ದವು. ದಾಳಿ ನಡೆಸಿದ ಪೊಲೀಸರು ಅಳವಡಿಸಲಾಗಿದ್ದ ಕಬ್ಬಿಣದ ಬೇಲಿಯನ್ನು ‌ವಶಕ್ಕೆ ಪಡೆದಿದ್ದಾರೆ. ಪೊಲೀಸರ ರೈಡ್ ವೇಳೆ ಅಲ್ಲಿ ಸೇರಿದ್ದ ಜನರು ಓಡಿ ಹೋದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಅಕ್ರಮ ಕೋಳಿ ಅಂಕಕ್ಕೆ ‌ಪೊಲೀಸ್ ದಾಳಿ Read More »

ಹಿರಿಯ ಪತ್ರಕರ್ತ, ವಿಧಾನ ಪರಿಷತ್ ಮಾಜಿ ಸದಸ್ಯ ಪಿ. ರಾಮಯ್ಯ ಇನ್ನಿಲ್ಲ

ಬೆಂಗಳೂರು: ಅನಾರೋಗ್ಯದ ಕಾರಣದಿಂದ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಪತ್ರಕರ್ತ, ವಿಧಾನ ಪರಿಷತ್ ಮಾಜಿ ಸದಸ್ಯ ಪಿ. ರಾಮಯ್ಯ(93) ಅವರು ಅಂಗಾಂಗ ‌ವೈಫಲ್ಯದಿಂದ ನಿಧನರಾದರು. ಅವರು ದಿ ಹಿಂದೂ ಪತ್ರಿಕೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸುಮಾರು ಐದು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು. ವಿಧಾನ ಪರಿಷತ್ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು, ಪತ್ರಿಕಾ ಅಕಾಡೆಮಿ ಹಾಗೂ ವಿವಿಧ ಪತ್ರಕರ್ತ ಕಲ್ಯಾಣ

ಹಿರಿಯ ಪತ್ರಕರ್ತ, ವಿಧಾನ ಪರಿಷತ್ ಮಾಜಿ ಸದಸ್ಯ ಪಿ. ರಾಮಯ್ಯ ಇನ್ನಿಲ್ಲ Read More »

error: Content is protected !!
Scroll to Top