ಸುದ್ದಿ

ಟಿಪ್ಪರ್ ಗುದ್ದಿ ಮೆಡಿಕಲ್ ವಿದ್ಯಾರ್ಥಿನಿ ಸಾವು, ಸಹ ಸವಾರೆ ಗಂಭೀರ

ಬೆಂಗಳೂರು: ಟಿಪ್ಪರ್ ‌ಲಾರಿ ಗುದ್ದಿದ ಪರಿಣಾಮ ಕಾಲೇಜಿನಿಂದ ಆ್ಯಕ್ಟಿವಾ ಮೂಲಕ ತೆರಳುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ‌ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ಸಮೀಪ ಈ ದುರಂತ ನಡೆದಿದೆ. ಕೃತಿಕಾ (21) ಎಂಬವರೇ ‌ಮೃತ ದುರ್ದೈವಿ. ಹಿಂಬದಿ ಸವಾರೆ ಹಂಸ ಎಂಬವರು ಗಂಭೀರ ಗಾಯಗೊಂಡಿದ್ದಾಗಿ ತಿಳಿದು ಬಂದಿದೆ. ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಎಂಬಿಬಿಎಸ್ ವಿದ್ಯಾರ್ಥಿನಿಯರು ಕಾಲೇಜು ಮುಗಿಸಿ ಆ್ಯಕ್ಟಿವಾ ಮೂಲಕ ಗೇಟ್ ಹೊರಗೆ ಬರುತ್ತಿದ್ದರು. ಈ ವೇಳೆ ಅತಿವೇಗದಿಂದ ಬಂದ […]

ಟಿಪ್ಪರ್ ಗುದ್ದಿ ಮೆಡಿಕಲ್ ವಿದ್ಯಾರ್ಥಿನಿ ಸಾವು, ಸಹ ಸವಾರೆ ಗಂಭೀರ Read More »

ಜೋಡಿ ಹತ್ಯೆಯ ಆರೋಪಿ ಪೊಲೀಸರ ವಶಕ್ಕೆ

ಮಡಿಕೇರಿ: ಭಾಗಮಂಡಲದ ಕುಂದಚೇರಿಯಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಎಚ್. ಕೆ. ಚಂದು ಎಂದು ಗುರುತಿಸಲಾಗಿದೆ. ತನ್ನ ತಂಗಿಗಿದ್ದ ಅಕ್ರಮ ಸಂಬಂಧವೇ ಕೊಲೆಗೆ ಕಾರಣ ಎಂದು ಆತ ಪೊಲೀಸರಿಗೆ ವಿಚಾರಣೆಯ ಸಮಯದಲ್ಲಿ ತಿಳಿಸಿದ್ದಾನೆ. ಕಳೆದ ಎರಡು ವರ್ಷಗಳಿಂದ ಯಶೋಧಾ ಮತ್ತು ಕುಂಞಿರಾಮ ‌ಎಂಬವರ ನಡುವೆ ಅನೈತಿಕ ಸಂಬಂಧ ಇತ್ತು. ಇದು ಯಶೋಧಾಳ ಅಣ್ಣ ಚಂದುವಿನ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರವಾಗಿ ಜಗಳಗಳೂ ನಡೆದಿದ್ದವು. ಬುಧವಾರವೂ ಇವರಿಬ್ಬರ ಜೊತೆ ಚಂದು

ಜೋಡಿ ಹತ್ಯೆಯ ಆರೋಪಿ ಪೊಲೀಸರ ವಶಕ್ಕೆ Read More »

ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಸಿದ್ಧಾಪುರ: ಕಾಡಾನೆ ದಾಳಿಗೆ ಕಾಫಿ ಬೆಳೆಗಾರರೊಬ್ಬರು ಮೃತಪಟ್ಟ ಘಟನೆ ಹೈಸ್ಕೂಲ್ ಪೈಸಾರಿ ಎಂಬಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಚೌರಿರ ಗಣಪತಿ(49) ಎಂದು ಗುರುತಿಸಲಾಗಿದೆ. ಗುರುವಾರ ಹಾಡು ಹಗಲೇ ಕಾಡಾನೆ ದಾಳಿ ನಡೆದಿದೆ. ಅವರು ಕಾರ್ಮಿಕರ ಜೊತೆಗೆ ತಮ್ಮ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.‌ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡಾನೆ ದಾಳಿ ಅರಣ್ಯ ಇಲಾಖೆಯ ವೈಫಲ್ಯಕ್ಕೆ ಸಾಕ್ಷಿಯಾಗಿದ್ದು, ಸಾರ್ವಜನಿಕರು

ಕಾಡಾನೆ ದಾಳಿಗೆ ವ್ಯಕ್ತಿ ಬಲಿ Read More »

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಅಬುಬ್ಬಕ್ಕರ್‌ನಿಗೆ ‌ಶಿಕ್ಷೆ ಪ್ರಕಟ

ಮಂಗಳೂರು: ಅಪ್ರಾಪ್ತ ವಯಸ್ಸಿನ ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿ ಅಬುಬ್ಬಕರ್ (53) ಎಂಬಾತನಿಗೆ ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ. ತನ್ನ ನೆರೆಮನೆಯ ಬಾಲಕಿಯನ್ನು ಅಬುಬ್ಬಕ್ಕರ್ ಕಳೆದ 2025 ರ ಮಾರ್ಚ್ 29 ರಂದು ಆಕೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಎಳೆದೊಯ್ದು, ಯಾರೂ ವಾಸವಿಲ್ಲದ ‌ಮನೆಯ ಸಮೀಪ ಅತ್ಯಾಚಾರ ಮಾಡಿದ್ದ. ಅದಕ್ಕೂ ಮೊದಲು ಸಹ ಆತ ಮೂರು ಬಾರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದ.

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಅಬುಬ್ಬಕ್ಕರ್‌ನಿಗೆ ‌ಶಿಕ್ಷೆ ಪ್ರಕಟ Read More »

ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಹೋರಿಗಳ ಸಾಗಾಟ: ಆರೋಪಿ ಬಂಧನ

ನೆಲ್ಯಾಡಿ: ಹಿಂಸಾತ್ಮಕ ರೀತಿಯಲ್ಲಿ ಹೋರಿಗಳನ್ನು ‌ಸಾಗಾಟ ಮಾಡುತ್ತಿದ್ದ ಗೂಡ್ಸ್ ಟೆಂಪೋ ಒಂದನ್ನು ಗುಂಡ್ಯದಲ್ಲಿ ‌ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಹಾಸನದ ಅರಸೀಕೆರೆಯ ಕುಮಾರ್ (48) ಎಂದು ಗುರುತಿಸಲಾಗಿದೆ. ಗುಂಡ್ಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದ ಸಮಯದಲ್ಲಿ ಟೆಂಪೋದಲ್ಲಿ ಹೋರಿಗಳ ಸಾಗಾಟ ನಡೆಯುತ್ತಿರುವುದು ಪತ್ತೆಯಾಗಿದೆ. ಆರೋಪಿಯನ್ನು ಪ್ರಶ್ನೆ ಮಾಡಲಾಗಿ ಹೋರಿಗಳನ್ನು ಮಾಂಸ ಮಾಡುವ ಉದ್ದೇಶದಿಂದ ಕಾಸರಗೋಡಿಗೆ ಸಾಗಾಟ‌ ಮಾಡುತ್ತಿರುವುದಾಗಿ ಹೇಳಿದ್ದಾನೆ. ಹಾಗೆಯೇ ಇದನ್ನು ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸಲಾಗುತ್ತಿದೆ ಎನ್ನುವ ವಿಷಯವೂ

ಹಿಂಸಾತ್ಮಕ ರೀತಿಯಲ್ಲಿ ಅಕ್ರಮವಾಗಿ ಹೋರಿಗಳ ಸಾಗಾಟ: ಆರೋಪಿ ಬಂಧನ Read More »

ಸುಳ್ಯ : ಕಳ್ಳತನ ಆರೋಪಿಗೆ ಜೈಲು ಶಿಕ್ಷೆ

ಸುಳ್ಯ: ಮನೆಗಳ್ಳತನ ಪ್ರಕರಣದಲ್ಲಿ ಆರೋಪಿಯಾಗಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬೆಳ್ತಂಗಡಿ ನೆರಿಯ ನಿವಾಸಿ ಶರತ್ ಎಸ್. (24) ಎಂಬಾತನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕಳವು ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಕಲಂ 457 ಐಪಿಸಿ ರಲ್ಲಿ ಆರೋಪಿಗೆ ಆರು ತಿಂಗಳ ಸಾದ ಸಜೆ ಹಾಗೂ 500 ದಂಡ, ಕಲಂ 380 ಐಪಿಸಿಯಲ್ಲಿ 10 ತಿಂಗಳ ಸಾದಾ ಸಜೆ ಹಾಗೂ 500 ರೂ.ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದಲ್ಲಿ 10 ದಿನಗಳ ಹೆಚ್ಚುವರಿ ಸಜೆ

ಸುಳ್ಯ : ಕಳ್ಳತನ ಆರೋಪಿಗೆ ಜೈಲು ಶಿಕ್ಷೆ Read More »

ಜೈಲಿಗೆ ವಾರ್ಡನ್‌ನಿಂದಲೇ ಡ್ರಗ್ಸ್‌ ಪೂರೈಕೆ

ಮತ್ತೊಮ್ಮೆ ಪರಪ್ಪನ ಅಗ್ರಹಾರ ಕರ್ಮಕಾಂಡ ಬಯಲು ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಗಾಂಜಾ ಸರಬರಾಜು ಮಾಡುತ್ತಿದ್ದ ಜೈಲು ವಾರ್ಡನ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಪ್ರಕಾಶ್ ಗಾವಡೆ ಎಂದು ಗುರುತಿಸಲಾಗಿದೆ. ಮಾರ್ಚ್ 9ರಂದು ರಾತ್ರಿ ಸುಮಾರು 8.15ರ ಸುಮಾರಿಗೆ ಈ ಘಟನೆ ನಡೆದಿದೆ. ಆ ದಿನ ನಿಯೋಜನೆಗೊಂಡಿದ್ದ ವಾರ್ಡನ್ ಪ್ರಕಾಶ್ ಗಾವಡೆ ಜೈಲಿನೊಳಗೆ ಪ್ರವೇಶಿಸುವ ವೇಳೆ ತಪಾಸಣೆ ವಿಭಾಗ–2ರಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಅವನನ್ನು ಪರಿಶೀಲನೆಗೆ ಒಳಪಡಿಸಿದರು. ಈ ವೇಳೆ ಅವನ ಒಳ ಉಡುಪಿನಲ್ಲಿ ಹಣ

ಜೈಲಿಗೆ ವಾರ್ಡನ್‌ನಿಂದಲೇ ಡ್ರಗ್ಸ್‌ ಪೂರೈಕೆ Read More »

ಯುದ್ಧ ನಿಲ್ಲಿಸಲು ಇರಾನ್‌ ಮೂರು ಷರತ್ತು

ಹೀಗಾದರೆ ಮಾತ್ರ ಯುದ್ಧ ನಿಲ್ಲುತ್ತದೆ ಟೆಹ್ರಾನ್‌: ಅಮೆರಿಕ, ಇಸ್ರೇಲ್‌-ಇರಾನ್‌ ಮಧ್ಯೆ ನಡುವೆ ನಡೆಯುತ್ತಿರುವ ಯುದ್ಧ ಇನ್ನಷ್ಟು ತೀವ್ರಗೊಂಡು ಜಗತ್ತಿನಲ್ಲಿ ತೈಲ ಮತ್ತು ಇಂಧನಕ್ಕಾಗಿ ಹಾಹಾಕಾರ ಉಂಟಾಗಿದೆ. ಈ ನಡುವೆ ಇರಾನ್‌ ಯುದ್ಧ ನಿಲ್ಲಿಸಲು ಜಗತ್ತಿನೆದುರು ಮೂರು ಷರತ್ತುಗಳನ್ನಿಟ್ಟಿದೆ. ಅಮೆರಿಕದ ನೆಲೆಗಳು ಮತ್ತು ಮಧ್ಯಪ್ರಾಚ್ಯ ದೇಶಗಳ ಮೇಲೆ ನಡೆಯುತ್ತಿರುವ ದಾಳಿ ಕೊನೆಯಾಗಬೇಕಾದರೆ ನಮ್ಮ ಮೂರು ಷರತ್ತನ್ನುಗಳನ್ನು ಒಪ್ಪಿಕೊಳ್ಳಬೇಕೆಂದು ಇರಾನ್‌ ಹೇಳಿದೆ ಇರಾನ್‌ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು, ಸಂಘರ್ಷದ ಸಮಯದಲ್ಲಿ ಉಂಟಾದ ಹಾನಿಗಳಿಗೆ ಪರಿಹಾರ

ಯುದ್ಧ ನಿಲ್ಲಿಸಲು ಇರಾನ್‌ ಮೂರು ಷರತ್ತು Read More »

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ

ಮದುವೆ ಸಮಾರಂಭದಲ್ಲಿ ಗುಂಡಿನೇಟಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಫಾರೂಕ್‌ ಅಬ್ದುಲ್ಲಾ ಶ್ರೀನಗರ : ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ತಂದೆ, ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಗುಂಡಿಕ್ಕಿ ಸಾಯಿಸಲು ಯತ್ನಿಸಿರುವ ಘಟನೆ ನಡೆದಿದೆ. ಬುಧವಾರರಂದು ಸಂಜೆ ವಿವಾಹ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಫಾರೂಕ್ ಅಬ್ದುಲ್ಲಾ ಅವರನ್ನು ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು. ದುಷ್ಕರ್ಮಿಯೊಬ್ಬ ಅವರ ಮೇಲೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ದಾಳಿಕೋರ ಅಬ್ದುಲ್ಲಾ ಅವರಿಂದ ಕೆಲವೇ ಕೆಲವು

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಹತ್ಯೆಗೆ ಯತ್ನ Read More »

ಮುಸ್ಲಿಂ ಹುಡುಗನನ್ನು ವರಿಸಿದ ಕುಂಭಮೇಳದ ಮೊನಾಲಿಸಾ

ಕೇರಳದ ದೇವಸ್ಥಾನದಲ್ಲಿ ರಾಜಕೀಯದವರ ಸಮ್ಮುಖದಲ್ಲಿ ಮದುವೆ ತಿರುವನಂತಪುರಂ: ಕಳೆದ ವರ್ಷ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿರುವಾಗ ಕ್ಯಾಮರಾ ಕಣ್ಣಿಗೆ ಬಿದ್ದು ಸಖತ್‌ ಜನಪ್ರಿಯಳಾಗಿದ್ದ ಮಧ್ಯ ಪ್ರದೇಶದ ಇಂದೋರ್‌ನ ಮೊನಾಲಿಸಾ ನಿನ್ನೆ ಕೇರಳದಲ್ಲಿ ಮುಸ್ಲಿಂ ಯುವಕನನ್ನು ಮನೆಯವರ ವಿರೋಧ ಲೆಕ್ಕಿಸದೆ ಮದುವೆಯಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. ಪ್ರಿಯಕರ ಮೊಹಮ್ಮದ್‌ ಫರ್ಮಾನ್‌ ಖಾನ್‌ ಎಂಬಾತನ ಜೊತೆ ಕುಂಭಮೇಳದ ಮೊನಾಲಿಸಾ ಬೋಂಸ್ಲೆಯ ಮದುವೆ ಕೇರಳದ ದೇವಸ್ಥಾನವೊಂದರಲ್ಲಿ ನೆರವೇರಿದೆ. ಮದುವೆಗೆ ಪೋಷಕರ ವಿರೋಧ ಇದ್ದ ಕಾರಣ ಕೇರಳದ ಪೂವಾರ್‌ನ ಅರುಮಾನೂರ್ ನೈನಾರ್

ಮುಸ್ಲಿಂ ಹುಡುಗನನ್ನು ವರಿಸಿದ ಕುಂಭಮೇಳದ ಮೊನಾಲಿಸಾ Read More »

error: Content is protected !!
Scroll to Top