ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ | ಬಂಡಾಯ ಅಭ್ಯರ್ಥಿಗಳಿಗೇ ಗೆಲುವು | 440 ಅನರ್ಹ ಮತದಾರರಿಗೆ ಮತದಾನ ಅವಕಾಶ ನೀಡುವಂತೆ ನ್ಯಾಯಾಲಯದ ಮೊರೆಹೋದ ಸಹಕಾರ ಭಾರತಿ ಅಭ್ಯರ್ಥಿಗಳು | ಅವಕಾಶ ನೀಡಿದಲ್ಲಿ ಸಹಕಾರಿ ಭಾರತಿಗೆ 12 ರಲ್ಲಿ 8 ಸ್ಥಾನಗಳಲ್ಲಿ ಗೆಲುವು
ಕಡಬ: ಆಲಂಕಾರು ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಕೊನೆಗೂ ಸಹಕಾರ ಭಾರತಿ ವಿರುದ್ಧದ ಬಂಡಾಯ ಎದ್ದ ಇನ್ನೊಂದು ತಂಡ ಜಯಗಳಿಸಿದೆ. ಆದರೂ ಅನರ್ಹ 440 ಮತದಾರರಿಗೆ ಅವಕಾಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಅವಕಾಶ ನೀಡಿದಲ್ಲಿ 12 ಸ್ಥಾನದಲ್ಲಿ 8 ಸ್ಥಾನ ಸಹಕಾರ ಭಾರತಿ ಪಾಲಾಗಲಿದೆ. ಚುನಾವಣೆಗಾಗಿ ಬಂಡಾಯ ಎದ್ದ ರಮೇಶ್ ಉಪ್ಪಂಗಳ ಅವರ ತಂಡ 10 ಸ್ಥಾನಗಳನ್ನು ಗೆದ್ದರೂ, ಒಂದು ವೇಳೆ ಅನರ್ಹ 440 ಮತದಾರರಿಗೆ ಮತದಾನ ಮಾಡಲು ಅವಕಾಶ […]